ಶ್ರೀಯಾ ಶರಣ್ ಹಾಗೂ ನಿತ್ಯಾ ಮೆನನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಗಮನಂ. ಈಗಾಗಲೇ ಪೋಸ್ಟರ್ಗಳ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿರುವ ಈ ಪಂಚ ಭಾಷಾ ಸಿನಿಮಾದ ಟ್ರೇಲರ್ ಇಂದು ರಿಲೀಸ್ ಆಗಿದೆ. ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂನಲ್ಲಿ ತೆರೆ ಕಾಣಲಿದೆ. ಕೊರೋನಾ ಲಾಕ್ಡೌನ್ಗೂ ಮುನ್ನವೇ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಈಗ ಟ್ರೇಲರ್ ರಿಲೀಸ್ ಆಗಿದೆ. ಆಯಾಯಾ ಭಾಷೆಯ ಟ್ರೇಲರ್ ಅನ್ನು ಆಯಾ ಸಿನಿರಂಗದ ಸೆಲೆಬ್ರಿಟಿಗಳ ಕೈಯಲ್ಲಿ ಬಿಡುಗಡೆ ಮಾಡಿಸಲಾಗಿದೆ. ಟ್ರೇಲರ್ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಈ ಸಿನಿಮಾದಲ್ಲಿ ಮೂರು ಮಂದಿಯ ಜೀವನದ ಏಳುಬೀಳನ್ನುಮನಮುಟ್ಟುವಂತೆ ಚಿತ್ರೀಕರಿಸಲಾಗಿದೆ. ಸುಜನಾ ರಾವ್ ನಿರ್ದೇಶನದ ಈ ಚಿತ್ರಕ್ಕೆ ಇಳಯರಾಜ ಸಂಗೀತ ನೀಡಿದ್ದು, ಪ್ರಮುಖ ಪಾತ್ರದಲ್ಲಿ ನಟಿ ಶ್ರೀಯಾ ಶರಣ್ ನಟಿಸಿದ್ದಾರೆ.
ಗಮನಂ ಸಿನಿಮಾದ ಕನ್ನಡದ ಟ್ರೇಲರ್ ಅನ್ನು ಶಿವರಾಜ್ಕುಮಾರ್ ಬಿಡುಗಡೆ ಮಾಡಿದ್ದು, ಅದರ ಲಿಂಕ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಇನ್ನು ಟ್ರೇಲರ್ ನೋಡಿ ಇಂಪ್ರೆಸ್ ಆಗಿರುವ ಶಿವಣ್ಣ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
Happy to release the Kannada trailer for Gamanam for my friend @gnanashekarvs
Good luck to the entire team @shriya1109 @ItsJawalkar @sujanaraog @RameshKarutoori @pushadapu
Trailer link: https://t.co/eigzsXcofb
— DrShivaRajkumar (@NimmaShivanna) November 11, 2020
ತೆಲುಗಿನಲ್ಲಿ ಗಮನಂ ಸಿನಿಮಾದ ಟ್ರೇಲರ್ ಅನ್ನು ಪವನ್ ಕಲ್ಯಾಣ್, ಹಿಂದಿಯಲ್ಲಿ ಸೋನು ಸೂದ್, ತಮಿಳಿನಲ್ಲಿ ಜಯಂ ರವಿ ಹಾಗೂ ಮಲಯಾಳಂನಲ್ಲಿ ಫಹಾದ್ ಫಾಸಿಲ್ ರಿಲೀಸ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಮೂರು ಕಥೆಗಳನ್ನು ಒಟ್ಟಿಗೆ ಸೇರಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ