Shiva 143 Movie: ಶಿವ 143 ಚಿತ್ರ ನೋಡಿ ಮೆಚ್ಚಿದ ಶಿವಣ್ಣ; ಧೀರೇನ್​ ಅಭಿನಯಕ್ಕೆ ಫುಲ್​ ಮಾರ್ಕ್ಸ್!​

ಬೆಂಗಳೂರಲ್ಲಿ ಕೆಜಿ ರಸ್ತೆಯ ಸಂತೋಷ್ ಥಿಯೇಟರ್‌ನಲ್ಲಿ ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್ ಚಿತ್ರತಂಡದ ಜೊತೆ ಶಿವ 143 ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ.

ಶಿವ 143 ಚಿತ್ರದ ಪೋಸ್ಟರ್​

ಶಿವ 143 ಚಿತ್ರದ ಪೋಸ್ಟರ್​

  • Share this:
ಅಣ್ಣಾವ್ರ ಕುಟುಂಬದ ಕುಡಿ, ಪೂರ್ಣಿಮಾ (Poornima) ಹಾಗೂ ರಾಮ್​ ಕುಮಾರ್ (Ramkumar)​ ಮಗ ಧೀರೇನ್​ ರಾಮ್​ಕುಮಾರ್ (Dheeren Ramkumar)​ ಅಭಿನಯದ ಮೊದಲ ಚಿತ್ರ ಶಿವ 143 ಚಿತ್ರ ಬಿಡುಗಡೆಯಾಗಿದೆ. ಚಿತ್ರ ನೋಡಿದ ಪ್ರೇಕ್ಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ಧೀರೇನ್​ಗೆ ನಟಿ ಮಾನ್ವಿತಾ ಕಾಮತ್ (Manvith Kamath)​ ಜೋಡಿಯಾಗಿ ನಟಿಸಿದ್ದಾರೆ. ತುಂಬ ರಗಡ್​ ಆಗಿ ಚಿತ್ರ ಮೂಡಿಬಂದಿದೆ. ಧೀರೇನ್‌ ರಾಮ್‌ಕುಮಾರ್‌ ಮಾಸ್‌ ಹಾಗೂ ಆ್ಯಕ್ಷನ್‌ ಲುಕ್‌ನಲ್ಲಿ ಭರವಸೆ ಮೂಡಿಸಿದ್ದಾರೆ. ಈ ಚಿತ್ರದ ಮೂಲಕ ರಾಜ್‌ ಕುಟುಂಬದಿಂದ ಮತ್ತೊಬ್ಬ ಆ್ಯಕ್ಷನ್‌ ಹೀರೋ ಬಂದಂತಾಗಿದೆ. 

ಪತ್ನಿ ಗೀತಾ ಜೊತೆ ಶಿವ 143 ಚಿತ್ರ ವೀಕ್ಷಿಸಿದ ಶಿವಣ್ಣ 

ಬೆಂಗಳೂರಲ್ಲಿ ಕೆಜಿ ರಸ್ತೆಯ ಸಂತೋಷ್ ಥಿಯೇಟರ್‌ನಲ್ಲಿ ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್ ಚಿತ್ರತಂಡದ ಜೊತೆ ಶಿವ 143 ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಧೀರೇನ್ ಅಭಿನಯಕ್ಕೆ ಸೆಂಚುರಿ ಸ್ಟಾರ್ ಕ್ಲೀನ್ ಬೋಲ್ಡ್ ಆಗಿದ್ದು, ತಂಡದ ಪ್ರಯತ್ನಕ್ಕೆ ಅಭಿನಂದನೆ ತಿಳಿಸಿದ್ದಾರೆ. ರಾಜ್ಯಾದ್ಯಂತ 250ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕ್ಲಾಸ್ ಮತ್ತು ಮಾಸ್ ಆಡಿಯನ್ಸ್‌ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಮೊದಲ ಚಿತ್ರದಲ್ಲೇ ಧೀರೇನ್ ಸಖತ್​ ಸೌಂಡ್​ ಮಾಡ್ತಿದ್ದಾರೆ.

ಯಾರನ್ನು ಧೀರೇನ್​ ಇಮಿಟೇಟ್​ ಮಾಡಿಲ್ಲ

ಧೀರೇನ್ ಜ್ಯೂನಿಯರ್ ಶಿವಣ್ಣ ಆಗುವುದು ಬೇಡ, ಅವನು ಧೀರೇನ್ ಆಗಿಯೇ ಬರಲಿ. ಯಾರನ್ನು ಸಿನಿಮಾದಲ್ಲಿ ಇಮಿಟೇಟ್ ಮಾಡಿಲ್ಲ, ಅದು ಬಹಳ ಇಷ್ಟವಾದ ವಿಷಯ. ನನ್ನನ್ನಾಗಲಿ, ಅಪ್ಪಾಜಿಯರನ್ನಾಗಲಿ, ಅಪ್ಪುನ ಆಗಲಿ ಯಾರನ್ನು ಇಮಿಟೇಟ್ ಮಾಡಿಲ್ಲ. ಅವರ ತಂದೆ- ತಾಯಿಯನ್ನು ಕೂಡ ಇಮಿಟೇಟ್ ಮಾಡಿಲ್ಲ. ತುಂಬಾ ಚೆನ್ನಾಗಿ ಮಾಡಿದ್ದಾರೆ. ಸಿನಿಮಾ ಇಷ್ಟ ಆಯಿತು. ಇಷ್ಟರಿಗೂ ಇಷ್ಟವಾಗುತ್ತದೆ.

shivarajkumar dance with shaktidhama video goes viral
ಶಿವರಾಜ್​ಕುಮಾರ್


ಅಳಿಯನ ಚಿತ್ರ ನೋಡಿ ಗೀತಾ ಶಿವರಾಜ್​ ಕುಮಾರ್ ಖುಷ್​​

ಶಿವ 143 ಚಿತ್ರತಂಡದೊಂದಿಗೆ ಚಿತ್ರ ನೋಡಿದ ಶಿವಣ್ಣ, ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಕುಟುಂಬದ ಹೊಸ ಹೀರೋಗೆ ದೊಡ್ಮನೆಯವರು ಬೆಂಬಲ ಸೂಚಿಸುತ್ತಿದ್ದಾರೆ. ಅಳಿಯನ ಚಿತ್ರವನ್ನು ಕಂಡು ಗೀತಾ ಶಿವರಾಜ್​ಕುಮಾರ್​ (Geetha Shivarajkumar) ಅವರು ಖುಷಿಪಟ್ಟಿದ್ದಾರೆ. ಶಿವರಾಜ್​ಕುಮಾರ್​ ಜೊತೆ ಅವರು ಸಿನಿಮಾ ವೀಕ್ಷಿಸಿದ್ದಾರೆ.

ಪೂರ್ಣಿಮಾ ರಾಮಕುಮಾರ್‌ ಭಾವುಕ

ಶಿವ 143 ಸಿನಿಮಾ ನೋಡಿ ಪೂರ್ಣಿಮಾ ರಾಮಕುಮಾರ್‌ ಭಾವುಕರಾಗಿದ್ದಾರೆ. ತುಂಬಾ ಸಂತೋಷ ಆಗುತ್ತಿದೆ. ನನಗೆ ಹೇಳೋಕೆ ಆಗ್ತಿಲ್ಲ. ಜನರು ಚಿತ್ರವನ್ನು ನೋಡಿ ಯಾವ ರೀತಿ ಪ್ರತಿಕ್ರಿಯೆಯನ್ನು ಕೊಡುತ್ತಾರೆ ಅನ್ನೋದನ್ನ ನೋಡೋದಿಕ್ಕೆ ಕಾಯ್ತಿದ್ದೀನಿ. ಯಾಕಂದ್ರೆ ನಾನು ಅಮ್ಮನಾಗಿ ನನ್ನ ಮಗನ ಕೆಲಸ ಇಷ್ಟವಾಗುತ್ತದೆ.

ಜಯಣ್ಣ ಅವರಿಗೆ ತುಂಬಾ ಧನ್ಯವಾದ

ನಿರ್ದೇಶಕ ಅನಿಲ್ ಕುಮಾರ್ ಚಿತ್ರವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಹಾಗೇನೇ ಜಯಣ್ಣ ಅವರಿಗೆ ತುಂಬಾ ಥ್ಯಾಂಕ್ಸ್ ಹೇಳೋಕೆ ಇಷ್ಟಪಡುತ್ತಿನಿ. ಮಾತ್ರವಲ್ಲದೇ ಚಿತ್ರದಲ್ಲಿ ನಟಿಸಿದಂತಹ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಪೂರ್ಣಿಮಾ ರಾಮಕುಮಾರ್‌ ತಿಳಿಸಿದರು.

ಇದನ್ನೂ ಓದಿ: Drishyam 3 Movie: ದೃಶ್ಯಂ 3 ಚಿತ್ರ ಸೆಟ್ಟೇರೋದು ಕನ್ಫರ್ಮ್! ಈ ಬಾರಿ ಜಾರ್ಜ್ ಕುಟ್ಟಿ ಕೈಗೆ ಕೋಳ ಬೀಳೋದು ಫಿಕ್ಸ್!?

‘ಆರ್‌ಎಕ್ಸ್‌ 100’ ಸಿನಿಮಾ ರಿಮೇಕ್​ ಶಿವ 143

ಇನ್ನು ಶಿವ 143 ಸಿನಿಮಾ ಮಾಸ್ ಲವ್ ಸ್ಟೋರಿಯ ಚಿತ್ರ. ಧೀರೆನ್ ಹಾಗು ಮಾನ್ವಿತಾ ಜೋಡಿ ಈ ಸಿನಿಮಾದಲ್ಲಿ ಅಕ್ಷರಶಃ ಮೋಡಿ ಮಾಡಿದೆ. ಈ ಶಿವ 143 ತೆಲುಗು ಭಾಷೆಯ ಆರ್‌ಎಕ್ಸ್ 100 ಸಿನಿಮಾದ ರಿಮೇಕ್ ಆಗಿದೆ.   ತೆಲುಗಿನಲ್ಲಿ ಸೂಪರ್‌ಹಿಟ್‌ ಆಗಿದ್ದ ‘ಆರ್‌ಎಕ್ಸ್‌ 100’ ಸಿನಿಮಾ ಕನ್ನಡಕ್ಕೆ ‘ಶಿವ 143’ ಆಗಿದೆ. ಸಂಭಾಷಣೆಗಳಲ್ಲಿ ಪಳಗಿದ ಕೈ ಅನಿಲ್‌ ಕುಮಾರ್‌ ಅವರು ಚಿತ್ರಕ್ಕೆ ಸಾಧ್ಯವಾದಷ್ಟುಮಾಸ್‌ ಹಾಗೂ ಆ್ಯಕ್ಷನ್‌ ಇಮೇಜ್‌ ನೀಡಿದ್ದಾರೆ.
Published by:Pavana HS
First published: