ಸ್ಟಾರ್​ವಾರ್​ನ ಬಿಸಿಗೆ ಸಾಕ್ಷಿಯಾಗಲಿದೆ ಚಳಿಗಾಲ: ಒಂದೇ ದಿನ ರಿಲೀಸ್​ ಆಗಲಿದೆ ಶಿವಣ್ಣ-ಗಣೇಶ್​ ಅಭಿನಯದ ಸಿನಿಮಾಗಳು !

Anitha E | news18
Updated:November 24, 2018, 12:22 PM IST
ಸ್ಟಾರ್​ವಾರ್​ನ ಬಿಸಿಗೆ ಸಾಕ್ಷಿಯಾಗಲಿದೆ ಚಳಿಗಾಲ: ಒಂದೇ ದಿನ ರಿಲೀಸ್​ ಆಗಲಿದೆ ಶಿವಣ್ಣ-ಗಣೇಶ್​ ಅಭಿನಯದ ಸಿನಿಮಾಗಳು !
Anitha E | news18
Updated: November 24, 2018, 12:22 PM IST
ಕನ್ನಡದಲ್ಲಿ ಸ್ಟಾರ್ ನಟರು ಅಳೆದು ತೂಗಿ ಪಾತ್ರಗಳನ್ನು ಆಯ್ದುಕೊಂಡು ವರ್ಷಕ್ಕೊಂದು ಸಿನಿಮಾದಲ್ಲಿಅಭಿನಯಿಸುತ್ತಾರೆ. ಆದರೆ ಇಬ್ಬರು ಸ್ಟಾರ್ ನಟರು ಮಾತ್ರ ಇದಕ್ಕೆ ಅಪವಾದ. ಈ ಇಬ್ಬರೂ ಸ್ಟಾರ್​ಗಳಿಗೆ ವರ್ಷಕ್ಕೆ ಎರಡು ಸಿನಿಮಾ ರಿಲೀಸ್ ಆಗಲೇಬೇಕು. ಮೂರು ಸಿನಿಮಾ ಬಿಡುಗಡೆ ಆದಾಗಲೇ ಸಮಾಧಾನ. ಈಗ ಈ ಇಬ್ಬರೂ ಸ್ಟಾರ್​ಗಳ ನಡುವೇಯೇ ಪೈಪೋಟಿ ಶುರುವಾಗಿದೆ.

ಆ ಇಬ್ಬರು ಸ್ಟಾರ್​ಗಳು ಯಾರು ಅಂತ ನೀವೂ ಯೋಚಿಸ್ತಿದ್ದೀರಾ..? ಒಬ್ಬರು ಗೋಲ್ಡನ್ ಸ್ಟಾರ್ ಗಣೇಶ್ ಮತ್ತೊಬ್ಬರು ಹ್ಯಾಟ್ರಿಕ್ ಹೀರೋ ಶಿವಣ್ಣ. ಸ್ಯಾಂಡಲ್‍ವುಡ್‍ನಲ್ಲಿ ವರ್ಷಕ್ಕೆ 200 ಸಿನಿಮಾ ಬಿಡುಗಡೆಯಾದರೆ ಅದರಲ್ಲಿ ಬೇರೆ ಯಾವ ನಾಯಕರೂ ಬೀಟ್ ಮಾಡಲಾಗದಷ್ಟು ಸಿನಿಮಾ ಇರೋದು ಶಿವಣ್ಣ ಮತ್ತು ಗಣೇಶ್ ಹೆಸರಲ್ಲೇ. ಈಗ ಈ ಇಬ್ಬರೂ ನಟರ ನಡುವಿನ ವಾರ್​ಗೆ ಚಳಿಗಾಲದ ಡಿಸೆಂಬರ್ 7 ಸಾಕ್ಷಿಯಾಗಲಿದೆ.

ಇದನ್ನೂ ಓದಿ: ಪುನೀತ್​ ನೀಡಿದ ನಟ ಸಾರ್ವಭೌಮ ಸವಾಲನ್ನು ಮೊದಲು ಸ್ವೀಕರಿಸಿದ ಪುಟಾಣಿಗಳು

ಒಂದು ಕಡೆ ಶಿವಣ್ಣ ಅಭಿನಯದ 'ಕವಚ'. ಚಿತ್ರದ ಟ್ರೈಲರ್ ನೋಡಿದವರಿಗೆ ರೋಮಾಂಚನವಾಗಿರುತ್ತೆ. ಅಂಧನ ಪಾತ್ರದಲ್ಲಿ ಶಿವಣ್ಣ ಅದ್ಭುತವಾಗಿ ಅಭಿನಯಿಸಿರೋ ಝಲಕ್‍ಗಳಿವೆ. ಅಪರೂಪದ ಪಾತ್ರಕ್ಕೆ ಅನುರೂಪವಾಗಿ ಹೊಂದಿಕೊಂಡಿದ್ದಾರೆ ಸೆಂಚುರಿ ಸ್ಟಾರ್.

ಇನ್ನು ಆಶ್ಚರ್ಯ ಅಂದರೆ, ಗೋಲ್ಡನ್‍ಸ್ಟಾರ್ ಗಣೇಶ್ ಸಿನಿ ಜೀವನದ ಗ್ರಾಫ್ ನೋಡಿದರೆ ವರ್ಷಕ್ಕೆ ಕಡಿಮೆ ಅಂದರೂಎರಡು ಸಿನಿಮಾ ತೆರೆಯಾಗಲೇಬೇಕು. ಈ ವರ್ಷ ಮಾತ್ರ ನವೆಂಬರ್ ಮುಗೀತಾ ಬಂದರೂ ಒಂದೇ ಒಂದು ಸಿನಿಮಾನೂ ತೆರೆ ಕಂಡಿಲ್ಲ. ಆ ಎರಡು-ಮೂರು ಸಿನಿಮಾಗಳ ಪರಿಶ್ರಮ ಒಂದೇ ಸಿನಿಮಾದಲ್ಲಿರುವಂತಿದೆ ಗೋಲ್ಡನ್‍ಸ್ಟಾರ್ ಮಾಡಿರೋ ಕಲರ್​ ಫುಲ್​ 'ಆರೆಂಜ್' ಟೀಸರ್.

ಈ ಎರಡೂ ಚಿತ್ರಗಳು ಡಿಸೆಂಬರ್ ತಿಂಗಳ ಮೊದಲ ಶುಕ್ರವಾರ ಮುಖಾಮುಖಿಯಾಗಲಿವೆ. ಗಣೇಶ್ ಅಭಿನಯದ 'ಆರೆಂಜ್' ಯೂತ್​ಫುಲ್​ ಹಾಗೂ ಕಲರ್​ಫುಲ್​ ಸಿನಿಮಾ. ಶಿವಣ್ಣ ನಟಿಸಿರೋ 'ಕವಚ' ಮಲೆಯಾಳಂನ ಒಪ್ಪಂ ರೀಮೇಕ್. ಸೆಂಟಿಮೆಂಟ್ ಕಥಾಹಂದರ ಹೊಂದಿರೋ 'ಕವಚ'  ಹಾಗೂ 'ಆರೆಂಜ್​'ಎರಡೂ ಬೇರೆ ಬೇರೆ ಶೈಲಿಯನ್ನು ಹೊಂದಿರುವ ಚಿತ್ರಗಳು.

ಎರಡೂ ಒಂದೇ ದಿನ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟರೂ ಗಣೇಶ್ ಸಿನಿಮಾಗಿರೋ ಪ್ರೇಕ್ಷಕರೇ ಬೇರೆ, ಶಿವಣ್ಣ ಸಿನಿಮಾಗಿರೋ ಸೋಡುಗರೇ  ಬೇರೆ. ಹೀಗಿರುವಾಗ ಚಿತ್ರಗಳು ಚೆನ್ನಾಗಿದ್ದು ವರ್ಷಾಂತ್ಯಕ್ಕೆ  ಸ್ಯಾಂಡಲ್‍ವುಡ್‍ನಲ್ಲಿ ಮತ್ತೆರೆಡು ಚಿತ್ರಗಳು ಹಿಟ್ ಆದರೂ ಅಚ್ಚರಿಯಿಲ್ಲ.
Loading...

  
First published:November 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...