ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ ಈ ಸಲ ಕೊರೋನ ಕಾರಣದಿಂದಾಗಿ ಅದು ಸಾಧ್ಯವಿಲ್ಲ. ಈ ಸಲ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಜೊತೆಗೆ ತಾನು ಮನೆಯಲ್ಲೇ ಇರುವುದಿಲ್ಲ ಎಂದು ಶಿವಣ್ಣ ಹೇಳಿದ್ದಾರೆ.
ಕೊರೋನಾ ಸೋಂಕು ಹರಡುವ ಭೀತಿಯಿಂದಾಗಿ ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಇದೇ ಕಾರಣಕ್ಕೆ ಶಿವರಾಜ್ ಕುಮಾರ್ ಅವರು ಈ ಸಲ ಹುಟ್ಟುಹಬ್ಬ ಆಚರಿಸದಿರಲು ನಿರ್ಧರಿಸಿದ್ದಾರಂತೆ. ಅದಕ್ಕೆ ಈ ವಿಡಿಯೋ ಮೂಲಕ ಅಭಿಮಾನಿಗಳಲ್ಲಿ ಶಿವಣ್ಣ ಮನವಿ ಮಾಡಿದ್ದಾರೆ.
ಹುಟ್ಟುಹಬ್ಬದಂದು ನಾನು ಮನೆಯಲ್ಲಿ ಇರುವುದಿಲ್ಲ. ನೀವು ಮನೆಗಳಿಂದ ಹೊರ ಬರಬೇಡಿ. ಮನೆಗಳಲ್ಲಿ ಇದ್ದು ಶುಭಕೋರಿ. ನಿಮ್ಮನ್ನು ಭೇಟಿ ಮಾಡಲಾಗುತ್ತಿಲ್ಲವೆಂದು ನೋವಾಗುತ್ತಿದೆ.ಆದರೆ ಅದಕ್ಕಿಂತ ಹೆಚ್ಚಾಗಿ ನಿಮ್ಮ ಆರೋಗ್ಯ ತುಂಬಾ ಮುಖ್ಯ. ಅದಕ್ಕೆ ಪರಿಸ್ಥಿತಿ ತಿಳಿಗೊಂಡ ನಂತರ ಮತ್ತೆ ಸಿಗೋಣ ಎಂದಿದ್ದಾರೆ ಶಿವಣ್ಣ.
ಇದನ್ನೂ ಓದಿ: ವಿಷ್ಣುವರ್ಧನ್ ನೆನಪಿನಲ್ಲಿ ಹಾಡು ಹಾಡಿದ ರವಿಶಂಕರ್: ಮೆಚ್ಚಿಕೊಂಡ ಕಿಚ್ಚ ಸುದೀಪ್..!
ಇಂತಹ ಪರಿಸ್ಥಿತಿಯಲ್ಲಿ ಯಾರೂ ಭಯಪಡಬೇಡಿ. ಧೈರ್ಯವಾಗಿರಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ದೇವರಿ ಇದ್ದಾರೆ ನಮ್ಮನ್ನು ಕಾಪಾಡುತ್ತಾನೆ. ಆದರೆ ತಪ್ಪದೆ ನಿಯಮಗಳನ್ನು ಪಾಲನೆ ಮಾಡಿ ಎಂದು ಮನವಿ ಮಾಡಿದ್ದಾರೆ ಹ್ಯಾಟ್ರಿಕ್ ಹೀರೋ.
Urvashi Rautela: ಕಿರುತೆರೆ ನಟನೊಂದಿಗೆ ಸಪ್ತಪದಿ ತುಳಿದ್ರಾ ಐರಾವತ ಬೆಡಗಿ ಊರ್ವಶಿ ರೌಟೆಲ..!
ಇದನ್ನೂ ಓದಿ: Rachita Ram: ಸೆಲ್ಫಿ ತೆಗೆಸಿಕೊಂಡ ಅಭಿಮಾನಿಗೆ ಇನ್ಸ್ಟಾಗ್ರಾಂನಲ್ಲಿ ಟ್ಯಾಗ್ ಮಾಡುವಂತೆ ಮನವಿ ಮಾಡಿದ ರಚಿತಾ ರಾಮ್..! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ