Shiva Rajkumar Dance: ಹುಲಿ ವೇಷಧಾರಿಗಳ ಜೊತೆ ಕುಣಿದು ಕುಪ್ಪಳಿಸಿದ ಶಿವಣ್ಣ! ಅಭಿಮಾನಿಗಳ ಹೃದಯದ ಲಬ್ ಡಬ್ ಹೆಚ್ಚಳ!
ಪುನೀತ್ ರಾಜ್ಕುಮಾರ್ ಹೆಸರು ಹೇಳುತ್ತಿದ್ದಂತೆ ಅಭಿಮಾನಿಗಳು ಸಾವಿರಾರು ಮೊಬೈಲ್ ಫೋನ್ ಗಳ ಟಾರ್ಚ್ ಆನ್ ಮಾಡಿ ಅಪ್ಪುವಿಗೆ ನಮನ ಸಲ್ಲಿಸಿದರು. ಅಲ್ಲದೇ ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಅಪ್ಪು ಅಪ್ಪು ಎಂಬ ಕೂಗು ಅನುರಣಿಸಿತು.
ಶಿವಣ್ಣ ಅಂದರೆ ಕೇಳಬೇಕೆ? ಅದರಲ್ಲೂ ಡಾ. ಶಿವರಾಜ್ ಕುಮಾರ್ ಡಾನ್ಸ್ಗೆ ಎಲ್ಲರೂ ಫಿದಾ ಆಗೇ ಆಗುತ್ತಾರೆ. ಈ ವಯಸ್ಸಲ್ಲೂ ಡಾ.ಶಿವರಾಜ್ ಕುಮಾರ್ (Dr Shivaraj Kumar Dance) ಯುವಕರೂ ನಾಚುವಂತೆ ಮಾಡುವ ಡಾನ್ಸ್ ಸಾಮಾಜಿಕ ಜಾಲತಾಣಗಳಲ್ಲು ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಶಿವರಾಜ್ ಕುಮಾರ್ ಬೈರಾಗಿ ಸಿನಿಮಾದ (Bairagee Movie) ಪ್ರಿ ಲಾಂಚ್ ಇವೆಂಟ್ನಲ್ಲಿ ಡಾ.ಶಿವರಾಜ್ ಕುಮಾರ್ ಹುಲಿ ವೇಷಧಾರಿಗಳೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ. ಈಮೂಲಕ ಅಭಿಮಾನಿಗಳ ಹೃದಯದ ಲಬ್ ಡಬ್ ಹೆಚ್ಚಿಸಿದ್ದಾರೆ! ವೇದಿಕೆಯಲ್ಲಿ ಡಾಲಿ ಧನಂಜಯ, ಪೃಥ್ವಿ ಅಂಬರ್ ಹಾಗೂ ಹುಲಿ ವೇಷಧಾರಿಗಳೊಂದಿಗೆ ಶಿವಣ್ಣ ಕುಣಿದು ಕುಪ್ಪಳಿಸಿದ್ದಾರೆ.
ಜುಲೈ 1ರಂದು ಬಿಡುಗಡೆಯಾಗುತ್ತಿರುವ ಬೈರಾಗಿ ಸಿನಿಮಾದ ಪ್ರೀ ಲಾಂಚ್ ಇವೆಂಟ್ ಇಂದು (ಜೂನ್ 25) ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದಿತ್ತು.
ಡಾಲಿ ಧನಂಜಯ, ಪೃಥ್ವಿ ಅಂಬರ್ ವೇದಿಕೆಯಲ್ಲಿದ್ರು! ಬೈರಾಗಿ ಸಿನಿಮಾದ ನಾಯಕ ನಟ ಡಾ.ಶಿವರಾಜ್ ಕುಮಾರ್, ಡಾಲಿ ಧನಂಜಯ, ಪೃಥ್ವಿ ಅಂಬರ್, ನಿರ್ದೇಶಕ ವಿಜಯ್ ಮಿಲ್ಟನ್, ನಿರ್ಮಾಪಕ ಕೃಷ್ಣ ಸಾರ್ಥಕ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶಿವಣ್ಣ ಅಭಿಮಾನಿಗಳು ಕಾರ್ಯಕ್ರಮಕ್ಕೆ ಹರಿದು ಬಂದಿದ್ದರು. ವೇದಿಕೆಯಲ್ಲಿ ಡಾಲಿ ಧನಂಜಯ, ಪೃಥ್ವಿ ಅಂಬರ್ ಹಾಗೂ ಹುಲಿ ವೇಷಧಾರಿಗಳೊಂದಿಗೆ ಶಿವಣ್ಣ ಕುಣಿದು ಕುಪ್ಪಳಿಸಿದ್ದಾರೆ.
ಗಾಜನೂರು ನಮ್ಮ ತವರೂರು ಇದೇ ಸಂದರ್ಭದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಡಾ. ಶಿವರಾಜ್ ಕುಮಾರ್, ಗಾಜನೂರು ನಮ್ಮ ತವರೂರು. ಚಾಮರಾಜನಗರಕ್ಕೂ ನಮಗೂ ನಂಟಿದೆ. ನಮ್ಮ ಜನ ಅದ್ದೂರಿ ಸ್ವಾಗತ ಮಾಡಿದ್ದಾರೆ ಎಂದು ಡಾ.ಶಿವರಾಜ್ ಕುಮಾರ್ ಸಂತಸ ವ್ಯಕ್ತಪಡಿಸಿದರು. ಚಿತ್ರದ ಯಶಸ್ಸು ನಿರ್ದೇಶಕ ವಿಜಯ್ ಮಿಲ್ಟನ್ ಅವರಿಗೆ ಹೋಗುತ್ತೆ. ಪ್ರತಿಯೊಂದು ಪಾತ್ರವನ್ನು ಚೆನ್ನಾಗಿ ಕ್ರಿಯೇಟ್ ಮಾಡಿದ್ದಾರೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಡಾಲಿ...ಡಾಲಿ...ಎಂದು ಕೂಗಿದ ಅಭಿಮಾನಿಗಳು! ಬಡವ ರಾಸ್ಕಲ್ ಚಿತ್ರದ ಹಾಡಿಗೆ ಡಾಲಿ ಧನಂಜಯ್ ಮಾಡಿದ ನೃತ್ಯಕ್ಕೆ ಅಭಿಮಾನಿಗಳು ಹುಚ್ಚೆದ್ದು ಕೇಕೆ ಹಾಕಿದರು. ಡಾಲಿ...ಡಾಲಿ...ಎಂದು ಪ್ರೇಕ್ಷಕರು ಹುಚ್ಚೆದ್ದು ಕುಣಿದರು. ಇದೇ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಪ್ರೋತ್ಸಾಹ ನೆನೆದ ಡಾಲಿ ಧನಂಜಯ, ಎಷ್ಟು ಪ್ರೀತಿಸಬಹುದು ಎಷ್ಟು ಸಿಂಪಲ್ ಆಗಿ ಬದುಕುಬಹುದು ಎಂಬುದಕ್ಕೆ ಶಿವಣ್ಣ ಉದಾಹರಣೆ. ನಮ್ಮೂರಿಗೆ ಹೋಗ್ತಿದ್ದೀವಿ ಎಂದು ಶಿವಣ್ಣ ನಮಗೆ ಹೊಸಬಟ್ಟೆ ಕೊಡ್ಸಿದ್ದಾರೆ ಎಂದು ಶಿವಣ್ಣನ ಗುಣಗಾನ ಮಾಡಿದರು.
ಅಪ್ಪು ಯಾವಾಗಲು ನಮ್ಮ ಜೊತೆ ಇರ್ತಾರೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗೀತಾ ಶಿವರಾಜ್ ಕುಮಾರ್, ಬೈರಾಗಿ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಅಪ್ಪು ಯಾವಾಗಲು ನಮ್ಮ ಜೊತೆ ಇರ್ತಾರೆ ಎಂದು ಪುನೀತ್ ರಾಜ್ಕುಮಾರ್ ಅವರನ್ನು ನೆನಸಿಕೊಂಡು ಭಾವುಕರಾದರು.
ಅಪ್ಪು ಅಪ್ಪು ಎಂಬ ಕೂಗು ಅನುರಣನ ಪುನೀತ್ ರಾಜ್ಕುಮಾರ್ ಹೆಸರು ಹೇಳುತ್ತಿದ್ದಂತೆ ಅಭಿಮಾನಿಗಳು ಸಾವಿರಾರು ಮೊಬೈಲ್ ಫೋನ್ ಗಳ ಟಾರ್ಚ್ ಆನ್ ಮಾಡಿ ಅಪ್ಪುವಿಗೆ ನಮನ ಸಲ್ಲಿಸಿದರು. ಅಲ್ಲದೇ ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಅಪ್ಪು ಅಪ್ಪು ಎಂಬ ಕೂಗು ಅನುರಣಿಸಿತು. ಈ ಮೂಲಕ ಅಭಿಮಾನಿಗಳ ಪರಮಾತ್ಮ ಪುನೀತ್ ರಾಜ್ಕುಮಾರ್ ಅವರಿಗೆ ಬೈರಾಗಿ ಸಿನಿಮಾ ಪ್ರಿ ಲಾಂಚಿಂಗ್ ಇವೆಂಟ್ನಲ್ಲಿ ನಮನ ಸಲ್ಲಿಸಲಾಯಿತು.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ