• Home
  • »
  • News
  • »
  • entertainment
  • »
  • Vedha Movie: ರಗಡ್​ ಲುಕ್​ನ 'ವೇದ'ಗೆ ಅಭಿಮಾನಿಗಳು ಫಿದಾ; ಫೈಟಿಂಗ್​ ಸೀನ್​ಗಳಲ್ಲಿ ಶಿವಣ್ಣ ಆರ್ಭಟ!

Vedha Movie: ರಗಡ್​ ಲುಕ್​ನ 'ವೇದ'ಗೆ ಅಭಿಮಾನಿಗಳು ಫಿದಾ; ಫೈಟಿಂಗ್​ ಸೀನ್​ಗಳಲ್ಲಿ ಶಿವಣ್ಣ ಆರ್ಭಟ!

ವೇದ ಸಿನಿಮಾ ಪೋಸ್ಟರ್​

ವೇದ ಸಿನಿಮಾ ಪೋಸ್ಟರ್​

ಜುಂಜಪ್ಪ ಹಾಡಿನ ಜೊತೆ ಫೈಟಿಂಗ್​ ಸೀನ್​ ಮೂಲಕ ಶಿವರಾಜ್ ಕುಮಾರ್​ ಎಂಟ್ರಿ ಕೊಡ್ತಾರೆ. ಶಿವಣ್ಣ ಮಾಸ್​ ಲುಕ್ ನೋಡಿ ಅಭಿಮಾನಿಗಳ ಸಿಳ್ಳೆ, ಕೂಗು ಮುಗಿಲುಮುಟ್ಟಿತ್ತು.

  • News18 Kannada
  • 2-MIN READ
  • Last Updated :
  • Karnataka, India
  • Share this:

ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ (Shiva Rajkumar) ಅಭಿನಯದ 125ನೇ ಸಿನಿಮಾ 'ವೇದ' ಇಂದು ಬಿಡುಗಡೆಯಾಗಿದೆ. ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ವೇದ' (Veda) ಅರ್ಭಟ ಶುರುವಾಗಿದೆ. ಶಿವಣ್ಣ ಅಭಿಮಾನಿಗಳು ಸಿನಿಮಾ ನೋಡಲು ಬೆಳ್ಳಂ ಬೆಳಗ್ಗೆ ಚಿತ್ರಮಂದಿರದ (Movie Theater) ಬಳಿ ಜಮಾಯಿಸಿದ್ರು. ಶಿವರಾಜ್​ ಕುಮಾರ್ ಕಟೌಟ್​ಗಳಿಗೆ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಬೆಂಗಳೂರಿನ (Bengaluru) ಕೆಲ ಥಿಯೇಟರ್​ಗಳಲ್ಲಿ ಬೆಳಗ್ಗೆ 4.30ಕ್ಕೆ ವೇದ ಸಿನಿಮಾ ಶೋ ಆರಂಭವಾಗಿದ್ದು, ಸಿನಿಮಾ ನೋಡಿದ ಪ್ರೇಕ್ಷಕರು  ಶಿವಣ್ಣ ಮಾಸ್​ ಲುಕ್​ಗೆ (Mass Look) ಫುಲ್​ ಫಿದಾ ಆಗಿದ್ದಾರೆ.  


ಶಿವಣ್ಣ ಮಾಸ್ ಲುಕ್​ಗೆ ಫ್ಯಾನ್ಸ್​ ಫಿದಾ!


ವೇದ ಚಿತ್ರ ನೋಡಿದ ಪ್ರತಿಯೊಬ್ಬರು 60ರ ವಯಸ್ಸಲ್ಲೂ ಶಿವಣ್ಣ ಅವರದ್ದು ಎಂಥಾ ಆ್ಯಕ್ಟಿಂಗ್​ ಗುರೂ ಅಂತಿದ್ದಾರೆ. ಜುಂಜಪ್ಪ ಹಾಡಿನ ಜೊತೆ ಫೈಟಿಂಗ್​ ಸೀನ್​ ಮೂಲಕ ಶಿವರಾಜ್ ಕುಮಾರ್​ ಎಂಟ್ರಿ ಕೊಡ್ತಾರೆ. ಶಿವಣ್ಣ ಮಾಸ್​ ಲುಕ್ ನೋಡಿ ಅಭಿಮಾನಿಗಳ ಸಿಳ್ಳೆ, ಕೂಗು ಮುಗಿಲುಮುಟ್ಟಿತ್ತು. ಈ ಸಿನಿಮ, 1965,  1985 ಹಾಗೂ 2021ರ ಕಾಲಘಟ್ಟಗಳಲ್ಲಿ ನಡೆಯೋ ಕಥೆಯಾಗಿದ್ದು, ಸಾಮಾಜಿಕ ಸಂದೇಶವನ್ನು ತಿಳಿಸುವ ಒಂದು ಅದ್ಭುತ ಸಿನಿಮಾ ಆಗಿದೆ. ಇನ್ನು ಶಿವರಾಜ್​ ಕುಮಾರ್​ ಸಿನಿಮಾ ಅಂದ್ರೆ ಫೈಟ್​ಗಳಿಗೆ ಕಡಿಮೆ ಇರುತ್ತಾ? ವೇದ ಸಿನಿಮಾದಲ್ಲೂ ಅತ್ಯದ್ಬುತ ಫೈಟಿಂಗ್ ಸೀನ್​ಗಳಿವೆ. ತನ್ನ ಆ್ಯಕ್ಷನ್​ ಮೂಲಕ ಶಿವಣ್ಣ ಎಲ್ಲರ ಗಮನ ಸೆಳೆಯುತ್ತಾರೆ. ಹ್ಯಾಟ್ರಿಕ್ ಹೀರೋ ಜೊತೆ ಫೈಟಿಂಗ್​ ಸೀನ್​ನಲ್ಲಿ  ಅದಿತಿ ಸಾಗರ್​ ಕೂಡ ಸಾಥ್ ನೀಡಿದ್ದಾರೆ.




ನಟಿ ಮಣಿಯರ ಅಭಿನಯ ಸಖತ್​


ವೇದ ಸಿನಿಮಾ ಸೆಟ್​ ಅದ್ಧೂರಿಯಾಗಿದ್ದು, ಶಿವಣ್ಣಗೆ ನಾಯಕಿಯಾಗಿ ನಟಿ ಗಾನವಿ ಲಕ್ಷ್ಮಣ್ ಸಖತ್​ ಆ್ಯಕ್ಟಿಂಗ್ ಮಾಡಿದ್ದಾರೆ. ನಾಚಿಕೆಕೊಂಡ ಮುಗ್ದ ಹುಡುಗಿಯಾಗಿ ಕಾಣಿಸಿಕೊಳ್ತಾರೆ. ಬಳಿಕ ನಟಿ ಗಾನವಿ ಲಕ್ಷ್ಮಣ್ ರಗಡ್ ಲುಕ್​ನಲ್ಲಿ ಮಿಂಚಿದ್ದಾರೆ. ಅವರ ಪಾತ್ರ ಸಿನಿಮಾದಲ್ಲಿ ಸರ್ಪ್ರೈಸ್​ ಹೆಚ್ಚಿಸುತ್ತದೆ. ಅದಿತಿ ಸಾಗರ್ ಕೂಡ ಸಖತ್ ಆಗಿ ನಟಿಸಿದ್ದಾರೆ. ನಟಿ ಶ್ವೇತಾ ಚೆಂಗಪ್ಪ ಅವರು ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ವೇತಾ ಚೆಂಗಪ್ಪ ಪಾತ್ರ ಹಿಂದೆ ಕಥೆಗಳು ತೆರದುಕೊಳ್ಳುತ್ತದೆ. ಇನ್ನು ಹಿರಿಯ ನಟಿ ಉಮಾ ಅಭಿನಯ ಪ್ರೇಕ್ಷಕರ ಗಮನಸೆಳೆದಿದೆ.


ವೇದ ಸಿನಿಮಾದಲ್ಲಿ ಕಾಮಿಡಿ ಕಿಕ್​


ಫೈಟಿಂಗ್, ಆ್ಯಕ್ಷನ್​ ಸೀನ್​ಗಳ ನಡುವೆ ಬರುವ ಕಾಮಿಡಿ ಸೀನ್​ಗಳು ಪ್ರೇಕ್ಷಕರಿಗೆ ಕಿಕ್​ ನೀಡಲಿದೆ. ಕಥೆಯಲ್ಲಿ ಒಂದೊಂದೆ ಟ್ವೀಟ್​ಗಳು ತೆರೆದುಕೊಳ್ಳುತ್ತದೆ. ಇದರ ಜೊತೆ ಮಸ್ತ್​ ಕಾಮಿಡಿ ಕೂಡ ಚಿತ್ರದ ಹೈಲೈಟ್ಸ್ ಆಗಿದೆ.


 ‘ಗಿಲ್ಲಕ್ಕೋ ಶಿವ ಗಿಲ್ಲಕ್ಕೋ,  ಜುಂಜಪ್ಪ ಹಾಡು ಸೂಪ್​


ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಮೋಡಿ ಮಾಡಿದ್ದಾರೆ. ಈಗಾಗಲೇ ವೇದ ಸಿನಿಮಾ ಹಾಡುಗಳು ಸೂಪರ್ ಹಿಟ್ ಆಗಿದೆ. ಥಿಯೇಟ್​ಗಳಲ್ಲೂ ಅಭಿಮಾನಿಗಳಗು ‘ಗಿಲ್ಲಕ್ಕೋ ಶಿವ ಗಿಲ್ಲಕ್ಕೋ ಎಂದು ಕುಣಿದು ಕುಪ್ಪಳಿಸಿದ್ದಾರೆ.  ‘ಪುಷ್ಪ ಪುಷ್ಪ' ಹಾಗೂ ಜುಂಜಪ್ಪ ಹಾಡು ಪ್ರೇಕ್ಷಕರಿಗೆ ಇಷ್ಟವಾಗಿದ್ದು, ಜನ್ಯ ಮೂಸಿಕ್ ಕಂಪೋಸ್​ಗೆ ಅಭಿಮಾನಿಗಳು 100 ಮಾರ್ಕ್ಸ್​ ನೀಡಿದ್ದಾರೆ.


Kannada Vedha Cinema now getting ready to create huge buzz in Sandalwood
ವೇದ ಸಿನಿಮಾ ಮಹಿಳಾ ಪ್ರಧಾನ ಸಿನಿಮಾನೇ?


ರಗಡ್ ಲುಕ್​ನಲ್ಲಿ ಶಿವಣ್ಣ 


ಶಿವರಾಜ್​ಕುಮಾರ್ ಅವರು ‘ವೇದ’ ಚಿತ್ರದಲ್ಲಿ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಈ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್ ಮೆರೆದಿದ್ದಾರೆ. ನಿರ್ದೇಶಕ ಎ ಹರ್ಷ ಶಿವಣ್ಣ ಅವರನ್ನು ರಗಡ್​ ಆಗಿ ಅದ್ಭುತವಾಗಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಣ್ಣ ಅಭಿನಯದ ವೇದ ಸಿನಿಮಾದ ನಿರ್ಮಾಣದ ಹೊಣೆಯನ್ನು ಗೀತಾ ಶಿವರಾಜ್​ ಕುಮಾರ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.


ಇದನ್ನೂ ಓದಿ: Vedha Movie: ವೇದ ಸಿನಿಮಾ ರಿಲೀಸ್, ಶಿವಣ್ಣ ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳಿವು


ಮೊದಲ ಭಾಗದಲ್ಲಿ ಆ್ಯಕ್ಷನ್​ ಸೀನ್​ಗಳು ಹೆಚ್ಚಾಗಿದೆ. ಇಂಟರ್ವಲ್​ನಲ್ಲಿ ಸಖತ್​ ಟ್ವಿಸ್ಟ್​ ಇರಲಿದ್ದು, ಕಾರಣ ತಿಳಿಯದೇ ವಿಲನ್​ಗಳನ್ನು ವೇದ ಸಾಯಿಸುತ್ತಿರುತ್ತಾನೆ. ಅನೇಕ ತಿರುವುಗಳ ಮೂಲಕ ಕಥೆ ಸಾರಾಂಶ ಪ್ರೇಕ್ಷಕರಿಗೆ ತಿಳಿಯದೆ. ಒಟ್ಟಾರೆ ಸಿನಿಮಾ ಶಿವಣ್ಣ ಅಭಿಮಾನಿಗಳಿಗೆ ಮಾಸ್ ಮ್ಯೂವಿ ಪ್ರಿಯರಿಗೆ ವೇದ ಮತ್ತಷ್ಟು ಇಷ್ಟವಾಗಿದೆ.

Published by:ಪಾವನ ಎಚ್ ಎಸ್
First published: