• Home
  • »
  • News
  • »
  • entertainment
  • »
  • Puneeth Rajkumar: ಬೈರಾಗಿಯ ಪವರ್‌ಫುಲ್ ಹಾಡಿಗೆ ದನಿಯಾಗಬೇಕಿದ್ದ ಪುನೀತ್! ಅಪ್ಪು ಬಗ್ಗೆ ಶಿವಣ್ಣನ ನೋವಿನ ನುಡಿ

Puneeth Rajkumar: ಬೈರಾಗಿಯ ಪವರ್‌ಫುಲ್ ಹಾಡಿಗೆ ದನಿಯಾಗಬೇಕಿದ್ದ ಪುನೀತ್! ಅಪ್ಪು ಬಗ್ಗೆ ಶಿವಣ್ಣನ ನೋವಿನ ನುಡಿ

ಪುನೀತ್ ಮತ್ತು ಶಿವರಾಜ್ ಕುಮಾರ್ ಸಂಗ್ರಹ ಚಿತ್ರ

ಪುನೀತ್ ಮತ್ತು ಶಿವರಾಜ್ ಕುಮಾರ್ ಸಂಗ್ರಹ ಚಿತ್ರ

‘ಬೈರಾಗಿ’ (Bairagee) ಚಿತ್ರದ ‘ರಿದಮ್ ಆಫ್ ಶಿವಪ್ಪ’ (Rhythm Of Shivappa) ಹಾಡು ರಿಲೀಸ್ ಆಗಿದ್ದು, ತುಂಬಾ ಗ್ಯಾಪ್ ನಂತ್ರ ಶಿವಣ್ ಈ ಹಾಡನ್ನು ಹಾಡಿದ್ದು, ಹಾಡಿಗೆ ಸಖತ್ ರೆಸ್ಪಾನ್ಸ್‌  ಸಿಕ್ಕಿದೆ. ಈ ಸಂತಸದ ಹೊತ್ತಲ್ಲೆ ಶಿವಣ್ಣ ಅಪ್ಪು ಅಭಿಮಾನಿಗಳನ್ನು ಕಾಡುವ ವಿಚಾರವೊಂದನ್ನು ಬಹಳ ನೋವಿನಿಂದಲೇ ಹೇಳಿದ್ದಾರೆ.

ಮುಂದೆ ಓದಿ ...
  • Share this:

    ಹ್ಯಾಟ್ರಿಕ್ ಹೀರೋ (Hatrick Hero) ಶಿವರಾಜ್ ಕುಮಾರ್ (Shivarajkumar) ಅಭಿನಯದ ‘ಬೈರಾಗಿ’ (Bairagee) ಚಿತ್ರದ ‘ರಿದಮ್ ಆಫ್ ಶಿವಪ್ಪ’ (Rhythm Of Shivappa) ಹಾಡು ರಿಲೀಸ್ ಆಗಿದ್ದು, ತುಂಬಾ ಗ್ಯಾಪ್ ನಂತ್ರ ಶಿವಣ್ಣ (Shivanna) ಈ ಹಾಡನ್ನು ಹಾಡಿದ್ದು, ಹಾಡಿಗೆ (Song) ಸಖತ್ ರೆಸ್ಪಾನ್ಸ್‌  ಸಿಕ್ಕಿದೆ. ಈ ಸಂತಸದ ಹೊತ್ತಲ್ಲೆ ಶಿವಣ್ಣ ಅಪ್ಪು (Apppu) ಅಭಿಮಾನಿಗಳ (Fans)  ಕಾಡುವ ವಿಚಾರವೊಂದನ್ನು ಬಹಳ ನೋವಿನಿಂದಲೇ ಹೇಳಿದ್ದಾರೆ. ಮೊನ್ನೆಯಷ್ಟೆ ಅಂದ್ರೆ ಜೂನ್ 2ರಂದು ಶಿವಣ್ಣನ  ಭೈರಾಗಿ ಚಿತ್ರದ ರಿದಮ್ ಸಾಂಗ್ ಅಭಿಮಾನಿಗಳ ಅಂಗಳ ಸೇರಿದೆ‌. ಶಿವಪ್ಪನ ರಿದಮ್ ಗೆ ಟಗರು ಶಿವ ಧ್ವನಿಯಾಗಿದ್ದು, ಈ ಹಾಡಿಗೆ ಶಿವಸೈನ್ಯ ಹುಚ್ಚೆದ್ದು ಕುಣಿಯುತ್ತಿದೆ.  ಅಲ್ಲದೆ ಹಾಡು ಈಗಾಗಲೇ ಸೂಪರ್ ಡೂಪರ್ ಹಿಟ್ ಆಗಿದೆ. ಇನ್ನು ಈ ಹಾಡಿನ ಗೆಲುವನ್ನುಅಭಿಮಾನಿಗಳ ಜೊತೆ ಹಂಚಿಕೊಳ್ಳುವ ವೇಳೆ, ನೋವಿನ ವಿಯಷವೊಂದನ್ನು ನೋವಿನಿಂದಲೇ ಹೇಳಿದ್ದಾರೆ. ಬೈರಾಗಿ ಚಿತ್ರದ ಈ ಹಾಡು ರಿಲೀಸ್ ಆಗೊಕೂ ಮುನ್ನ ಹಾಡನ್ನು ಯಾರು ಹಾಡಬೇಕು ಅನ್ನೋ ವಿಚಾರ ಸಖತ್ ಸುದ್ದಿಯಲ್ಲಿತ್ತು.


    ಪವರ್ ಸ್ಟಾರ್ ಹಾಡಬೇಕಿತ್ತಂತೆ ಬೈರಾಗಿಯ ಹಾಡು!


    ಈ ಹಾಡಿನ ಗಾಯಕರ ವಿಚಾರದಲ್ಲಿ ನಟರಾದ ಸಲಗ ವಿಜಯ್, ಡಾಲಿ ಧನಂಜಯ್  ಹೆಸರು ಕೇಳಿ ಬಂದಿತ್ತು. ಅದ್ರೆ ಫೈನಲ್ ಆಗಿ ರಿದಮ್ ಆಫ್ ಶಿವಪ್ಪ ಹಾಡನ್ನು ಶಿವಣ್ಣ ಮತ್ತು ಶರಣ್ ಹಾಡಿದ್ರು. ಅದ್ರೆ ಈ ಹಾಡನ್ನು ಶಿವಣ್ಣನ ಜೊತೆ ಶರಣ್ ಹಾಡೋಕೆ ಮು‌ನ್ನ ಅಭಿಮಾನಿಗಳ ಅರಸ, ದೊಡ್ಮನೆ ದೇವರುಗಳ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಈ ಹಾಡನ್ನು ಹಾಡ ಬೇಕಿತ್ತಂತೆ!


    ಅಪ್ಪು ನೆನೆದು ಭಾವುಕರಾದ ಶಿವಣ್ಣ


    ಇನ್ನು ಈ ವಿಚಾರವನ್ನು ಶಿವಣ್ಣ ಬಹಳ ನೋವಿನಿಂದಲೇ ಹೇಳಿದ್ದಾರೆ‌‌. ಅಪ್ಪು ಹೋಗೊಕು ಮುನ್ನ ಎಲ್ಲಾ ಫೈನಲ್ ಆಗಿತ್ತು. ಇನ್ನೇನು ಅಪ್ಪು ಹಾಡನ್ನು ಹಾಡ ಬೇಕು ಅಷ್ಟರಲ್ಲಿ ಅವನು ನಮ್ಮ ಬಿಟ್ಟು ಹೋದ. ಅವನ ಜೊತೆ ನಾನು ಯಾವ ಹಾಡನ್ನು ಹಾಡಿರಲಿಲ್ಲ..ಈ ಹಾಡನ್ನು ಹಾಡೊಣ ಅಂದು ಕೊಂಡಿದ್ದೆ.. ಅವನ ಜೊತೆ ಹಾಡುವ ಭಾಗ್ಯ ನನಗೆ ಇಲ್ಲ ಎಂದು ಶಿವಣ್ಣ ಪ್ರೀತಿಯ ತಮ್ಮನ ಬಗ್ಗೆ ಭಾವುಕರಾಗೇ ಹೇಳಿದ್ದಾರೆ.


    ಇದನ್ನೂ ಓದಿ: Sandalwood: ಕನ್ನಡದ ನಟರ ಹೆಸರಲ್ಲಿರುವ ರಸ್ತೆಗಳ ಬಗ್ಗೆ ನಿಮಗೆಷ್ಟು ಗೊತ್ತು? ಏಷ್ಯಾದಲ್ಲೇ ಉದ್ದನೆಯ ರಸ್ತೆ ಇವರ ಹೆಸರಲ್ಲಿದೆ!


    ಬೈರಾಗಿ ಹಾಡಿಗೆ ಜೀವಕೊಟ್ಟ ಟಗರು ಶಿವ


    ಇ‌ನ್ನು ಭೈರಾಗಿ ಹಾಡು ಒಂದೇ ಟೇಕ್ ನಲ್ಲಿ ಮೂಡಿ ಬಂದಿದ್ದು, ಶಿವಣ್ಞ ಎನರ್ಜಿ ಬಗ್ಗೆ ಮತ್ತೆ ಇಡೀ ಇಂಡಸ್ಟ್ರಿಯೇ ಕಳೆದು ಹೋಗಿದೆ.. ವಯಸ್ಸು60 ಆದ್ರು16 ರ ಯುವಕನಂತೆ ಸದಾ ಲವಲವಿಕೆಯಿಂದಿರುವ ಸೆಂಚುರಿ ಸ್ಟಾರ್ ಎನರ್ಜಿಗೆ ಡಾಲಿ ಧನಂಜಯ ಕೂಡ ಸಲಾಂ ಹೊಡೆದಿದ್ದಾರೆ.


    ಶಿವ ಶಕ್ತಿಗೆ ಫಿದಾ ಆದ ಡಾಲಿ


    ಶಿವಣ್ಣನ ರೀತಿ ಕುಣಿಯೋಕೆ ನಮ್ಮ ಕೈಯಲ್ಲಿ ಆಗಲ್ಲ.. ಶೂಟಿಂಗ್ ನಲ್ಲಿ ಒಂದೊಂದು ಸಲ ನನಗೆ ಸುಸ್ತಾಗ್ತಿತ್ತು ಅದ್ರೆ ನಮ್ಮ ಶಿವಣ್ಣನಿಗೆ ಸುಸ್ತು ಆಗ್ತಿರ್ಲಿಲ್ಲ ಎಂದು ಶಿವಣ್ಣನ ಸಿನಿಮಾ ಪ್ರೀತಿ ಮತ್ತು ಎನರ್ಜಿಗೆ ಡಾಲಿ ಫಿದಾ ಆಗಿದ್ದಾರೆ..


    ಇದನ್ನೂ ಓದಿ: Om Kannada Movie: 'ಓಂ' ಸಿನಿಮಾದಲ್ಲಿ ನಟಿಸಲು ಮೊದಲು ಉಪೇಂದ್ರ ಈ ನಟನನ್ನು ಆಯ್ಕೆ ಮಾಡಿಕೊಂಡಿದ್ದರಂತೆ!


    ಅದೇನೆ ಇರಲಿ ಸಿನಿಮಾ ಹಾಡಿನ ಗೆಲುವು ಒಂದು ಕಡೆಯಾದ್ರೆ. ನನ್ನ ಚಿತ್ರದಲ್ಲಿ ನನ್ನ ತಮ್ಮ ಹಾಡೊದು ಮಿಸ್ಸಾಯ್ತಲ್ಲ ಅನ್ನೋ ನೋವು ಮತ್ತೊಂದು ಕಡೆ‌ ಕಾಡ್ತಿದ್ದು, ಶಿವಣ್ಣ ಮಾಡೊ ಪ್ರತಿ ಕೆಲಸದಲ್ಲೂ ತಮ್ಮನ ಕಾಣ್ತಿದ್ದು ಈಗ ಭೈರಾಗಿ ಗೆಲುವಲ್ಲು ತಮ್ಮನ ಕಾಣುವ ತವಕದಲ್ಲಿದ್ದಾರೆ. ಶಿವಣ್ಣನಲ್ಲಿ ಪ್ರೀತಿಯ ಅಪ್ಪುನ ಕಾಣುವ ದೊಡ್ಮನೆ ಅಭಿಮಾನಿಗಳು ಅಪ್ಪು ನೆನಪನ್ನು ಮೆಲುಕು ಹಾಕುತ್ತಿದ್ದಾರೆ.


    (ವರದಿ: ಸತೀಶ್ ಎಂ.ಬಿ.)

    Published by:Annappa Achari
    First published: