Shivarajkumar: ವೆಬ್ ಸಿರೀಸ್ ಲೋಕಕ್ಕೆ ಶಿವಣ್ಣ ಎಂಟ್ರಿ! ಮಗಳ ನಿರ್ಮಾಣದಲ್ಲೇ ನಟಿಸ್ತಿದ್ದಾರೆ ಸೆಂಚುರಿ ಸ್ಟಾರ್​

ಶಿವರಾಜ್‌ಕುಮಾರ್ ಅವರು ಈಗ ವೆಬ್ ಸಿರೀಸ್‌ ಲೋಕಕ್ಕೂ ಎಂಟ್ರಿ ನೀಡಲು ಸಜ್ಜಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, 'ನಾನು ವೆಬ್ ಸಿರೀಸ್ ಮಾಡ್ತಾ ಇದ್ದೇನೆ. ಅದನ್ನು ನನ್ನ ಮಗಳೇ ನಿರ್ಮಾಣ ಮಾಡಲಿದ್ದಾಳೆ' ಎಂದು ಹೇಳಿದ್ದಾರೆ.

ಶಿವರಾಜ್​ಕುಮಾರ್​​

ಶಿವರಾಜ್​ಕುಮಾರ್​​

  • Share this:
ಶಿವಣ್ಣ (Shivanna) ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ತಮ್ಮ ಸುತ್ತ ಇರುವವರನ್ನು ಯಾವಗಲೂ ನಗಿಸುತ್ತಾ, ಬೇರೆಯವರಿಗೆ ಮಾದರಿಯಾಗಿದ್ದಾರೆ ಶಿವಣ್ಣ. ಹ್ಯಾಟ್ರಿಕ್​ ಹೀರೋ (Hattrick Hero) ಇಂದ ಸೆಂಚೂರಿ ಸ್ಟಾರ್ ಪಯಣದಲ್ಲಿ ಶಿವಣ್ಣ ಸಾಕಷ್ಟು ಏಳು ಬೀಳುಗಳನ್ನು ನೋಡಿದ್ದಾರೆ. ನಮ್ಮ ಸ್ಯಾಂಡಲ್​ವುಡ್​(Sandalwood)ಗೆ ಅವರೇ ಲೀಡರ್ (Leader)​. ಅಭಿಮಾನಿಗಳನ್ನು ಅಣ್ಣಾವ್ರು ದೇವರು ಎಂದು ಕರೆದಿದ್ದರು. ಅದನ್ನೇ ಶಿವಣ್ಣ ಕೂಡ ಫಾಲೋ ಮಾಡಿಕೊಂಡು ಬಂದಿದ್ದಾರೆ. ಇನ್ನೂ ದೊಡ್ಮನೆ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಶಿವಣ್ಣ ಅಂದರೆ ಒಂದು ಹುಮ್ಮಸ್ಸು. ಸದ್ಯ ಶಿವಣ್ಣ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ತಮ್ಮ ಪುನೀತ್​ ರಾಜ್​ಕುಮಾರ್ (Puneeth Rajkumar)​​ ಅಗಲಿಕೆ ನೋವಿನಿಂದ ಕೊಂಚ ಆಚೆ ಬಂದು ಶೂಟಿಂಗ್​ನಲ್ಲಿ ಶಿವಣ್ಣ ಭಾಗಿಯಾಗುತ್ತಿದ್ದಾರೆ. ಇದೀಗ ಹೊಸ ವಿಚಾರ ಏನಪ್ಪಾ ಅಂದರೆ, ಶಿವಣ್ಣ ವೆಬ್​ ಸೀರೀಸ್(Web Series)ನಲ್ಲಿ ನಟಿಸುತ್ತಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

ವೆಬ್​ ಸಿರೀಸ್​ನಲ್ಲಿ ನಟಿಸ್ತಿದ್ದಾರೆ ಶಿವಣ್ಣ!

ಶಿವರಾಜ್‌ಕುಮಾರ್ ಅವರು ಈಗ ವೆಬ್ ಸಿರೀಸ್‌ ಲೋಕಕ್ಕೂ ಎಂಟ್ರಿ ನೀಡಲು ಸಜ್ಜಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, 'ನಾನು ವೆಬ್ ಸಿರೀಸ್ ಮಾಡ್ತಾ ಇದ್ದೇನೆ. ಅದನ್ನು ನನ್ನ ಮಗಳೇ ನಿರ್ಮಾಣ ಮಾಡಲಿದ್ದಾಳೆ' ಎಂದು ಶಿವಣ್ಣ ಹೇಳಿದ್ದಾರೆ. ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಅವರು ಹಲವು ವೆಬ್ ಸಿರೀಸ್‌ಗಳನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ತಂದೆ ಜೊತೆಗೆ ಹೊಸ ವೆಬ್ ಸಿರೀಸ್ ಮಾಡಲು ಮುಂದಾಗಿದ್ದಾರೆ. ಶಿವಣ್ಣ ಕನ್ನಡದ ಹೊಸ ಓಟಿಟಿ ಆ್ಯಪ್ ಟಾಕೀಸ್‌ ಅನ್ನು ಲಾಂಚ್ ಮಾಡಿದರು. ಇದೇ ಕಾರ್ಯಕ್ರಮದಲ್ಲಿ ತಮ್ಮ ವೆಬ್​ ಸಿರೀಸ್​​ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಲಾಕ್​ಡೌನ್​ನಲ್ಲಿ ಹೆಚ್ಚು ವೆಬ್​ ಸಿರೀಸ್​ ನೋಡ್ತಿದ್ರಂತೆ ಶಿವಣ್ಣ!

'ನಾನು ವೆಬ್ ಸಿರೀಸ್ ಮಾಡ್ತಾ ಇದ್ದೇನೆ. ಅದನ್ನು ನನ್ನ ಮಗಳೇ ನಿರ್ಮಾಣ ಮಾಡಲಿದ್ದಾಳೆ. ಕೋವಿಡ್ ಟೈಮ್‌ನಲ್ಲಿ ನಮಗೆ ವೆಬ್ ಸಿರೀಸ್ ಅಂದ್ರೆ ಏನು ಅನ್ನೋದು ಗೊತ್ತಾಯಿತು. ಬೇರೆ ಬೇರೆ ಥರದ ಸಾಕಷ್ಟು ವೆಬ್ ಸಿರೀಸ್‌ಗಳನ್ನು ನೋಡಿ ನಾನು ಕೂಡ ಸಾಕಷ್ಟು ಕಲಿತಿದ್ದೇನೆ' ಎಂದು ಶಿವಣ್ಣ ಹೇಳಿದರು.

ಇದನ್ನೂ ಓದಿ: ದೇಗುಲದಲ್ಲಿ ದೇವರಿಗೇ ಅವಮಾನ! ತಿರುಪತಿಯಲ್ಲಿ ಅಪ್ಪು ಫೋಟೋ ತೆಗೆಸಿದ್ದಕ್ಕೆ ಶಿವಣ್ಣ ಬೇಸರ

ಏಳು ವೆಬ್ ಸಿರೀಸ್ ನಿರ್ಮಾನ ಮಾಡಿರೋ ಶಿವಣ್ನ ಪುತ್ರಿ!

ಶಿವಣ್ಣ ಅವರ ಮಗಳು ವೆಬ್ ಸಿರೀಸ್ ನಿರ್ಮಾಣವನ್ನು ಶುರು ಮಾಡಿದ್ದಾರೆ. ಕಳೆದ  ನಾಲ್ಕು ವರ್ಷದಿಂದ ವೆಬ್​ ಸಿರೀಸ್​ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ 'ಹೇಟ್ ಯೂ ರೊಮಿಯೋ', 'ಬೈ ಮಿಸ್ಟೇಕ್', 'ಹನಿಮೂನ್' ಅಂತ ಮೂರು ವೆಬ್ ಸಿರೀಸ್ ಮಾಡಿದ್ದಾರೆ. ಇನ್ನೂ ಏಳು ಸ್ಟೋರಿ ಬಾಕಿ ಇದೆ ಎಂದು ಹೇಳಿದ್ದಾರೆ. 'ಒಂದೇ ಸಲಕ್ಕೆ ಏಳು ವೆಬ್ ಸಿರೀಸ್‌ ಮಾಡಬೇಕು ಅಂತ ಪ್ಲ್ಯಾನ್ ಮಾಡಿದ್ವಿ. ಕೋವಿಡ್‌ನಿಂದಾಗಿ ಅದನ್ನು ಶುರು ಮಾಡೋಕೆ ಆಗಿರಲಿಲ್ಲ. ಈ ಟಾಕೀಸ್ ಆ್ಯಪ್ ಬಂದಿರುವುದರಿಂದ ಮತ್ತೆ ಧೈರ್ಯ ಮಾಡಿ ಶುರು ಮಾಡ್ತಿವಿ. ನನ್ನ 125ನೇ ಸಿನಿಮಾವನ್ನು ನಮ್ಮದೇ ಗೀತಾ ಪಿಕ್ಚರ್ಸ್ ಮೂಲಕ ನಿರ್ಮಾಣ ಮಾಡುತ್ತಿದ್ದೇವೆ' ಎಂದು ಶಿವಣ್ಣ ಹೇಳಿದರು.

ಇದನ್ನೂ ಓದಿ: ಪಾನ್ ಮಸಾಲ ಜಾಹೀರಾತು ತಿರಸ್ಕರಿಸಿದ ಯಶ್​! 'ಗುಟ್ಕಾ ಗ್ಯಾಂಗ್'​ ಸೇರ್ಲಿಲ್ಲ ರಾಕಿ, ನೀವೇ ನಿಜವಾದ ಸುಲ್ತಾನ

ಅಪ್ಪು ಫೋಟೋ ತೆಗೆಸಿದ್ದಕ್ಕೆ ಶಿವಣ್ಣ ಬೇಸರ!
ಅಪ್ಪು ಇನ್ನಿಲ್ಲವಾದ್ರೂ ಅವರ ಮೇಲಿನ ಅಭಿಮಾನ ಮಾತ್ರ ಒಂದಿಷ್ಟೂ ಕಡಿಮೆಯಾಗಿಲ್ಲ. ಜಾತ್ರೆ, ಸಮಾರಂಭ ಪ್ರತಿಯೊಂದರಲ್ಲೂ ಪುನೀತ್ ಫೋಟೋ ಇಟ್ಟು ಪೂಜಿಸುತ್ತೇವೆ. ಆದ್ರೂ ನೆರೆಯ ಆಂಧ್ರದ ತಿರುಪತಿಯಲ್ಲಿ ಕನ್ನಡಿಗರಿಗೆ, ಅಪ್ಪು ಭಾವಚಿತ್ರಕ್ಕೆ ತಿರುಪತಿಯಲ್ಲಿ ಅವಮಾನ ಮಾಡಲಾಗಿತ್ತು.ಅಭಿಮಾನಿ ಕಾರಿನಿಂದ ಅಪ್ಪು ಪೋಟೊ ತೆಗಿಸಿದಕ್ಕೆ  ಶಿವರಾಜ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. "ಅಪ್ಪು ಪೋಟೊ ತೆಗೆಸಿರುವ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಯಾರದ್ದೇ ಆಗಲಿ ಆ ರೀತಿ ಮಾಡಬಾರದು. ನನ್ನ ತಮ್ಮ ಅಂತ ಹೇಳುತ್ತಿಲ್ಲ. ಯಾಕೆಂದರೆ ಅಭಿಮಾನಿಗಳು, ಅಭಿಮಾನದಿಂದ ಫೋಟೋ ಹಾಕಿರುತ್ತಾರೆ" ಎಂದು ಶಿವರಾಜ್​ಕುಮಾರ್ ಹೇಳಿದ್ದಾರೆ.
Published by:Vasudeva M
First published: