• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • ಮತ್ತೆ ಒಂದಾಗಲಿರುವ ದಿ ವಿಲನ್​ ಜೋಡಿ: ಕಿಚ್ಚ ಸುದೀಪ್​ ನಿರ್ದೇಶನದಲ್ಲಿ ಶಿವಣ್ಣ ಅಭಿನಯ

ಮತ್ತೆ ಒಂದಾಗಲಿರುವ ದಿ ವಿಲನ್​ ಜೋಡಿ: ಕಿಚ್ಚ ಸುದೀಪ್​ ನಿರ್ದೇಶನದಲ್ಲಿ ಶಿವಣ್ಣ ಅಭಿನಯ

ನೀ ಸಿಗೋವರೆಗೂ ಸಿನಿಮಾದ ಮುಹೂರ್ತದಲ್ಲಿ ಸುದೀಪ್​, ಶಿವಣ್ಣ ಹಾಗೂ ಗೀತಾ ಶಿವರಾಜ್​ಕುಮಾರ್

ನೀ ಸಿಗೋವರೆಗೂ ಸಿನಿಮಾದ ಮುಹೂರ್ತದಲ್ಲಿ ಸುದೀಪ್​, ಶಿವಣ್ಣ ಹಾಗೂ ಗೀತಾ ಶಿವರಾಜ್​ಕುಮಾರ್

ಸುದೀಪ್​ ಅವರು ಬರೆದಿರುವ ಕತೆಗೆ ಶಿವರಾಜ್​ಕುಮಾರ್ ನಾಯಕನಾದರೆ, ಸುದೀಪ್ ನಿರ್ದೇಶನ ಮಾಡಬೇಕಂತೆ. ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಶಿವಣ್ಣ ಹಾಗೂ ಸುದೀಪ್​ ಅವರು ಹೇಳಿಕೊಂಡಿದ್ದಾರೆ.

  • Share this:

ಶಿವರಾಜ್​ ಕುಮಾರ್  (Shiva Rajkumar) ಹಾಗೂ ಕಿಚ್ಚ ಸುದೀಪ್​  (Kichcha Sudeepa)ಒಂದೇ ವೇದಿಕೆಯಲ್ಲಿ ನಿನ್ನೆಯಷ್ಟೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಸರ್ಪ್ರೈಸ್​ ಕೊಟ್ಟಿದ್ದರು. ಇನ್ನು ಈ ಸೆಲೆಬ್ರಿಟಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಕಾರಣ ಏನೆಂದು ತಿಳಿದುಕೊಳ್ಳುವ ಮೊದಲೇ ಕೆಲವರು ಈ ಜೋಡಿ ಮತ್ತೆ ಸಿನಿಮಾಗಾಗಿ ಒಂದಾಗಿದ್ದಾರೆ ಎಂದು ಊಹಿಸೋಕೆ ಆರಂಭಿಸಿದ್ದರು. ಆದರೆ ನಿನ್ನೆಯ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಊಹಿಸಿಕೊಂಡಂತೆ ಏನೂ ಆಗದಿದ್ದರೂ ಭವಿಷ್ಯದಲ್ಲಿ ಈ ಜೋಡಿ ಮತ್ತೆ ಒಂದಾಗಲು ವೇದಿಕೆಯಾಯಿತು. ಹೌದು, ಕಿಚ್ಚ ಸುದೀಪ್​ ಅವರು ಈ ಹಿಂದೆ ಪ್ರೇಮ್​ ನಿರ್ದೇಶನದಲ್ಲಿ ವಿಲನ್ ಸಿನಿಮಾದಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ಈಗ ಇದೇ ಜೋಡಿ ಮತ್ತೆ ಹೊಸ ಸಿನಿಮಾಗಾಗಿ ಒಂದಾಗಲಿದ್ದಾರೆ. ಈ ಸುಳಿವು ಕೊಟ್ಟಿದ್ದು ಮತ್ತಾರೂ ಅಲ್ಲ ಕಿಚ್ಚ ಸುದೀಪ್​ ಅವರೇ. ಈ ವಿಷಯ ತಿಳಿದಾಗಿನಿಂದ ಅಭಿಮಾನಿಗಳು ಖುಷಿಯಲ್ಲಿದ್ದಾರೆ.


ನಿನ್ನೆ ಬೆಂಗಳೂರಿನ ಹೋಟೆಲ್​ ಒಂದರಲ್ಲಿ ಶಿವರಾಜ್​ಕುಮಾರ್ ಅವರ 124ನೇ ಸಿನಿಮಾದ ಮುಹೂರ್ತ ನೆರವೇರಿತ್ತು. ಈ ಸಿನಿಮಾಗೆ ನೀ ಸಿಗೋವರೆಗೂ ಎಂದು ಟೈಟಲ್​ ಇಡಲಾಗಿದೆ. ಈ ಸಿನಿಮಾದ ಮುಹೂರ್ತಕ್ಕೆ ಕಿಚ್ಚ ಸುದೀಪ್​ ಅವರು ಅಥಿತಿಯಾಗಿ ಆಗಮಿಸಿದ್ದರು. ಅಲ್ಲದೆ ಶಿವಣ್ಣನಿಗೆ ಕ್ಲ್ಯಾಪ್​ ಸಹ ಮಾಡಿದರು.


Kichcha Sudeep, Mehreen Pirzada, Nee Sigovaregu, Ram Dhulipudi, Shivarajkumar, Shivarajkumar, Nee Sigovaregu, Kichcha Sudeep, Mehreen Pirzada, Ram Dhulipudi, ಶಿವರಾಜ್​ಕುಮಾರ್​, ಕಿಚ್ಚ ಸುದೀಪ್​, ನೀ ಸಿಗೋವರೆಗೆ, ಗೀತಾ ಶಿವರಾಜ್​ಕುಮಾರ್​, ಸ್ಯಾಂಡಲ್​ವುಡ್​, Kichcha Sudeep Clapped for Shivarajkumars 124th movie nee Sigovaregu ae
ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆದ ಮುಹೂರ್ತ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್​ ಅವರು ಕ್ಲ್ಯಾಪ್​ ಮಾಡುವ ಮೂಲಕ ಸಿನಿಮಾಗೆ ಚಾಲನೆ ನೀಡಿದರು.


ಈ ಸಿನಿಮಾದ ಮುಹೂರ್ತ ಮುಗಿದ ನಂತರ ಶಿವಣ್ಣನ ಜೊತೆ ಮಾತನಾಡುತ್ತಾ ಸುದೀಪ್​ ಅವರು ಒಂದು ಸಿನಿಮಾದ ಕತೆ ಹೇಳಿದ್ದಾರಂತೆ. ಅದು ಕೇವಲ ಒನ್ ಲೈನ್ ಸ್ಟೋರಿ. ಸುದೀಪ್​ ಅವರು ಬರೆದಿರುವ ಈ ಕತೆ ಕೇಳಿ ಶಿವಣ್ಣ ತುಂಬಾ ಖುಷಿಯಾಗಿದ್ದು, ಆ ಸಿನಿಮಾದಲ್ಲಿ ತಾನೇ ನಾಯಕನಾಗಿ ನಟಿಸುವುದಾಗಿಯೂ ತಿಳಿಸಿದ್ದಾರೆ. ಜೊತೆಗೆ ಒಂದು ವಿಶೇಷ ಮನವಿ ಸಹ ಮಾಡಿದ್ದಾರೆ.


ಇದನ್ನೂ ಓದಿ: Deepika Padukone: ಸಾವಿನ ಮನೆಯಲ್ಲಿ ಧರಿಸಿದ್ದ ದುಬಾರಿ ಬೆಲೆಯ ಉಡುಪುಗಳನ್ನು ಮಾರಾಟಕ್ಕಿಟ್ಟು ಟ್ರೋಲ್​ ಆದ ದೀಪಿಕಾ ಪಡುಕೋಣೆ


ಸುದೀಪ್​ ಅವರು ಬರೆದಿರುವ ಕತೆಗೆ ಶಿವರಾಜ್​ಕುಮಾರ್ ನಾಯಕನಾದರೆ, ಸುದೀಪ್ ನಿರ್ದೇಶನ ಮಾಡಬೇಕಂತೆ. ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಶಿವಣ್ಣ ಹಾಗೂ ಸುದೀಪ್​ ಅವರು ಹೇಳಿಕೊಂಡಿದ್ದಾರೆ. ಶಿವರಾಜ್​ಕುಮಾರ್ ಅವರು ಸಿನಿಮಾ ನಿರ್ದೇಶನ ಮಾಡಿ ಎಂದು ಹೇಳಿದ್ದೇ ದೊಡ್ಡ ವಿಷಯ. ಮುಂದೆ ಅಂತಹ ಸಮಯ ಬಂದಾಗ ಖಂಡಿತವಾಗಿ ಮಾಡುತ್ತೇನೆ ಎಂದಿದ್ದಾರೆ ಸುದೀಪ್​.


ಮತ್ತೊಮ್ಮೆ ದಿ ವಿಲನ್ ಜೋಡಿ ಬೆಳ್ಳಿತೆರೆ ಮೇಲೆ ಒಂದಾದರೆ ಅಭಿಮಾನಿಗಳಿಗೆ ಹಬ್ಬವಾದರೆ, ಸಿನಿಪ್ರಿಯರು ಥ್ರಿಲ್ ಆಗೋದು ಖಂಡಿತ. ಸುದೀಪ್ ಅವರು ಕೊಟ್ಟಿರುವ ಈ ಸೂಚನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ ಅನ್ನೋದು ಅಭಿಮಾನಿಗಳ ಆಶಯ.


ಮಲ್ಟಿ ಸ್ಟಾರರ್​ ಸಿನಿಮಾ ಮಾಡೋಲ್ಲ ಎಂದಿದ್ದ ಸುದೀಪ್​ 


ಇನ್ನು ಈ ಹಿಂದೆ ಕಿಚ್ಚ ಸುದೀಪ್​ ಅವರು ಮಾಧ್ಯಮ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಲ್ಟಿ ಸ್ಟಾರರ್​ ಸಿನಿಮಾದಲ್ಲಿ ನಟಿಸೋದಿಲ್ಲ ಎಂದಿದ್ದರು. ಕಾರಣ, ದಿ ವಿಲನ್ ಸಿನಿಮಾದಲ್ಲಿ ಶಿವಣ್ಣನ ಜೊತೆ ನಟಿಸಿದ್ದ ಸುದೀಪ್​ ಅವರು, ಫೈಟಿಂಗ್ ಸೀನ್​ನಲ್ಲಿ ಶಿವರಾಜ್​ಕುಮಾರ್​ ಅವರಿಗೆ ಹೊಡೆಯುತ್ತಾರೆ. ಜೊತೆಗೆ ಬೈಯ್ಯುತ್ತಾರೆ. ತೆರೆ ಮೇಲೆ ಇದನ್ನು ನೋಡಿದ್ದ ಶಿವರಾಜ್​ಕುಮಾರ್ ಅಭಿಮಾನಿಗಳು ಸಿಟ್ಟಾಗಿದ್ದರು. ಜೊತೆಗೆ ಸುದೀಪ್​ ಅವರ ಮೇಲೆ ಗರಂ ಆಗಿದ್ದರು.


ಇದನ್ನೂ ಓದಿ: Kichcha Sudeep- Shivarajkumar: ಶಿವಣ್ಣನ 124ನೇ ಸಿನಿಮಾಗೆ ಕ್ಲ್ಯಾಪ್​​ ಮಾಡಿದ ಕಿಚ್ಚ ಸುದೀಪ್​


ಈ ವಿಷಯ ನಡೆದ ನಂತರ ಸುದೀಪ್ ಅವರು ಇಂತಹ ಸಿನಿಮಾಗಳನ್ನು ಮತ್ತೆ ಮಾಡುವುದಿಲ್ಲ ಎಂದಿದ್ದರು. ಆದರೆ ಈಗ ಮತ್ತೆ ಶಿವಣ್ಣನ ಜೊತೆ ಸಿನಿಮಾ ಮಾಡುವ ಮಾತು ಕೇಳಿ ಬರುತ್ತಿರುವಾಗ ಸುದೀಪ್​ ಅವರು ಸಿನಿಮಾ ನಿರ್ದೇಶನ ಮಾಡಿದರೂ ಆಶ್ಚರ್ಯವಿಲ್ಲ. ಆದರೆ, ಅವರೊಂದಿಗೆ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೋ ಅಥವಾ ಇಲ್ಲವೋ ಎಂಬ ಪ್ರಶ್ನೆ ಸಿನಿಪ್ರಿಯರನ್ನು ಕಾಡದೆ ಇರದು.

Published by:Anitha E
First published: