News18 India World Cup 2019

ಯೋಧರ ನಾಡಿನ ಬೇಡಿಕೆಗೆ ಕೈ ಜೋಡಿಸಿದ ನಟ ಶಿವಣ್ಣ: ಕೊಡಗಿನ ಜನರ 'ಆಸ್ಪತ್ರೆ' ಅಭಿಯಾನಕ್ಕೆ ವ್ಯಾಪಕ ಬೆಂಬಲ

ನಾವೆಲ್ಲಾ ನಿಮ್ಮ ಜೊತೆಗಿದ್ದೀವಿ. ಸಿನಿಮಾ ಇಂಡಸ್ಟ್ರಿಯವರು ನಿಮ್ಮ ಪರವಾಗಿ ಸರ್ಕಾರಕ್ಕೆ ನಿಮ್ಮ ಪರವಾಗಿ ಮನವಿ ಮಾಡುತ್ತೇವೆ. ಆಸ್ಪತ್ರೆ ಎಂಬುದು ಪ್ರತಿ ಗ್ರಾಮಕ್ಕೆ ಮತ್ತು ಪಟ್ಟಣಕ್ಕೂ ಅವಶ್ಯಕ. ಕೊಡಗಿನ ಜನರು ದೈರ್ಯವಾಗಿರಿ.

zahir | news18
Updated:June 14, 2019, 3:22 PM IST
ಯೋಧರ ನಾಡಿನ ಬೇಡಿಕೆಗೆ ಕೈ ಜೋಡಿಸಿದ ನಟ ಶಿವಣ್ಣ: ಕೊಡಗಿನ ಜನರ 'ಆಸ್ಪತ್ರೆ' ಅಭಿಯಾನಕ್ಕೆ ವ್ಯಾಪಕ ಬೆಂಬಲ
ಶಿವರಾಜ್ ಕುಮಾರ್
zahir | news18
Updated: June 14, 2019, 3:22 PM IST
ಕೊಡಗಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕೆಂಬ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. #WeNeedEmergencyHospitalInKodagu ಅಭಿಯಾನಕ್ಕೆ ಇದೀಗ ಸ್ಯಾಂಡಲ್​ವುಡ್ ನಟ-ನಟಿಯರು ಕೈ ಜೋಡಿಸಿ ಬೆಂಬಲ ಸೂಚಿಸಿದ್ದಾರೆ.

ತುರ್ತು ಪರಿಸ್ಥತಿಯಂತಹ ಸಂದರ್ಭದಲ್ಲಿ ತಕ್ಷಣದ ಚಿಕಿತ್ಸೆಗಾಗಿ ಕೊಡಗಿನಲ್ಲಿ ಒಂದು ಉತ್ತಮ ಆಸ್ಪತ್ರೆಯಿಲ್ಲ. ಹೀಗಾಗಿ ಜಿಲ್ಲೆಗೆ ಒಂದು ಹೈಟೆಕ್ ಆಸ್ಪತ್ರೆಯನ್ನು ಮಂಜೂರು ಮಾಡುವಂತೆ ಅಥವಾ ಇರುವ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವಂತೆ ಆನ್​ಲೈನ್​ ಮೂಲಕ ಅಭಿಯಾನ ಶುರು ಮಾಡಲಾಗಿದೆ.

#WeNeedEmergencyHospitalInKodagu ಎಂಬ  ಹ್ಯಾಶ್​ ಟ್ಯಾಗ್​​ ಮೂಲಕ ಸಂಸದ ಪ್ರತಾಪ್ ಸಿಂಹ, ಸಿಎಂ ಕುಮಾರಸ್ವಾಮಿ ಮತ್ತು ಪಿಎಂ ಮೋದಿ ಅವರನ್ನು ಟ್ಯಾಗ್​ ಮಾಡಿ  ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲೆಯ ಜನರು ಹಲವು ವರ್ಷಗಳ ಬೇಡಿಕೆಗೆ ಚಂದನವನ ನಟ-ನಟಿಯರು ವಿಡಿಯೋ ಮೂಲಕ ಬೆಂಬಲ ಸೂಚಿಸಿದ್ದಾರೆ.

ಸ್ಯಾಂಡಲ್​ವುಡ್​ ನಟ ಶಿವರಾಜ್ ಕುಮಾರ್, ಕೊಡಗಿನ ನಟಿಯರಾದ ಕೃಷಿ ತಾಪಂಡ, ಹರ್ಷಿಕಾ ಪೂಣಚ್ಚ ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಹ್ಯಾಟ್ರಿಕ್ ಹೀರೋ, ಕೊಡಗು ನಮ್ಮ ರಾಜ್ಯದ ಒಂದು ಭಾಗ. ಈ ಜಿಲ್ಲೆಯು ದೇಶದ ಸೈನ್ಯಕ್ಕೆ ಹೆಚ್ಚಿನ ಯೋಧರನ್ನು ನೀಡುತ್ತಾ ಬಂದಿದೆ. ಇಂತಹ ಜಿಲ್ಲೆಗೆ ಹೈಟೆಕ್ ಆಸ್ಪತ್ರೆ ಸೌಲಭ್ಯವಿಲ್ಲ ಎಂಬ ವಿಚಾರ ಕೇಳಿ ಬೇಸರವಾಯಿತು.

ನಾವೆಲ್ಲಾ ನಿಮ್ಮ ಜೊತೆಗಿದ್ದೀವಿ. ಸಿನಿಮಾ ಇಂಡಸ್ಟ್ರಿಯವರು ನಿಮ್ಮ ಪರವಾಗಿ ಸರ್ಕಾರಕ್ಕೆ ನಿಮ್ಮ ಪರವಾಗಿ ಮನವಿ ಮಾಡುತ್ತೇವೆ. ಆಸ್ಪತ್ರೆ ಎಂಬುದು ಪ್ರತಿ ಗ್ರಾಮಕ್ಕೆ ಮತ್ತು ಪಟ್ಟಣಕ್ಕೂ ಅವಶ್ಯಕ. ಕೊಡಗಿನ ಜನರು ದೈರ್ಯವಾಗಿರಿ. ನಿಮ್ಮ ಜೊತೆಗೆ ನಾವೆಲ್ಲ ಇರುವುದಾಗಿ ಅಭಿಯಾನಕ್ಕೆ ಶಿವಣ್ಣ ಸಾಥ್ ನೀಡಿದ್ದಾರೆ.

Loading...



 




View this post on Instagram




 

#WeNeedEmergencyHospitalInKodagu


A post shared by Dr.Shivarajkumar (@dr.shivarajkumar) on






ಇನ್ನು ನಟಿ ಕೃಷಿ ತಾಪಂಡ ತಮ್ಮ ಟ್ವಿಟರ್ ಖಾತೆಯ ಮೂಲಕ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಕೊಡಗಿನ ಜನತೆಗೆ ಒಂದೇ ಸೂರಿನಡಿ ಎಲ್ಲಾ ವೈದ್ಯಕೀಯ ಸೇವೆಗಳು ಸಿಗುವಂತಾಗಬೇಕು. ನಮಗೂ ಒಂದು ಉತ್ತಮ ಆಸ್ಪತ್ರೆ ಬೇಕು. ಜಿಲ್ಲೆಯ ಜನರು ತುರ್ತು ಪರಿಸ್ತಿತಿಗಳಲ್ಲಿ ದೂರದ ಪಟ್ಟಣಗಳಲ್ಲಿರುವ ಸುಸಜ್ಜಿತ ಆಸ್ಪತ್ರೆಗಳಿಗೆ ಹೋಗಬೇಕಾಗಿದೆ. ನಮ್ಮ ಜಿಲ್ಲೆಗೂ ಒಂದೊಳ್ಳೆ ಆಸ್ಪತ್ರೆ ಒದಗಿಸಿ. ಮುಖ್ಯಮಂತ್ರಿಗಳೇ ಇದು ಕೊಡಗಿನ ಜನರ ಮನವಿ. ಇತ್ತ ಗಮನ ಹರಿಸಿ ಎಂದು ಕೇಳಿಕೊಂಡಿದ್ದಾರೆ.

ನಟಿ ಕೃಷಿ ತಾಪಂಡ


#WeNeedEmergencyHospitalInKodagu ಎಂಬ ಕೊಡಗಿನ ಜನರ ಕೂಗಿಗೆ ನಟಿ ಹರ್ಷಿಕ ಪೂಣಚ್ಚ ಸಹ ಸಾಥ್ ನೀಡಿದ್ದು, ತಮ್ಮ ಕುಟುಂಬ ಕೂಡ ಹೆಟೈಕ್ ಆಸ್ಪತ್ರೆಯಿಲ್ಲದೆ ಕಷ್ಟಕ್ಕೆ ಒಳಗಾಗಿರುವುದಾಗಿ ವಿಡಿಯೋ ಮೂಲಕ ತಿಳಿಸಿದ್ದಾರೆ.



ಹಾಗೆಯೇ ಕನ್ನಡ ನಟಿ ದಿಶಾ ಪೂವಯ್ಯ ಸಹ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದು, ಕೊಡಗಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲದೆ ಮತ್ತಷ್ಟು ಸೌಕರ್ಯಗಳ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.



ಹಲವು ವರ್ಷಗಳಿಂದ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುತ್ತಿರುವ ಕೊಡಗಿನ ಜನರು ತುರ್ತು ಚಿಕಿತ್ಸೆಗಾಗಿ ಮಂಗಳೂರು, ಮೈಸೂರು ಮತ್ತು ಬೆಂಗಳೂರಿನ ದೊಡ್ಡ ಆಸ್ಪತ್ರೆಗಳನ್ನು ಅವಲಂಭಿಸಿದ್ದಾರೆ. ಈ ಹಿಂದೆ ಹಲವು ಬಾರಿ ಉತ್ತಮ ಆಸ್ಪತ್ರೆಗೆ ಜಿಲ್ಲೆಯ ಜನರು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಹೀಗಾಗಿ ಕೊಡಗಿನ ಜನರು ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಒದಿಸಬೇಕೆಂಬ ಆನ್​ಲೈನ್ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಇನ್ನಷ್ಟು ಜನರು ಯೋಧರ ನಾಡಿನ #WeNeedEmergencyHospitalInKodagu ಅಭಿಯಾನಕ್ಕೆ ಕೈಜೋಡಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...