ಪುನೀತ್ ರಾಜ್‍ಕುಮಾರ್ (Puneeth Rajkumar) ಬರ್ತ್ಡೇ (Birthday) ದಿನ ಅಭಿಮಾನಿಗಳೆಲ್ಲ (Fans) ನೆಚ್ಚಿನ ನಟನನ್ನು ಪ್ರೀತಿಯಿಂದ (Love) ಸ್ಮರಿಸಿಕೊಳ್ಳುತ್ತಿದ್ದಾರೆ. ನಟನ ನೆನಪಿನಲ್ಲಿ ಸಮಾಜಮುಖಿ ಕೆಲಸಗಳನ್ನೂ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅಪ್ಪು (Appu) ಕುಟುಂಬಸ್ಥರು ಕೂಡಾ ಸಮಾಧಿ ಬಳಿ ಬಂದು ಪೂಜೆ ಸಲ್ಲಿಸಿದ್ದಾರೆ. ಅಲ್ಲಿ ಬೆಳಗ್ಗಿನಿಂದ ನಿರಂತರ ಅನ್ನದಾನವೂ ನಡೆಯುತ್ತಿದೆ. ಇದೀಗ ತಮ್ಮನ ನೆನಪಿನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Shivarajkumar) ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮನ ಕುರಿತು ಅಣ್ಣ ಬರೆದ ಮಾತುಗಳು ಕಣ್ಣಂಚು ತೇವಗೊಳಿಸುವಂತಿದೆ.
ಶಿವರಾಜ್ಕುಮಾರ್ ತಮ್ಮನ ನೆನಪಿನಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ತಮ್ಮನ ಜೊತೆಗಿನ ಫೋಟೋ ಕೂಡಾ ಹಂಚಿಕೊಂಡಿದ್ದಾರೆ.
ನಿನ್ನ ನೆನಪುಗಳು ಎಂದಿಗೂ ಅಮರ. ಹುಟ್ಟುಹಬ್ಬದ ಶುಭಾಶಯಗಳು, ಅಪ್ಪು ಎಂದು ಶಿವರಾಜ್ಕುಮಾರ್ ತಮ್ಮ ಪೋಸ್ಟ್ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.
View this post on Instagram
ನಿನ್ನನು ಎತ್ತಿ ಆಡಿಸಿದ ಅಣ್ಣನಾಗಿ, ನಿನ್ನ ಜೊತೆ ಕೂಡಿ ಆಡಿದ ಸ್ನೇಹಿತನಾಗಿ, ನಿನ್ನ ಕೆಲಸಗಳನ್ನು ಮೆಚ್ಚಿ ಅಪ್ಪಿಕೊಂಡ ಕನ್ನಡಿಗ, ಹಬ್ಬ ಯಾವ್ದೇ ಅಗಿದ್ರೂ ನಿನ್ನ ಹೆಸರಲ್ಲಿ ಪಟಾಕಿ ಹಚ್ಚೋ ಅಭಿಮಾನಿಗಳಲ್ಲಿ ಒಬ್ಬನಾಗಿ ಹೇಳ್ತಾ ಇದೀನಿ - ನೀನು ಹುಟ್ಟಿದ್ದೇ ಒಂದು ಉತ್ಸವ, ನೀನು ಬೆಳೆದಿದ್ದು ಇತಿಹಾಸ, ನಿನ್ನ ಜೀವನ ಒಂದು ದಂತಕಥೆ.
ನಿನ್ನ ನೆನಪುಗಳು ಎಂದಿಗೂ ಅಮರ ಹುಟ್ಟು ಹಬ್ಬದ ಶುಭಾಶಯಗಳು ಅಪ್ಪು ಎಂದು ಶಿವರಾಜ್ಕುಮಾರ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ:Puneeth Rajkumar Birthday: ಅಪ್ಪು ಹೆಸರಲ್ಲಿ 3000 ಗಿಡ ವಿತರಣೆ, ಪವರ್ಸ್ಟಾರ್ಗೆ ಕಡಲೆಪುರಿ ಹಾರ
ಶಿವಣ್ಣ ಶೇರ್ ಮಾಡಿದ ಪೋಸ್ಟ್ ಈಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಶಿವಣ್ಣ ಅವರ ಪೋಸ್ಟ್ಗೆ 2 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅಭಿಮಾನಿಗಳು ಕಮೆಂಟ್ ಮಾಡಿ ಪುನೀತ್ ರಾಜ್‍ಕುಮಾರ್ ಅವರಿಗೆ ಬರ್ತ್ಡೇ ಶುಭಾಶಯ ತಿಳಿಸಿದ್ದಾರೆ.
ಕಬ್ಜದಲ್ಲಿ ಶಿವಣ್ಣ
ಪುನೀತ್ ಬರ್ತ್ಡೇ ದಿನವೇ ರಿಲೀಸ್ ಆಗಿರುವ ಕಬ್ಜ ಸಿನಿಮಾದಲ್ಲಿ ಶಿವರಾಜ್ಕುಮಾರ್ ಅವರು ಕೂಡಾ ನಟಿಸಿದ್ದಾರೆ. ಶಿವರಾಜ್ಕುಮಾರ್ ಅವರ ರೋಲ್ಸ್ ಪ್ರೇಕ್ಷಕರಲ್ಲಿ ಗೂಸ್ಬಂಪ್ಸ್ ತರುತ್ತೆ ಎಂದಿದ್ದಾರೆ ನೆಟ್ಟಿಗರು. ಇತ್ತ ತಮ್ಮನ ಬರ್ತ್ಡೇ ದಿನ ಸಿನಿಮಾ ರಿಲೀಸ್ ಆದ ಖುಷಿಯಲ್ಲಿದ್ದಾರೆ ಹ್ಯಾಟ್ರಿಕ್ ಹೀರೋ.
ಕಂಠೀರವ ಸ್ಟೂಡಿಯೋ ಬಳಿ ಅಪ್ಪು ಉತ್ಸವಕ್ಕೆ ಅಭಿಮಾನಿಗಳ ಸಿದ್ದತೆ ಕೂಡಾ ನಡೆದಿದೆ. ಅಪ್ಪು ಸಮಾಧಿ ದರ್ಶನ ಪಡೆಯಲು ಬೆಳಗ್ಗಿನಿಂದಲೇ ಕಂಠೀರವ ಬಳಿ ಅಭಿಮಾನಿಗಳು ಸೇರಿದ್ದಾರೆ. ಅಪ್ಪು ಜನ್ಮದಿನದ ಅಂಗವಾಗಿ ಅಭಿಮಾನಿಗಳಿಗೆ ಅನ್ನದಾನ ಕೂಡಾ ವ್ಯವಸ್ಥೆ ಮಾಡಲಾಗಿದೆ. ಗಂಧದಗುಡಿ ಕನಸು ಕಂಡಿದ್ದ ಅಪ್ಪು ನೆನಪಲ್ಲಿ 3000 ಗಿಡಗಳ ವಿತರಣೆ ಮಾಡಲಾಗಿದ್ದು ರಾಘವೇಂದ್ರ ರಾಜ್‍ಕುಮಾರ್ ತಮ್ಮನ ನೆನಪಲ್ಲಿ ಗಿಡಗಳ ಉಡುಗೊರೆ ಕೊಡಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ