ಹುಬ್ಬಳ್ಳಿ (ಡಿ.14) : ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ಅವರು ವೇದ ಚಿತ್ರದ ಪ್ರಚಾರ ಕಾರ್ಯದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇಂದು ಪತ್ನಿ ಗೀತಾ (Geetha) ಜೊತೆ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ (Siddharoodha Mutt) ಭೇಟಿ ನೀಡಿದ್ರು. ಗುರು ಸಿದ್ಧಾರೂಢರ ದರ್ಶನ ಪಡೆದು ವಿಶೇಷ ಪೂಜೆ (Pooja) ಸಲ್ಲಿಸಿದ್ದಾರೆ. 10 ನಿಮಿಷಗಳ ಸಿದ್ಧಾರೂಡರ ಗದ್ದುಗೆಯ ಬಳಿ ಶಿವಣ್ಣ ದಂಪತಿ (Couple) ಧ್ಯಾನ ಮಾಡಿದ್ರು.
ವೇದ ಸಿನಿಮಾ ಪ್ರೀ ರಿಲೀಸ್ ಈವೆಂಟ್
ಶಿವರಾಜ್ ಕುಮಾರ್ ಅಭಿನಯದ 125 ನೇ ಚಿತ್ರ ವೇದ ಸಿನಿಮಾ ಪ್ರೀ ರಿಲೀಸ್ ಈವೆಂಟ್ ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮ ನಿಮಿತ್ತ ಶಿವರಾಜ್ ಕುಮಾರ್ ಜಿಲ್ಲೆಗೆ ಆಗಮಿಸಿದ್ದರು. ಇದೇ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತಾಡಿ ಶಿವಣ್ಣ , ಮೊದಲು ವೇದ ಚಿತ್ರದ ಬಗ್ಗೆ ಮಾತಾಡಿದ್ರು.
ಕಾಂತಾರ, ಕೆಜಿಎಫ್ ಬಗ್ಗೆ ಶಿವಣ್ಣ ಮೆಚ್ಚುಗೆ
ವೇದ ಎಂದರೆ ಗ್ರಂಥ. ಈ ವೇದದಲ್ಲಿ ಪ್ರೀತಿ, ಬಾಳು, ಸಂತೋಷ ಹಾಗೂ ನಂಬಿಕೆ ಎನ್ನುವುದು ಇದೆ ಎಂದು ಹೇಳಿದರು. ಅಲ್ಲದೆ, ಕನ್ನಡ ಸಿನಿಮಾಗಳು ಪಾನ್ ಇಂಡಿಯಾ ಮೂವಿಗಳಾಗುತ್ತಿರುವುದು ಸಂತೋಷದ ವಿಷಯ ಎಂದು ಕಾಂತಾರ, ಕೆಜಿಎಫ್ ಸಕ್ಸಸ್ ಕುರಿತು ಕೂಡ ಶಿವರಾಜ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಶ್ಮಿಕಾ ಬ್ಯಾನ್ ಬಗ್ಗೆ ಏನಂದ್ರು ಶಿವಣ್ಣ
ಕಾಂತಾರಾ ಹಾಗೂ ಕೆಜಿಎಫ್ ಇಷ್ಟೊಂದು ದೊಡ್ಡ ಹಿಟ್ ಆಗುತ್ತವೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಆ ರೀತಿ ಸ್ವಲ್ಪ ಡಿಫ್ರೆಂಟಾಗಿ ಸಿನಿಮಾ ಮಾಡಬೇಕು ಎಂದು ಶಿವರಾಜ್ ಕುಮಾರ್ ಹೇಳಿದ್ರು. ಇನ್ನು ಕನ್ನಡ ಚಲಚಿತ್ರದಿಂದ ರಶ್ಮಿಕಾ ಮಂದಣ್ಣ ಬ್ಯಾನ್ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟ ಶಿವಣ್ಣ, ಅದು ನನಗೆ ಗೊತ್ತಿಲ್ಲ, ಚೆನ್ನಾಗಿರುವ ಚಿತ್ರದ ಬಗ್ಗೆ ಮಾತ್ರ ನಾನು ನೊಡ್ತೇನೆ. ಬೇರೆ ವಿಷಯ ಬಗ್ಗೆ ಮಾತನಾಡಲ್ಲ ಎಂದು ಹೇಳಿದ್ದಾರೆ.
ತೆಲುಗು, ತಮಿಳಿಗೆ ವೇದ ಸಿನಿಮಾ ಡಬ್
ವೇದ ಸಿನಿಮಾವನ್ನು ಸದ್ಯಕ್ಕೆ ತೆಲುಗು, ತಮಿಳಿಗೆ ಡಬ್ ಮಾಡಿದ್ದೇವೆ. ಡಬ್ಬಿಂಗ್ಗೆ ಈಗ ನಮ್ಮ ವಿರೋಧವಿಲ್ಲ, ಡಬ್ಬಿಂಗ್ನಿಂದ ಕನ್ನಡ ಚಲನಚಿತ್ರಗಳಿಗೂ ಲಾಭವಿದೆ. ಸದ್ಯಕ್ಕೆ ಕನ್ನಡ ಚಿತ್ರಗಳ ಬೆಳವಣಿಗೆಗೆ ಡಬ್ಬಿಂಗ್ ಪೂರಕವಾಗಿದೆ ಎಂದು ಶಿವಣ್ಣ ಹೇಳಿದ್ದಾರೆ.
ರಾಜಕೀಯಕ್ಕೆ ಬರ್ತಾರಾ ಶಿವಣ್ಣ?
ಅಸೆಂಬ್ಲಿ ಎಲೆಕ್ಷನ್ ಹತ್ತಿರವಾಗುತ್ತಿದ್ದು, ಎಲ್ಲರ ಚಿತ್ತ ರಾಜ್ಯ ರಾಜಕೀಯದತ್ತ ನೆಟ್ಟಿದೆ. ಇನ್ನು ಸಿನಿಮಾ ನಟ-ನಟಿಯರು ಸಹ ರಾಜಕೀಯದಲ್ಲಿ ಭಾಗಿಯಾಗೋದು ಸಾಮಾನ್ಯ, ಚುನಾವಣೆ ಸಮಯದಲ್ಲಿ ಅಭ್ಯರ್ಥಿಗಳ ಪರ ಕೂಡ ನಟ-ನಟಿಯರು ಪ್ರಚಾರ ಮಾಡ್ತಾರೆ. ಆದ್ರೆ ಸ್ಯಾಂಡಲ್ವುಡ್ನ ದೊಡ್ಮನೆ ಅಂತಾನೆ ಕರೆಸಿಕೊಳ್ಳುವ ರಾಜ್ ಕುಟುಂಬ ಮಾತ್ರ ರಾಜಕೀಯದಿಂದ ದೂರ ಉಳಿದಿದೆ.
ನಾನು ರಾಜಕೀಯಕ್ಕೆ ಬರಲ್ಲ
ಹುಬ್ಬಳ್ಳಿಯಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟ ಶಿವರಾಜ್ ಕುಮಾರ್ ನಾನು ರಾಜಕೀಯಕ್ಕೆ ಬರಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಗೀತಾ ಶಿವರಾಜ್ ಕುಮಾರ್ ಕೂಡ ಚುನಾವಣೆಗೆ ಸ್ಪರ್ಧಿಸಲ್ಲ, ನಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ ಈ ಮೂಲಕ ಜನಸೇವೆ ಮಾಡುವುದಾಗಿ ಶಿವಣ್ಣ ಹೇಳಿದ್ದಾರೆ.
ಇದನ್ನೂ ಓದಿ: Shivaraj Kumar: ರಿಲೀಸ್‌ಗೂ ಮೊದಲೇ ಸ್ಟೇಜ್ ಮೇಲೆ 'ವೇದ' ಹಾಡಿನ ರಂಗು! ವ್ಹಾರೇ ವ್ಹಾ ಎಂದ ಹ್ಯಾಟ್ರಿಕ್ ಹೀರೋ
ಮಹದಾಯಿಗೆ ನಮ್ಮ ಬೆಂಬಲ ಇರುತ್ತೆ
ಮಹದಾಯಿಗೆ ನಮ್ಮ ಬೆಂಬಲ ಯಾವತ್ತೂ ಇರುತ್ತೆ. ಯೋಜನೆಯನ್ನು ಈಗಿರುವ ವ್ಯವಸ್ಥೆ, ಸರ್ಕಾರ ಜಾರಿಗೆ ತರಬೇಕು. ಸರ್ಕಾರ ಆದಷ್ಟು ಬೇಗ ಯೋಜನೆ ಜಾರಿ ಮಾಡಲಿ ಅನ್ನೋದು ನಮ್ಮ ಆಶಯ ಎಂದು ಶಿವರಾಜಕುಮಾರ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ