Shivanna: ಸೆಂಚುರಿ ಸ್ಟಾರ್ ಮೇಲೆ ಕಣ್ಣಿಟ್ಟ ಹೊಂಬಾಳೆ ಫಿಲ್ಮ್ಸ್​, ಸಂತೋಷ್​ ಆನಂದ್​ರಾಮ್​ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ!

ಹೊಂಬಾಳೆ ಫಿಲ್ಮ್ಸ್​ನಲ್ಲಿ ಶಿವಣ್ಣನ ಸಿನಿಮಾ ಅರಳುವುದಕ್ಕೆ ಕಾಲ ಕೂಡಿ ಬಂದಿದೆ. ವಿಶೇಷ ಅಂದ್ರೆ ಈ ಚಿತ್ರವನ್ನು ಸಂತೋಷ್​ ಆನಂದ್​ರಾಮ್ ನಿರ್ದೇಶನ ಮಾಡಲಿದ್ದಾರೆ ಅನ್ನೋ ಸಮಾಚಾರ ಹೊರಬಿದ್ದಿದೆ.

ಸಂತೋಷ್​ ಆನಂದ್​ರಾಮ್​, ಶಿವಣ್ಣ

ಸಂತೋಷ್​ ಆನಂದ್​ರಾಮ್​, ಶಿವಣ್ಣ

  • Share this:
ಹ್ಯಾಟ್ರಿಕ್ ಹೀರೋ(Hattrick Hero) ಶಿವರಾಜ್ ಕುಮಾರ್(Shivarajkumar) ಫ್ಯಾನ್ಸ್​ಗಳಿಗೆ ಶೀಘ್ರದಲ್ಲೆ ಸಿಹಿ ಸುದ್ದಿಯೊಂದು ಸಿಗಲಿದೆ. ಇತ್ತೀಚಿಗಷ್ಟೇ ಶಿವಣ್ಣ ರೆಟ್ರೋ ಲುಕ್​​ನಲ್ಲಿ ಕಾಣಿಸುವ ಪ್ಯಾನ್ ಇಂಡಿಯಾ(Pan India) ಸಿನಿಮಾ ಬಗ್ಗೆ ಅಪ್ಡೇಟ್‌ ಸಿಕ್ಕಿತ್ತು. ಆ ಸಂಭ್ರಮದ ಅಲೆಯಲ್ಲೆ ತೇಲುತ್ತಿದ್ದ ಶಿವಣ್ಣನ  ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸಮಾಚಾರ ಸಿಗಲಿದೆ. ವರ್ಷದಲ್ಲಿ ನಾಲ್ಕೈದು ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಾರೆ. ಆದರೆ ಕೊರೋನಾ(Corona) ಕಿರಿಕ್ ನಿಂದ ಕಳೆದ ಎರಡು ವರ್ಷಗಳಿಂದ ಸಿನಿಮಾ ಸಂಖ್ಯೆ ಗಳು ಕಮ್ಮಿಯಾಗಿದ್ದವು. ಅದ್ರೆ ಈಗ ಟಗರು ಶಿವ ಗುಟುರು ಹಾಕಿ ನಿಂತಿದ್ದು ಬ್ಯಾಕ್ ಟು ಬ್ಯಾಕ್(Back to Back) ಸಿನಿಮಾಗಳಿಗೆ ಗ್ರೀನ್ ಸಿಗ್ನಲ್  ಕೊಡ್ತಿದ್ದಾರೆ. ರಾಜಕುಮಾರ, ಯುವರತ್ನ ಗಳಂತ ಸೂಪರ್ ಹಿಟ್(Super Hit) ಸಿನಿಮಾಗಳನ್ನು ಕೊಟ್ಟಹೊಂಬಾಳೆ ಫಿಲ್ಮ್ಸ್(Hombale Films)​ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್(Santhosh Ananddram) ಶಿವಣ್ಣನ ಸಿನಿಮಾ ಮಾಡಲಿಲ್ಲವಾ ಅನ್ನೋ ಕೊರಗು ಶಿವ ಸೈನ್ಯಕ್ಕಿತ್ತು. ಈಗ ಈ ಕೊರಗು ದೂರ ಆಗೋ ಸಯಮ ಬಂದಿದ್ದು, ಹೊಂಬಾಳೆ ಫಿಲ್ಮ್ಸ್​ನಲ್ಲಿ ಶಿವಣ್ಣನ ಸಿನಿಮಾ ಅರಳುವುದಕ್ಕೆ ಕಾಲ ಕೂಡಿ ಬಂದಿದೆ. ವಿಶೇಷ ಅಂದ್ರೆ ಈ ಚಿತ್ರವನ್ನು ಸಂತೋಷ್​ ಆನಂದ್​ರಾಮ್ ನಿರ್ದೇಶನ ಮಾಡಲಿದ್ದಾರೆ ಅನ್ನೋ ಸಮಾಚಾರ ಹೊರಬಿದ್ದಿದೆ.

ಹೊಂಬಾಳೆ ಬ್ಯಾನರ್​ ಅಡಿಯಲ್ಲಿ ಶಿವಣ್ಣನ ಸಿನಿಮಾ!

ಶಿವರಾಜ್ ಕುಮಾರ್ ಅಭಿನಯದ 126ನೇ ಚಿತ್ರ ಸೆಟ್ಟೇರುವುದಕ್ಕೂ ಮುನ್ನವೇ  ಮತ್ತೊಂದು ಬಿಗ್ ಚಿತ್ರಕ್ಕೆ ಸೆಂಚುರಿ ಸ್ಟಾರ್ ಸಜ್ಜಾಗಿದ್ದಾರೆ.ಈಗಾಗಲೇ ಶಿವಣ್ಣನ ಜೊತೆ ಹೊಂಬಾಳೆ ಮಾಲೀಕ ವಿಜಯ್ ಕಿರಗಂದೂರು ಮಾತುಕತೆ ನಡಸಿದ್ದಾರೆ. ಅಲ್ಲದೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಶಿವಣ್ಣನಿಗೆ ಕಥೆ ರೆಡಿಮಾಡಿದ್ದಾರೆ ಅನ್ನೋ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಬಲ್ಲ ಮೂಲಗಳಿಂದ ಲಭ್ಯವಾಗಿದೆ.ಅದ್ರೆ ಈ ಚಿತ್ರ ಇನ್ನು ಮಾತುಕತೆ ಹಂತದಲ್ಲಿ ಇದೆ. ಕಾರಣ ಶಿವರಾಜ್ ಕುಮಾರ್ ಸದ್ಯ ಮೂರು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.

ಇದನ್ನು ಓದಿ: ಪ್ಯಾನ್​ ಇಂಡಿಯಾ ಸಿನಿಮಾ ಅಖಾಡಕ್ಕೆ ಶಿವಣ್ಣ ಎಂಟ್ರಿ.. ರೆಟ್ರೋ ಗೆಟಪ್​ನಲ್ಲಿ ಮಿಂಚಲಿದ್ದಾರೆ ಸೆಂಚೂರಿ ಸ್ಟಾರ್​!

ಸಂತೋಷ್​ ಆನಂದ್​ರಾಮ್​ ನಿರ್ದೇಶನದ ಸಿನಿಮಾ!

ಅದೇ ರೀತಿ ಸಂತೋಷ್ ಆನಂದ್ ರಾಮ್  ರಾಘವೇಂದ್ರ ಸ್ಟೋರ್ ಚಿತ್ರದಲ್ಲಿ ತಲೀನರಾಗಿದ್ದು, ಆ ಸಿನಿಮಾ ಮುಗಿಯುತ್ತಿದ್ದಂತೆ ಯುವರಾಜ್ ಕುಮಾರ್ ಜೊತೆ ಸಿನಿಮಾ ಮಾಡುತ್ತಾರೆ ಅನ್ನುವ ಸುದ್ದಿ ಇದೆ. ಜೊತೆಗೆ ಹೊಂಬಾಳೆ ಟೀಂ ಸದ್ಯ ಕೆಜಿಎಫ್ 2ಚಿತ್ರದ ಪ್ರಮೋಶನ್ ಕಡೆ ಗಮನ ಹರಿಸಿದ್ದಾರೆ. ಹಾಗಾಗಿ ಶಿವಣ್ಣನ ಈ ಚಿತ್ರ ಈ ವರ್ಷದ ಮಧ್ಯದಲ್ಲಿ ಅನೌನ್ಸ್ ಆಗುವ ಸಾಧ್ಯತೆ ಇದೆ. ಅದರೆ ಈ ಚಿತ್ರ ಪ್ಯಾನ್ ಇಂಡಿಯಾ ಚಿತ್ರವಲ್ಲ ಕನ್ನಡದಲ್ಲಿ ಮಾತ್ರ ಬರಲಿದೆಯ ಎಂಬುದರ ಬಗ್ಗೆ ಇನ್ನು ಗುಟ್ಟಾಗಿದ್ದು.ಸದ್ಯ ಚಿತ್ರದ ನಾಯಕ ಹಾಗೂ ನಿರ್ದೇಶಕ ಮಾತ್ರ ಫೈನಲ್ ಆಗಿದೆ ಅಂತಿದ್ದಾರೆ ಗಾಂಧಿನಗರದ ಸಿನಿಮಾ ಪಂಡಿತರು.

ಇದನ್ನು ಓದಿ:`ಶಕ್ತಿಧಾಮ‘ದ ಮಕ್ಕಳಿಗಾಗಿ ಡ್ರೈವರ್​ ಆದ ಶಿವಣ್ಣ, ಯಾರೇ ಬರಲಿ-ಯಾರೇ ಇರಲಿ ನಿಮ್ಮ ರೇಂಜಿಗೆ ಯಾರಿಲ್ಲ!

ಇನ್ನು ಟಗರು ಶಿವನ ಬತ್ತಳಿಕೆಯಲ್ಲಿ ಸಾಲು ಸಾಲು  ಸಿನಿಮಾಗಳಿದ್ರೂ ಕಥೆ ಮೆಚ್ಚಿ  ಹೊಸ ಚಿತ್ರಕ್ಕೆ ಶಿವರಾಜ್  ಕುಮಾರ್ ಈ ಚಿತ್ರಕ್ಕೆ ಗ್ರೀನ್ ಸಿಗ್ನಲ್‌  ಕೊಟ್ಟಿದ್ದಾರೆ..ಸದ್ಯ ಶಿವಣ್ಣ ವೇದ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅದೇನೆ ಇರಲಿ ಶಿವಣ್ಣನ  ಈ ಸಿನಿಮಾ‌ ಅನೌನ್ಸ್ ಆಗೋಕು ಮುಂಚೇನೆ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಸದ್ದು ಮಾಡಿದ್ದು. ಈ ಸುದ್ದಿ ಕೇಳಿದ ಶಿವಸೈನ್ಯ ಕಣ್ಣರಳಿಸಿ ಕೊಂಡು ಅದಷ್ಟು ಬೇಗ ಈ ಮೆಗಾ ಕಾಂಬೋ ಒಂದಾಗಲಿ, ಸೆಂಚುರಿ ಸ್ಟಾರ್ ಮತ್ತೊಂದು ಸೆಂಚುರಿ ಬಾರಿಸಲಿ ಅಂತ ಮಾದಪ್ಪನಿಗೆ ಮನದಲ್ಲೆ ಸ್ಮರಿಸುತ್ತಿದ್ದಾರೆ.

(ವರದಿ - ಸತೀಶ್​)
Published by:Vasudeva M
First published: