ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್(Shivarajkumar) ನಟನೆಯ 123ನೇ ಸಿನಿಮಾ 'ಬೈರಾಗಿ'(Bairagi) ಇತ್ತೀಚೆಗಷ್ಟೇ ಶೂಟಿಂಗ್ (Shooting) ಮುಗಿಸಿ, ಟ್ರೇಲರ್ ಮೂಲಕ ಸದ್ದು ಮಾಡಿತ್ತು. ಇದೀಗ ಈ ಚಿತ್ರತಂಡ ಅಭಿಮಾನಿಗಳಿಗೆ ಮತ್ತೊಂದು ಸಂತಸದ ವಿಚಾರವನ್ನು ಬಹಿರಂಗಪಡಿಸಿದ್ದು, ಈ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಹೌದು, ಶಿವಣ್ಣ ಹಾಗೂ ಅವರ ಅಭಿಮಾನಿಗಳ (Fans) ಪಾಲಿಗೆ ಈ ಚಿತ್ರ ಬಹಳ ವಿಶೇಷವಾಗಿದ್ದು, ಬಹಳ ನಿರೀಕ್ಷೆಯನ್ನು ಸಹ ಈ ಚಿತ್ರ ಹುಟ್ಟಿಸಿದೆ.
ಈಗಾಗಲೇ ಈ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಸ್ಯಾಂಡಲ್ವುಡ್ನಲ್ಲಿ ಹೈಪ್ ಕ್ರಿಯೇಟ್ ಮಾಡಿದ್ದು, ಹೊಸ ಲುಕ್ನಲ್ಲಿ ಶಿವಣ್ಣ ಅವರನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗ ಚಿತ್ರತಂಡ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, ಅಭಿಮಾನಿಗಳು ಫುಲ್ ಖುಷಿಯಲ್ಲಿದ್ದಾರೆ.
ಶಿವಣ್ಣನ ಬರ್ತಡೇಗೂ ಮುನ್ನ ಚಿತ್ರ ರಿಲೀಸ್
ಹೌದು, ಜುಲೈ 1 ರಂದು ಶಿವಣ್ಣ ಅಭಿನಯದ ಬೈರಾಗಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಶಿವಣ್ಣ ಹುಟ್ಟುಹಬ್ಬದ ಗಿಫ್ಟ್ ಅನ್ನು 2 ವಾರ ಮೊದಲೇ ನೀಡಲಾಗುತ್ತದೆ. ಜುಲೈ 12ರಂದು ಶಿವಣ್ಣ 60 ನೇ ವರ್ಷಕ್ಕೆ ಕಾಲಿಡುತ್ತಿದ್ದು, ಈ ದಿನ ಚಿತ್ರ ಬಿಡುಗಡೆಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದಕ್ಕೂ ಮೊದಲೇ ಚಿತ್ರ ಬಿಡುಗಡೆ ಮಾಡಲಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ.
ಈ ಚಿತ್ರದ ಹಾಡು ಮತ್ತು ಲುಕ್ ಭಾರೀ ಸದ್ದು ಮಾಡುತ್ತಿದ್ದು, ಟಗರು ಚಿತ್ರದ ನಂತರ ಧನಂಜಯ್ ಮತ್ತು ಶಿವಣ್ಣ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಚಿತ್ರ ಇದಾಗಿದೆ. ಟಗರು ಇಬ್ಬರು ಎದುರು ಬದುರಾಗಿ ಜನರಿಗೆ ಮೋಡಿ ಮಾಡಿದ್ದರು, ಈ ಚಿತ್ರದಲ್ಲಿ ಮತ್ತೇನು ಮ್ಯಾಜಿಕ್ ಮಾಡುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ. ಈ ಚಿತ್ರಕ್ಕೆ ವಿಜಯ್ ಮಿಲ್ಟನ್ ಆಕ್ಷನ್ ಕಟ್ ಹೇಳಿದ್ದು, ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ಕೂಡ ನಟಿಸಿದ್ದಾರೆ.
ಕೃಷ್ಣ ಸಾರ್ಥಕ 'ಕೃಷ್ಣ ಕ್ರಿಯೇಷನ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಹಿರಿಯ ನಟ ಶಶಿಕುಮಾರ್, ಅಂಜಲಿ, ಯಶ ಶಿವಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವೇ ಕೂಡಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ.
ಇದನ್ನೂ ಓದಿ: ಸೂರ್ಯನೊಬ್ಬ-ಚಂದ್ರನೊಬ್ಬ ರಾಜನೂ ಒಬ್ಬ! ಹೊಸಪೇಟೆಯಲ್ಲಿ ಪುನೀತ್ ಪ್ರತಿಮೆ ಅನಾವರಣ
ಆಕ್ಷನ್ ಡ್ರಾಮಾ ಚಿತ್ರ ಇದು
ಆ್ಯಕ್ಷನ್ ಡ್ರಾಮಾ ಜಾನರ್ನ ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ ಮತ್ತು ಧನಂಜಯ ಅವರ ಲುಕ್ಗಳು ವಿಭಿನ್ನವಾಗಿವೆ. ಶಿವರಾಜ್ಕುಮಾರ್ಗೆ ತಮಿಳಿನ ಅಂಜಲಿ ನಾಯಕಿಯಾದರೆ, ಧನಂಜಯ ಅವರಿಗೆ ಯಶಾ ಶಿವಕುಮಾರ್ ಜೋಡಿಯಾಗಿದ್ದಾರೆ.
ಹ್ಯಾಟ್ರಿಕ್ ಹೀರೋ' ಶಿವರಾಜ್ ಕುಮಾರ್ ಅಭಿನಯದ 123ನೇ ಸಿನಿಮಾ ‘ಬೈರಾಗಿ’. ಶಿವಣ್ಣ ಅವರ ಕಳೆದ ಹುಟ್ಟು ಹಬ್ಬದಂದು ಬಿಡುಗಡೆಯಾದ ಟೈಟಲ್ ಟೀಸರ್ ರಿಲೀಸ್ ಆಗಿತ್ತು, ಶಿವಣ್ಣನ ಟೈಟಲ್ ಹಾಗೂ ಲುಕ್ ಕಂಡು ಅಭಿಮಾನಿಗಳು ಬೆರಗಾಗಿದ್ದರು. ಹುಲಿ ವೇಷ, ಹೇರ್ ಸ್ಟೈಲ್ ಹಾಗೂ ಅವರ ಡಿಫರೆಂಟ್ ಕಾಸ್ಟ್ಯೂಮ್'ಗೆ ಫ್ಯಾನ್ಸ್ ಫಿದಾ ಆಗಿದ್ದರು. ಮುಖ್ಯವಾಗಿ ಅನೂಪ್ ಸೀಳಿನ್ ಸಂಗೀತಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನು ಭೈರಾಗಿ ಹಾಡು ಒಂದೇ ಟೇಕ್ ನಲ್ಲಿ ಮೂಡಿ ಬಂದಿದ್ದು, ಶಿವಣ್ಞ ಎನರ್ಜಿ ಬಗ್ಗೆ ಮತ್ತೆ ಇಡೀ ಇಂಡಸ್ಟ್ರಿಯೇ ಕಳೆದು ಹೋಗಿದೆ.. ವಯಸ್ಸು60 ಆದ್ರು16 ರ ಯುವಕನಂತೆ ಸದಾ ಲವಲವಿಕೆಯಿಂದಿರುವ ಸೆಂಚುರಿ ಸ್ಟಾರ್ ಎನರ್ಜಿಗೆ ಡಾಲಿ ಧನಂಜಯ ಕೂಡ ಸಲಾಂ ಹೊಡೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ