Shivarajkumar: `ಶಕ್ತಿಧಾಮ‘ದ ಮಕ್ಕಳಿಗಾಗಿ ಡ್ರೈವರ್​ ಆದ ಶಿವಣ್ಣ, ಯಾರೇ ಬರಲಿ-ಯಾರೇ ಇರಲಿ ನಿಮ್ಮ ರೇಂಜಿಗೆ ಯಾರಿಲ್ಲ!

ಗಣರಾಜ್ಯೋತ್ಸವ ಆಚರಣೆಗೆ ಮುನ್ನ ಶಿವರಾಜ್ ಕುಮಾರ್ ಅವರು ಶಕ್ತಿಧಾಮದ ಮಕ್ಕಳನ್ನು ಜಾಲಿ ರೈಡ್‌ಗೆ ಕರೆದುಕೊಂಡು ಹೋಗಿದ್ದಾರೆ. ಶಿವಣ್ಣ ಅವರೇ ಶಕ್ತಿಧಾಮದ ವ್ಯಾನ್‌ ಅನ್ನು ಡ್ರೈವ್ ಮಾಡಿಕೊಂಡು ಮಕ್ಕಳನ್ನೆಲ್ಲ ಕರೆದುಕೊಂಡು ಊರು ಸುತ್ತಿಸಿದ್ದಾರೆ.

ಬಸ್​ ಓಡಿಸಿದ ಶಿವಣ್ಣ

ಬಸ್​ ಓಡಿಸಿದ ಶಿವಣ್ಣ

  • Share this:
ಶಿವಣ್ಣ(Shivanna) ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ತಮ್ಮ ಸುತ್ತ ಇರುವವರನ್ನು ಯಾವಗಲೂ ನಗಿಸುತ್ತಾ, ಬೇರೆಯವರಿಗೆ ಮಾದರಿಯಾಗಿದ್ದಾರೆ ಶಿವಣ್ಣ. ಹ್ಯಾಟ್ರಿಕ್​ ಹೀರೋ(Hattrick Hero) ಇಂದ ಸೆಂಚೂರಿ ಸ್ಟಾರ್ ಪಯಣದಲ್ಲಿ ಶಿವಣ್ಣ ಸಾಕಷ್ಟು ಏಳು ಬೀಳುಗಳನ್ನು ನೋಡಿದ್ದಾರೆ. ನಮ್ಮ ಸ್ಯಾಂಡಲ್​ವುಡ್​(Sandalwood)ಗೆ ಅವರೇ ಲೀಡರ್(Leader)​. ಅಭಿಮಾನಿಗಳನ್ನು ಅಣ್ಣಾವ್ರು ದೇವರು ಎಂದು ಕರೆದಿದ್ದರು. ಅದನ್ನೇ ಶಿವಣ್ಣ ಕೂಡ ಫಾಲೋ ಮಾಡಿಕೊಂಡು ಬಂದಿದ್ದಾರೆ. ಇನ್ನೂ ದೊಡ್ಮನೆ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ತಾವು ಮಾಡುತ್ತಿರುವ ಸಮಾಜ ಸೇವೆ ಕೆಲಸಗಳನ್ನು ಎಂದಿಗೂ ಯಾರ ಬಳಿಯೂ ಒಬ್ಬರು ಹೇಳಿಕೊಂಡಿಲ್ಲ. ಇನ್ನೂ ಪವರ್​​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರು ಶಕ್ತಿಧಾಮ(Shakthidhama)ದ ಮಕ್ಕಳ ಜವಾಬ್ದಾರಿ ಹೊತ್ತಿದರು. ಪಾರ್ವತಮ್ಮ ಅವರ ಬಳಿಕ ಪುನೀತ್​ ಶಕ್ತಿ ಧಾಮ ನೋಡಿಕೊಳ್ಳುತ್ತಿದ್ದರು. ಪುನೀತ್(Puneeth) ಅಗಲಿಕೆಯ ಬಳಿಕ ಶಕ್ತಿಧಾಮದ ವಿಚಾರ ಹೆಚ್ಚು ಪ್ರಚಾರಕ್ಕೆ ಬಂತು. ಆದರೆ ಅದಕ್ಕೆ ಮುನ್ನಾ ಪ್ರಚಾರವೇ ಬಯಸದೆ ದೊಡ್ಮನೆ ಕುಟುಂಬ ಸೇವೆ ಮಾಡುತ್ತಲೇ ಇತ್ತು. ಪುನೀತ್ ಅಗಲಿಕೆಯ ಬಳಿಕ ಶಕ್ತಿಧಾಮದೊಟ್ಟಿಗೆ ಶಿವಣ್ಣ ಹೆಚ್ಚಿನ ಆಸಕ್ತಿವಹಿಸಿದ್ದಾರೆ. ನಿನ್ನೆ ಶಕ್ತಿಧಾಮದ ಮಕ್ಕಳೊಂದಿಗೆ ಶಿವರಾಜ್ ಕುಮಾರ್ ಗಣರಾಜ್ಯೋತ್ಸವ ಆಚರಿಸಿದ್ದಾರೆ. ಆದರೆ ಆಚರಣೆಗೆ ಮುನ್ನ ಮಕ್ಕಳೊಂದಿಗೆ ಶಿವಣ್ಣ ಆ ಮಕ್ಕಳ ಜೊತೆ ನಡೆದುಕೊಂಡಿರುವ ರೀತಿ ನೋಡಿದರೆ ಸಂತೋಷವಾಗುತ್ತೆ. ಅದೇನು ಅಂತೀರಾ ಮುಂದೆ ನೋಡಿ..!

ಮಕ್ಕಳಿಗಾಗಿ ಡ್ರೈವರ್​ ಆದ ಶಿವರಾಜ್​ಕುಮಾರ್​!

ಗಣರಾಜ್ಯೋತ್ಸವ ಆಚರಣೆಗೆ ಮುನ್ನ ಶಿವರಾಜ್ ಕುಮಾರ್ ಅವರು ಶಕ್ತಿಧಾಮದ ಮಕ್ಕಳನ್ನು ಜಾಲಿ ರೈಡ್‌ಗೆ ಕರೆದುಕೊಂಡು ಹೋಗಿದ್ದಾರೆ. ಶಿವಣ್ಣ ಅವರೇ ಶಕ್ತಿಧಾಮದ ವ್ಯಾನ್‌ ಅನ್ನು ಡ್ರೈವ್ ಮಾಡಿಕೊಂಡು ಮಕ್ಕಳನ್ನೆಲ್ಲ ಕರೆದುಕೊಂಡು ಊರು ಸುತ್ತಿಸಿದ್ದಾರೆ. ಶಿವಣ್ಣ ಅವರ ಜೊತೆ ರೌಂಡ್ ಹೋದ ಮಕ್ಕಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಇದನ್ನು ನೋಡಿದ ಶಿವಣ್ಣ ಅಭಿಮಾನಿಗಳು ಯಾರೇ ಬರಲಿ.. ಯಾರೇ ಇರಲಿ .. ನಿಮ್ಮ ರೇಂಜಿಗೆ ಯಾರಿಲ್ಲ ಎಂದು ಕಮೆಂಟ್​ ಮಾಡುತ್ತಿದ್ದಾರೆ. ಶಿವಣ್ಣ ಅವರ ಸರಳತೆಗೆ ಇದಕ್ಕಿಂತ ಮತ್ತೊಂದು ಸಾಕ್ಷಿ ಬೇಕಿಲ್ಲ ಅಂತಿದ್ದಾರೆ.

ಇದನ್ನು ಓದಿ : ಪ್ಯಾನ್​ ಇಂಡಿಯಾ ಸಿನಿಮಾ ಅಖಾಡಕ್ಕೆ ಶಿವಣ್ಣ ಎಂಟ್ರಿ.. ರೆಟ್ರೋ ಗೆಟಪ್​ನಲ್ಲಿ ಮಿಂಚಲಿದ್ದಾರೆ ಸೆಂಚೂರಿ ಸ್ಟಾರ್​!

ಶಕ್ತಿಧಾಮದಲ್ಲಿ ಧ್ವಜಾರೋಹಣ ಮಾಡಿದ ಶಿವಣ್ಣ!

ಮೈಸೂರಿನ ಶಕ್ತಿಧಾಮದ ಮಕ್ಕಳೊಂದಿಗೆ ಶಿವರಾಜ್‌ಕುಮಾರ್ ಹಾಗೂ ಪತ್ನಿ ಗೀತಾ ಗಣರಾಜ್ಯೋತ್ಸವವನ್ನು ಆಚರಿಸಿದ್ದಾರೆ. ಶಕ್ತಿಧಾಮದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಗಣರಾಜ್ಯೋತ್ಸವವನ್ನು ಆಚರಣೆ ಮಾಡಿ ಸಂಭ್ರಮಿಸಿದ್ದಾರೆ. ಇದೇ ವೇಳೆ ಶಕ್ತಿಧಾಮದ ಮಕ್ಕಳಿಗೆ ಶಿವಣ್ಣ ಸಿಹಿ ಹಂಚಿದ್ದಾರೆ. ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಶಿವಣ್ಣ ತಮ್ಮ ಪತ್ನಿ ಗೀತಾ ಅವರೊಂದಿಗೆ ಶಕ್ತಿಧಾಮಕ್ಕೆ ಭೇಟಿ, ಅಲ್ಲಿನ ಕುಂದುಕೊರತೆಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಇದನ್ನು ಓದಿ: `ಶಕ್ತಿಧಾಮ’ದ ಮಕ್ಕಳೊಂದಿಗೆ ಗಣರಾಜ್ಯೋತ್ಸವ ಆಚರಿಸಿದ ಶಿವಣ್ಣ.. ಸರಳತೆಯ ಸಾಮ್ರಾಟ್​ ನೀವು!

ಈ ಹಿಂದೆ ಮಕ್ಕಳ ಜೊತೆ ಆಡಿದ್ದ ಖೋ ಖೋ ವಿಡಿಯೋ ವೈರಲ್​!

ಹೌದು, ಇದೇ ಮಕ್ಕಳೊಂದಿಗೆ ಪುಟ್ಟ ಮಗುವಿನಂತೆ ಶಿವಣ್ಣ ಖೋ ಖೋ ಆಡುವ ವಿಡಿಯೋ ವೈರಲ್​ ಆಗಿತ್ತು. ಶಿವರಾಜ್‌ಕುಮಾರ್​ ಸಮಯ ಸಿಕ್ಕಾಗೆಲ್ಲ ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡುತ್ತಾರೆ. ಅಲ್ಲಿನ ಮಕ್ಕಳೊಂದಿಗೆ ಬೆರೆಯುತ್ತಾರೆ. ಕೆಲವು ದಿನಗಳ ಹಿಂದಷ್ಟೇ ಶಿವರಾಜ್‌ಕುಮಾರ್ ಶಕ್ತಿಧಾಮಕ್ಕೆ ಹೋಗಿದ್ದರು. ಆ ವೇಳೆ ಶಕ್ತಿಧಾಮದ ಹೆಣ್ಣು ಮಕ್ಕಳೊಂದಿಗೆ ಖೋ ಖೋ ಆಟ ಆಡಿದ್ದರು. ಈ ವಿಡಿಯೋ ಕಂಡ ಅವರ ಅಭಿಮಾನಿಗಳ ಶಿವಣ್ಣ ಅವರ ಸರಳತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
Published by:Vasudeva M
First published: