Happy Birthday Shiva Rajkumar: ಶಿವಣ್ಣನ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಸ್ಪೆಷಲ್​ ಗಿಫ್ಟ್​; ಫ್ಯಾನ್​ಮೇಡ್​​ ಹಾಡು ಬಿಡುಗಡೆ

HBD Shiva Rajkumar: ಶಿವ ರಾಜ್​ಕುಮಾರ್​ 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ, ಹೀಗಾಗಿ ನೆಚ್ಚಿನ ನಟನ ಮೇಲಿನ ಪ್ರೀತಿ, ಅಭಿಮಾನಕ್ಕೆ ಅಭಿಮಾನಿಗಳು ಈ ಫ್ಯಾನ್​ಮೇಡ್​ ಹಾಡನ್ನು ಸಿದ್ದಪಡಿಸಿದ್ದಾರೆ. ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ಮೂಲಕ ಬಿಡುಗಡೆ ಮಾಡಿಸಿದ್ದಾರೆ. ವರುಣ್​​ ಸ್ಟುಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ಈ ಹಾಡು ಬಿಡುಗಡೆಗೊಂಡಿದೆ.

ಶಿವ ರಾಜ್​​​ಕುಮಾರ್

ಶಿವ ರಾಜ್​​​ಕುಮಾರ್

  • Share this:
    ಸ್ಯಾಂಡಲ್​ವುಡ್​ ಹ್ಯಾಟ್ರಿಕ್​ ಹೀರೋ ಶಿವ ರಾಜ್​​​ಕುಮಾರ್​​ ನಾಳೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಶಿವಣ್ಣನ ಹುಟ್ಟುಹಬ್ಬಕ್ಕೆ ವಿಶೇಷ ಶುಭಾಶಯ ಕೋರುವ ಸಲುವಾಗಿ ಅಭಿಮಾನಿಗಳು ಶಿವ@58... ಸ್ಟಿಲ್​ ಯಂಗ್​ ಮಾ... ಎಂಬ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಆ ಮೂಲಕ ಗಾಜನೂರು ಗಂಡಿನ ಹುಟ್ಟುಹಬ್ಬಕ್ಕೆ ಅಡ್ವಾನ್​​ ವಿಶ್​ ಮಾಡಿದ್ದಾರೆ.

    ಶಿವ ರಾಜ್​ಕುಮಾರ್​ 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ, ಹೀಗಾಗಿ ನೆಚ್ಚಿನ ನಟನ ಮೇಲಿನ ಪ್ರೀತಿ, ಅಭಿಮಾನಕ್ಕೆ ಅಭಿಮಾನಿಗಳು ಈ ಫ್ಯಾನ್​ಮೇಡ್​ ಹಾಡನ್ನು ಸಿದ್ದಪಡಿಸಿದ್ದಾರೆ. ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ಮೂಲಕ ಬಿಡುಗಡೆ ಮಾಡಿಸಿದ್ದಾರೆ. ವರುಣ್​​ ಸ್ಟುಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ಈ ಹಾಡು ಬಿಡುಗಡೆಗೊಂಡಿದೆ.

    ಲಕ್​..ಲಕ್​..ಲಕ್​​ಪತಿ ..ಕರುನಾಡಿಗೆ ಇವರೇ ಆಸ್ತಿ ಎಂಬ ಲಿರಿಕಲ್​​ ಹಾಡಿನ ಮೂಲಕ ಶಿವ ರಾಜ್​ಕುಮಾರ್ ಅವರಿಗೆ ಅಭಿಮಾನಿಗಳು ಸ್ಟೆಷಲ್​ ಗಿಫ್ಟ್​ ನೀಡಿದ್ದಾರೆ. ಅನಿರುದ್ಧ್​ ಶಾಸ್ತ್ರೀ ಈ ಹಾಡನ್ನು ಹಾಡಿದ್ದು, ಭಜರಂಗಿ ಮೋಹನ್​ ಹಾಡು ರಚನೆ ಮಾಡಿದ್ದಾರೆ. ವರುಣ್​ ಗೌಡ ಮತ್ತು ಕಿರಿಕ್​ ಕೀತಿ ಈ ಹಾಡಿನ್ನು ನಿರ್ಮಾಸಿದ್ದಾರೆ.

    ಶಿವ@58 ಹಾಡು ಯೂಟ್ಯೂಬ್​ನಲ್ಲಿ ರಾರಾಜಿಸುತ್ತಿದ್ದೆ. ಅನೇಕರು ಹಾಡನ್ನು ವೀಕ್ಷಿಸುವ ಮೂಲಕ ಶಿವ ರಾಜ್​ಕುಮಾರ್​ಗೆ ಶುಭಾಶಯಗಳ ಸುರಿಮಳೆ ಸುರಿಸುತ್ತಿದ್ದಾರೆ. ಇನ್ನು ಕೆಲವರು ಲೆಜೆಂಡ್​​​ ಶಿವಣ್ಣ, ಕರುನಾಡಿನ ಆಸ್ತಿ, ಹ್ಯಾಟ್ರಿಕ್​​ ಶಿವಣ್ಣ ಎಂದು ಕಮೆಂಟ್​ ಬರೆಯುತ್ತಿದ್ದಾರೆ.



    ಶಿವ ರಾಜ್​ಕುಮಾರ್​ 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲ್ಲಿದ್ದಾರೆ. ವಯಸ್ಸು ಎಷ್ಟೇ ಆದರು ಎನರ್ಜಿಟಿಕ್​ ಹೀರೋ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಆಕ್ಟಿಂಗ್​​ಗೂ ಜೈ, ಡ್ಯಾನ್ಸ್​ಗೂ ಸೈ ಎಂಬ ಶಿವರಾಜ್ ಕುಮಾರ್​ ಬಗೆ ಬಗೆಯ ಪಾತ್ರಗಳನ್ನು ನಿರ್ವಹಿಸುವ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಮೋಡಿ ಮಾಡುತ್ತಾ ಬಂದಿದ್ದಾರೆ.

    1986 ರಿಂದ ನಾಯಕನಾಗಿ ಸ್ಯಾಂಡಲ್​ವುಡ್​ ಪ್ರವೇಶಿಸಿದ ಶಿವ ರಾಜ್​ಕುಮಾರ್​ ‘ಆನಂದ್’​ ಸಿನಿಮಾ ಮೂಲಕ ಅಭಿಮಾನಿಗಳಿಗೆ ಹತ್ತಿವಾದರು. ಆನಂತರ ಇವರ ನಟನೆಯ ‘ಓಂ’ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಹಿಟ್​ ಆಗಿತ್ತು. 100ಕ್ಕೂ ಹೆಚ್ಚು ದಿನಗಳನ್ನು ಪೂರೈಸಿತ್ತು. ಅಷ್ಟು ಮಾತ್ರವಲ್ಲ, ಅಭಿಮಾನಿಗಳ ಒತ್ತಾಯದ ಮೇರೆಗೆ ಸಿನಿಮಾ ಆಗಾಗ ಥಿಯೇಟರ್​ನಲ್ಲಿ ಬಿಡುಗಡೆಯಾಗುತ್ತಲೇ ಇರುತ್ತದೆ.  ಆ ಮೂಲಕ ಶಿವಣ್ಣ ಅಭಿಮಾನಿಗಳ ನೆಚ್ಚಿನ ನಟ ಎನಿಸಿಕೊಂಡಿದ್ದಾರೆ.

    ಇವರು ನಟಿಸಿದ ‘ಚಿಗುರಿದ ಕನಸು’, ‘ಹೃದಯ ಹೃದಯ’, ‘ಜೋಗಿ’, ‘ನಮ್ಮೂರ ಮಂದಾರ ಹೂವೆ’, ‘ಎಕೆ 47’,  ‘ಭಜರಂಗಿ’, ‘ಮುಫ್ತಿ’, ‘ಟಗರು’ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ. ಸದ್ಯ ಇವರು ಭಜರಂಗಿ -2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಕೊರೋನಾ ಹಾವಳಿ ಕಡಿಮೆಯಾದಂತೆ ತೆರೆಗೆಬರಲಿದೆ.

    ಜೂಟಾಟ ಆಡುತ್ತಿದ್ದಾರೆ ಅನಿತಾ ಭಟ್!; ಗ್ಲಾಮರಸ್​ ರೋಲ್​ನಲ್ಲಿ ಸೈಕೋ ಸುಂದರಿ

    Amazon: ಉದ್ಯೋಗಿಗಳಿಗೆ ಟಿಕ್​ಟಾಕ್ ಬಳಸದಂತೆ ಸೂಚನೆ ನೀಡಿದ ಅಮೆಜಾನ್; ಕೆಲವೇ ಗಂಟೆಗಳಲ್ಲಿ ನಿರ್ಧಾರ ಹಿಂತೆಗೆತ!

    Joker Malware: 11 ಆ್ಯಪ್​ಗಳನ್ನ ಕಿತ್ತೆಸೆದ ಗೂಗಲ್​​ ಪ್ಲೇ ಸ್ಟೋರ್​; ನಿಮ್ಮ ಸ್ಮಾರ್ಟ್​ಫೋನ್​ನಲ್ಲೂ ಇದೆಯಾ?
    Published by:Harshith AS
    First published: