ಶಿವರಾಜ್ಕುಮಾರ್(Shiva Rajkumar) ಈ ಹೆಸರು ಕೇಳಿದರೆ ಸಾಕು ಅದೇನೋ ಒಂದು ಹುಮ್ಮಸ್ಸು ಬರುತ್ತೆ. ಹೌದು, ಅದಕ್ಕೆ ಕಾರಣ ಶಿವಣ್ಣ(Shivanna). ಅವರನ್ನು ನೋಡುವುದಕ್ಕೆ ಒಂದು ಖುಷಿ. ಅಭಿಮಾನಿ(Fans)ಗಳ ಜೊತೆ ಸ್ಟಾರ್ ಎಂದು ತೋರಿಸಿಕೊಳ್ಳದೇ ಜನಸಾಮನ್ಯರಂತೆ ನಡೆದುಕೊಳ್ಳುತ್ತಾರೆ. ಎಷ್ಟೆ ಆದರೂ ಅಣ್ಣಾವ್ರ ದೊಡ್ಡ ಮಗ. ಅಪ್ಪನಂತೆ ಮಕ್ಕಳು ಎಂಬುವುದಕ್ಕೆ ಡಾ.ರಾಜ್ಕುಮಾರ್(Dr.Rajkumar) ಕುಟುಂಬವೇ ನಿದರ್ಶನ. ಶಿವಣ್ಣ ಕೇವಲ ನಟನೆಯಲ್ಲಷ್ಟೇ ಎಲ್ಲರ ಗಮನ ಸೆಳೆದಿಲ್ಲ. ಅವರ ಗುಣಗಳಿಂದ ಎಲ್ಲರ ಮನ ಗೆದ್ದಿದ್ದಾರೆ. 59ನೇ ವಯಸ್ಸಿನಲ್ಲೂ ಚಿರ ಯುವಕನಂತೆ ಇದ್ದಾರೆ ಶಿವರಾಜ್ಕುಮಾರ್, ಅವರ ಎನರ್ಜಿ(Energy)ಗೆ ಅವರೇ ಸಾಟಿ. 59ನೇ ವಯಸ್ಸಿನಲ್ಲೂ ಹೀರೋ ಪಾತ್ರಗಳನ್ನೇ ಮಾಡುತ್ತಿದ್ದಾರೆ ಅಂದರೆ ಅವರ ತಾಕತ್ತಿನ ಬಗ್ಗೆ ಯೋಚನೆ ಮಾಡಿ. ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್(Puneeth Rajkumar) ಅವರು ನಿಧನರಾದಗ ಇಡೀ ಕರುನಾಡು ಕಣ್ಣೀರಿಟ್ಟಿತ್ತು. ಅಪ್ಪು ಮೃತದೇಹದ ಪಕ್ಕ ಕುಳಿತು ಅಣ್ಣ ಶಿವರಾಜ್ಕುಮಾರ್ ಪುಟ್ಟ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದು ಕಣ್ಣ ಮುಂದೆ ಹಾಗೇ ಇದೆ. ಈ ವಯಸ್ಸಲ್ಲೂ ಆ ನೋವನ್ನು ತಡೆದಕೊಂಡು ಕುಟುಂಬಸ್ಥರಿಗೆ ಶಿವಣ್ಣ ಸಮಾಧಾನ ಮಾಡಿದ್ದಾರೆ. ಇನ್ನೂ ನಾಡು, ನುಡಿ ವಿಚಾರದಲ್ಲೂ ಶಿವಣ್ಣ ಸಖತ್ ಡೇರಿಂಗ್(Daring). ಮೊನ್ನೆ ಭಾಷೆಗಾಗಿ ನನ್ನ ಪ್ರಾಣ ಹೋದರೂ ಪರವಾಗಿಲ್ಲ ಎಂದು ಹೇಳಿದ್ದರು. ಶಿವಣ್ಣ ಅವರಿಗೆ ಅವರೇ ಸಾಟಿ. ಇದೀಗ ಶಿವಣ್ಣ ಅವರ ಮತ್ತೊಂದು ಹಳೇ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಮಕ್ಕಳ ಜೊತೆ ಮಗುವಾದ ಶಿವಣ್ಣ!
ಶಿವರಾಜ್ಕುಮಾರ್ ಅವರು ಎಲ್ಲಿ ಇರುತ್ತಾರೋ ಅಲ್ಲಿ ಎನರ್ಜಿ ಇರುತ್ತೆ.. ನಗು ಇರುತ್ತೆ.. ಹೌದು, ಈ ವೈರಲ್ ಆಗುತ್ತಿರುವ ವಿಡಿಯೋ ನೋಡಿದರು ನಿಜಕ್ಕೂ ನಿಮಗೆ ಆಶ್ಚರ್ಯವಾಗುತ್ತೆ. ಯಾಕೆಂದರೆ ಶಿವಣ್ಣ ಇಲ್ಲಿ ಮಕ್ಕಳ ಜೊತೆ ಮಗುವಾಗಿದ್ದಾರೆ. ಮಕ್ಕಳ ಜೊತೆ ಸೇರಿ ಖೋ ಖೋ ಆಡುತ್ತಿರುವ ಅಪರೂಪದ ವಿಡಿಯೋ ಇದೀಗ ಸಾಮಾಜಿಕ ಜಾಲಾತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ನಲಿಯುತ್ತಿರುವ ಶಿವರಾಜ್ಕುಮಾರ್ ಅವರ ಅಪರೂಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದನ್ನುನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ .
ಇದನ್ನು ಓದಿ: ನಮ್ಮ ಬಾವುಟ ಸುಟ್ಟರೆ ತಾಯಿಯನ್ನೇ ಸುಟ್ಟ ಹಾಗೆ: ಭಾಷೆಗಾಗಿ ಪ್ರಾಣ ಕೊಡೋಕೂ ಸಿದ್ಧ ಎಂದ ಶಿವಣ್ಣ!
ಶಿವಣ್ಣ ಅವರ ವ್ಯಕ್ತಿತ್ವಕ್ಕೆ ಫ್ಯಾನ್ಸ್ ಫಿದಾ!
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಶಿವಣ್ಣ ಅವರ ವ್ಯಕ್ತಿತ್ವಕ್ಕೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಶಿವಣ್ಣ ಅವರ ಬಗ್ಗೆ ಬರೆದು ಈ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ನಿಮ್ಮ ದೊಡ್ಡತನಕ್ಕೆ ನಾವು ಎಂದಿಗೂ ಚಿರಋಣಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಎಲ್ಲ ಇದ್ದು..ಏನೂ ಇಲ್ಲದ ಹಾಗೇ ಬದುಕಿರುವ. ಆಕಾಶ ನೋಡದ ಕೈಯ ನೆನೆದು ಪ್ರೀತಿ ಹಂಚಿರುವ.. ಜೊತೆಗಿರು ನೀನು..ಅಪ್ಪನ ಹಾಗೇ.. ಎಂದು ರಾಜಕುಮಾರ ಸಿನಿಮಾದ ಹಾಡಿನ ಸಾಲುಗಳನ್ನು ಬರೆದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಇದನ್ನು ಓದಿ : ಕನ್ನಡ ಧ್ವಜ ಸುಟ್ಟ ಕಿಡಿಗೇಡಿಗಳು: `ಆಳ್ ಕನ್ನಡ ತಾಯ್, ಬಾಳ್ ಕನ್ನಡ ತಾಯ್’ ಎಂದು ಶಿವಣ್ಣ ವಾರ್ನಿಂಗ್!
ಭಾಷೆಗಾಗಿ ಪ್ರಾಣ ಕೊಡೋಕೂ ಸಿದ್ಧ ಎಂದಿದ್ದ ಶಿವಣ್ಣ!
ಭಾಷೆಗಾಗಿ ನಾನು ಪ್ರಾಣ ಕೊಡೋದಕ್ಕೂ ಸಿದ್ಧ. ಭಾಷೆಯನ್ನು ಅಗೌರವಿಸುವಂತಹ ಕೆಲಸ ಮಾಡಬೇಡಿ ಎಂದು ಚಿತ್ರನಟ ಶಿವರಾಜ್ ಕುಮಾರ್ ಹೇಳಿದ್ದಾರೆ. ‘ನಮ್ಮ ಬಾವುಟ ಸುಟ್ಟರೆ ತಾಯಿಯನ್ನೇ ಸುಟ್ಟಹಾಗೆ. ಇಂತಹ ಕೆಲಸ ಮಾಡುವುದು ಅಕ್ಷಮ್ಯ. ಕನ್ನಡಿಗರಿಗೆ ಏನೂ ಪವರ್ ಇಲ್ಲ ಅಂತೆಲ್ಲ ತಿಳಿದುಕೊಳ್ಳಬೇಡಿ’ ಎಂದು ಶಿವಣ್ಣ ಕನ್ನಡ ಬಾವುಟ ಸುಟ್ಟವರ ವಿರುದ್ಧ ಕಿಡಿಕಾರಿದರು.‘ಯಾವ ರಾಜ್ಯದಲ್ಲಿ ಯಾವ ಭಾಷೆ ಇದೆಯೋ ಅದಕ್ಕೆ ಮರಾರಯದೆ ಕೊಡೋದು ಧರ್ಮ. ಭಾಷೆ ಎಲ್ಲರಿಗೂ ಮುಖ್ಯ. ನೆಲದ ಭಾಷೆಗೆ ಅಗೌರವ ತೋರುವಂತಹ ಕೆಲಸ ಮಾಡಬೇಡಿ. ಕನ್ನಡ ಬಾವುಟ ಸುಡುವುದು ಎಷ್ಟುಸರಿ? ಅಂಥಾ ಕೆಲಸ ಯಾವತ್ತಿಗೂ ಮಾಡಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ