ಕನ್ನಡ ಚಲನಚಿತ್ರ ಕಪ್ 2023 (KCC 2023) ಅದ್ಧೂರಿಯಾಗಿ ನಡೆದಿದೆ. ಫೆಬ್ರವರಿ 25 ಹಾಗೂ 26ರಂದು ಬೆಂಗಳೂರಿನ (Bengaluru) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟೂರ್ನಿ ನಡೆದಿದೆ. ಸ್ಟಾರ್ ಕಲಾವಿದರು ಬ್ಯಾಟ್ ಬಾಲ್ ಹಿಡಿದು ಗ್ರೌಂಡ್ಗೆ ಇಳಿದಿದ್ದಾರೆ. ಕಂಪ್ಲೀಟ್ ತಾರಾ ರಂಗು ಮನೆ ಮಾಡಿತ್ತು. ನಟಿ ಅಮೂಲ್ಯ ಅವರಿಂದ ಹಿಡಿದ ಕಾಂತಾರ ಚೆಲುವೆ ಸಪ್ತಮಿ ಗೌಡ ತನಕ ಎಲ್ಲರೂ ನಟರನ್ನು ಪ್ರೋತ್ಸಾಹಿಸಿದ್ದಾರೆ. ಇದೀಗ ಲೇಟೆಸ್ಟ್ ಆಗಿ ನಟ ಶಿವರಾಜ್ಕುಮಾರ್ (Shivarajkumar) ಅವರ ವಿಡಿಯೋ (Video) ಒಂದು ಸೋಷಿಯಲ್ ಮಿಡಿಯಾದಲ್ಲಿ (Social Media) ಸಖತ್ ವೈರಲ್ (Viral) ಆಗುತ್ತಿದೆ.
ಹ್ಯಾಟ್ರಿಕ್ ಹೀರೋ
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಕೆಸಿಸಿಯಲ್ಲಿ ಉತ್ಸಾಹದಲ್ಲಿ ಪಾಲ್ಗೊಂಡಿದ್ದಾರೆ. ನಟ ಗ್ರೌಂಡ್ನಲ್ಲಿ ತುಂಬಾ ಖುಷಿಯಾಗಿ ಕೇರ್ಲೆಸ್ಯಾಗಿ ಸೋಲೋ ಡ್ಯಾನ್ಸ್ ಎಂಜಾಯ್ ಮಾಡುವ ವಿಡಿಯೋ ವೈರಲ್ ಆಗಿದ್ದು ಅವರ ಅಭಿಮಾನಿಗಳು ಇದನ್ನು ಮೆಚ್ಚಿಕೊಂಡಿದ್ದಾರೆ.
ಟ್ವಿಟರ್ನಲ್ಲಿ ವಿಡಿಯೋ ವೈರಲ್
ಆನಂದ್ ಆಡಿಯೋ ಟ್ವಿಟರ್ನಲ್ಲಿ ಶಿವಣ್ಣ ಡ್ಯಾನ್ಸ್ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಅವರ ಎನರ್ಜಿಯನ್ನು ಯಾರೂ ಮ್ಯಾಚ್ ಮಾಡಲಾರರು ಎಂದು ವಿಡಿಯೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
His Energey is Unmatchable 🙏🙏🙏🙏🙏🙏🙏https://t.co/BAPZaH6A1t
Karunada Chakravarthy @NimmaShivanna @kp_sreekanth @directorprems @ArjunJanyaMusic @shivuaDDa #AnandAudio #KCCSeason3 #TheVillain #Shivarajkumar #TickTickTick pic.twitter.com/crbz4HCwMl
— aanandaaudio (@aanandaaudio) February 25, 2023
ಇದನ್ನೂ ಓದಿ: KCC 2023: ಕೆಸಿಸಿ ಟೂರ್ನಿಯಲ್ಲಿ ಪುನೀತ್ಗೆ ವಿಶೇಷ ಗೌರವ! ಅಪ್ಪು ಎಂದೆಂದಿಗೂ ಜೀವಂತ ಎಂದ ಫ್ಯಾನ್ಸ್
ಬೆಂಗಳೂರಿನ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಫೆ. 24 ಮತ್ತು 25ರಂದು ಕೆಸಿಸಿ 2023ರ ಮೂರನೇ ಆವೃತ್ತಿ ಕ್ರಿಕೆಟ್ ಟೂರ್ನಿಮೆಂಟ್ ಅದ್ಧೂರಿಯಾಗಿ ನಡೆಯಿತು. ಮೊದಲ ದಿನ ಮೂರು ಪಂದ್ಯಗಳನ್ನು ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ನಟ ಪುನೀತ್ ರಾಜ್ಕುಮಾರ್ ಅವರಿಗೆ ವಿಶೇಷ ಗೌರವ ಸಲ್ಲಿ
ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಅವರ ಜೊತೆ ಅಪ್ಪು ಅವರ ಪೋಟೋವನ್ನು ಎಡಿಟ್ ಮಾಡಲಾಗಿದೆ. ಸದ್ಯ ಅಪ್ಪು ಮತ್ತು ರೈನಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅವರ ಅಭಿಮಾನಿಗಳು ಪುನೀತ್ ಅವರು ಎಂದಿಗೂ ನಮ್ಮೊಂದಿಗೆ ಇದ್ದಾರೆ ಎಂದು ಭಾವನಾತ್ಮಕವಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ಜರ್ಸಿಗಳ ಮೇಲೆ ಅಪ್ಪು ಫೋಟೋ
ಇನ್ನು, ಈ ಬಾರಿ ಕೆಸಿಸಿ 2023 ಕ್ರಿಕೆಟ್ ಟೂರ್ನಿಯಲ್ಲಿ ಎಲ್ಲಾ ತಂಡಗಳ ಜರ್ಸಿಗಳ ಮೇಲೆ ನಟ ಪುನೀತ್ ರಾಜ್ಕುಮಾರ್ ಅವರ ಫೋಟೋವನ್ನು ಹಾಕಿಸಲಾಗಿದ್ದು, ಈ ಮೂಲಕ ಸ್ಯಾಂಡಲ್ವುಡ್ ಮಂದಿ ಅವರಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.
ಕನ್ನಡ ಚಲನಚಿತ್ರ ಕಪ್ 2023ರ ಮೂರನೇ ಎಡಿಷನ್ ಫೆಬ್ರವರಿ 24ರಂದು ಆರಂಭಗೊಂಡಿತ್ತು. ಇಲ್ಲಿ ಕನ್ನಡ ಸಿನಿಮಾ ಸ್ಟಾರ್ಸ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟರ್ಸ್ ಒಂದಾಗಿದ್ದಾರೆ. ಸುರೇಶ್ ರೈನಾ, ಬ್ರಿಯಾನ್ ಲಾರಾ, ಕ್ರಿಸ್ ಗೇಲ್, ಸುಬ್ರಮಣಿಯಂ ಬದ್ರಿನಾಥ್, ಹರ್ಷೆಲ್ ಗಿಬ್ಸ್ ಮತ್ತು ತಿಲಕರತ್ನೆ ದಿಲ್ಶಾನ್ ಅವರು ಆಡಿದ್ದಾರೆ. ಇವರನ್ನು ಹೊರತುಪಡಿಸಿ ಪ್ರಸಿದ್ಧ ನಟರೂ ಕೂಡಾ ಕ್ರಿಕೆಟ್ ಆಡಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ನಟ ರಾಕ್ಷಸ ಡಾಲಿ ಧನಂಜಯ, ಆ್ಯಕ್ಷನ್ ಪ್ರಿನ್ಸ ಧ್ರುವ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್ ಅವರು ಗ್ರೌಂಡ್ಗೆ ಇಳಿದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ