ಹ್ಯಾಟ್ರಿಕ್ ಹೀರೋಗೆ 56ನೇ ಹುಟ್ಟು ಹಬ್ಬದ ಸಂಭ್ರಮ: ರಿಲೀಸ್ ಆಗಲಿದೆ ಶಿವಣ್ಣನ ಯಶೋಗಾಥೆ ಬುಕ್


Updated:July 12, 2018, 9:59 AM IST
ಹ್ಯಾಟ್ರಿಕ್ ಹೀರೋಗೆ 56ನೇ ಹುಟ್ಟು ಹಬ್ಬದ ಸಂಭ್ರಮ: ರಿಲೀಸ್ ಆಗಲಿದೆ ಶಿವಣ್ಣನ ಯಶೋಗಾಥೆ ಬುಕ್

Updated: July 12, 2018, 9:59 AM IST
ರಕ್ಷಾ ಜಾಸ್ಮಿನ್, ನ್ಯೂಸ್ 18 ಕನ್ನಡ

ಬೆಂಗಳೂರು(ಜು.12): ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​ಗೆ ಹುಟ್ಟುಹಬ್ಬದ ಸಂಭ್ರಮ. ಪ್ರತಿವರ್ಷದಂತೆ ಈ ಬಾರಿಯೂ ಶಿವಣ್ಣ ಬರ್ತ್‍ಡೇ ರಂಗೇರಿದ್ದು, ಅಭಿಮಾನಿಗಳು ತಡರಾತ್ರಿಯಿಂದಲೇ ಫುಲ್ ಗ್ರ್ಯಾಂಡ್ ಸೆಲೆಬ್ರೇಷನ್‍ನಲ್ಲಿದ್ದಾರೆ.

ಬರ್ತ್‍ಡೇ ದಿನ ಸಾಕಷ್ಟು ಸಮಾಜಮುಖಿ ಕೆಲಸಗಳು ನಡೆಯುತ್ತಿದ್ದು, ಇದರೊಂದಿಗೆ ಕರುನಾಡ ಚಕ್ರವರ್ತಿ ಡಾ ಶಿವರಾಜ್​ಕುಮಾರ್ ಯಶೊಗಾಥೆ ಅನ್ನೊ ಬುಕ್ ಕೂಡ ಲೋಕಾರ್ಪಣೆಗೊಳ್ಳುತ್ತಿದೆ. ಶಿವರಾಜ್​ಕುಮಾರ್ ಅವ್ರ ಸಕ್ಸಸ್ ಹಾದಿ, ಬೆಳೆದು ಬಂದ ಪರಿಯ ಬಗ್ಗೆ ಈ ಪುಸ್ತಕದಲ್ಲಿ ಬರೆಯಲಾಗಿದೆ.
ಬರಹಗಾರ ಜನಾರ್ಧನರಾವ್ ಸಾಳಂಕೆ ಈ ಪುಸ್ತಕವನ್ನ ಬರೆದಿದ್ದು, ಶಿವರಾಜ್​ಕುಮಾರ್ ಬರ್ತ್‍ಡೇಗೆ ರಿಲೀಸ್ ಮಾಡಬೇಕೆಂದು ಕಾದಿದ್ರು. ಹೀಗಾಗಿ ಇಂದು ಈ ಬುಕ್ ಶಿವಣ್ಣ ನಿವಾಸದಲ್ಲೇ ರಿಲೀಸ್ ಆಗಲಿದ್ದು, ಅಭಿಮಾನಿಗಳು ಇದಕ್ಕೆ ಸಾಕ್ಷಿಯಾಗಲಿದ್ದಾರೆ.

 
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ