Puneeth Rajkumar: ನಾಳೆ ಅಧಿಕೃತವಾಗಿ ಅಪ್ಪು ಪ್ರತಿಮೆ ಲೋಕಾರ್ಪಣೆ! ಉಪ್ಪಿ ಜೊತೆ ಜೇಮ್ಸ್​ ನೋಡಿ ಮತ್ತೆ ಶಿವಣ್ಣ ಭಾವುಕ

ಇಡೀ ರಾಜ್ಯದಲ್ಲೇ ಚೊಚ್ಚಲ ಬಾರಿಗೆ ಅಧಿಕೃತವಾಗಿ ನಾಳೆ ಸಂಜೆ 5 ಗಂಟೆಗೆ  ರಾಜ್ಯದ ಪ್ರಪ್ರಥಮ ಅಪ್ಪು ಕಂಚಿನ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ. ಬಿಬಿಎಂಪಿ ಆವರಣದಲ್ಲಿ ಡಾ. ರಾಜ್ ಕುಮಾರ್ ಪುತ್ಥಳಿ ಪಕ್ಕದಲ್ಲೇ ಅಪ್ಪು ಪ್ರತಿಮೆ ಅನಾವರಣಗೊಳ್ಳಲಿದೆ.

ಪುನೀತ್​ ರಾಜ್​ಕುಮಾರ್​

ಪುನೀತ್​ ರಾಜ್​ಕುಮಾರ್​

  • Share this:
ಕನ್ನಡ ಚಿತ್ರರಂಗದ ರಾಜರತ್ನ, ಪವರ್​ ಸ್ಟಾರ್(Power Star)​, ಕರುನಾಡ ರತ್ನ, ಸರಳತೆಯ ಸಾಮ್ರಾಟ್​,  ಅಭಿಮಾನಿಗಳ ನಗು ಮುಖದ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ (Power Star Puneeth Rajkumar) ನಿಧನರಾಗಿ ಎರಡು ತಿಂಗಳು ಕಳೆದಿವೆ. ಆದರೆ, ಅವರಿಗೆ ಇದ್ದ ಪರಿಸರ ಕಾಳಜಿ, ಸಮಾಜದ ಮೇಲೆ ಇದ್ದ ಪ್ರೀತಿ ಹಾಗೂ ದೊಡ್ಡವರ ಮೇಲೆ ಇದ್ದ ಗೌರವ ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿಸುತ್ತೆ. ಅವರು ಮಾಡಿ ಹೋದ ಕೆಲಸವನ್ನು ಎಲ್ಲರು ಮುಂದುವರೆಸಿಕೊಂಡು ಹೋಗುವಂತೆ ಮಾಡಿದ್ದರೆ. ಅವರು ನಮ್ಮ ಜೊತೆ ಇಲ್ಲ ಎಂಬುವ ಕಹಿ ಸತ್ಯವನ್ನು ಒಪ್ಪಿಕೊಂಡು ನಾವು ಹೋಗಲೇ ಬೇಕು. ಪ್ರತಿದಿನ ಅಪ್ಪು(Appu) ಅವರನ್ನು ನೆನೆಯುವ ಕಾರ್ಯಕ್ರಮಗಳು ನಡೆಯುತ್ತಲೇ ಇದೆ. ಜೊತೆಗೆ ಒಂದಲ್ಲ ಒಂದು ರೀತಿ ಅಪ್ಪು ಅವರಿಗೆ ಗೌರವ ಸಲ್ಲಿಸುವ ಕೆಲಸಗಳು ನಡೆಯುತ್ತಲೇ ಇದೆ. ಅಪ್ಪು ಅವರ ಪುತ್ಥಳಿ(Appu Statute) ಈಗಾಗಲೇ ರಾಜ್ಯದ ಹಲವೆಡೆ ಅನಾವರಣಗೊಂಡಿದೆ. ನಾಳೆ ಅಧಿಕೃತವಾಗಿ ಪುನೀತ್​ ರಾಜ್​ಕುಮಾರ್​ ಅವರ ಪುತ್ಥಳಿ ಅನಾವರಣಗೊಳಲ್ಲಿದೆ.

ನಾಳೆ ಪುನೀತ್ ರಾಜ್‍ಕುಮಾರ್ ಪುತ್ಥಳಿ ಅನಾವರಣ

ಇಡೀ ರಾಜ್ಯದಲ್ಲೇ ಚೊಚ್ಚಲ ಬಾರಿಗೆ ಅಧಿಕೃತವಾಗಿ ನಾಳೆ ಸಂಜೆ 5 ಗಂಟೆಗೆ  ರಾಜ್ಯದ ಪ್ರಪ್ರಥಮ ಅಪ್ಪು ಕಂಚಿನ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ. ಬಿಬಿಎಂಪಿ ಆವರಣದಲ್ಲಿ ಡಾ. ರಾಜ್ ಕುಮಾರ್ ಪುತ್ಥಳಿ ಪಕ್ಕದಲ್ಲೇ ಅಪ್ಪು ಪ್ರತಿಮೆ ಅನಾವರಣಗೊಳ್ಳಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ನಾಳೆ ನಾಲ್ಕಡಿ ಎತ್ತರದ ಅಪ್ಪು ಕಂಚಿನ ಪುತ್ಥಳಿ ಲೋಕಾರ್ಪಣೆ ಮಾಡಲಿದ್ದಾರೆ.ಸಂಸದ ಪಿಸಿ ಮೋಹನ್, ಸ್ಥಳೀಯ ಶಾಸಕ ರಿಜ್ವಾನ್ ಅರ್ಷದ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಆಡಳಿತಗಾರ ರಾಕೇಶ್ ಸಿಂಗ್ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಕನ್ನಡ ಸಂಘದಿಂದ ಪುತ್ಥಳಿ ಸ್ಥಾಪನೆ ಯಾಗುತ್ತಿದೆ.

ಜೇಮ್ಸ್​​ ಸಿನಿಮಾ ನೋಡಿದ ಶಿವಣ್ಣ, ಉಪೇಂದ್ರ ಸಾಥ್​

ಮಾರ್ಚ್ 17ರಂದು ರಿಲೀಸ್​ ಆಗಿದ್ದ ಜೇಮ್ಸ್​​ ಸಿನಿಮಾವನ್ನು ಶಿವಣ್ಣ ಮೈಸೂರಿನಲ್ಲಿ ಅಂದೇ ನೋಡಿ ಅಪ್ಪು ನೆನೆದು ಕಣ್ಣೀರಿಟ್ಟಿದ್ದರು. ಇಂದು ಶಿವಣ್ಣ ದಂಪತಿ ಮತ್ತೆ ಜೇಮ್ಸ್​ಸಿನಿಮಾವನ್ನು ನೋಡಿದ್ದಾರೆ. ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ್ದಾರೆ. ಶಿವಣ್ಣನಿಗೆ ರಿಯಲ್​ ಸ್ಟಾರ್​ ಉಪೇಂದ್ರ ಸಾಥ್​ ನೀಡಿದ್ದಾರೆ. ಇದೇ ವೇಳೆ ನಿರ್ಮಾಪಕ ಕಿಶೋರ್​ ಹಾಗೂ ನಿರ್ದೇಶಕ ಚೇತನ್​ ಕೂಡ ಹಾಜರಿದ್ದರು. ತೆರೆ ಮೇಲೆ ಅಪ್ಪು ನೋಡಿ ಶಿವಣ್ಣ, ಉಪೇಂದ್ರ ಮತ್ತೆ ಭಾವುಕರಾದರು.

ಇದನ್ನೂ ಓದಿ: ಪುನೀತ್​ ಹೆಸರಲ್ಲಿ ಪ್ರತಿನಿತ್ಯ ನಡೀತಿದೆ ಅನ್ನದಾಸೋಹ! ಅಪ್ಪು ಎಂದಿಗೂ ನೀ ನಗುವಿನ ಶ್ರೀಮಂತ

ಶಿವಣ್ಣ ಎಂಟ್ರಿ ಬಳಿಕ ಎಲ್ಲವೂ ಕೂಲ್​ ಕೂಲ್​!‘

ನಿನ್ನೆ ಜೇಮ್ಸ್​ ಥಿಯೇಟರ್​​ ವಿವಾದ ಕಾವು ಏರುತ್ತಿದ್ದಂತೆ ಶಿವಣ್ಣ ಎಂಟ್ರಿಯಾಗಿದ್ದರು. ಸುಮಾರು 45 ನಿಮಿಷಕ್ಕೂ ಹೆಚ್ಚು ಕಾಲ ಫಿಲ್ಮ್​ ಚೇಂಬರ್​​ನಲ್ಲಿ ಚರ್ಚೆ ನಡೆಸಿದ್ದರು. ಇದೇ ವೇಳೆ ಜೇಮ್ಸ್​​ ಸಿನಿಮಾದ ನಿರ್ಮಾಪಕ ಕಿಶೋರ್​ ಕೂಡ ಹಾಜರಿದ್ದರು. ಶಿವಣ್ಣ ಎಂಟ್ರಿಯಾಗಿ ಮಾತುಕತೆ ನಡೆಸಿದ ಬಳಿಕ ಈ ವಿವಾದ ಸುಖಾಂತ್ಯವಾಗಿದೆ. ಜೇಮ್ಸ್ ಚಿತ್ರವನ್ನು ಉಳಿಸಿಕೊಂಡು RRRಗೂ ಫಿಲ್ಮ್ ಚೇಂಬರ್ ಅನುವು ಮಾಡಿಕೊಟ್ಟಿದೆ. ಜೇಮ್ಸ್ ರಿಲೀಸ್ ಆಗಿದ್ದ, ಅನುಪಮ, ಪ್ರಸನ್ನ, ಅಂಜನ್ ಚಿತ್ರಮಂದಿರಗಳಲ್ಲಿ RRR ರಿಲೀಸ್ ಆಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಇಷ್ಟೊಂದು ದುಡ್ಡು ಬಾಚಿದ್ಯಾ `ಆರ್​ಆರ್​ಆರ್’? ಇಲ್ಲೇ ಹಿಂಗ್​ ಅಂದ್ರೆ ಇನ್ನು ಟೋಟಲ್​ ಕಲೆಕ್ಷನ್​ ಎಷ್ಟಿರಬಹುದು?

ತಮಿಳುನಾಡು ಜಾತ್ರೆಯಲ್ಲೂ ಪವರ್​ಸ್ಟಾರ್​!

ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಮುರುಗ ದೇವರಿಗೆ ನಡೆದುಕೊಳ್ಳುವುದು ಸಾಮಾನ್ಯ. ಮುರುಗನಿಗೆ ಹೀಗೆ ಸಿಡಿ ಮಾದರಿಯಲ್ಲಿ ದೇಹಕ್ಕೆ ಇಕ್ಕಳಗಳನ್ನು ಸಿಕ್ಕಿಕೊಂಡು ದೇವರ ಆಭರಣಗಳನ್ನು ಹೊತ್ತು ಬರುವುದು ಸಂಪ್ರದಾಯ. ಈ ಬಾರಿಯೂ ಮುರುಗ ದೇವರ ಪೂಜಾರಿ ದೇಹಕ್ಕೆ ಇಕ್ಕಳ ಚುಚ್ಚಿಸಿಕೊಂಡು ಸಿಡಿ ಏರಿ, ದೇವರ ಬಹು ತೂಕದ ಆಭರಣಗಳ ಗಂಟನ್ನು ನೇತು ಹಾಕಿಕೊಂಡು ಜೊತೆಗೆ ಪುನೀತ್ ರಾಜ್‌ಕುಮಾರ್ ಚಿತ್ರವನ್ನೂ ಹಿಡಿದುಕೊಂಡು ದೇವಸ್ಥಾನಕ್ಕೆ ಹೋಗಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಬಹಳ ವೈರಲ್ ಆಗಿದೆ
Published by:Vasudeva M
First published: