Puneeth Rajkumar: ಅಪ್ಪು, ಈ ಹಾಡು ನಿನಗೋಸ್ಕರ... ಪುನೀತ್​ ನೆಚ್ಚಿನ ಹಾಡು ಹಾಡಿ ಕಣ್ಣೀರಿಟ್ಟ ಶಿವಣ್ಣ

Puneeth Rajkumar; ಅಪ್ಪು ಬಗ್ಗೆ ಮಾತನಾಡುವ ವೇಳೆ ಶಿವಣ್ಣ ಅಪ್ಪುಗಾಗಿ ಒಂದು ಹಾಡನ್ನು ಹಾಡಿದ್ದಾರೆ. ಅದು ಅಪ್ಪು ಅವರ ನೆಚ್ಚಿನ ಹಾಡು. ಹೌದು, ಎಲ್ಲೆ ಹೋದರು ಅಪ್ಪು ಆ ಹಾಡನ್ನು ಕೇಳುತ್ತಿದ್ದರು, ಹಾಡುತ್ತಿದ್ದರು.

ಪುನೀತ್​ ರಾಜ್​ಕುಮಾರ್, ಶಿವರಾಜ್​ಕುಮಾರ್

ಪುನೀತ್​ ರಾಜ್​ಕುಮಾರ್, ಶಿವರಾಜ್​ಕುಮಾರ್

  • Share this:
‘ಮುತ್ತುರಾಜ ಹೆತ್ತ ಮುತ್ತೆ.. ಎತ್ತ ಹೋದೆಯೋ.. ಅತ್ತು, ಕರೆದರೂ ಮತ್ತೆ ಬಾರದಾದೆಯೂ.. ಮರೆಯಲಾರೆವೂ ಎಂದು ನಿಮ್ಮ ಅಪ್ಪುಗೆ.. ನೆನೆಪೆ ತುಂಬಿ ಹೋದೆ.. ದೂರದೂರಿಗೆ..’ಹೌದು, ಅಪ್ಪು(Appu) ನಮ್ಮನ್ನು ಬಿಟ್ಟು ಹೋಗಿರುವುದನ್ನು ಇಂದು ಯಾರು ನಂಬಲು ಸಾಧ್ಯವಾಗುತ್ತಿಲ್ಲ. ಅಪ್ಪು ನಮ್ಮೊಂದಿಗೆ ಇದ್ದಾರೆ. ಅಭಿಮಾನಿಗಳ(Fans) ಹೃದಯದಲ್ಲಿದ್ದಾರೆ. ಎಲ್ಲಿವರೆಗೂ ಅಭಿಮಾನಿಗಳು ಇರುತ್ತಾರೋ ಅಲ್ಲಿವರೆಗೂ ಅಪ್ಪು ಜೀವಂತವಾಗಿರುತ್ತಾರೆ. ನಿನ್ನೆ ಪುನೀತ್ ರಾಜಕುಮಾರ್ (Puneeth Rajkumar) ಸಾವಿಗೆ ಸಂತಾಪ ಸೂಚಿಸಲು ಮತ್ತು ಅವರನ್ನ ನೆನೆದು ಗೌರವಿಸಲು ಅರಮನೆ ಮೈದಾನ(Palace Ground)ದಲ್ಲಿ ‘ಪುನೀತ ನಮನ’(Puneeth Namana) ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜಕೀಯ ನಾಯಕರು, ಸಿನಿಮಾ ರಂಗದ ದಂಡೇ ಅಲ್ಲಿ ನರೆದಿತ್ತು. ಎಲ್ಲರೂ ಅಪ್ಪು ನೆನೆದು ಭಾವುಕರಾದರು. ಅದರಲ್ಲೂ ರಾಘಣ್ಣ(Raghanna), ಶಿವಣ್ಣ(Shivanna) ಮಾತಾಡಿದ ಮಾತುಗಳನ್ನ ಕೇಳಿ ಎಲ್ಲರ ಕಣ್ಣಲ್ಲೂ ನೀರು ಹರಿದಿತ್ತು. ಪ್ರೀತಿಯ ಸಹೋದರನನ್ನು ಕಳೆದುಕೊಂಡು ನೋವಿನಲ್ಲಿರುವ ರಾಘಣ್ಣ ಹಾಗೂ ಶಿವಣ್ಣ ಅವರ ಕಣ್ಣೀರಿನ ಕಟ್ಟೆ ಹೊಡೆಯಿತು. ಅಪ್ಪು ಬಗ್ಗೆ ಮಾತನಾಡುವ ವೇಳೆ ಶಿವಣ್ಣ ಅಪ್ಪುಗಾಗಿ ಒಂದು ಹಾಡನ್ನು ಹಾಡಿದ್ದಾರೆ. ಅದು ಅಪ್ಪು ಅವರ ನೆಚ್ಚಿನ ಹಾಡು. ಹೌದು, ಎಲ್ಲೆ ಹೋದರು ಅಪ್ಪು ಆ ಹಾಡನ್ನು ಕೇಳುತ್ತಿದ್ದರು, ಹಾಡುತ್ತಿದ್ದರು.

ಅಪ್ಪು ನೆಚ್ಚಿನ ಹಾಡು ‘ಮೇನ್ ಶಾಯರ್ ತೊ ನಹಿನ್’!

ಸಹನಾ ಮೂರ್ತಿಯಂತೆ ಕಾಣುವ ಶಿವರಾಜ್‌ ಕುಮಾರ್ ಮನಸ್ಸಿಲ್ಲಿ ಅಪ್ಪು ಅಗಾಧ ನೋವು ತುಂಬಿ ಹೋಗಿದ್ದಾರೆ. ಅಪ್ಪು ಈ ಹಾಡು ನಿನಗೋಸ್ಕರ ಎಂದು ಶಿವಣ್ಣ ನೋವಿನಲ್ಲೆ ‘ಮೇನ್​ ಶಾಯರ್​ ತೊ ನಹಿನ್​’ ಹಾಡು  ಹಾಡಿದರು. ಈ ಹಾಡು ಅಪ್ಪುಗೆ ಬಹಳ ಇಷ್ಟ. ಎಲ್ಲೆ ಹೋದರು, ಎಲ್ಲೆ ಇದ್ದರೂ ಈ ಹಾಡನ್ನು ಅಪ್ಪು ಸದಾ ಕೇಳುತ್ತಿದ್ದರು. ಮನೆಯಲ್ಲಿ ಇದ್ದಾಗ, ಡ್ರೈವ್ ಮಾಡುವಾಗ, ಯಾವುದಾದರೂ ಕಾರ್ಯಕ್ರಮಕ್ಕೆ ಹೋದಾಗ ಈ ಹಾಡನ್ನ ಅಪ್ಪು ಕೇಳುತ್ತಿದ್ದರು. ನಿನ್ನೆ ನಡೆದ ಪುನೀತ ನಮನ ಕಾರ್ಯಕ್ರಮದಲ್ಲೂ ಅಪ್ಪುಗಾಗಿ ಈ ಹಾಡು ಹಾಡಿ ಶಿವಣ್ಣ ಕಣ್ಣೀರಿಟ್ಟದರು. ಅಪ್ಪು ಈ ಹಿಂದೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಈ ಹಾಡು ಹಾಡಿರುವ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ. ರಿಷಿ ಕಪೂರ್​ ಅಭಿನಯಿಸಿದ ಬಾಬಿ ಸಿನಿಮಾದ ಈ ಹಾಡು ಕಂಡರೇ ಅಪ್ಪು ಬಹಳ ಇಷ್ಟ.



ಇದನ್ನು ನೋಡಿ: ಪುನೀತ ನಮನ- ಒಡೆಯಿತು ದುಃಖದ ಕಟ್ಟೆ: ತಮ್ಮನ ನೆನೆದು ಕಣ್ಣೀರಿಟ್ಟ ರಾಘಣ್ಣ, ಶಿವಣ್ಣ

'ಅವನನ್ನು ಹೂತಿಲ್ಲ, ಬಿತ್ತಿದ್ದೀವಿ' ಎಂದ ರಾಘಣ್ಣ!

ಪುನೀತ್​ ರಾಜ್​ಕುಮಾರ್​ ನಿಧನವಾದಗಿನಿಂದಲೂ ರಾಘಣ್ಣ ನೋವಿನಲ್ಲಿದ್ದರೂ ತೋರಿಸಿಕೊಂಡಿರಲಿಲ್ಲ. ಆದರೆ ನಿನ್ನೆ ಪುನೀತ ನಮನ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ್ದಾರೆ. ಪುನೀತ್ ರಾಜಕುಮಾರ್ ಬದಲು ಆ ದೇವರು ನನ್ನನ್ನ ಕರೆಸಿಕೊಳ್ಳಬಾರದಿತ್ತೆ ಎಂದು ರಾಘವೇಂದ್ರ ರಾಜಕುಮಾರ್ ಹೇಳುತ್ತಾ ಗದ್ಗದಿತರಾದರು. ‘ಪುನೀತ್​ ರಾಜ್​ಕುಮಾರ್ ನನಗೆ ಆಯಸ್ಸು ಕೊಟ್ಟು ಅವನು ಹೋಗಿಬಿಟ್ಟ. ಅಪ್ಪ, ಅಪ್ಪನ ಹತ್ರ ಈ ನೋವು ಹೇಳಿಕೊಳ್ಳೋಣ ಎಂದರೆ, ಅವರ ಪಕ್ಕದಲ್ಲೇ ಅವನನ್ನು ಮಲಗಿಸಿದರು. ಅವನನ್ನು ನಾವು ಹೂತಿಲ್ಲ. ಬಿತ್ತಿದ್ದೀವಿ ನೂರಾರು ಪುನೀತ್​ ರಾಜ್​ಕುಮಾರ್​ ಬರುತ್ತಾರೆ’ ಅಂತ ಹೇಳುತ್ತಾ ಕಣ್ಣೀರಿಟ್ಟರು. ಇದನ್ನು ಕೇಳಿಸಿಕೊಂಡ ಶಿವಣ್ಣ ಕೂಡ ಬಿಕ್ಕಿ ಬಿಕ್ಕಿ ಅತ್ತರು.

ಇದನ್ನು ನೋಡಿ : ನಿಮ್ಮಲ್ಲಿ ಅವರ ಆದರ್ಶಗಳನ್ನು ನೋಡಿ ಕಣ್ತುಂಬಿ ಬಂತು; Ashwini Puneeth Rajkumar ಭಾವುಕ ಸಾಲುಗಳು

ಹಾಡಿನ ಮೂಲಕ ಅಪ್ಪುಗೆ ನಮನ 

ನಿನ್ನೆ ಪುನೀತ ನಮನ ಕಾರ್ಯಕ್ರಮದಲ್ಲಿ ಹಾಡುಗಳ ಮೂಲಕ ಅಪ್ಪುಗೆ ನಮನ ಸಲ್ಲಿಸಲಾಯಿತು. ವಿಜಯ್​ ಪ್ರಕಾಶ್​, ರಾಜೇಶ್​ ಕೃಷ್ಣನ್​, ಗುರುಕಿರಣ್​, ಶಿವಮಣಿ ಸೇರಿ ಹಲವು ಗಾಯಕರು ತಮ್ಮ ಗಾಯನದ ಮೂಲಕ ಅಪ್ಪುಗೆ ನಮನ ಸಲ್ಲಿಸಿದ್ದರು. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಜೆಡಿಎಸ್ ನಾಯಕ ಪಿ ಸರವಣ ಮೊದಲಾದವರು ಮಾತನಾಡಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್, ತಮಿಳು ನಟ ವಿಶಾಲ್, ಶರತ್ ಕುಮಾರ್ ಸೇರಿ ಅನೇಕ ಗಣ್ಯರು ಭಾಗಿಯಾಗಿದ್ದಾರು.
Published by:Vasudeva M
First published: