ಇಡೀ ಕರುನಾಡ ಜನರು ಕಾತುರದಿಂದ ಕಾಯುತ್ತಿರೋ ಸಿನಿಮಾ ಜೇಮ್ಸ್,(James) ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಅಭಿನಯದ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆಗೆ ಅಭಿಮಾನಿಗಳು (Fans) ಕಾಯ್ತಿದ್ದಾರೆ. ಮಾರ್ಚ್ 17ಕ್ಕೆ ಚಿತ್ರ ಬಿಡುಗಡೆ ಪಕ್ಕಾ ಆಗಿದೆ. ಶಿವರಾತ್ರಿ ದಿನ ಬೆಳಗ್ಗೆ 11ಗಂಟೆ 11 ನಿಮಿಷಕ್ಕೆ ‘ಜೇಮ್ಸ್’ ಚಿತ್ರದ ಅಪ್ಪು ಇಂಟ್ರಡಕ್ಷನ್ ಸಾಂಗ್ (Introduction Song) ಅಭಿಮಾನಿಗಳ ಅಂಗಳದಲ್ಲಿ ಅರಳಿದೆ. ಜೇಮ್ಸ್ ಚಿತ್ರದ ಟ್ರೇಡ್ ಮಾರ್ಕ್ (Trade Mark) ಸಾಂಗ್ (Song) ಕೇಳಿ ದೊಡ್ಮನೆ ಅಭಿಮಾನಿ ದೇವರುಗಳು ಸಖತ್ ಥ್ರಿಲ್ ಆಗಿದ್ದಾರೆ. ಜೇಮ್ಸ್ ಸಿನಿಮಾದ ಸುದ್ದಿಗೋಷ್ಠಿ (Press Meet) ಮಾರ್ಚ್6 ರಂದು ಬೆಂಗಳೂರಿನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಶಿವರಾಜ್ಕುಮಾರ್ (Shivarajkumar) ಭಾಗಿಯಾಗಿದ್ದರು. ಇದೇ ವೇಳೆ ವೇದಿಕೆ ಮೇಲೆ ಶಿವಣ್ಣ ಭಾವುಕರಾದರು. ಸಾಕಷ್ಟು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.
ನಗ್ತೀವಿ, ಊಟ ಮಾಡ್ತೀವಿ ಅಷ್ಟೇ ಎಂದ ಶಿವಣ್ಣ!
‘ಮಾತನಾಡೋಕೆ ಕಷ್ಟ ಆಗುತ್ತಿದೆ. ನಾಲ್ಕು ತಿಂಗಳಿಂದ ನಗ್ತೀವೀ, ಊಟ ಮಾಡ್ತೀವಿ, ಶೂಟಿಂಗ್ನಲ್ಲಿ ಭಾಗಿ ಆಗ್ತೀವಿ. ಆದರೆ, ಮನಸ್ಸಲ್ಲಿರೋ ನೋವು ಕಡಿಮೆ ಆಗುತ್ತಿಲ್ಲ. ಬದುಕಬೇಕು ಬದುಕುತ್ತಾ ಇದ್ದೇವೆ. ಅಪ್ಪು ಚಿಕ್ಕ ವಯಸ್ಸಿಗೆ ಹೋದ. ನೆನಪಿಸಿಕೊಂಡಾಗೆಲ್ಲ ನೋವು ಜಾಸ್ತಿನೇ ಆಗ್ತಿದೆ. ಅಪ್ಪುನ ಬಿಟ್ಟು ಬದುಕೋಕೆ ಕಷ್ಟ ಆಗುತ್ತಿದೆ’ ಎಂದು ಶಿವಣ್ಣ ಹೇಳುತ್ತಾ ಭಾವುಕರಾದರು. ಇಷ್ಟು ಬೇಗ ಹೋಗ್ತಾನೆ ಎಂದುಕೊಂಡಿರಲಿಲ್ಲ. ಹೊರಗಡೆ ಹೋದಾಗ ಅಪ್ಪು ಅವರ ಅಣ್ಣ ಅಲ್ವಾ ಸಾರ್ ಎಂದು ಕೇಳುತ್ತಾರೆ. ಒಂದು ಕಡೆ ತುಂಬಾ ನೋವಾಗುತ್ತೆ. ಅಂತಹ ತಮ್ಮನ ಪಡೆಯೋಕೆ ನಾನು ಪುಣ್ಯ ಮಾಡಿದ್ದೆ ಎಂದು ಅವರು ಹೇಳಿದ್ದಾರೆ.
‘ಅಪ್ಪುನ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ’
ಎಲ್ಲೇ ಹೋದರು, ಎಲ್ಲ ವೇದಿಕೆ ಮೇಲೂ ಅಪ್ಪುನ ತುಂಬಾ ಹೊಗಳುತ್ತಿದೆ. ಅದೇ ತಪ್ಪಾಯ್ತಾ? ನನ್ನ ಮಾತುಗಳಿಂದಲೇ ಹಿಂಗಾಯ್ತಾ? ನನ್ನ ತಮ್ಮ ದೂರ ಆಗಿಬಿಟ್ಟ. ನಾನೇ ತುಂಬಾ ಹೊಗಳಿ ತಪ್ಪು ಮಾಡಿಬಿಟ್ನಾ? ಅನ್ನುವ ಗಿಲ್ಟ್ ಕಾಡುತ್ತೆ ಅಂತ ಶಿವಣ್ಣ ಹೇಳಿದ್ದಾರೆ. ಅವನ ಅಣ್ಣನಾಗಿ ಇರೋಕೆ ನಾನು ಅದೃಷ್ಟ ಮಾಡಿದ್ದೆ. ಅಪ್ಪು ಯಾವಾಗಲೂ ಬದುಕಿರುತ್ತಾನೆ. ಜೇಮ್ಸ್ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಎಂದು ಶಿವಣ್ಣ ಹೇಳಿದರು.
ಇದನ್ನೂ ಓದಿ: ಹೊಸ `ಟ್ರೇಡ್ ಮಾರ್ಕ್’ ಕ್ರಿಯೇಟ್ ಮಾಡಿದ `ಜೇಮ್ಸ್’! ಕಿಂಗ್ ಇಸ್ ಆಲ್ವೇಸ್ ಎ ಕಿಂಗ್ ಮಾಮ!
‘ಅಪ್ಪು ವಾಯ್ಸ್ ಮ್ಯಾಚ್ ಮಾಡೋಕೆ ಸಾಧ್ಯನೇ ಇಲ್ಲ’
‘ಅಪ್ಪು ವಾಯ್ಸ್ಗೆ ಮಿಮಿಕ್ರಿ ಮಾಡುವವರ ಬಳಿ ಮಾಡಿಸೋಕೆ ಟ್ರೈ ಮಾಡಿ ಎಂದಿದ್ದೆ. ಚೇತನ್ ಅವರು ಟ್ರೈ ಮಾಡಿದರು. ಆದರೆ, ಸರಿಯಾಗಿ ಬರಲಿಲ್ಲ. ನಾನು ತುಂಬಾನೇ ಹೆದರಿಕೊಂಡು ಮಾಡಿದೆ. ಅಪ್ಪು ಅವರದ್ದು ಅದ್ಭುತ ವಾಯ್ಸ್ ಆಗಿತ್ತು. ಸ್ವಲ್ಪ ಟ್ರೈ ಮಾಡಿದ್ದೇನೆ. ಅಪ್ಪು ವಾಯ್ಸ್ಗೆ ಎರಡು ದಿನ ಡಬ್ ಮಾಡಿದ್ದೇನೆ ಅವನ ರೀತಿ ವಾಯ್ಸ್ ಡಬ್ ಮಾಡೋಕೆ ನಿಜ ಕಷ್ಟ ಆಯ್ತು. ಆದರೂ ಮಾಡಿದ್ದೇನೆ ಸಿನಿಮಾ ಒಳ್ಳೆಯದಾಗಲಿ. ಅಪ್ಪು ಸಿನಿಮಾಗೆ ಪ್ರಚಾರ ಮಾಡೋದೇ ಬೇಡ ಎಂದು ಶಿವಣ್ಣ ಹೇಳಿದರು.
ಇದನ್ನೂ ಓದಿ: ಸ್ಯಾಂಡಲ್ವುಡ್ `ಸಿಂಡ್ರೇಲಾ’ಗೆ ಜನ್ಮದಿನದ ಸಂಭ್ರಮ, 38ನೇ ವಸಂತಕ್ಕೆ ಕಾಲಿಟ್ಟ ರಾಧಿಕಾ ಪಂಡಿತ್!
‘ಈ ಥರ ಪ್ರಚಾರ ಯಾರಿ ಜೀವನದಲ್ಲೂ ಬರಬಾರದು’
‘ಈ ಥರ ಪ್ರಚಾರ ಯಾವ ಕಲಾವಿದರ ಜೀವನದಲ್ಲೂ ಬರಬಾರದು’ ಎಂದು ಚಿಕ್ಕಣ್ಣ ಕೂಡ ಭಾವುಕರಾದರು. ಜೇಮ್ಸ್’ ಚಿತ್ರದಲ್ಲಿ ಚಿಕ್ಕಣ್ಣ, ಗಜಪಡೆ ಹರ್ಷ, ತಿಲಕ್ ಶೇಖರ್ ಅವರು ಹೀರೋ ಫ್ರೆಂಡ್ಸ್ ಪಾತ್ರ ಮಾಡಿದ್ದಾರೆ. ‘ಪುನೀತ್ ಅವರ ಕೊನೇ ಸಿನಿಮಾದಲ್ಲಿ ನಾವು ಇದ್ದೇವೆ ಅನ್ನೋದನ್ನು ಅದೃಷ್ಟ ಅಂದುಕೊಳ್ಳುತ್ತೇವೆ. ಈ ಸಿನಿಮಾದಿಂದ ನಮ್ಮ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿ ಆಗಲಿದೆ’ ಎಂದು ಚಿಕ್ಕಣ್ಣ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ