Shivarajkumar: ಇದಪ್ಪಾ ರಾಜ್ಯವೇ 'ಕುಣಿಯೋ' ಸುದ್ದಿ ಅಂದ್ರೆ! 'Dance Karnataka Dance' ಅಂತ ಕುಣಿಸೋಕೆ ಬರ್ತಿದ್ದಾರೆ ಶಿವಣ್ಣ!

60 ವರ್ಷಗಳನ್ನು ಕಳೆದಿರೋ ಶಿವಣ್ಣ, ಇನ್ನೂ 16ರ ಹುಮ್ಮಸ್ಸಲ್ಲೇ ಇದ್ದಾರೆ ಅಂದ್ರೆ ಅತಿಶಯೋಕ್ತಿಯೇನಲ್ಲ. ಡಾನ್ಸ್ ಅಂದ್ರೆ ಶಿವಣ್ಣ.. ಶಿವಣ್ಣ ಅಂದ್ರೆ ಡಾನ್ಸ್ ಅಂದರೂ ತಪ್ಪೇನೂ ಆಗೋದಿಲ್ಲ. ಇದೀಗ ಶಿವಣ್ಣ ನಿಮ್ಮನ್ನೆಲ್ಲ ಕುಣಿಸೋದಕ್ಕೆ ಬರುತ್ತಿದ್ದಾರೆ!

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್

  • Share this:
ಕನ್ನಡ ಚಿತ್ರರಂಗದ ‘ಚಿರಯುವಕ’ ಯಾರು ಅಂದ್ರೆ ಹ್ಯಾಟ್ರಿಕ್ ಹೀರೋ (Hattrick Hero), ಡಾ. ಶಿವರಾಜ್‌ ಕುಮಾರ್ (Dr. Shivarajkumar) ಅಂತ ಒಂದೇ ಮಾತಲ್ಲಿ ಹೇಳಬಹುದು. 60 ವರ್ಷಗಳನ್ನು (60 years) ಕಳೆದಿರೋ ಶಿವಣ್ಣ, ಇನ್ನೂ 16ರ ಹುಮ್ಮಸ್ಸಲ್ಲೇ ಇದ್ದಾರೆ ಅಂದ್ರೆ ಅತಿಶಯೋಕ್ತಿಯೇನಲ್ಲ. ಡಾನ್ಸ್ (Dance) ಅಂದ್ರೆ ಶಿವಣ್ಣ.. ಶಿವಣ್ಣ ಅಂದ್ರೆ ಡಾನ್ಸ್ ಅಂದರೂ ತಪ್ಪೇನೂ ಆಗೋದಿಲ್ಲ. ಶಿವಣ್ಣ ಅವ್ರಿಗೆ ಡಾನ್ಸ್ ಅಂದ್ರೆ ಪ್ರಾಣ, ಅವರು ಸಖತ್ ಆಗಿ ಡಾನ್ಸ್ ಮಾಡುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಇದೀಗ ತಮ್ಮ ಡಾನ್ಸ್ ಮೂಲಕ ಇಡೀ ಕರ್ನಾಟಕವನ್ನೇ (Karnataka) ಕುಣಿಸೋದಕ್ಕೆ ಶಿವಣ್ಣ ನಿಮ್ಮ ಮನೆಗೆ ಬರ್ತಿದ್ದಾರೆ. ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುವ ‘ಡಾನ್ಸ್ ಕರ್ನಾಟಕ ಡಾನ್ಸ್‌’ನ (Dance Karnataka Dance) ಮುಂದಿನ ಸೀಸನ್‌ಗೆ ಶಿವರಾಜ್‌ಕುಮಾರ್ ಅವರೇ ಜಡ್ಜ್‌ (Judge) ಆಗಲಿದ್ದಾರೆ.

 ಕಿರುತೆರೆಗೆ ಬರುತ್ತಿದ್ದಾರೆ ಶಿವಣ್ಣ

ಕರುನಾಡಿನ ಮೆಚ್ಚಿನ ದೊಡ್ಮನೆಯ ದೊಡ್ಡ ಮಗ ಶಿವಣ್ಣ, ಈಗ ಕಿರುತೆರೆಗೆ ಬರುತ್ತಿದ್ದಾರೆ. ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಡಾನ್ಸ್ ಕರ್ನಾಟಕ ಡಾನ್ಸ್ ಶೋನ 6ನೇ ಸೀಸನ್ ಇಂದೇ ಭಾನುವಾರ, ಅಂದರೆ ಏಪ್ರಿಲ್ 16ರಿಂದ ಶನಿ-ಭಾನು ರಾತ್ರಿ 9ಕ್ಕೆ ಪ್ರಸಾರವಾಗಲಿದೆ. ಈ ಶೋಗೆ ಡಾ. ಶಿವರಾಜ್‌ ಕುಮಾರ್ ಅವರೇ ಮೇನ್ ಜಡ್ಜ್ ಆಗಲಿದ್ದಾರೆ.

ಪ್ರೋಮೋ ರಿಲೀಸ್ ಮಾಡಿದ ಜೀ ಕನ್ನಡ

ಕಿರುತೆರೆಯ ಖ್ಯಾತ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6 ರ ಶೋ ಮೂಲಕ ತೀರ್ಪುಗಾರರಾಗಿ ಕಿರುತೆರೆಗೆ ನಟ ಶಿವರಾಜ್‌ಕುಮಾರ್ ಮರಳಿದ್ದಾರೆ.  ಈಗಾಗಲೇ ಶೋನ ಪ್ರೋಮೋ ರಿಲೀಸ್ ಆಗಿದ್ದು, ಶಿವಣ್ಣ  ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಇದನ್ನೂ ಓದಿ: Photos: ಪುನೀತ್ ರಾಜ್​ಕುಮಾರ್ ಮನೆಗೆ ಬ್ರಹ್ಮಾನಂದಂ, ಅಲಿ; ಒಡನಾಟ ನೆನೆಸಿಕೊಂಡ ನಟರು

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಶಿವಣ್ಣ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ಧಾರೆ.. ಕಳೆದ ವರ್ಷ ಶಿವರಾಜ್‌ಕುಮಾರ್ ಅಭಿನಯದ 'ಭಜರಂಗಿ 2' ಸಿನಿಮಾ ತೆರೆಕಂಡಿತ್ತು. 'ಬೈರಾಗಿ' ರಿಲೀಸ್‌ಗೆ ಸಿದ್ಧವಿದ್ದರೆ, 'ನೀ ಸಿಗೋವರೆಗೂ' ಸಿನಿಮಾದ ಒಂದು ಹಂತದ ಶೂಟಿಂಗ್ ನಡೆದಿದೆ. ಸದ್ಯ 'ವೇದ' ಸಿನಿಮಾದ ಕೆಲಸಗಳಲ್ಲಿ ಶಿವಣ್ಣ ಸಖತ್ ಬ್ಯುಸಿ ಇದ್ದಾರೆ.

ಅದಾದ ಮೇಲೆ ರಿಷಬ್‌ ಶೆಟ್ಟಿ ಜೊತೆಗೆ ಒಂದು ಸಿನಿಮಾ, 'ಮಮ್ಮಿ' ಲೋಹಿತ್‌ ಜೊತೆಗೆ 'ಸತ್ಯಮಂಗಳ', ಈಚೆಗಷ್ಟೇ ಒಪ್ಪಿಕೊಂಡ ಆರ್‌. ಜೈ ನಿರ್ದೇಶನದ ಹೊಸ ಸಿನಿಮಾ. ಯೋಗರಾಜ್ ಭಟ್ ನಿರ್ದೇಶನದಲ್ಲಿ ಪ್ರಭುದೇವ ಜೊತೆಗೊಂದು ಸಿನಿಮಾ.. ಹೀಗೆ ಹಲವು ಸಿನಿಮಾಗಳನ್ನು ಶಿವಣ್ಣ ಒಪ್ಪಿಕೊಂಡಿದ್ದಾರೆ.

ಶಿವಣ್ಣ ಮುಂದಿನ ಸಿನಿಮಾ ಗೋಸ್ಟ್

ಸಂದೇಶ್ ನಾಗರಾಜ್ ಪುತ್ರ ಸಂದೇಶ್ ಎನ್. ನಿರ್ಮಾಣ ಮಾಡಲಿರುವ ಸಿನಿಮಾದಲ್ಲಿ ಶಿವಣ್ಣ ನಾಯಕನಾಗಿ ಅಭಿನಯಿಸಲಿದ್ದಾರೆ. ಈ ಸಿನಿಮಾವನ್ನು ಚಿ. ಗುರುದತ್ ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿ ಅಧಿಕೃತವಾಗಿ ಕೇಳಿಬಂದಿತ್ತು. ಆದರೆ ಆ ಬಗ್ಗೆ ಯಾವುದೇ ಸದ್ಯ ಮಾಹಿತಿ ಇಲ್ಲ. ಇದೀಗ ಅದೇ ಬ್ಯಾನರ್‌ನಲ್ಲಿ ಶಿವರಾಜ್‌ಕುಮಾರ್‌ ಮತ್ತೊಂದು ಸಿನಿಮಾ ಓಕೆ ಎಂದಿದ್ದು, ಶ್ರೀನಿ ನಿರ್ದೇಶಕರಾಗಿದ್ದಾರೆ.

ಇದನ್ನೂ ಓದಿ: Megha Shetty: ಪ್ರಿನ್ಸ್ ಮಹೇಶ್ ಬಾಬು 'ಜೊತೆ ಜೊತೆಯಲಿ' ನಟಿಸುತ್ತಾರಾ 'ಅನು ಸಿರಿಮನೆ'!? ಮೇಘಾಶೆಟ್ಟಿ ಫೋಟೋ ಫುಲ್ ವೈರಲ್

ಈ ವಿಚಾರವನ್ನು ನಿರ್ಮಾಪಕರೇ ಅಧಿಕೃತವಾಗಿ ತಿಳಿಸಿದ್ದಾರೆ. ಈ ಸಿನಿಮಾಕ್ಕೆ 'ಗೋಸ್ಟ್' ಎಂದು ಟೈಟಲ್ ಇಡಲಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ. ಸದ್ಯಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
Published by:Annappa Achari
First published: