Yogaraj Bhat Movie: ಒಂದೇ ಸಿನಿಮಾದಲ್ಲಿ ಶಿವಣ್ಣ-ಪ್ರಭುದೇವ್! ಬೆಂಗಳೂರಲ್ಲಿ ಭರದಿಂದ ಸಾಗಿದೆ ಭಟ್ರ ಶೂಟಿಂಗ್

ಹ್ಯಾಟ್ರಿಕ್​ ಹೀರೋ ಶಿವರಾಜ್​​ ಕುಮಾರ್ ಹಾಗೂ ಪ್ರಭುದೇವ್​ ಕಾಂಬಿನೇಷನ್ ಚಿತ್ರದ ಚಿತ್ರೀಕರಣ ಶುರುವಾಗಿದೆ. ಯೋಗರಾಜ್ ಭಟ್‌ ನಿರ್ದೇಶನದ ಹೊಸ ಸಿನಿಮಾಕ್ಕೆ ಕಳೆದ ಜೂನ್‌ನಲ್ಲಿ ಮುಹೂರ್ತ ನೆರವೇರಿತ್ತು. ಇದೀಗ ಸಿನಿಮಾ ಶೂಟಿಂಗ್ ಭರ್ಜರಿಯಾಗಿ ಸಾಗಿದೆ.

ಶಿವಣ್ಣ-ಪ್ರಭುದೇವ್​ ಸಿನಿಮಾ

ಶಿವಣ್ಣ-ಪ್ರಭುದೇವ್​ ಸಿನಿಮಾ

  • Share this:
ಗಾಳಿಪಟ 2 ಸಕ್ಸಸ್​ ಬಳಿಕ ನಿರ್ದೇಶಕ ಯೋಗರಾಜ್​ ಭಟ್ (Yogaraj Bhat)​ ಮತ್ತೊಂದು ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಹ್ಯಾಟ್ರಿಕ್​ ಹೀರೋ ಶಿವರಾಜ್​​ ಕುಮಾರ್ (Shivaraj Kumar) ಹಾಗೂ ಪ್ರಭುದೇವ್​ (Prabhudev) ಕಾಂಬಿನೇಷನ್ ಚಿತ್ರದ ಚಿತ್ರೀಕರಣ ಶುರುವಾಗಿದೆ. ಯೋಗರಾಜ್ ಭಟ್‌ ನಿರ್ದೇಶನದ ಹೊಸ ಸಿನಿಮಾಕ್ಕೆ ಕಳೆದ ಜೂನ್‌ನಲ್ಲಿ ಮುಹೂರ್ತ ನೆರವೇರಿತ್ತು. ಆನಂತರ ನಿರ್ದೇಶಕ ಯೋಗರಾಜ್ ಭಟ್‌ ಅವರು 'ಗಾಳಿಪಟ 2' ಸಿನಿಮಾದ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು. ಇದೀಗ ಅವರು ಪುನಃ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಶಿವರಾಜ್‌ಕುಮಾರ್ ಮತ್ತು ಪ್ರಭುದೇವ ಕಾಂಬಿನೇಷನ್‌ನ ಚಿತ್ರದ ಶೂಟಿಂಗ್ (Shooting)​ ಬೆಂಗಳೂರಲ್ಲಿ (Bengaluru) ನಡೀತಿದೆ. 

ಬಹುಭಾಷೆಯಲ್ಲಿ ರಿಲೀಸ್ ಆಗಲಿದೆ ಚಿತ್ರ

ಈ ಚಿತ್ರದಲ್ಲಿ ತೆಲುಗು ಚಿತ್ರರಂಗದ ಖ್ಯಾತ ನಟ, ತೆಲುಗು ಸಾಹಿತಿ ತನಿಕೆಳ್ಳ ಭರಣಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರ ಇವರದ್ದಾಗಿದ್ದು, ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಅವರು ಎಂಟ್ರಿ ಕೊಡಲಿದ್ದಾರೆ. ತನಿಕೆಳ್ಳ ಭರಣಿ ಜತೆಗೆ ಇನ್ನಷ್ಟು ಪ್ರಮುಖ ಕಲಾವಿದರು ನಟಿಸಲಿದ್ದಾರೆ. ಹಾಗಾಗಿ ಇದು ಬಹು ಭಾಷೆಯಲ್ಲಿ ಬಿಡುಗೆಯಾಗುವ ಸಿನಿಮಾ ಎನ್ನಲಾಗಿದೆ. ಪ್ರಭುದೇವ ಇರುವುದರಿಂದ ಎಲ್ಲಾ ಭಾಷೆಯಲ್ಲಿಯೂ ಬಿಡುಗಡೆ ಮಾಡಬಹುದು.ಪ್ರಿಯಾ ಆನಂದ್​ , ನಿಶ್ವಿಕಾ ನಾಯಕ ನಟಿಯರು

ಶಿವರಾಜ್​ ಕುಮಾರ್​ ಹಾಗೂ ಪ್ರಭುದೇವ್​ಗೆ ಇಬ್ಬರು ಹೀರೋಯಿನ್​ಗಳನ್ನು ಆಯ್ಕೆ ಮಾಡಲಾಗಿದೆ. ಈ ಹಿಂದೆ ‘ರಾಜಕುಮಾರ’, ‘ಆರೆಂಜ್‌’, ‘ಜೇಮ್ಸ್‌’ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ಪ್ರಿಯಾ ಆನಂದ್‌, ಈಗ ಯೋಗರಾಜ್ ಭಟ್ ಅವರ ಈ ಬಿಗ್ ಬಜೆಟ್ ಸಿನಿಮಾಕ್ಕೂ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: VOOTನಲ್ಲಿ ಶುರು ಬೈರಾಗಿಯ ಭರ್ಜರಿ ಹುಲಿ ಡ್ಯಾನ್ಸ್; ಮನೆಯಲ್ಲೇ ಕುಳಿತು ನೋಡಿ ಶಿವಣ್ಣ, ಡಾಲಿ ಖಡಕ್ ಫೈಟ್!

ಯಾರು ಯಾರಿಗೆ ನಾಯಕಿ

ಹಾಗೆಯೇ ಕನ್ನಡದ ಪ್ರತಿಭಾವಂತ ನಟಿ ನಿಶ್ವಿಕಾ ನಾಯ್ಡು ಕೂಡ ಈ ಸಿನಿಮಾದ ನಟಿಸಲಿದ್ದಾರೆ. ಈ ಹಿಂದೆ 'ಗಾಳಿಪಟ 2' ಚಿತ್ರದಲ್ಲಿ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಯೋಗರಾಜ್‌ ಭಟ್ ನಿರ್ದೇಶನದ ಸಿನಿಮಾದಲ್ಲಿ ನಾಯಕಿಯಾಗುತ್ತಿದ್ದಾರೆ. ಆದರೆ ಇವರಿಬ್ಬರಲ್ಲಿ ಯಾರು ಯಾರಿಗೆ ನಾಯಕಿ ಅನ್ನೋದು ಇನ್ನು ರಿವೀಲ್​ ಆಗಿಲ್ಲ.

ಹಳ್ಳಿ ಬ್ಯಾಕ್​​ಗ್ರೌಂಡ್​ನಲ್ಲಿ ಸಾಗಲಿದೆ ಚಿತ್ರಕಥೆ

ಇಬ್ಬರು ಘಟಾನುಘಟಿ ನಾಯಕರ ಚಿತ್ರ, ಹಳ್ಳಿ ಬ್ಯಾಕ್‌ಗ್ರೌಂಡ್‌ನಲ್ಲಿ ನಡೆಯುವ ಕಥೆಯಾಗಿದೆ. ಈ ಕಥೆಯಲ್ಲಿಇಬ್ಬರೂ ನಾಯಕಿಯರು ಹಳ್ಳಿ ಹುಡುಗಿಯರಾಗಿರಲಿದ್ದಾರೆ. ಮೊದಲ ಹಂತದ ಚಿತ್ರೀಕರಣದಲ್ಲಿ ಅವರು ಕೂಡ ಭಾಗಿಯಾಗಿದ್ದಾರೆ. ಶಿವಣ್ಣ, ಪ್ರಭುದೇವ್​ ಚಿತ್ರಕ್ಕೆ ಇನ್ನು ಹೆಸರು ಫೈನಲ್ ಮಾಡಿಲ್ಲ. ಚಿತ್ರತಂಡ ಶೀಘ್ರದಲ್ಲೇ ಹೆಸರು ಫಿಕ್ಸ್​ ಮಾಡಲಿದೆ.

ರಜನಿಕಾಂತ್​ ಚಿತ್ರದಲ್ಲಿ ಶಿವಣ್ಣನೇ ವಿಲನ್​
 ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಒಟ್ಟಿಗೆ, ಜೈಲರ್ ಸಿನಿಮಾದಲ್ಲಿ ನಟಿಸ್ತಾರೆ ಎಂಬ ಸುದ್ದಿ ಕೇಳಿಯೇ ಕನ್ನಡ ಹಾಗೂ ತಮಿಳು ಸಿನಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ರಜನಿಕಾಂತ್ ಅವರ 169ನೇ ಸಿನಿಮಾ ಇದಾಗಿದ್ದು, ಪಾನ್ ಇಂಡಿಯಾ ಮೂವಿ ಇದಾಗಲಿದೆ. ಈ ಸಿನಿಮಾದಲ್ಲಿ ಶಿವಣ್ಣನೇ ವಿಲನ್​ ಅನ್ನೋ ಮಾಹಿತಿ ಹೊರಬಂದಿದೆ.

ಐಶ್ವರ್ಯಾ ರೈ ನಾಯಕಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೊದಲ ಬಾರಿಗೆ ತಮಿಳಿನ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ. ಅದು ಕೂಡ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೈಲರ್ ಸಿನಿಮಾದಲ್ಲಿ ಶಿವಣ್ಣ ಬಣ್ಣ ಹಚ್ಚುತ್ತಿದ್ದಾರೆ.. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಅಂದ್ಹಾಗೆ ಈ ಸಿನಿಮಾದಲ್ಲಿ ರಜನಿಕಾಂತ್ ಗೆ ಐಶ್ವರ್ಯ ನಾಯಕಿ ಎನ್ನಲಾಗಿತ್ತು. ಅವರ ಜಾಗಕ್ಕೆ ತಮನ್ನಾರನ್ನ ಕರೆತರಲಾಗಿದೆ ಎಂಬ ವದಂತಿ ಸಾಕಷ್ಟು ಸೌಂಡ್ ಮಾಡ್ತಿದೆ.

Published by:Pavana HS
First published: