ಸ್ಯಾಂಡಲ್ವುಡ್ ನಟ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ‘ಭಜರಂಗಿ-2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎ ಹರ್ಷ ನಿದೇರ್ಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಈಗಾಗಲೇ ಸ್ಯಾಂಡಲ್ವುಡ್ನಲ್ಲಿ ದೊಡ್ಡ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಮತ್ತೊಮ್ಮೆ ಶಿವಣ್ಣ ಭಜರಂಗಿಯಾಗಿ ತೆರೆ ಮೇಲೆ ಅಬ್ಬರಿಸಲಿದ್ದಾರೆ. ಇಷ್ಟೇಲ್ಲಾ ನಿರೀಕ್ಷೆ ಹೊತ್ತುಕೊಂಡಿರುವ ಭಜರಂಗಿ-2 ಸಿನಿಮಾ ಸದ್ಯದಲ್ಲೇ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲು ಮುಂದಾಗಿದೆ. ವಿಶೇಷ ದಿನದಂದು ಆ ಸರ್ಪ್ರೈಸ್ ಹೊರ ಬೀಳಲಿದೆ.
ಜುಲೈ 12 ರಂದು ಶಿವರಾಜ್ಕುಮಾರ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಹಾಗಾಗಿ ಭಜರಂಗಿ ಟೀಂ ಶಿವಣ್ಣನ ಹುಟ್ಟುಹಬ್ಬದಂದು ಬಿಗ್ ಪ್ಲಾನ್ ಮಾಡಿಕೊಂಡಿದೆ. ಶಿವರಾಜ್ಕುಮಾರ್ ಮೂಲಕ ಅಭಿಮಾನಿಗಳಿಗೆ ಭಜರಂಗಿ-2 ಸಿನಿಮಾದ ಅಫೀಶಿಯಲ್ ಟೀಸರ್ ರಿಲೀಸ್ ಮಾಡಲು ಮುಂದಾಗಿದ್ದಾರೆ. ಈಗಾಗಲೇ ನಿರ್ದೇಶಕ ಹರ್ಷ ಈ ಬಗ್ಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಶಿವರಾಜ್ಕುಮಾರ್ ಹುಟ್ಟಹಬ್ಬದ ದಿನದಂದು ಭಜರಂಗಿ-2 ಚಿತ್ರತಂಡ 11;30 ಕ್ಕೆ ಟೀಸರ್ ಬಿಡುಗಡೆಯಾಗಲಿದೆ. ಎ2 ಮ್ಯೂಸಿಕ್ ಚಾನೆಲ್ನಲ್ಲಿ ಟೀಸರ್ ಲಾಂಚ್ ಆಗಲಿದೆ.
![]()
ಭಜರಂಗಿ-2
ನಟ ಶಿವರಾಜ್ಕುಮಾರ್ ಕೂಡ ತಮ್ಮ ಫೇಸ್ಬುಕ್ನಲ್ಲಿ ಭಜರಂಗಿ ಚಿತ್ರದ ಅಫೀಶಿಯಲ್ ಟೀಸರ್ ರಿಲೀಸ್ ಆಗುವ ಕುರಿತು ಪೋಸ್ಟರ್ ಹರಿಬಿಟ್ಟಿದ್ದಾರೆ. ಫೇಸ್ಬುಕ್ನಲ್ಲಿ ಶಿವಣ್ಣ ‘ದಿನಗಳ ಎಣಿಕೆ ಶುರುವಾಗಿದೆ. ಮತ್ತು ಎ ಹರ್ಷ ಅವರಿಗೆ ಸ್ವಾಗತ. ಟೀಸರ್ ಜುಲೈ 12 ರಂದು ರಿಲೀಸ್ ಆಗಲಿದೆ’ ಎಂದು ಬರೆದುಕೊಂಡಿದ್ದಾರೆ.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಭಜರಂಗಿ -2 ಚಿತ್ರತಂಡ 2ನೇ ಫೊಸ್ಟರ್ ರಿಲೀಸ್ ಮಾಡಿತ್ತು. ಇದೀಗ ಶಿವರಾಜ್ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಅಭಿಮಾನಿಗಳು ಕೂಡ ಟೀಸರ್ ನೋಡಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
Video: ಸಖತ್ತಾಗಿದೆ ‘ಸಖತ್ ಸಿನಿಮಾದ ರ‍್ಯಾಪ್ ಮೋಷನ್ ಪೋಸ್ಟರ್! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ