James: `ಜೇಮ್ಸ್’​ ಜೊತೆ ಥಿಯೇಟರ್​ಗೆ ಬರ್ತಿದ್ದಾರೆ `ಬೈರಾಗಿ’.. ಅಪ್ಪು ಜೊತೆ ಶಿವಣ್ಣ ಕೂಡ ಎಂಟ್ರಿ!

`ಜೇಮ್ಸ್‌' ಬಿಡುಗಡೆಯಾಗುವ ಎಲ್ಲಾ ಪರದೆಗಳಲ್ಲೂ 'ಬೈರಾಗಿ' ದರ್ಶನವಾಗಲಿದೆ ಎಂಬುದು ವಿಶೇಷ. ಪುನೀತ್ ಅವರ ಸವಿನೆನಪಿಗಾಗಿ ಈ ಟೀಸರ್ ರಿಲೀಸ್ ಮಾಡುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ. 'ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಮ್ಮ ತಂಡದ ಜತೆ ಅಪ್ಪು ಒಡನಾಟವಿದೆ.

ಶಿವಣ್ಣ, ಅಪ್ಪು

ಶಿವಣ್ಣ, ಅಪ್ಪು

  • Share this:
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್(Shivarajkumar) ನಟನೆಯ 123ನೇ ಸಿನಿಮಾ 'ಬೈರಾಗಿ'(Bairagi) ಇತ್ತೀಚೆಗಷ್ಟೇ ಶೂಟಿಂಗ್ ಮುಗಿಸಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ಟೀಸರ್ ಪುನೀತ್ ರಾಜ್​ಕುಮಾರ್​(Puneeth Rajkumar) ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆ ಮಾಡಲು 'ಬೈರಾಗಿ' ತಂಡ ತೀರ್ಮಾನಿಸಿದೆ. 'ಜೇಮ್ಸ್‌'(James) ಬಿಡುಗಡೆಯಾಗುವ ಎಲ್ಲಾ ಪರದೆಗಳಲ್ಲೂ 'ಬೈರಾಗಿ' ದರ್ಶನವಾಗಲಿದೆ ಎಂಬುದು ವಿಶೇಷ. ಪುನೀತ್ ಅವರ ಸವಿನೆನಪಿಗಾಗಿ ಈ ಟೀಸರ್(Teaser) ರಿಲೀಸ್ ಮಾಡುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ. 'ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಮ್ಮ ತಂಡದ ಜತೆ ಅಪ್ಪು ಒಡನಾಟವಿದೆ. ಹೀಗಾಗಿ ಅವರ ಹುಟ್ಟುಹಬ್ಬ(Birthday)ದ ಉಡುಗೊರೆಯಾಗಿ 'ಬೈರಾಗಿ' ಟೀಸರ್ ಬಿಡುಗಡೆ ಮಾಡುತ್ತಿದ್ದೇವೆ. ಇದು ಪುನೀತ್ ಹಾಗೂ ಶಿವಣ್ಣ(Shivanna)ನ ಅಭಿಮಾನಿಗಳಿಗೆ ಸಂತಸದ ವಿಷಯ' ಎಂಬುದು ಚಿತ್ರತಂಡದ ಅನಿಸಿಕೆ.

ಜೇಮ್ಸ್​ ಸಿನಿಮಾ ಜೊತೆ ಬೈರಾವಿ ಟೀಸರ್​!

ವಿಜಯ್ ಮಿಲ್ಟನ್‌ ನಿರ್ದೇಶನವಿರುವ ಈ ಚಿತ್ರಕ್ಕೆ ಕೃಷ್ಣ ಸಾರ್ಥಕ 'ಕೃಷ್ಣ ಕ್ರಿಯೇಷನ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. 'ಟಗರು' ಬಳಿಕ 'ಡಾಲಿ' ಧನಂಜಯ್ ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಜತೆ ನಟಿಸಿದ್ದಾರೆ. ಹಿರಿಯ ನಟ ಶಶಿಕುಮಾರ್, ಅಂಜಲಿ, ಯಶ ಶಿವಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವೇ ಕೂಡಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ.'ಹ್ಯಾಟ್ರಿಕ್ ಹೀರೋ' ಶಿವರಾಜ್‌ಕುಮಾರ್‌ ಮತ್ತು ಡಾಲಿ ಧನಂಜಯ 'ಬೈರಾಗಿ' ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಇವರ ಜೊತೆ ‘ದಿಯಾ’ ಸಿನಿಮಾದ ನಾಯಕ ಪೃಥ್ವಿ ಕೂಡ ನಟಿಸುತ್ತಿದ್ದಾರೆ.

ಶಿವಣ್ಣನಿಗೆ ಜೋಡಿಯಾದ ನಟಿ ಅಂಜಲಿ!

ಆ್ಯಕ್ಷನ್‌ ಡ್ರಾಮಾ ಜಾನರ್‌ನ ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಮತ್ತು ಧನಂಜಯ ಅವರ ಲುಕ್‌ಗಳು ವಿಭಿನ್ನವಾಗಿವೆ. ಶಿವರಾಜ್‌ಕುಮಾರ್‌ಗೆ ತಮಿಳಿನ ಅಂಜಲಿ ನಾಯಕಿಯಾದರೆ, ಧನಂಜಯ ಅವರಿಗೆ ಯಶಾ ಶಿವಕುಮಾರ್‌ ಜೋಡಿಯಾಗಿದ್ದಾರೆ. ಅನೂಪ್‌ ಸೀಳಿನ್‌ ಸಂಗೀತ ನೀಡುತ್ತಿರುವ ಈ ಸಿನಿಮಾಗೆ ವಿಜಯ್‌ ಮಿಲ್ಟನ್‌ ನಿರ್ದೆಶನದ ಜತೆಗೆ ಸಿನಿಮಾಟೋಗ್ರಫಿಯನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ: 'ಜೇಮ್ಸ್' ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಹೆಸರೇನು ಗೊತ್ತಾ? ತಿಳಿದುಕೊಳ್ಳೋಕೆ ಎಲ್ಲೂ ಅಲ್ಲ ಇಲ್ಲೇ ಓದಿ...

ಹುಲಿವೇಷದಲ್ಲಿ ಗಮನ ಸೆಳೆದ ನಟ ಶಿವರಾಜ್‌ಕುಮಾರ್

'ಹ್ಯಾಟ್ರಿಕ್ ಹೀರೋ' ಶಿವರಾಜ್ ಕುಮಾರ್ ಅಭಿನಯದ 123ನೇ ಸಿನಿಮಾ ‘ಬೈರಾಗಿ’. ಶಿವಣ್ಣ ಹ ಹುಟ್ಟು ಹಬ್ಬದಂದು ಬಿಡುಗಡೆಯಾದ ಟೈಟಲ್ ಟೀಸರ್ ರಿಲೀಸ್ ಆಗಿತ್ತು, ಶಿವಣ್ಣನ ಟೈಟಲ್ ಹಾಗೂ ಲುಕ್ ಕಂಡು ಅಭಿಮಾನಿಗಳು ಬೆರಗಾಗಿದ್ದರು. ಹುಲಿ ವೇಷ, ಹೇರ್ ಸ್ಟೈಲ್ ಹಾಗೂ ಅವರ ಡಿಫರೆಂಟ್ ಕಾಸ್ಟ್ಯೂಮ್'ಗೆ ಫ್ಯಾನ್ಸ್ ಫಿದಾ ಆಗಿದ್ದರು. ಮುಖ್ಯವಾಗಿ ಅನೂಪ್ ಸೀಳಿನ್ ಸಂಗೀತಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ : ಮಾರ್ಚ್ 19ಕ್ಕೆ ಕರ್ನಾಟಕದಲ್ಲಿ RRR Pre-Release Event, `ರಾಜರತ್ನ’ನಿಗೆ ಈ ಕಾರ್ಯಕ್ರಮ ಅರ್ಪಣೆ!

ಮಾರ್ಚ್ 17ಕ್ಕೆ ರಾಜ್ಯದಲ್ಲಿ ಜೇಮ್ಸ್ ಹಬ್ಬ!

ಸದ್ಯ ಎಲ್ಲೆಲ್ಲೂ ಪವರ್ ಸ್ಟಾರ್ (Power Star) ಪುನೀತ್ ರಾಜ್‌ ಕುಮಾರ್ (Puneeth Rajkumar) ಅಭಿನಯದ ಜೇಮ್ಸ್ (James) ಚಿತ್ರದ್ದೇ ಮಾತು. ಅಪ್ಪು (Appu) ಅಭಿನಯದ ಕೊನೆಯ ಸಿನಿಮಾ (Last Movie) ಆಗಿರೋದ್ರಿಂದ ಈ ಸಿನಿಮಾ (Cinema) ಮೇಲೆ ಪುನೀತ್ ಅಭಿಮಾನಿಗಳಿಗಷ್ಟೇ (Fans) ಅಲ್ಲ, ಎಲ್ಲಾ ಕನ್ನಡಿಗರಿಗೂ ಪ್ರೀತಿ, ಅಭಿಮಾನ ಮತ್ತು ಸಾಕಷ್ಟು ನಿರೀಕ್ಷೆಗಳು ಇವೆ. ಇದೇ ಮಾರ್ಚ್‌ 17ರಿಂದ ಜೇಮ್ಸ್ ಸಿನಿಮಾ ಜಾತ್ರೆ ಶುರುವಾಗಲಿದೆ. ಸಿನಿಮಾದಲ್ಲಿ ಪುನೀತ್ ಪಾತ್ರದ ಹೆಸರು ಸಂತೋಷ್ ಕುಮಾರ್. ಇದೇ ಹೆಸರಿನ ಟ್ಯಾಗ್ ಹಾಕಿಕೊಂಡು, ಪುನೀತ್ ರಾಜ್‌ಕುಮಾರ್ ಸೈನಿಕನ ಡ್ರೆಸ್‌ನಲ್ಲಿ ಮಿಂಚಿದ್ದಾರೆ.
Published by:Vasudeva M
First published: