ಶಿವಣ್ಣ (Shivanna) ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ತಮ್ಮ ಸುತ್ತ ಇರುವವರನ್ನು ಯಾವಗಲೂ ನಗಿಸುತ್ತಾ, ಬೇರೆಯವರಿಗೆ ಮಾದರಿಯಾಗಿದ್ದಾರೆ ಶಿವಣ್ಣ. ಶಿವರಾಜ್ಕುಮಾರ್ ಅವರು ಈಗ ವೆಬ್ ಸಿರೀಸ್ (Web Series) ಲೋಕಕ್ಕೂ ಎಂಟ್ರಿ ನೀಡಲು ಸಜ್ಜಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, 'ನಾನು ವೆಬ್ ಸಿರೀಸ್ ಮಾಡ್ತಾ ಇದ್ದೇನೆ. ಅದನ್ನು ನನ್ನ ಮಗಳೇ ನಿರ್ಮಾಣ ಮಾಡಲಿದ್ದಾಳೆ' ಎಂದು ಶಿವಣ್ಣ ಹೇಳಿದ್ದಾರೆ. ಶಿವರಾಜ್ಕುಮಾರ್ (Shivarajkumar) ಪುತ್ರಿ ನಿವೇದಿತಾ (Niveditha) ಅವರು ಹಲವು ವೆಬ್ ಸಿರೀಸ್ಗಳನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ತಂದೆ ಜೊತೆಗೆ ಹೊಸ ವೆಬ್ ಸಿರೀಸ್ ಮಾಡಲು ಮುಂದಾಗಿದ್ದಾರೆ. ಶಿವಣ್ಣ ಕನ್ನಡದ ಹೊಸ ಓಟಿಟಿ ಆ್ಯಪ್ ಟಾಕೀಸ್ ಅನ್ನು ಲಾಂಚ್ ಮಾಡಿದರು. ಇದೇ ಕಾರ್ಯಕ್ರಮದಲ್ಲಿ ತಮ್ಮ ವೆಬ್ ಸಿರೀಸ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದೀಗ ಶಿವಣ್ಣ ಪುತ್ರಿ ನಿವೇದಿತಾ ಶಿವರಾಜ್ಕುಮಾರ್ ನಿರ್ಮಾಣದ ವೆಬ್ ಸಿರೀಸ್ ಹನಿಮೂನ್ ಟೀಸರ್ (Honey Moon) ರಿಲೀಸ್ ಆಗಿದೆ.
ವೂಟ್ ಸೆಲೆಕ್ಟ್ನಲ್ಲಿ ಹನಿಮೂನ್ ವೆಬ್ ಸಿರೀಸ್ ಸ್ಟ್ರೀಮಿಂಗ್!
ನಿವೇದಿತಾ ಮೊದಲ ಬಾರಿಗೆ ನಿರ್ಮಾಣ ಮಾಡಿರುವ 'ಹನಿಮೂನ್' ವೆಬ್ ಸಿರೀಸ್ ರಿಲೀಸ್ ಆಗುತ್ತಿದೆ. ಕೆಲ ವರ್ಷಗಳ ಹಿಂದೆಯೇ ನಿರ್ಮಾಣಗೊಂಡಿದ್ದ ಈ ವೆಬ್ ಸಿರೀಸ್ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಇದೀಗ ವೂಟ್ ಸೆಲೆಕ್ಟ್ನಲ್ಲಿ ಈ ವೆಬ್ ಸಿರೀಸ್ ರಿಲೀಸ್ ಆಗುತ್ತಿದೆ. ನಾಗಭೂಷಣ್ ಮತ್ತು ಸಂಜನಾ ಆನಂದ್ ನಟಿಸಿರುವ ಈ 'ಹನಿಮೂನ್' ವೆಬ್ ಸಿರೀಸ್ನ ಟೀಸರ್ ಈಚೆಗೆ ರಿಲೀಸ್ ಆಗಿದ್ದು, ಶೀಘ್ರದಲ್ಲೇ ವೂಟ್ನಲ್ಲಿ ಪ್ರಸಾರವಾಗಲಿದೆ.
ಹೆಂಡ್ತಿ ಜೊತೆ ಹನಿಮೂನ್ಗೆ ಹೋಗಿದ್ದಾರೆ ನಾಗಭೂಷಣ್!
ನಾಗಭೂಷಣ್ ಅಂದರೆ, ಥಟ್ ಅಂತ ಇಕ್ಕಟ್ ಸಿನಿಮಾ ನೆನಪಿಗೆ ಬರುತ್ತೆ. ನಾಗಭೂಷಣ್ ಹಾಸ್ಯದಲ್ಲಿ ಎತ್ತಿದ ಕೈ. ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಸಿನಿಮಾದಲ್ಲೂ ನಾಗಭೂಷಣ್ ಕಮಾಲ್ ಮಾಡಿದ್ದರು. ಇದೀಗ ಹನಿಮೂನ್ ವೆಬ್ ಸಿರೀಸ್ನಲ್ಲಿ ಕಮಾಲ್ ಮಾಡುವುದಕ್ಕೆ ಸಜ್ಜಾಗಿದ್ದಾರೆ. 'ಹನಿಮೂನ್' ವೆಬ್ ಸಿರೀಸ್ನಲ್ಲಿ ಹೊಸದಾಗಿ ವಿವಾಹವಾದ ದಂಪತಿ ಎದುರಿಸುವ ಘಟನೆಗಳನ್ನು ಹೊಂದಿದ್ದು, ಪ್ರವೀಣ್ ಪಾತ್ರದಲ್ಲಿ ನಾಗಭೂಷಣ್ ನಟಿಸಿದ್ದಾರೆ ಮತ್ತು ತೇಜಸ್ವಿನಿಯಾಗಿ ಸಂಜನಾ ಆನಂದ್ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ವೆಬ್ ಸಿರೀಸ್ ಲೋಕಕ್ಕೆ ಶಿವಣ್ಣ ಎಂಟ್ರಿ! ಮಗಳ ನಿರ್ಮಾಣದಲ್ಲೇ ನಟಿಸ್ತಿದ್ದಾರೆ ಸೆಂಚುರಿ ಸ್ಟಾರ್
ಲಾಕ್ಡೌನ್ನಲ್ಲಿ ಹೆಚ್ಚು ವೆಬ್ ಸಿರೀಸ್ ನೋಡ್ತಿದ್ರಂತೆ ಶಿವಣ್ಣ!
'ನಾನು ವೆಬ್ ಸಿರೀಸ್ ಮಾಡ್ತಾ ಇದ್ದೇನೆ. ಅದನ್ನು ನನ್ನ ಮಗಳೇ ನಿರ್ಮಾಣ ಮಾಡಲಿದ್ದಾಳೆ. ಕೋವಿಡ್ ಟೈಮ್ನಲ್ಲಿ ನಮಗೆ ವೆಬ್ ಸಿರೀಸ್ ಅಂದ್ರೆ ಏನು ಅನ್ನೋದು ಗೊತ್ತಾಯಿತು. ಬೇರೆ ಬೇರೆ ಥರದ ಸಾಕಷ್ಟು ವೆಬ್ ಸಿರೀಸ್ಗಳನ್ನು ನೋಡಿ ನಾನು ಕೂಡ ಸಾಕಷ್ಟು ಕಲಿತಿದ್ದೇನೆ' ಎಂದು ಶಿವಣ್ಣ ಹೇಳಿದರು.
ಇದನ್ನೂ ಓದಿ: ಯಶೋದಾ ಫಸ್ಟ್ ಗ್ಲಿಂಪ್ಸ್ ರಿಲೀಸ್! ಚಕ್ರವ್ಯೂಹದಲ್ಲಿ ಸಿಲುಕಿದ್ರಾ ಬ್ಯೂಟಿ ಕ್ವೀನ್ ಸಮಂತಾ?
ಏಳು ವೆಬ್ ಸಿರೀಸ್ ನಿರ್ಮಾನ ಮಾಡಿರೋ ಶಿವಣ್ಣ ಪುತ್ರಿ!
ಶಿವಣ್ಣ ಅವರ ಮಗಳು ವೆಬ್ ಸಿರೀಸ್ ನಿರ್ಮಾಣವನ್ನು ಶುರು ಮಾಡಿದ್ದಾರೆ. ಕಳೆದ ನಾಲ್ಕು ವರ್ಷದಿಂದ ವೆಬ್ ಸಿರೀಸ್ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ 'ಹೇಟ್ ಯೂ ರೊಮಿಯೋ', 'ಬೈ ಮಿಸ್ಟೇಕ್', 'ಹನಿಮೂನ್' ಅಂತ ಮೂರು ವೆಬ್ ಸಿರೀಸ್ ಮಾಡಿದ್ದಾರೆ. ಇನ್ನೂ ಏಳು ಸ್ಟೋರಿ ಬಾಕಿ ಇದೆ ಎಂದು ಹೇಳಿದ್ದಾರೆ. 'ಒಂದೇ ಸಲಕ್ಕೆ ಏಳು ವೆಬ್ ಸಿರೀಸ್ ಮಾಡಬೇಕು ಅಂತ ಪ್ಲ್ಯಾನ್ ಮಾಡಿದ್ವಿ. ಕೋವಿಡ್ನಿಂದಾಗಿ ಅದನ್ನು ಶುರು ಮಾಡೋಕೆ ಆಗಿರಲಿಲ್ಲ. ಈ ಟಾಕೀಸ್ ಆ್ಯಪ್ ಬಂದಿರುವುದರಿಂದ ಮತ್ತೆ ಧೈರ್ಯ ಮಾಡಿ ಶುರು ಮಾಡ್ತಿವಿ. ನನ್ನ 125ನೇ ಸಿನಿಮಾವನ್ನು ನಮ್ಮದೇ ಗೀತಾ ಪಿಕ್ಚರ್ಸ್ ಮೂಲಕ ನಿರ್ಮಾಣ ಮಾಡುತ್ತಿದ್ದೇವೆ' ಎಂದು ಶಿವಣ್ಣ ಹೇಳಿದರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ