Shivarajkumar: `ಶಕ್ತಿಧಾಮ’ದ ಮಕ್ಕಳೊಂದಿಗೆ ಗಣರಾಜ್ಯೋತ್ಸವ ಆಚರಿಸಿದ ಶಿವಣ್ಣ.. ಸರಳತೆಯ ಸಾಮ್ರಾಟ್​ ನೀವು!

ಶಕ್ತಿಧಾಮದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಗಣರಾಜ್ಯೋತ್ಸವವನ್ನು ಆಚರಣೆ ಮಾಡಿ ಸಂಭ್ರಮಿಸಿದ್ದಾರೆ. ಇದೇ ವೇಳೆ ಶಕ್ತಿಧಾಮದ ಮಕ್ಕಳಿಗೆ ಶಿವಣ್ಣ ಸಿಹಿ ಹಂಚಿದ್ದಾರೆ.

ಶಕ್ತಿಧಾಮದಲ್ಲಿ ಶಿವಣ್ಣ

ಶಕ್ತಿಧಾಮದಲ್ಲಿ ಶಿವಣ್ಣ

  • Share this:
ದೇಶದೆಲ್ಲಡೆ ಇಂದು (ಜ.26) ಗಣರಾಜ್ಯೋತ್ಸವ (73rd Republic Day) ಆಚರಣೆ ಮಾಡಲಾಗಿದೆ. ಧ್ವಜಾರೋಹಣ ಮಾಡಿ, ರಾಷ್ಟ್ರ ಗೀತೆ ಹಾಡಿ, ದೇಶಕ್ಕಾಗಿ ಶ್ರಮಿಸಿದ ಎಲ್ಲರನ್ನೂ ಸ್ಮರಿಸಿಕೊಳ್ಳಲಾಗಿದೆ. ಸಿನಿರಸಿಕರಿಗೆ , ಹಾಗೂ ಅಪ್ಪು ಅವರ ಅಭಿಮಾನಿಗಳಿಗೆ ಸ್ಪೆಷಲ್​ ಗಿಫ್ಟ್​ ಕೂಡ ಸಿಕ್ಕಿದೆ. ಇನ್ನೂ ನಟ ಶಿವರಾಜ್​ ಕುಮಾರ್​(Shivarajkumar) ಕೂಡ ಗಣರಾಜ್ಯೋತ್ಸವವನ್ನು ಆಚರಿಸಿದ್ದಾರೆ. ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್ ಹಾಗೂ ನಿರ್ದೇಶಕ ಗುರುದತ್ ಶಕ್ತಿಧಾಮಕ್ಕೆ ತೆರಳಿದ್ದರು. ಅಲ್ಲಿನ ಮಕ್ಕಳೊಂದಿಗೆ ಗಣರಾಜ್ಯೋತ್ಸವವನ್ನು ಆಚರಿಸಿ ಸಂಭ್ರಮಿಸಿದ್ದಾರೆ. ಇಲ್ಲಿರುವ ವಿದ್ಯಾರ್ಥಿನಿಯರ ವಿದ್ಯಾಭ್ಯಾಸದ ವೆಚ್ಚವನ್ನು ಪುನೀತ್ ರಾಜ್​ಕುಮಾರ್(Puneeth Rajkumar)​ ನೋಡಿಕೊಳ್ಳುತ್ತಿದ್ದರು. ಡಾ.ರಾಜ್‌ಕುಮಾರ್(Dr. Rajkumar) ಕುಟುಂಬ ಮೈಸೂರಿನಲ್ಲಿ ಸ್ಥಾಪಿಸಿರುವ 'ಶಕ್ತಿಧಾಮ' ಅನಾಥ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದೆ. ಪಾರ್ವತಮ್ಮ ರಾಜ್‌ಕುಮಾರ್ ಇವರುವವರೆಗೂ ಅವರೇ ಈ ಶಕ್ತಿಧಾಮದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಅವಳ ಬಳಿಕ ಪುನೀತ್ ರಾಜ್‌ಕುಮಾರ್ ಆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದರು. ಅಪ್ಪು ಅಗಲಿದ ಬಳಿಕ ಇದೀಗ ಶಕ್ತಿಧಾಮವನ್ನು ಶಿವರಾಜ್‌ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ನೋಡಿಕೊಳ್ಳುತ್ತಿದ್ದಾರೆ. ಪತ್ನಿ ಗೀತಾ ಶಿವರಾಜ್​ಕುಮಾರ್​ (Shivarajkumar) ಜೊತೆ ಸೇರಿ ಅವರು ಧ್ವಜಾರೋಹಣ ಮಾಡಿದ್ದಾರೆ. ಬಳಿಕ ಆಶ್ರಮದ ಮಕ್ಕಳಿಗೆ ಸಿಹಿ ಹಂಚಿ, ಅವರ ಜೊತೆ ಒಂದಷ್ಟು ಹೊತ್ತು ಕಾಲ ಕಳೆದಿದ್ದಾರೆ ಶಿವಣ್ಣ.

ಶಕ್ತಿಧಾಮದಲ್ಲಿ ಧ್ವಜಾರೋಹಣ ಮಾಡಿದ ಶಿವಣ್ಣ!

ಮೈಸೂರಿನ ಶಕ್ತಿಧಾಮದ ಮಕ್ಕಳೊಂದಿಗೆ ಶಿವರಾಜ್‌ಕುಮಾರ್ ಹಾಗೂ ಪತ್ನಿ ಗೀತಾ ಗಣರಾಜ್ಯೋತ್ಸವವನ್ನು ಆಚರಿಸಿದ್ದಾರೆ. ಶಕ್ತಿಧಾಮದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಗಣರಾಜ್ಯೋತ್ಸವವನ್ನು ಆಚರಣೆ ಮಾಡಿ ಸಂಭ್ರಮಿಸಿದ್ದಾರೆ. ಇದೇ ವೇಳೆ ಶಕ್ತಿಧಾಮದ ಮಕ್ಕಳಿಗೆ ಶಿವಣ್ಣ ಸಿಹಿ ಹಂಚಿದ್ದಾರೆ. ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಶಿವಣ್ಣ ತಮ್ಮ ಪತ್ನಿ ಗೀತಾ ಅವರೊಂದಿಗೆ ಶಕ್ತಿಧಾಮಕ್ಕೆ ಭೇಟಿ, ಅಲ್ಲಿನ ಕುಂದುಕೊರತೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇಂದು ವಿಶೇಷವಾದ ದಿನವಾಗಿರುವುದರಿಂದ ಇಂದು ಕೂಡ ಅಲ್ಲಿಗೆ ತೆರಳಿದ್ದಾರೆ.

ಇದನ್ನು ಓದಿ : ಪ್ಯಾನ್​ ಇಂಡಿಯಾ ಸಿನಿಮಾ ಅಖಾಡಕ್ಕೆ ಶಿವಣ್ಣ ಎಂಟ್ರಿ.. ರೆಟ್ರೋ ಗೆಟಪ್​ನಲ್ಲಿ ಮಿಂಚಲಿದ್ದಾರೆ ಸೆಂಚೂರಿ ಸ್ಟಾರ್​!

ಈ ಹಿಂದೆ ಮಕ್ಕಳ ಜೊತೆ ಆಡಿದ್ದ ಖೋ ಖೋ ವಿಡಿಯೋ ವೈರಲ್​!

ಹೌದು, ಇದೇ ಮಕ್ಕಳೊಂದಿಗೆ ಪುಟ್ಟ ಮಗುವಿನಂತೆ ಶಿವಣ್ಣ ಖೋ ಖೋ ಆಡುವ ವಿಡಿಯೋ ವೈರಲ್​ ಆಗಿತ್ತು. ಶಿವರಾಜ್‌ಕುಮಾರ್​ ಸಮಯ ಸಿಕ್ಕಾಗೆಲ್ಲ ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡುತ್ತಾರೆ. ಅಲ್ಲಿನ ಮಕ್ಕಳೊಂದಿಗೆ ಬೆರೆಯುತ್ತಾರೆ. ಕೆಲವು ದಿನಗಳ ಹಿಂದಷ್ಟೇ ಶಿವರಾಜ್‌ಕುಮಾರ್ ಶಕ್ತಿಧಾಮಕ್ಕೆ ಹೋಗಿದ್ದರು. ಆ ವೇಳೆ ಶಕ್ತಿಧಾಮದ ಹೆಣ್ಣು ಮಕ್ಕಳೊಂದಿಗೆ ಖೋ ಖೋ ಆಟ ಆಡಿದ್ದರು. ಈ ವಿಡಿಯೋ ಕಂಡ ಅವರ ಅಭಿಮಾನಿಗಳ ಶಿವಣ್ಣ ಅವರ ಸರಳತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದನ್ನು ಓದಿ: `ಜೇಮ್ಸ್​’ ಸಿನಿಮಾದ ಸ್ಪೆಷಲ್​ ಪೋಸ್ಟರ್​ ರಿಲೀಸ್​, ಯೋಧನ ಅವತಾರದಲ್ಲಿ ಅಪ್ಪುನ ಕಂಡು ಫ್ಯಾನ್ಸ್​ ಥ್ರಿಲ್​!

ಪ್ಯಾನ್​ ಇಂಡಿಯಾ ಅಖಾಡಕ್ಕೆ ಎಂಟ್ರಿಯಾದ ಶಿವಣ್ಣ!

ಶಿವರಾಜ್ ಕುಮಾರ್(Hattrick Hero Shivarajkumar) ಸಜ್ಜಾಗಿದ್ದಾರೆ. ‘ಓಂ’ ಸಿನಿಮಾದ ಸತ್ಯನ ರೀತಿ ಇನ್ನೊಂದು ವಿಭಿನ್ನ ಅವತಾರದಲ್ಲಿ ಕಮಾಲ್ ಮಾಡಲು ರೆಡಿಯಾಗಿದ್ದಾರೆ ಶಿವಣ್ಣ. ತುಂಬಾ ದಿನಗಳ ನಂತರ ಮತ್ತೊಮ್ಮೆ ಭೂಗತ ಲೋಕ(Under World)ದ ಕಥೆಯಲ್ಲಿ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕರುನಾಡ ಚಕ್ರವರ್ತಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ರಕ್ತ ಸಿಕ್ತ ಕಥೆಯೊಂದನ್ನ ಶಿವಣ್ಣ(Shivanna)ನಿಗೆ ಸಿನಿಮಾ ಮಾಡಲಿದ್ದಾರೆ ನಿರ್ದೇಶಕ ಜಯರಾಮ. ಉಪೇಂದ್ರ(Upendra) ಅಭಿನಯದ ಬುದ್ದಿವಂತ -2 ಚಿತ್ರವನ್ನು ನಿರ್ದೇಶನ ಮಾಡಿದ್ದ ಜಯರಾಮ್ ಈಗ ಜೈ ಎಂದು ಹೆಸರು ಬದಲಾವಣೆ ಮಾಡಿಕೊಂಡು  ಶಿವಣ್ಣನ‌ ಚಿತ್ರಕ್ಕೆ ಸಾರಥ್ಯ ವಹಿಸಿದ್ದಾರೆ.
Published by:Vasudeva M
First published: