Shivarajkumar: ಮುಕ್ಕೋಟಿ ದೇವರು ಒಟ್ಟಾಗಿ ಬಂದರೂ ಸಮನಲ್ಲ ಅಮ್ಮನ ಎದುರು! ತಾಯಿ ನೆನೆದು ಕಣ್ಣೀರಿಟ್ಟ ಶಿವಣ್ಣ

59ನೇ ವಯಸ್ಸಿನಲ್ಲೂ ಚಿರ ಯುವಕನಂತೆ ಇದ್ದಾರೆ ಶಿವರಾಜ್​ಕುಮಾರ್​, ಅವರ ಎನರ್ಜಿ(Energy)ಗೆ ಅವರೇ ಸಾಟಿ. ಸಿನಿಮಾದ ಜೊತೆ ಜೊತೆಗೆ ಶಿವಣ್ಣ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ರಿಯಾಲಿಟಿ ಶೋನಲ್ಲಿ ಮೊದಲ ಬಾರಿಗೆ ಜಡ್ಜ್​​ ಆಗಿ ಭಾಗವಹಿಸಿದ್ದಾರೆ.

ತಾಯಿ ನೆನೆದು ಕಣ್ಣೀರು ಹಾಕಿದ ಶಿವಣ್ಣ

ತಾಯಿ ನೆನೆದು ಕಣ್ಣೀರು ಹಾಕಿದ ಶಿವಣ್ಣ

  • Share this:
ಶಿವರಾಜ್​ಕುಮಾರ್(​Shiva Rajkumar) ಈ ಹೆಸರು ಕೇಳಿದರೆ ಸಾಕು ಅದೇನೋ ಒಂದು ಹುಮ್ಮಸ್ಸು ಬರುತ್ತೆ. ಹೌದು, ಅದಕ್ಕೆ ಕಾರಣ ಶಿವಣ್ಣ(Shivanna). ಅವರನ್ನು ನೋಡುವುದಕ್ಕೆ ಒಂದು ಖುಷಿ. ಅಭಿಮಾನಿ(Fans)ಗಳ ಜೊತೆ ಸ್ಟಾರ್​ ಎಂದು ತೋರಿಸಿಕೊಳ್ಳದೇ ಜನಸಾಮನ್ಯರಂತೆ ನಡೆದುಕೊಳ್ಳುತ್ತಾರೆ. ಎಷ್ಟೆ ಆದರೂ ಅಣ್ಣಾವ್ರ ದೊಡ್ಡ ಮಗ. ಅಪ್ಪನಂತೆ ಮಕ್ಕಳು ಎಂಬುವುದಕ್ಕೆ ಡಾ.ರಾಜ್​ಕುಮಾರ್(Dr.Rajkumar)​ ಕುಟುಂಬವೇ ನಿದರ್ಶನ. ಶಿವಣ್ಣ ಕೇವಲ ನಟನೆಯಲ್ಲಷ್ಟೇ ಎಲ್ಲರ ಗಮನ ಸೆಳೆದಿಲ್ಲ. ಅವರ ಗುಣಗಳಿಂದ ಎಲ್ಲರ ಮನ ಗೆದ್ದಿದ್ದಾರೆ. . 59ನೇ ವಯಸ್ಸಿನಲ್ಲೂ ಚಿರ ಯುವಕನಂತೆ ಇದ್ದಾರೆ ಶಿವರಾಜ್​ಕುಮಾರ್​, ಅವರ ಎನರ್ಜಿ(Energy)ಗೆ ಅವರೇ ಸಾಟಿ. ಸಿನಿಮಾದ ಜೊತೆ ಜೊತೆಗೆ ಶಿವಣ್ಣ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ರಿಯಾಲಿಟಿ ಶೋನಲ್ಲಿ ಮೊದಲ ಬಾರಿಗೆ ಜಡ್ಜ್​​ ಆಗಿ ಭಾಗವಹಿಸಿದ್ದಾರೆ.

ತಾಯಿ ನೆನೆದು ಕಣ್ಣೀರಿಟ್ಟ ಶಿವಣ್ಣ!

ನಮ್ಮ ಇಡೀ ಬದುಕು ಅಮ್ಮ ನೀಡಿದ ಭಿಕ್ಷೆ. ಯಾವತ್ತಿಗೂ ಆಕೆಯ ಋಣ ತೀರಿಸಲು ಸಾಧ್ಯವೇ ಆಗುವುದಿಲ್ಲ. ಜೀ ಕನ್ನಡದಲ್ಲಿ ಅಮ್ಮಂದಿರ ನೆನಪುಗಳನ್ನು ಕಣ್ಣ ಮುಂದೆ ತರಿಸಿ ಕಣ್ಣೀರಾಗುವಂತೆ ಮಾಡಿದ್ದಾರೆ. ಹೌದು, ಶಿವಣ್ಣನ ಜೀವನದಲ್ಲಿ ಅಮ್ಮ ಎಷ್ಟು ಮುಖ್ಯವಾಗಿದ್ದರು ಎಂಬುದು ಇಡೀ ಜಗತ್ತಿಗೆ ಗೊತ್ತಾ ವಿಚಾರ. ಪಾರ್ವತಮ್ಮ ಅವರಿಗೆ ಮಕ್ಕಳು ಇನ್ನೂ ಪುಟ್ಟ ಮಕ್ಕಳೇ ಆಗಿದ್ದರು. ತಮ್ಮ ಮಕ್ಕಳ ಸಿನಿಮಾದ ಎಲ್ಲಾ ಜವಬ್ದಾರಿಯನ್ನೂ ಪಾರ್ವತಮ್ಮ ಅವರೇ ನೋಡಿಕೊಳ್ಳುತ್ತಿದ್ದರು. ತನ್ನ ಮೂರು ಮಕ್ಕಳಿಗೂ ಯಾವ ರೀತಿಯ ಪಾತ್ರಗಳು ಮ್ಯಾಚ್ ಆಗುತ್ತೆ ಎಂಬುದನ್ನು ನಿರ್ಧಾರ ಮಾಡುತ್ತಿದ್ದರು.

ಪುಟ್ಟ ಮಗುವಿನಂತೆ ಬಿಕ್ಕಳಿಸಿ ಅತ್ತ ಶಿವಣ್ಣ!

ಡಾ.ರಾಜ್​ಕುಮಾರ್​ ಅವರು ಹೋದ ಮೇಲೆ ಪಾರ್ವತಮ್ಮ ಅವರು ಕೂಡ ಅಕ್ಷರಶಃ ಡಲ್​ ಆಗಿದ್ದರು. ಆದರೂ ಮಕ್ಕಳ ಸಿನಿಮಾ ವಿಚಾರದಲ್ಲಿ ಅದೇ ಪ್ರೀತಿ, ಅದೇ ಕಾಳಜಿ ವಹಿಸಿದ್ದರು . ಸದಾ ತಮ್ಮ ಮೂರು ರತ್ನಗಳ ಬಗ್ಗೆಯೆ ಯೋಚಿಸುತ್ತಿದ್ದರು. ಶಿವಣ್ಣ, ರಾಘವೇಂದ್ರ ರಾಜ್​ಕುಮಾರ್​ಗೆ, ಅಪ್ಪುಗೆ ಅಮ್ಮ ಎಂದರೆ ತುಂಬಾ ಪ್ರೀತಿ, ಗೌರವ. ಇಂದು ತಾಯಂದಿರ ದಿನಾಚರಣೆ. ಡಿಕೆಡಿಯಲ್ಲಿ ಅಮ್ಮನ ಫೋಟೊ ಕಂಡು ಶಿವಣ್ಣ ಪುಟ್ಟ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಜೀವ ಕೊಟ್ಟವಳು ತುತ್ತು ಇಟ್ಟವಳು ಭೂಮಿ ಮೇಲೆ ಒಬ್ಬಳೇ ಹಾಡಿಗೆ ಮಾಡಿದ ನೃತ್ಯ ನೋಡಿ ಕಣ್ಣೀರು ಹಾಕಿದ್ದಾರೆ.








View this post on Instagram






A post shared by Zee Kannada (@zeekannada)





ಇದನ್ನೂ ಓದಿ: ಕೆಜಿಎಫ್​ 2 ಬಳಿಕ 'ವಿಕ್ರಾಂತ್​ ರೋಣ'ನ ಸರದಿ! ದಾಖಲೆ ಮೊತ್ತಕ್ಕೆ ಓವರ್​ಸೀಸ್​ ರೈಟ್ಸ್​ ಸೇಲ್

ತಾಯಿ ಫೀಲಿಂಗ್ಸ್​ ಮರೆಯೋದಕ್ಕೆ ಆಗಲ್ಲ ಎಂದ ಶಿವಣ್ಣ!

"ತಾಯಿ ಫೀಲಿಂಗ್ಸ್ ಮರೆಯೋದಕ್ಕೆ ಆಗಲ್ಲ. ನನಗೆ ತುಂಬಾ ಇಷ್ಟವಾದ ಫೋಟೊ ಇದು. ಎಲ್ಲರೂ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ. ನನಗೆ ಆ ಫೋಟೊ ನೋಡಿದ ಕೂಡಲೇ ದುಃಖ ತಡೆಯುವುದಕ್ಕೆ ಆಗಲಿಲ್ಲ. ಎಷ್ಟೇ ಜನ್ಮ ಹೋಗಲಿ ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನ್ನು ಕಡೆ ತನಕ ಮರೆಯಲ್ಲ ಜೋಗಿ, ಕಡೆ ತನಕ ಮರೆಯಲ್ಲ ಜೋಗಿ" ಅಂತ ಅದ್ಭುತವಾಗಿ ಹಾಡಿನ ಮೂಲಕ ಅಮ್ಮನನ್ನು ಶಿವರಾಜ್​ಕುಮಾರ್​ ನೆನೆದಿದ್ದಾರೆ.

ಇದನ್ನೂ ಓದಿ: Sandalwood ಬಾಕ್ಸ್​ ಆಫೀಸ್​​ ಕ್ಲ್ಯಾಶ್​! ಒಂದೇ ದಿನ ಇಬ್ಬರು ಸ್ಟಾರ್​ಗಳ ಸಿನಿಮಾ ರಿಲೀಸ್​

ತಾಯಂದಿರ ದಿನಕ್ಕಾಗಿ ಈ ವಾರದ ಡಿಕೆಡಿಯನ್ನು ಅರ್ಪಣೆ ಮಾಡಲಾಗಿದೆ. ಅದರ ಜೊತೆಗೆ ಒಳ್ಳೊಳ್ಳೆ ಪರ್ಫಾಮೆನ್ಸ್ ನೀಡಲಾಗಿದೆ. ಊರುಮಿಳಾ ಊರುಮಿಳಾ ಎಂಬ ಹಾಡಿಗೆ ಶಿವನ್ಣ ಕೂಡ ಸ್ಟೇಜ್ ಮೇಲೆ ಬಂದು ಡ್ಯಾನ್ಸ್ ಮಾಡಿದ್ದಾರೆ.
Published by:Vasudeva M
First published: