• Home
 • »
 • News
 • »
 • entertainment
 • »
 • Jogi Movie: 15 ವರ್ಷ ಪೂರೈಸಿದ ಶಿವರಾಜ್​ಕುಮಾರ್​ ಅಭಿನಯದ ಜೋಗಿ ಸಿನಿಮಾ: ಸಂಭ್ರಮದಲ್ಲಿ ಅಭಿಮಾನಿಗಳು..!

Jogi Movie: 15 ವರ್ಷ ಪೂರೈಸಿದ ಶಿವರಾಜ್​ಕುಮಾರ್​ ಅಭಿನಯದ ಜೋಗಿ ಸಿನಿಮಾ: ಸಂಭ್ರಮದಲ್ಲಿ ಅಭಿಮಾನಿಗಳು..!

ಜೋಗಿ ಸಿನಿಮಾಗೆ 15 ವರ್ಷದ ಸಂಭ್ರಮ

ಜೋಗಿ ಸಿನಿಮಾಗೆ 15 ವರ್ಷದ ಸಂಭ್ರಮ

Jogi 15 years CDP: ಶಿವರಾಜ್​ಕುಮಾರ್ ಹಾಗೂ ಪ್ರೇಮ್​​ ಅವರ ಜೋಡಿ ಆಗ ಸ್ಯಾಂಡಲ್​ವುಡ್​ನಲ್ಲಿ ಒಂದು ಹೊಸ ಅಲೆಯನ್ನೇ ಸೃಷ್ಟಿಸಿತ್ತು. ಈಗ ಸಿನಿಮಾಗೆ 15 ವರ್ಷ ತುಂಬಿದ ಖುಷಿಯಲ್ಲಿ ಶಿವಣ್ಣನ ಅಭಿಮಾನಿಗಳು ಕಾಮನ್​ ಡಿಪಿ ರಿಲೀಸ್​ ಮಾಡಿದ್ದು, ಅದು ವೈರಲ್​ ಆಗುತ್ತಿದೆ.

 • Share this:

  ಶಿವರಾಜ್​ ಕುಮಾರ್ ಅಭಿನಯದ ಜೋಗಿ ಸಿನಿಮಾ ತೆರೆಕಂಡು ಇಂದಿಗೆ 15 ವರ್ಷಗಳು ಕಳೆದಿವೆ. ಪ್ರೇಮ್​ ನಿರ್ದೇಶನದ ಜೋಗಿ ಬಾಕ್ಸಾಫಿಸ್​ನಲ್ಲಿ ಧೂಳೆಬ್ಬಿಸಿತ್ತು. ಚಿತ್ರಕ್ಕೆ 15 ತುಂಬಿದ ದಿನವನ್ನು ಸಾಮಾಜಿಕ ಜಾಲತಾಣದಲ್ಲಿ ಜೋಗಿ ಜಾತ್ರೆ ಹೆಸರಿನಲ್ಲಿ ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ದಾರೆ. 


  ಶಿವಣ್ಣ ಹಾಗೂ ಪ್ರೇಮ್​​ ಅವರ ಜೋಡಿ ಆಗ ಸ್ಯಾಂಡಲ್​ವುಡ್​ನಲ್ಲಿ ಒಂದು ಹೊಸ ಅಲೆಯನ್ನೇ ಸೃಷ್ಟಿಸಿತ್ತು. ಈಗ ಸಿನಿಮಾಗೆ 15 ವರ್ಷ ತುಂಬಿದ ಖುಷಿಯಲ್ಲಿ ಶಿವಣ್ಣನ ಅಭಿಮಾನಿಗಳು ಕಾಮನ್​ ಡಿಪಿ ರಿಲೀಸ್​ ಮಾಡಿದ್ದು, ಅದು ವೈರಲ್​ ಆಗುತ್ತಿದೆ.


  Shivarajkumar starrer Jogi movie completed 15 years here is the cdp for the celebration
  ಶಿವರಾಜ್​ಕುಮಾರ್​ ಅವರ ಜೋಗಿ ಸಿನಿಮಾದ 15 ವರ್ಷಗಳ ಸಂಭ್ರಮದ ಕಾಮನ್​ ಡಿಪಿ


  ಇನ್ನು ಶಿವಣ್ಣನ ಅಭಿಮಾನಿಗಳ ಜೊತೆ ನಿರ್ದೇಶಕ ಪ್ರೇಮ್​ ಅವರ ಫ್ಯಾನ್ಸ್​ ಸಹ ಇದನ್ನು ಹಬ್ಬದಂತೆ ಆಚರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಇಂದು ಸಂಜೆ 5ಕ್ಕೆ ಪ್ರೇಮ್​, ಫೇಸ್​ಬುಕ್​, ಯೂಟ್ಯೂಬ್​, ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ನಲ್ಲಿ ಏಕಕಾಲಕ್ಕೆ ಲೈವ್​ ಬರಲಿದ್ದಾರೆ.  ನೂರು ದಿನಗಳ ಕಾಲ ಹಲವಾರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ಸಿನಿಮಾ ಜೋಗಿ. ಈ ಚಿತ್ರದ ಹಾಡುಗಳೂ ಸಹ ಸೂಪರ್​ ಹಿಟ್​ ಆಗಿತ್ತು. ಇಂದಿಗೂ ಅಮ್ಮ-ಮಗನ ನಡುವಿನ ಪ್ರೀತಿಯ ಹಾಡು 'ದೂರ ಹೋದರೂ... ಎಲ್ಲೇ ಇದ್ದರೂ...ನೀನೇ ಮರೆತರೂ ತಾಯಿ ಮರೆಯೋಲ್ಲ...' ಕೇಳುಗರ ಕಣ್ಣಲ್ಲಿ ನೀರು ತರಿಸುತ್ತದೆ.

  Published by:Anitha E
  First published: