Shivarajkumar: ಪ್ರಭಾಸ್​ ಸಿನಿಮಾದಲ್ಲಿ ಸೆಂಚೂರಿ ಸ್ಟಾರ್​​.. `ರಾಧೆ ಶ್ಯಾಮ್​’ ಕಥೆ ಹೇಳಲಿದ್ದಾರೆ ಶಿವಣ್ಣ!

ಇದೀಗ ಹೊಸ ವಿಚಾರ ಏನಪ್ಪ ಅಂದ್ರೆ ಪ್ರಭಾಸ್​ರ ಸಿನಿಮಾದಲ್ಲಿ ಸ್ಯಾಂಡಲ್​ವುಡ್​ ಸೆಂಚೂರಿ ಸ್ಟಾರ್​ ಶಿವರಾಜ್​ ಕುಮಾರ್ (Shivarajkumar)​ ಅವರು ಜೊತೆಯಾಗಿದ್ದಾರೆ.

ರಾಧೆ-ಶ್ಯಾಮ್​ ಸಿನಿಮಾದಲ್ಲಿ ಶಿವಣ್ಣ

ರಾಧೆ-ಶ್ಯಾಮ್​ ಸಿನಿಮಾದಲ್ಲಿ ಶಿವಣ್ಣ

  • Share this:
ಪ್ಯಾನ್ ಇಂಡಿಯಾ (Pan India) ತಾರೆ ಪ್ರಭಾಸ್ (Prabhas) ಚಿತ್ರಗಳೆಂದರೆ ಸಾಕು ಅಭಿಮಾನಿಗಳಿಗೆ ಒಂದು ದೊಡ್ಡ ಹಬ್ಬದ ಸಡಗರವಿದ್ದಂತೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅವರ ಮುಂದಿನ ಚಿತ್ರವಾದ ‘ರಾಧೆ ಶ್ಯಾಮ್’ (Radhe shyam) ಬಿಡುಗಡೆಗಾಗಿ ತುಂಬಾನೇ ಕಾತುರತೆಯಿಂದ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಒಂದು ಕಡೆ ಹೊಂಬಾಳೆ ಫಿಲಂಸ್​ ನಿರ್ಮಾಣದ ಪ್ಯಾನ್​ ಇಂಡಿಯಾ ಸಿನಿಮಾ ಸಲಾರ್ (Salaar)​, ಮತ್ತೊಂದು ಕಡೆ ಓಂ ರಾವತ್​ ನಿರ್ದೇಶನದಲ್ಲಿ ಆದಿಪುರುಷ್​  (Adhipurush) ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇವುಗಳನ್ನು ಹೊರತುಪಡಿಸಿದರೆ ದೀಪಿಕಾ ಪಡುಕೋಣೆ (Deepika Padukone) ಹಾಗೂ ಅಮಿತಾಭ್​  (Amithabh Bachchan) ಜತೆ ಮತ್ತೊಂದು ಪ್ಯಾನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಹೊಸ ವಿಚಾರ ಏನಪ್ಪ ಅಂದ್ರೆ ಪ್ರಭಾಸ್​ರ ಸಿನಿಮಾದಲ್ಲಿ ಸ್ಯಾಂಡಲ್​ವುಡ್​ ಸೆಂಚೂರಿ ಸ್ಟಾರ್​ ಶಿವರಾಜ್​ ಕುಮಾರ್ (Shivarajkumar)​ ಅವರು ಜೊತೆಯಾಗಿದ್ದಾರೆ.

ರಾಧೆ-ಶ್ಯಾಮ್​ ಸಿನಿಮಾದಲ್ಲಿ ಶಿವಣ್ಣ!

ಹೌದು, ರಾಧೆ-ಶ್ಯಾಮ್​ ಚಿತ್ರದಲ್ಲಿ ಶಿವಣ್ಣ​ ಅವರ ವಾಯ್ಸ್​ ಇರಲಿದೆ. ರಾಧೆ-ಶ್ಯಾಮ್​ ಕಥೆಯನ್ನು ಶಿವಣ್ಣ​ ಅವರೇ ವಿವರಿಸಲಿದ್ದಾರೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಸಹ ಮಾಡಿದೆ. ಈ ವಿಚಾರ ತಿಳಿದ ಪ್ರಭಾಸ್​ ಅಭಿಮಾನಿಗಳು ಮತ್ತಷ್ಟು ಥ್ರಿಲ್​ ಆಗಿದ್ದಾರೆ. ರಾಧೆ-ಶ್ಯಾಮ್​ ಸಿನಿಮಾದ ಮಾರ್ಚ್​ 11ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ.. ಈ ಚಿತ್ರದ ಕನ್ನಡ ವರ್ಷನ್​ ಕಥೆಯನ್ನು ಶಿವಣ್ಣ ವಿವರಣೆ ನೀಡಲಿದ್ದಾರೆ. ಸಿನಿಮಾ ಆರಂಭದಿಂದ ಕೊನೆವರೆಗೂ ಶಿವಣ್ಣ ಅವರ ಧ್ವನಿ ಇರಲಿದೆಯಂತೆ. ಈ ಬಗ್ಗೆ ಟ್ವೀಟ್​ ಮಾಡಿ ಯುವಿ ಕ್ರಿಯೇಷನ್ಸ್​​ ಮಾಹಿತಿ ತಿಳಿಸಿದ್ದಾರೆ.

ಶಿವಣ್ಣನಿಗೆ ಧನ್ಯವಾದ ತಿಳಿಸಿದ  ಯುವಿ ಕ್ರಿಯೇಷನ್ಸ್​!

ಶಿವರಾಜ್​​ ಕುಮಾರ್​​​ ಅವರು ರಾಧೆ ಶ್ಯಾಮ್​ ಸಿನಿಮಾಗೆ ಧ್ವನಿ ನೀಡಿರುವುದಕ್ಕೆ ಚಿತ್ರತಂಡ ಅಮಿತಾಭ್​ ಅವರಿಗೆ ಧನ್ಯವಾದ ತಿಳಿಸಿದೆ. ​ ನಮ್ಮ ಚಿತ್ರಕ್ಕೆ ನಿಮ್ಮ ವಾಯ್ಸ್ ನೀಡಿದ್ದಕ್ಕೆ ಧನ್ಯವಾದ ಎಂದು ಬರೆದುಕೊಂಡು ಶಿವಣ್ಣ ಇರುವ ಚಿತ್ರವನ್ನು ಯುವಿ ಕ್ರಿಯೇಷನ್ಸ್​ ಪೋಸ್ಟ್ ಮಾಡಿದೆ.


ಇದನ್ನೂ ಓದಿ: ಚಂದನವನದ `ಗಿರಿಕನ್ಯೆ’ಗೆ ಹುಟ್ಟುಹಬ್ಬದ ಸಂಭ್ರಮ.. 63ನೇ ವಸಂತಕ್ಕೆ ಕಾಲಿಟ್ಟ ಜಯಮಾಲಾ!

ತೆಲುಗಿನಲ್ಲಿ ರಾಜಮೌಳಿ, ಮಲಯಾಳಂನಲ್ಲಿ ಪೃಥ್ವಿ ರಾಜ್​!

‘ರಾಧೆ ಶ್ಯಾಮ್​’ ಚಿತ್ರದ ಕನ್ನಡ ವರ್ಷನ್​ ನಿರೂಪಣೆಗೆ ಶಿವರಾಜ್​ಕುಮಾರ್​ ಅವರು ಹಿನ್ನೆಲೆ ಧ್ವನಿ ನೀಡಿದ್ದಾರೆ. ಅದೇ ರೀತಿ, ತೆಲುಗಿನಲ್ಲಿ ರಾಜಮೌಳಿ ಹಾಗೂ ಮಲಯಾಳಂನಲ್ಲಿ ಪೃಥ್ವಿರಾಜ್​ ಸುಕುಮಾರನ್​ ಅವರು ಈ ಕೆಲಸ ಮಾಡಿದ್ದಾರೆ. ಆ ಮೂಲಕ ಈ ಘಟಾನುಘಟಿಗಳು ‘ರಾಧೆ ಶ್ಯಾಮ್​’ ತಂಡದ  ಭಾಗವಾಗಿದ್ದಾರೆ. ರಾಜಮೌಳಿ ಹಾಗೂ ಪೃಥ್ವಿರಾಜ್​ ಸುಕುಮಾರನ್​ ಅವರಿಗೆ ‘ರಾಧೆ ಶ್ಯಾಮ್​’ ನಿರ್ಮಾಣ ಸಂಸ್ಥೆಯಾದ ‘ಯುವಿ ಕ್ರಿಯೇಷನ್ಸ್​’ ಟ್ವೀಟ್​ ಮೂಲಕ ಧನ್ಯವಾದ ತಿಳಿಸಿದೆ.


ಇದನ್ನೂ ಓದಿ: ಪ್ರಭಾಸ್​ರ ಮತ್ತೊಂದು ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್​, `ರಾಧೆ ಶ್ಯಾಮ್’​ ಕಥೆ ಹೇಳಲಿದ್ದಾರೆ ಬಿಗ್​ಬಿ!

ವಿಷ್ಯ ಹೇಳುವ ಪಾತ್ರದಲ್ಲಿ ಪ್ರಭಾಸ್​!

ಚಿತ್ರದಲ್ಲಿ ನಿಗೂಢವಾದ ಭವಿಷ್ಯ ಹೇಳುವ ಒಬ್ಬ ನಾಯಕ ಮತ್ತು ಪ್ರೇಮಿ ವಿಕ್ರಮ್ ಆದಿತ್ಯನಾಗಿ ನಟ ಪ್ರಭಾಸ್ ಅವರ ಕೆಲವು ದೃಶ್ಯಗಳನ್ನು ಈ ಟ್ರೈಲರ್‌ನಲ್ಲಿ ನೋಡಬಹುದು. ಟ್ರೈಲರ್‌ನಲ್ಲಿ ಕಥೆ ಹೇಗೆ ಶುರುವಾಗುತ್ತದೆ ಎಂಬುದನ್ನು ನೋಡಬಹುದಾಗಿದೆ. ಈ ಟ್ರೈಲರ್ ನೋಡಿದ ಅಭಿಮಾನಿಗಳಿಗೆ ಈ ಚಿತ್ರದ ಬಗ್ಗೆ ಇರುವ ಕುತೂಹಲ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಬಹುದು. ಈ ಟ್ರೈಲರ್ ಅದ್ಭುತ ಭಾವನೆಗಳ ಮಿಶ್ರಣವಾಗಿದ್ದು, ಇದರಲ್ಲಿ ಪ್ರೀತಿ ಪ್ರೇಮವಿದೆ, ಒಂದು ದುರಂತವಿದೆ, ಉತ್ತಮ ಸಂಗೀತವಿದೆ.
Published by:Vasudeva M
First published: