Puneeth Rajkumar: ಇಂದು ಕರುನಾಡಿನ ದೇವರ ಹುಟ್ಟುಹಬ್ಬ.. 4 ದಿನದ ಹಸುಗೂಸಿಗೆ ಪುನೀತ್​ ಹೆಸರಿಟ್ಟ ಶಿವಣ್ಣ!

ಪುನೀತ್​ ಅವರ ಅಭಿಮಾನಿಯೋರ್ವರು 'ಡ್ಯಾನ್ಸಿಂಗ್ ಚಾಂಪಿಯನ್‌ಶಿಪ್‌ ಶೋ'ನಲ್ಲಿ 4 ದಿನದ ಮಗುವನ್ನು ಪಾಲಕರು ಕರೆದುಕೊಂಡು ಬಂದಿದ್ದರು. ಆ ವೇಳೆ ಆ ಮಗುವಿನ ಮಾತನಾಡಿದ ತಾಯಿ, ‘ನನ್ನ ಮಗುವಿನಲ್ಲಿ ಅಪ್ಪು ಸರ್‌ ಕಾಣುತ್ತೇನೆ‘ ಎಂದು ಹೇಳಿದ್ದಾರೆ. ‘ಗಂಡು ಮಗು ಅಂತೆ, ಇದನ್ನೇ ಅಪ್ಪು ಅಂತ ಅಂದುಕೊಳ್ಳೋಣ’ ಎಂದು ಮಗುವಿಗೆ ಡಾ ಶಿವರಾಜ್‌ಕುಮಾರ್ ಅವರು ಮಗುವಿಗೆ ನಾಮಕರಣ ಮಾಡಿದ್ದಾರೆ.

ಪುನೀತ್​ ರಾಜ್​​ಕುಮಾರ್​, ಶಿವಣ್ಣ

ಪುನೀತ್​ ರಾಜ್​​ಕುಮಾರ್​, ಶಿವಣ್ಣ

  • Share this:
ಬಾಲ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಸೈ ಎನಿಸಿಕೊಂಡಿದ್ದ ಕನ್ನಡಿಗರ ಪ್ರೀತಿಯ ಅಪ್ಪು(Appu) ಮೊದಲ ಚಿತ್ರ ಪ್ರೇಮದ ಕಾಣಿಕೆ (Premada Kanike). 1976 ರಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಶಿಶುವಾಗಿದ್ದಾಗಲೇ ಬಣ್ಣದ ಲೋಕದಲ್ಲಿ ಅಪ್ಪು ಕಾಣಿಸಿಕೊಂಡಿದ್ದರು.ಇಂದು ಪುನೀತ್ ಜನ್ಮದಿನ (Puneeth Birthday). ಅವರ ಅನುಪಸ್ಥಿತಿಯ ನಡುವೆಯೂ ಹಲವು ಸಾಮಾಜಿಕ ಕೆಲಸಗಳ ಮೂಲಕ ಅಭಿಮಾನಿಗಳು ನೆಚ್ಚಿನ ನಟನ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಪುನೀತ್​​ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿ ಅವರ ಅಭಿಮಾನಿಗಳು ಪುನೀತರಾಗುತ್ತುದ್ದಾರೆ. ಜೇಮ್ಸ್​(James) ಕೂಡ ರಿಲೀಸ್ ಆಗಿದ್ದು, ಅಪ್ಪು ಅಭಿಮಾನಿಗಳಿಗೆ ಗಿಫ್ಟ್​ ನೀಡಿರುವಂತೆಯೆ. ಎಲ್ಲೆಲ್ಲೂ ಜೇಮ್ಸ್​ ಜಾತ್ರೆ ನಡೆಯುತ್ತಿದೆ. ನಿನ್ನೆ ಸ್ಯಾಂಡಲ್‌ವುಡ್ ನಟಿ ತಾರಾ(Tara) ಪುನೀತ್ ಅವರ ಹೆಸರಲ್ಲಿ ಐದು ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಇಂತದ್ದೊಂದು ಸಮಾರಂಭಕ್ಕೆ ರಾಜ್ ಕುಟುಂಬದವರು ಸಾಕ್ಷಿಯಾಗಿದ್ದರು. ಇದೀಗ ಶಿವಣ್ಣ(Shivanna) 4 ದಿನದ ಹಸುಗೂಸು ಪುನೀತ್​ ಎಂದು ನಾಮಕರಣ ಮಾಡಿದ್ದಾರೆ. 

4 ದಿನದ ಹಸುಗೂಸೆಗೆ ಪುನೀತ್​ ಎಂದು ಹೆಸರಿಟ್ಟ ಶಿವಣ್ಣ!

4 ದಿನದ ಹಸುಗೂಸಿಗೆ ಪುನೀತ್ ಎಂದು ಶಿವರಾಜ್​ಕುಮಾರ್​ ಅವರು ನಾಮಕರಣ ಮಾಡಿದ್ದಾರೆ. ಪುನೀತ್​ ಅವರ ಅಭಿಮಾನಿಯೋರ್ವರು 'ಡ್ಯಾನ್ಸಿಂಗ್ ಚಾಂಪಿಯನ್‌ಶಿಪ್‌ ಶೋ'ನಲ್ಲಿ 4 ದಿನದ ಮಗುವನ್ನು ಪಾಲಕರು ಕರೆದುಕೊಂಡು ಬಂದಿದ್ದರು. ಆ ವೇಳೆ ಆ ಮಗುವಿನ ಮಾತನಾಡಿದ ತಾಯಿ, ‘ನನ್ನ ಮಗುವಿನಲ್ಲಿ ಅಪ್ಪು ಸರ್‌ ಕಾಣುತ್ತೇನೆ‘ ಎಂದು ಹೇಳಿದ್ದಾರೆ. ‘ಗಂಡು ಮಗು ಅಂತೆ, ಇದನ್ನೇ ಅಪ್ಪು ಅಂತ ಅಂದುಕೊಳ್ಳೋಣ’ ಎಂದು ಮಗುವಿಗೆ ಡಾ ಶಿವರಾಜ್‌ಕುಮಾರ್ ಅವರು ಮಗುವಿಗೆ ನಾಮಕರಣ ಮಾಡಿದ್ದಾರೆ.

ಭಾವುಕರಾದ ವಿಜಯ್​, ಮೇಘನಾ ರಾಜ್​!

ವಿಜಯ್ ರಾಘವೇಂದ್ರ, ಮೇಘನಾ ರಾಜ್, ಮಯೂರಿ ಕೂಡ ‘ಡ್ಯಾನ್ಸಿಂಗ್ ಚಾಂಪಿಯನ್‌ಶಿಪ್‌ ಶೋ’ನಲ್ಲಿ ತೀರ್ಪುಗಾರರಾಗಿದ್ದು, ಅವರು ಕೂಡ ಈ ಗಳಿಗೆಯನ್ನು ಕಂಡು ಭಾವುಕರಾಗಿದ್ದಾರೆ.ಕೆಲ ದಿನಗಳ ಹಿಂದೆ ಶಿವರಾಜ್‌ಕುಮಾರ್ ಅವರು ಡ್ಯಾನ್ಸಿಂಗ್ ಚಾಂಪಿಯನ್‌ಶಿಪ್‌ ಸೆಟ್‌ನಲ್ಲಿ ಕಾಣಿಸಿಕೊಂಡ ಫೋಟೋವನ್ನು ಕಲರ್ಸ್ ಕನ್ನಡ ವಾಹಿನಿ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ರಿಲೀಸ್ ಮಾಡಿದ್ದರು. ಕರುನಾಡ ಚಕ್ರವರ್ತಿ ಈ ಸೆಟ್‌ಗೆ ಆಗಮಿಸಿದ್ದು, ಪರಮೇಶ್ವರ್ ಗುಂಡ್ಕಲ್ ತಂಡ ಅವರನ್ನು ಭರ್ಜರಿಯಾಗಿ ಸ್ವಾಗತಿಸಿದೆ.

ಇದನ್ನೂ ಓದಿ: ತಮ್ಮನ ಕೊನೆ ಸಿನಿಮಾದಲ್ಲಿ ಸೋಲ್ಜರ್​ ಪಾತ್ರದಲ್ಲಿ ಶಿವಣ್ಣ! ಅಪ್ಪುಗೆ ಗುರು ಆದ ರಾಘವೇಂದ್ರ ರಾಜ್​ಕುಮಾರ್​

ಐವರು ಮಕ್ಕಳಿಗೆ ಪುನೀತ್​ ಹೆಸರು ನಾಮಕರಣ!

ಸ್ಯಾಂಡಲ್‌ವುಡ್ ನಟಿ ತಾರಾ ಪುನೀತ್ ಅವರ ಹೆಸರಲ್ಲಿ ಐದು ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಇಂತದ್ದೊಂದು ಸಮಾರಂಭಕ್ಕೆ ರಾಜ್ ಕುಟುಂಬದವರು ಸಾಕ್ಷಿಯಾಗಿದ್ದಾರೆ. ನಗರದ ಕಾಕ್ಸ್ ಟೌನ್‌ನಲ್ಲಿ ಜನಿಸಿರುವ ಐದು ಮಕ್ಕಳಿಗೆ ಪುನೀತ್ ರಾಜ್‌ ಕುಮಾರ್ ಎಂದು ನಾಮಕರಣ ಮಾಡಿದ್ದಾರೆ. ಪುನೀತ್ ಹೆಸರನ್ನು ಮಕ್ಕಳಿಗೆ ಇಡೋದು ಈ ಮಕ್ಕಳ ಪೋಷಕರ ಕನಸು ಕೂಡ ಆಗಿತ್ತು. ಅದರಂತೆ ನಟಿ ತಾರ ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಪೋಷಕರ ಸಮ್ಮುಖದಲ್ಲಿ ಐವರು ಮಕ್ಕಳ ಕಿವಿಯಲ್ಲಿ ಪುನೀತ್ ರಾಜ್‌ಕುಮಾರ್ ಎಂದು ಹೆಸರು ಹೇಳುವ ಮೂಲಕ ನಾಮಕರಣ ಮಾಡಿದ್ದಾರೆ.

ಇದನ್ನೂ ಓದಿ: `ಜೇಮ್ಸ್​’ ರಿಲೀಸ್​ ದಿನವೇ ಗಂಧದ ಗುಡಿಯ ದರ್ಶನ! ಅಪ್ಪು ಲುಕ್​ ಹೇಗಿದೆ ನೋಡಿ..

ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡ ಶಿವಣ್ಣ!

ಜೇಮ್ಸ್​ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಸೈನಿಕನ ಪಾತ್ರದಲ್ಲಿ ಕಾಣಸಿಕೊಂಡಿರವುದು ಎಲ್ಲರಿಗೂ ಗೊತ್ತಿತ್ತು. ಆದರೆ, ಶಿವಣ್ಣ ಕೂಡ ಈ ಸಿನಿಮಾದಲ್ಲಿ ಸೈನಿಕನ ಪಾತ್ರದಲ್ಲಿ ನಟಿಸಿರುವುದು ಯಾರಿಗೂ ತಿಳಿದಿರಲಿಲ್ಲ. ಹೌದು, ತಮ್ಮನ ಸಿನಿಮಾದಲ್ಲಿ ಶಿವಣ್ಣ, ರಾಘಣ್ಣ ನಟಿಸಿರುವುದು ಎಲ್ಲರಿಗೂ ಗೊತ್ತೆ ಇತ್ತು. ಆದರೆ, ಈಗ ಶಿವಣ್ಣ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ. ಇವರನ್ನು ನೋಡಿಯೇ ಸಿನಿಮಾದಲ್ಲಿ ಅಪ್ಪು ಸೈನಿಕನಾಗಬೇಕು ಎಂದು ಅಂದುಕೊಳ್ಳುತ್ತಾರೆ. ಶಿವಣ್ಣ ಪಾತ್ರವನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಅಪ್ಪು ಸೈನಿಕನಾಗುತ್ತಾರೆ.
Published by:Vasudeva M
First published: