• Home
  • »
  • News
  • »
  • entertainment
  • »
  • Shivarajkumar: ಶಿವಣ್ಣ ಅಭಿನಯದ 125ನೇ ಚಿತ್ರ, ವೇದ ಸಿನಿಮಾ ರಿಲೀಸ್ ಡೇಟ್ ಅನೌನ್ಸ್

Shivarajkumar: ಶಿವಣ್ಣ ಅಭಿನಯದ 125ನೇ ಚಿತ್ರ, ವೇದ ಸಿನಿಮಾ ರಿಲೀಸ್ ಡೇಟ್ ಅನೌನ್ಸ್

ಪೋಸ್ಟರ್ ನಲ್ಲಿ ವೇದ ಚಿತ್ರದ ಕಥೆ ರಿವೀಲ್!

ಪೋಸ್ಟರ್ ನಲ್ಲಿ ವೇದ ಚಿತ್ರದ ಕಥೆ ರಿವೀಲ್!

ಸದ್ಯ ಬಿಟ್ಟಿರೋ ಪೋಸ್ಟರ್ ನಲ್ಲಿ ಸಾಕಷ್ಟು ವಿಷಯ ಇದೆ ಅನಿಸುತ್ತದೆ. ಚಿತ್ರದಲ್ಲಿ ಹೋರಾಟದ ಹಾದಿನೇ ಇರೋದು ಅನ್ನೋದನ್ನು ಇದು ಹೇಳುತ್ತಿದೆ. ವಿಶೇಷವಾಗಿಯೇ ನಾಲ್ವರು ಮಹಿಳೆಯರ ಪಾತ್ರಗಳು ಈ ಒಂದು ಪೋಸ್ಟರ್ ನಲ್ಲಿ ರಿವೀಲ್ ಆಗಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಹ್ಯಾಟ್ರಿಕ್ ಹೀರೋ ಶಿವರಾಜ್ (Shivaraj Kumar) ಕುಮಾರ್ ಅಭಿನಯದ ವೇದ ಸಿನಿಮಾದ ನಿರೀಕ್ಷೆ ದೊಡ್ಡ ಮಟ್ಟದಲ್ಲಿಯೇ ಇದೆ. ಚಿತ್ರದ (Poster) ಪೋಸ್ಟರ್ ಆ ಒಂದು ಕುತೂಹಲ ಕೆರಳಿಸಿವೆ. ಚಿತ್ರ ಬದುಕಿನಲ್ಲೂ ವೇದ ಸಿನಿಮಾ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ವಿಶೇಷವಾಗಿಯೇ ಇದೆ. 1960 ಕಾಲಘಟ್ಟದ ಕಥೆಯುಳ್ಳ ಈ ಸಿನಿಮಾದಲ್ಲಿ ಅದ್ಭುತ ಕಥೆನೆ ಇದೆ. ನಿರ್ದೇಶಕ ಎ.ಹರ್ಷ (Director A Harsha) ಈ ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ. ಸ್ವತಃ ಶಿವರಾಜ್ ಕುಮಾರ್ ಅವರು ತಮ್ಮ (Banner) ಬ್ಯಾನರ್ ಮೂಲಕವೇ ಈ ಚಿತ್ರವನ್ನ ನಿರ್ಮಿಸುತ್ತಿದ್ದಾರೆ. ಶಿವರಾಜ್ ಕುಮಾರ್ ಚಿತ್ರ ಜೀವನದ ಒಟ್ಟು ಸಿನಿಮಾಗಳ ಲೆಕ್ಕದಲ್ಲಿ ಇದು 125 ನೇ ಸಿನಿಮಾನೆ ಆಗಿದೆ. ಇಷ್ಟು ವಿಶೇಷವಾಗಿರೋ ಈ ಚಿತ್ರದ ರಿಲೀಸ್ ಡೇಟ್ ಈಗ ಅನೌನ್ಸ್ ಆಗಿದೆ.


ವೇದ ಸಿನಿಮಾದ ಮತ್ತೊಂದು ಪೋಸ್ಟರ್ ರಿಲೀಸ್
ವೇದ ಸಿನಿಮಾ ಮಹತ್ವದ ಸಿನಿಮಾನೆ ಆಗಿದೆ. 1960 ರ ಕಾಲದ ಕಥೆಯನ್ನೆ ಈಗ ಹೇಳುತ್ತಿದೆ. ಚಿತ್ರದಲ್ಲಿ ಶಿವಣ್ಣನ ಪಾತ್ರ ಹೋರಾಟಗಾರನ ಪಾತ್ರವೇ ಆಗಿದೆ. ಅದು ಈಗಾಗಲೇ ಈ ಹಿಂದಿನ ಪೋಸ್ಟರ್ ನಿಂದಲೂ ತಿಳಿದಿದೆ.


Kannada Vedha Film Release Date Now Announce by latest Film Poster
2022 ಡಿಸೆಂಬರ್-23 ರಂದು ವೇದ ಸಿನಿಮಾ ರಿಲೀಸ್


ಹೀಗೆ ಪೋಸ್ಟರ್​​ಗಳ ಮೂಲಕವೇ ಸಿನಿಮಾದ ಕಂಟೆಂಟ್​ಅನ್ನ ಬಿಟ್ಟುಕೊಡ್ತಿರೋ ಡೈರೆಕ್ಟರ್ ಎ.ಹರ್ಷ ಈಗ ಮತ್ತೊಂದು ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಈ ಪೋಸ್ಟರ್ ನಲ್ಲಿ ಚಿತ್ರದ ಮಹಿಳಾ ಪಾತ್ರಗಳ ಪರಿಚಯ ಕೂಡ ಆಗಿದೆ.


ವೇದ ಸಿನಿಮಾದಲ್ಲಿ ಮಹಿಳೆಯರ ಹೋರಾಟದ ಕಥೆ?
ಹೌದು, ಸದ್ಯ ಬಿಟ್ಟಿರೋ ಪೋಸ್ಟರ್ ನಲ್ಲಿ ಸಾಕಷ್ಟು ವಿಷಯ ಇದೆ ಅನಿಸುತ್ತದೆ. ಚಿತ್ರದಲ್ಲಿ ಹೋರಾಟದ ಹಾದಿನೇ ಇರೋದು ಅನ್ನೋದನ್ನು ಇದು ಹೇಳುತ್ತಿದೆ. ವಿಶೇಷವಾಗಿಯೇ ನಾಲ್ವರು ಮಹಿಳೆಯರ ಪಾತ್ರಗಳು ಈ ಒಂದು ಪೋಸ್ಟರ್ ನಲ್ಲಿ ರಿವೀಲ್ ಆಗಿದೆ.


ಪೋಸ್ಟರ್ ನಲ್ಲಿ ಕಾಣಿಸಿಕೊಂಡ ನಾಲ್ವರು ಮಹಿಳೆಯರ ಮುಖದಲ್ಲೂ ಒಂದೊಂದು ರೀತಿಯ ಆಕ್ರೋಶ ಇದೆ. ಇದೆಲ್ಲವೂ ಹೋರಾಟಕ್ಕೆ ಕಿಚ್ಚು ಹಚ್ಚುವ ಹಾಗೇನೆ ಇದೆ. ಈ ಮಹಿಳೆಯರಿಗಾಗಿಯೆ ಶಿವರಾಜ್​ ಕುಮಾರ್ ಪಾತ್ರ ಇಲ್ಲಿದೆ ಅನ್ನೋದನ್ನೂ ಕೂಡ ನಾವು ಗೆಸ್ ಮಾಡಬಹುದೇನೋ.


Kannada Vedha Film Release Date Now Announce by latest Film Poster
ವೇದ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್


ವೇದ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್
ವೇದ ಸಿನಿಮಾದ ಬಹುತೇಕ ಕೆಲಸ ಪೂರ್ಣಗೊಂಡಿದೆ. ಸಿನಿಮಾ ಯಾವ ತಿಂಗಳಲ್ಲಿ ರಿಲೀಸ್ ಆಗುತ್ತದೆ ಅನ್ನೋದನ್ನ ಈ ಹಿಂದಿನ ಪೋಸ್ಟರ್​ ನಲ್ಲಿಯೇ ರಿವೀಲ್ ಮಾಡಲಾಗಿತ್ತು. ಅದರಂತೆ ಈಗ ಸಿನಿಮಾದ ಇನ್ನೂ ಒಂದು ಪೋಸ್ಟರ್ ಮೂಲಕ ವೇದ ಚಿತ್ರದ ರಿಲೀಸ್ ದಿನ ಅನೌನ್ಸ್ ಆಗಿದೆ.


2022 ಡಿಸೆಂಬರ್-23 ರಂದು ವೇದ ಸಿನಿಮಾ ರಿಲೀಸ್
ವೇದ ಸಿನಿಮಾ ಇದೇ ವರ್ಷವೇ ರಿಲೀಸ್ ಆಗುತ್ತಿದೆ. ಸಿನಿಮಾ ತಂಡವೂ ಈ ಹಿಂದೇ ಹೇಳಿದಂತೆ ಡಿಸೆಂಬರ್ ತಿಂಗಳಲ್ಲಿಯೇ ವೇದ ಚಿತ್ರವನ್ನ ತೆರೆಗೆ ತರುತ್ತಿದೆ. ವೇದ ಸಿನಿಮಾದ ಹಿಂದೆ ಸಾಕಷ್ಟು ಶ್ರಮವಿದೆ. ಅದು ಚಿತ್ರದ ಪಾತ್ರಗಳ ಪೋಸ್ಟರ್​​ಗಳನ್ನ ನೋಡಿದ್ರೇನೆ ತಿಳಿಯುತ್ತದೆ.


ಇದನ್ನೂ ಓದಿ: Kantara-Rishab Shetty: ಕಾಂತಾರ ಸೀಕ್ವೆಲ್ ಬರುತ್ತಾ? ಅಲ್ಲು ಅರವಿಂದ್ ಜೊತೆ ರಿಷಬ್ ಮೂವಿ?


1960 ಕಾಲದ ಈ ಸಿನಿಮಾವನ್ನ ಈಗ ಮರುಸೃಷ್ಟಿ ಮಾಡೋದು ಅಷ್ಟು ಸುಲಭದ ಕೆಲಸವಲ್ಲ ಬಿಡಿ. ಆದರೆ ವೇದ ಸಿನಿಮಾದಲ್ಲಿ ಆ ಕಾಲಘಟ್ಟವನ್ನ ನಾವು ನೋಡಬಹುದು. ಈ ಮೂಲಕ ಅಂದಿನ ಹೋರಾಟದ ಕಥೆಯನ್ನ ಬೆಳ್ಳಿ ತೆರೆ ಮೇಲೆ ನೋಡಬಹುದಾಗಿದೆ.


ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ಸಿನಿಮಾ
ವೇದ ಸಿನಿಮಾದಲ್ಲಿ ಸಾಕಷ್ಟು ವಿಷಯಗಳಿವೆ. ವಿಶೇಷವಾಗಿ ಈ ಚಿತ್ರದಲ್ಲಿ ಶ್ವೇತಾ ಚಂಗಪ್ಪ, ಅದಿತಿ ಸಾಗರ್,  ಗಾನವಿ ಲಕ್ಷ್ಮಣ, ವೀಣಾ ಪೊನ್ನಪ್ಪ ನಟಿಸಿದ್ದಾರೆ. ಸಿನಿಮಾದ ಇತರ ಪ್ರಮುಖ ಪಾತ್ರದಲ್ಲಿ ಹೆಸರು ಮಾಡಿರೋ ಕಲಾವಿದೆಯರೇ ಇದ್ದಾರೆ.


ಇದನ್ನೂ ಓದಿ: Head Bush Censor Board Review: ಹೆಡ್ ಬುಷ್ ಚಿತ್ರ ರಿಲೀಸ್ ಮುಂಚೇನೆ ರಿವ್ಯೂ,ಸಾಗರೋತ್ತರ ಸೆನ್ಸಾರ್ ಮಂಡಳಿ ಸದಸ್ಯ ಕೊಟ್ಟ ಸಖತ್ ರಿಪೋರ್ಟ್ !


ಮಹಿಳೆಯರಿಗೆ ಆಗೋ ಅನ್ಯಾಯದ ವಿರುದ್ಧವೇ ಶಿವಣ್ಣ ಹೋರಾಡ್ತಾರೆ ಅನ್ನೋ ವಿಷಯವೂ ಈಗ ಬಿಟ್ಟಿರೋ ಪೋಸ್ಟರ್​ನಿಂದಲೇ ತಿಳಿಯುತ್ತದೆ. ಇಂತಹ ಈ ಚಿತ್ರವನ್ನ ಗೀತಾ ಶಿವರಾಜ್ ಕುಮಾರ್ ನಿರ್ಮಿಸುತ್ತಿದ್ದಾರೆ. ಜೀ ಸ್ಟುಡಿಯೋಸ್ ಕೂಡ ಈ ಚಿತ್ರಕ್ಕೆ ಸಾಥ್ ಕೊಟ್ಟಿದೆ.


ವೇದ ಸಿನಿಮಾದ ಮೂಲಕ ಹೊಸ ಕಿಡಿಯನ್ನೆ ಶಿವಣ್ಣ ಹಚ್ಚಲಿದ್ದಾರೆ. ಅಂದಿನ ಆ ದಿನಗಳಲ್ಲಿ ಆದ ಅನ್ಯಾಯದ ಅಸಲಿ ಸತ್ಯವನ್ನೂ ಈ ಚಿತ್ರದಲ್ಲಿ ನೋಡಬಹುದು ಅನಿಸುತ್ತದೆ. ಒಟ್ಟಾರೆ, ವೇದ ಸಿನಿಮಾ ಈ ವರ್ಷದ ಕ್ರಿಸ್ಮಸ್ ಹಬ್ಬದ ಮುಂಚೆ ತೆರೆಗೆ ಬರಲಿದೆ.

First published: