James: ತಮ್ಮನ ಕೊನೆ ಸಿನಿಮಾದಲ್ಲಿ ಸೋಲ್ಜರ್​ ಪಾತ್ರದಲ್ಲಿ ಶಿವಣ್ಣ! ಅಪ್ಪುಗೆ ಗುರು ಆದ ರಾಘವೇಂದ್ರ ರಾಜ್​ಕುಮಾರ್​

ಜೇಮ್ಸ್​ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಸೈನಿಕನ ಪಾತ್ರದಲ್ಲಿ ಕಾಣಸಿಕೊಂಡಿರವುದು ಎಲ್ಲರಿಗೂ ಗೊತ್ತಿತ್ತು. ಆದರೆ, ಶಿವಣ್ಣ ಕೂಡ ಈ ಸಿನಿಮಾದಲ್ಲಿ ಸೈನಿಕನ ಪಾತ್ರದಲ್ಲಿ ನಟಿಸಿರುವುದು ಯಾರಿಗೂ ತಿಳಿದಿರಲಿಲ್ಲ. ಹೌದು, ತಮ್ಮನ ಸಿನಿಮಾದಲ್ಲಿ ಶಿವಣ್ಣ, ರಾಘಣ್ಣ ನಟಿಸಿರುವುದು ಎಲ್ಲರಿಗೂ ಗೊತ್ತೆ ಇತ್ತು. ಆದರೆ, ಈಗ ಶಿವಣ್ಣ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ.

ಅಪ್ಪು, ರಾಘಣ್ಣ, ಶಿವಣ್ಣ

ಅಪ್ಪು, ರಾಘಣ್ಣ, ಶಿವಣ್ಣ

  • Share this:
ಇಂದು ಕರುನಾಡಿನ ದೇವರ ಹುಟ್ಟುಹಬ್ಬ... 47 ವಸಂತಗಳ ಹಿಂದೆ ಈ ದಿನ ಭೂಮಿಗೆ ಪವರ್​ ಸ್ಟಾರ್ (Power Star) ಆಗಮನವಾಗಿತ್ತು. ಮುಂದೊಂದು ದಿನ ಅವರು ದೇವರಾಗ್ತಾರೆ ಅಂತ ಯಾರಿಗೂ ಬಹುಷಹ ಗೊತ್ತಿರಲಿಲ್ಲ ಅನ್ನಿಸುತ್ತೆ. ಇಂದು ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರ ಹುಟ್ಟುಹಬ್ಬ. ಹೀಗಾಗಿ ಅಪ್ಪು ಅವರ ಕೊನೆಯ ಸಿನಿಮಾ ಜೇಮ್ಸ್​ (James) ಸಿನಿಮಾ ರಿಲೀಸ್​. ಮುಂಜಾನೆಯಿಂದಲೇ ಅಪ್ಪು ಅಭಿಮಾನಿಗಳು ಜೇಮ್ಸ್​ ದರ್ಶನ ಪಡೆಯುತ್ತಿದ್ದಾರೆ. ಬೆಳ್ಳಿ ತೆರೆಯಲ್ಲಿ ಕಡೆಯ ಬಾರಿಗೆ ಅಪ್ಪು ಅವರನ್ನು ಕಂಡ ಅಭಿಮಾನಿಗಳು ಎದೆ ಬಡಿದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಅಪ್ಪು ಕೆರಿಯರ್​​ನಲ್ಲೇ ಈ ಪುನೀತ್​ ರಾಜ್​ಕುಮಾರ್​ ಅವರ ಬೆಸ್ಟ್​ ಪರ್ಫಾಮೆನ್ಸ್​ ಅಂದರೆ ತಪ್ಪಾಗಲಾರದು. ಎಲ್ಲ ಚಿತ್ರಮಂದಿರಗಳಲ್ಲೂ ಹೌಸ್​ ಫುಲ್​ ಬೋರ್ಡ್​ ಬಿದ್ದಿದೆ. ಜೇಮ್ಸ್ ಸಿನಿಮಾ ನೋಡಿ ಕಣ್ತುಂಬಿ ಕೊಂಡ ಅಭಿಮಾನಿಗಳು ಅಪ್ಪು ಅಭಿನಯಕ್ಕೆ ಚಪ್ಪಾಳೆ ತಟ್ಟಿದ್ದಾರೆ, ಶಿಳ್ಳೆ ಹೊಡೆದಿದ್ದಾರೆ, ಅವರನ್ನು ಮಿಸ್ ಮಾಡಿಕೊಂಡು ಕಣ್ಣೀರು ಇಟ್ಟಿದ್ದಾರೆ.

ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡ ಶಿವಣ್ಣ!

ಜೇಮ್ಸ್​ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಸೈನಿಕನ ಪಾತ್ರದಲ್ಲಿ ಕಾಣಸಿಕೊಂಡಿರವುದು ಎಲ್ಲರಿಗೂ ಗೊತ್ತಿತ್ತು. ಆದರೆ, ಶಿವಣ್ಣ ಕೂಡ ಈ ಸಿನಿಮಾದಲ್ಲಿ ಸೈನಿಕನ ಪಾತ್ರದಲ್ಲಿ ನಟಿಸಿರುವುದು ಯಾರಿಗೂ ತಿಳಿದಿರಲಿಲ್ಲ. ಹೌದು, ತಮ್ಮನ ಸಿನಿಮಾದಲ್ಲಿ ಶಿವಣ್ಣ, ರಾಘಣ್ಣ ನಟಿಸಿರುವುದು ಎಲ್ಲರಿಗೂ ಗೊತ್ತೆ ಇತ್ತು. ಆದರೆ, ಈಗ ಶಿವಣ್ಣ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ. ಇವರನ್ನು ನೋಡಿಯೇ ಸಿನಿಮಾದಲ್ಲಿ ಅಪ್ಪು ಸೈನಿಕನಾಗಬೇಕು ಎಂದು ಅಂದುಕೊಳ್ಳುತ್ತಾರೆ. ಶಿವಣ್ಣ ಪಾತ್ರವನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಅಪ್ಪು ಸೈನಿಕನಾಗುತ್ತಾರೆ.

ಜೇಮ್ಸ್​ಗೆ ಗುರುವಾದ ರಾಘವೇಂದ್ರ ರಾಜ್​ಕುಮಾರ್​!

ಇನ್ನೂ ಈ ಸಿನಿಮಾದಲ್ಲಿ ರಾಘವೇಂದ್ರ ರಾಜ್​ಕುಮಾರ್​ ಕೂಡ ನಟಿಸಿದ್ದಾರೆ. ಜೇಮ್ಸ್​ ಸಿನಿಮಾದಲ್ಲಿ ಪುನೀತ್​​ಗೆ ಶಿವಣ್ಣ ಗುರಿ ತೋರಿಸಿಕೊಟ್ಟರೆ, ರಾಘಣ್ಣ ಪುನೀತ್​ಗೆ ಗುರುವಾಗಿದ್ದಾರೆ. ಹೌದು, ಶಿವಣ್ಣ ಆಶ್ರಮದ ಗುರುವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಪುನೀತ್ ರಾಜ್​ಕುಮಾರ್​ ಜೊತೆ ಶಿವಣ್ಣ -ರಾಘಣ್ಣ ಒಂದೇ ಸೀನ್​ನಲ್ಲಿ ಕಾಣಿಸಿಕೊಂಡಿರದಿದ್ದರೂ, ಶಿವಣ್ಣ - ರಾಘಣ್ಣ ಮುಖಾಮುಖಿಯಾಗಿದ್ದಾರೆ.

ಇದನ್ನೂ ಓದಿ: 'ಜೇಮ್ಸ್‌' ಜಾತ್ರೆಯಲ್ಲಿ ಅಭಿಮಾನಿಗಳ ಸಂಭ್ರಮ, 'ಅಪ್ಪು' ನೆನೆದು ಫ್ಯಾನ್ಸ್ ಭಾವುಕ

ಜೇಮ್ಸ್ ಸಿನಿಮಾ ನೋಡಿದ ಹಿರಿಯಜ್ಜಿ

ಬೆಂಗಳೂರಿನು ವೀರೇಶ್ ಚಿತ್ರಮಂದಿರದಲ್ಲಿ ಹಿರಿಯ ಅಜ್ಜಿಯೊಬ್ಬರು ಜೇಮ್ಸ್ ಸಿನಿಮಾ ನೋಡಿ್ದ್ರು,.  ಮೊದಲ ಷೋ ನೋಡಬೇಕೆಂಬ ಆಸೆಯಿಂದ ಕುಟುಂಬದ ಮಹಿಳಾ ಸದಸ್ಯರ ಜೊತೆ ಆಗಮಿಸಿದ ಹಿರಿಯಜ್ಜಿ, ಸಿನಿಮಾ ನೋಡಿದ್ರು, ಬಳಿಕ ಅಪ್ಪು ನೆನೆದು ಕಣ್ಣೀರು ಹಾಕಿದ್ರು.

ವಿಶೇಷ ಚೇತನ ಅಭಿಮಾನಿಗಳಿಂದ ಸಿನಿಮಾ ವೀಕ್ಷಣೆ

ಬೆಂಗಳೂರಿನ ವೀರೇಶ್ ಥಿಯೇಟರ್‌ನಲ್ಲಿ ಅಪ್ಪು ಸಿನಿಮಾ ನೋಡಲು ಐವರು ವಿಶೇಷ ಚೇತನರು . ಮೊದಲ ಷೋ ಟಿಕೆಟ್ ಸಿಕ್ಕಿದೆ. ಹೀಗಾಗಿ ಅದೆಷ್ಟೇ ಲೇಟಾಗಲಿ ಜೇಮ್ಸ್ ಸಿನಿಮಾ ನೋಡಿಯೇ ಹೋಗುತ್ತೇವೆ ಎಂದರು.  ಇನ್ನು 330 ಕಿಲೋ ಮೀಟರ್ ದೂರದ ಬಳ್ಳಾರಿಯಿಂದ ಬೆಂಗಳೂರಿಗೆ ಸಿನಿಮಾ ನೋಡಲು ಬಂದ ವಿಶೇಷ ಚೇತನ, ಸ್ನೇಹಿತರ ಸಹಾಯದಿಂದ ಮೊದಲ ಶೋ ನೋಡಿದ್ರು.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್ 'ಜೇಮ್ಸ್' ಹೇಗಿದೆ? ಇಲ್ಲಿದೆ ಟ್ವಿಟರ್ ರಿವ್ಯೂ

ಅಭಿಮಾನಿಗಳಿಗೆ ಅಪ್ಪು ಗೋಲ್ಡ್ ಕಾಯಿನ್

ಬೆಂಗಳೂರಿನ ಥಿಯೇಟರ್ ಒಂದರಲ್ಲಿ ಲಕ್ಕಿ ವಿಜೇತ ಅಭಿಮಾನಿಗಳಿಗೆ ಗೋಲ್ಡ್ ಕಾಯಿನ್ ವಿತರಿಸಲಾಯ್ತು. 2 ಗ್ರಾಂನ ಗೋಲ್ಡ್ ಕಾಯಿನ್ ಮೇಲೆ ಅಪ್ಪು ಅಮರ ಅಂತ ಬರೆಯಲಾಗಿದೆ.. ತಿಲಕನಗರದ ಅಭಿಮಾನಿಯೊಬ್ಬರು ಈ ಲಕ್ಕಿ ಗೋಲ್ಡ್ ಕಾಯಿನ್ ಪಡೆದಿದ್ದಾರೆ.
Published by:Vasudeva M
First published: