• Home
  • »
  • News
  • »
  • entertainment
  • »
  • ಮೈಸೂರು ಮೃಗಾಲಯದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ರೌಂಡ್ಸ್ ..!

ಮೈಸೂರು ಮೃಗಾಲಯದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ರೌಂಡ್ಸ್ ..!

ಮೈಸೂರಿನ ಮೃಗಾಲಯದಲ್ಲಿ ಆನೆಗಳೊಂದಿಗೆ ಶಿವರಾಜ್​ಕುಮಾರ್​

ಮೈಸೂರಿನ ಮೃಗಾಲಯದಲ್ಲಿ ಆನೆಗಳೊಂದಿಗೆ ಶಿವರಾಜ್​ಕುಮಾರ್​

ನಾನು ಪಾರ್ವತಿ ಅನ್ನೋ ಆನೆ  ದತ್ತು ಪಡೆದಿದ್ದೇನೆ. ನನ್ನ ನೂರಾರು ಅಭಿಮಾನಿಗಳು ಸಹ ಪ್ರಾಣಿಗಳನ್ನ ದತ್ತು ಪಡೆದಿದ್ದಾರೆ. ಅಭಿಮಾನಿಗಳು ನಮ್ಮನ್ನ ಫಾಲೋ ಮಾಡ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿಯಾಗಿದೆ. ಮೃಗಾಲಯದ ಎಲ್ಲ ಸಿಬ್ಬಂದಿಗೂ ನನ್ನ ಧನ್ಯವಾದಗಳು ಎಂದಿದ್ದಾರೆ ಶಿವಣ್ಣ.

  • Share this:

ಹ್ಯಾಟ್ರಿಕ್‌ ಹಿರೋ ಶಿವರಾಜ್‌ಕುಮಾರ್ ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್‌ ಆ್ಯಕ್ಟಿವ್ ಹೀರೋ. ಲಾಕ್‌ಡೌನ್‌ನಲ್ಲಿ ಮನೆಯಲ್ಲೇ ಇದ್ದ ನಟ ಶಿವಣ್ಣ, ಅನ್‌ಲಾಕ್ ಆಗುತ್ತಿದ್ದಂತೆ ಇದೀಗ ಹೊರಗೆ ಓಡಾಡಲು ಆರಂಭಿಸಿದ್ದಾರೆ.  ಇಂದು ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದ ನಟ ಶಿವರಾಜ್‌ಕುಮಾರ್‌ ಇಡೀ ಮೃಗಾಲಯ ಸುತ್ತಾಡಿ ಎಂಜಾಯ್ ಮಾಡಿದ್ರು. ಕುಟುಂಬ ಸಮೇತ ಭೇಟಿ ನೀಡಿದ್ದ ಶಿವರಾಜ್ ಕುಮಾರ್, ಪತ್ನಿ ಹಾಗೂ ಇಬ್ಬರು ಮಕ್ಕಳು ಅಳಿಯನ ಜೊತೆ ಮೃಗಾಲಯದಲ್ಲಿ ಸುತ್ತಾಡಿ ಎಂಜಾಯ್ ಮಾಡಿದರು. ತಾವು ದತ್ತು ಪಡೆದ ಪಾರ್ವತಿ ಆನೆಗೆ ಆಹಾರ ತಿನ್ನಿಸಿ ಖುಷಿ ಪಟ್ಟ ಶಿವರಾಜ್ ಕುಮಾರ್ ಕೆಲ ಕಾಲ ಆನೆಗಳ ಮನೆಯಲ್ಲೆ ನಿಂತು ಸಂತಸ ಪಟ್ಟರು. ನಂತರ ಇಡೀ ಮೃಗಾಲಯ ಸುತ್ತಾಡಿ ಪ್ರಾಣಿಗಳ ಖುಷಿ ಪಟ್ಟ ಶಿವಣ್ಣ ಕುಟುಂಬಸ್ಥರಿಗೆ ಮೃಗಾಲಯದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ತಾವೇ ದತ್ತು ಪಡೆದ ಆನೆಗೆ ಆಹಾರ ನೀಡಿ ಖುಷಿ ಪಟ್ಟ ಶಿವಣ್ಣ, ನನಗೆ ಈಗಲೂ ಪ್ರಾಣಿಗಳನ್ನ ನೋಡೋದಂದ್ರೆ ಖುಷಿ ಅಂತ ಹೇಳಿದ್ರು. 


ಮೃಗಾಲಯದಲ್ಲಿ ಸುತ್ತಾಡಿದ ನಂತರ ಮಾತನಾಡಿದ ನಟ ಶಿವರಾಜ್‌ಕುಮಾರ್,  ಮೃಗಾಲಯ ಅಂದ್ರೆ ನನಗೆ ತುಂಬಾ ಇಷ್ಟ, ಈ ವಯಸ್ಸಲ್ಲಿ ಇವನಿಗೇನು ಶೋಕಿ ಅಂದ್ರು ಪರವಾಗಿಲ್ಲ. ಪ್ರಾಣಿಗಳನ್ನ ನೋಡೋದು ಅಂದ್ರೆ ತುಂಬಾ ಇಷ್ಟ. ನಾನು ತುಂಬಾ ವರ್ಷಗಳ ನಂತರ ಮೃಗಾಲಯಕ್ಕೆ ಭೇಟಿ ಕೊಟ್ಟಿದ್ದೇನೆ. ಒಳ ಆವರಣದಲ್ಲಿ ಪ್ರಾಣಿಗಳನ್ನ ನೋಡ್ತೇವೆ ಅನ್ನೋದು ಬಿಟ್ರೆ ಕಾಡಿಗೆ ಬಂದ ಹಾಗೇ ಆಗುತ್ತೆ. ತುಂಬಾ ಚೆನ್ನಾಗಿ ಮೃಗಾಲಯ ನೋಡಿಕೊಂಡಿದ್ದಾರೆ. ನಾನು ಪಾರ್ವತಿ ಅನ್ನೋ ಆನೆ  ದತ್ತು ಪಡೆದಿದ್ದೇನೆ. ನನ್ನ ನೂರಾರು ಅಭಿಮಾನಿಗಳು ಸಹ ಪ್ರಾಣಿಗಳನ್ನ ದತ್ತು ಪಡೆದಿದ್ದಾರೆ. ಅಭಿಮಾನಿಗಳು ನಮ್ಮನ್ನ ಫಾಲೋ ಮಾಡ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿಯಾಗಿದೆ. ಮೃಗಾಲಯದ ಎಲ್ಲ ಸಿಬ್ಬಂದಿಗೂ ನನ್ನ ಧನ್ಯವಾದಗಳು ಎಂದಿದ್ದಾರೆ ಶಿವಣ್ಣ.


geetha shivarajkumar, shivaraj kumar, Sandalwood, Mysore, Zoo,
ಮೈಸೂರಿನ ಮೃಗಾಲಯದಲ್ಲಿ ಶಿವರಾಜ್​ಕುಮಾರ್​


ಲಾಕ್‌ ಡೌನ್ ಮುಗಿದ ಮೇಲೆ ನಾನು ಮೊದಲ ಬಾರಿಗೆ ಬೆಂಗಳೂರು ಬಿಟ್ಟು ಹೊರಗೆ ಬಂದಿದ್ದೇನೆ. 6 ತಿಂಗಳ ನಂತರ ಮೊದಲು ಮೈಸೂರಿಗೆ ಬಂದಿದ್ದೆ. ಮೈಸೂರಿನಲ್ಲಿ ಮೃಗಾಲಯ ನೋಡಿ ಖುಷಿಯಾಗಿದೆ. ಪ್ರಾಣಿಗಳನ್ನ ನೋಡಿದ ತಕ್ಷಣ ಎಂ.ಪಿ.ಶಂಕರ್ ನೆನಪಾದರು. ಹಾಗೇ ಅಪ್ಪಾಜಿ ಜೊತೆಗಿನ ಸಿನಿಮಾ ನೆನಪಾಯ್ತು ಎಂದು  ಹಳೆ ನೆನೆಪುಗಳನ್ನ ಮೆಲುಕು ಹಾಕಿದರು.


ಇದನ್ನೂ ಓದಿ: Nikhil Kumaraswamy: ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ನಿಖಿಲ್​ ಕುಮಾರಸ್ವಾಮಿ..!


ಇನ್ನು, ಇತ್ತಿಚಿಗೆ ಪ್ರಾಣಿ ಪಕ್ಷಿ ಆಧಾರಿತ ಸಿನಿಮಾಗಳು ಬರುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವರಾಜ್‌ಕುಮಾರ್, ಪ್ರಾಣಿ ಆಧಾರಿತ ಸಿನಿಮಾ ಮಾಡೋಕೆ ನನಗೂ ಇಷ್ಟ ಆದರೆ, ಪ್ರಾಣಿದಯಾ ಸಂಘಗಳ ನಿಯಮ ಅನುಸರಿಸೋದು ಸ್ವಲ್ಪ ಕಷ್ಟ.  ಇತ್ತಿಚಿಗೆ ಪ್ರಾಣಿಗಳನ್ನ ಬಳಸಿಕೊಂಡು ಸಿನಿಮಾ ಮಾಡುವಂತಿಲ್ಲ ಎಂದೂ ನಿಯಮ ಮಾಡಿದ್ದಾರೆ. ಇದರಿಂದ ನಾವು ಚಿತ್ರದ ಮೂಲಕ ಪ್ರಾಣಿಗಳ ಬಗ್ಗೆ ಅರಿವು ಮೂಡಿಸೋದು ಕಷ್ಟವಾಗುತ್ತಿದೆ. ಗ್ರಾಫಿಕ್ಸ್ ಬಳಸಿ ಮಾಡಿ ಅಂತಾರೆ. ಅದರಲ್ಲಿ ಸಹಜತೆ ಇರೋಲ್ಲ. ಈಗಿನ ಕಾಲದ ಮಕ್ಕಳಿಗೆ ಗ್ರಾಫಿಕ್ಸ್ ಅನ್ನೋದು ಕ್ಷಣಮಾತ್ರದಲ್ಲಿ ಗೊತ್ತಾಗುತ್ತೆ. ಅಂದಿನ ಕಾಲದಲ್ಲಿ ಅಪ್ಪಾಜಿ ನಿಜವಾದ ಹಾವನ್ನ ಹಿಡಿದು ಚಿತ್ರಿಕರಣ ಮಾಡಿದ್ರು. ಈಗ ಹಾಗೆಲ್ಲ ಮಾಡಲು ಬಿಡೋಲ್ಲ. ಪ್ರಾಣಿಗಳನ್ನ ಬಳಸೋಕೆ ಅನುಮತಿ ನೀಡಿದ್ರೆ, ಸಿನಿಮಾ ಮಾಡಲು ಸಿದ್ಧ ಎಂದು ಹೇಳಿದ ಶಿವರಾಜ್ ಕುಮಾರ್, ಸಿನಿಮಾಗಳಿಗಾಗಿ ಸ್ವಲ್ಪ ವಿನಾಯಿತಿ ನೀಡಲಿ ಎಂದು ಮನವಿ ಮಾಡಿದರು.


Former cricketer Venkatesh Prasad visited Shiva Rajkumars house here is the photos
ಶಿವರಾಜ್‌ಕುಮಾರ್ (ಸಂಗ್ರಹ ಚಿತ್ರ)


ಶಿವರಾಜ್‌ಕುಮಾರ್ ಮೃಗಾಲಯ ಭೇಟಿಗೆ ಸಿಬ್ಬಂದಿ ವರ್ಗವೂ ಖುಷಿಯಾಗಿದ್ದು, ಮೃಗಾಲಯದ ನಿರ್ದೇಶಕರು ಶಿವರಾಜ್‌ಕುಮಾರ್‌ ಅವರಿಗೆ ನೆನಪಿನ ಕಾಣಿಕೆ ನೀಡಿದರು. ಬ್ಯುಸಿ ಸಮಯದಲ್ಲಿ ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ, ಇವರ ಅಭಿಮಾನಿಗಳು ಸಹ ಪ್ರಾಣಿಗಳನ್ನ ದತ್ತು ಪಡೆದಿದ್ದಾರೆ. ಇವರಿಗೆ ನಮ್ಮ ಧನ್ಯವಾದಗಳ ಅಂತ ಮೃಗಾಲಯದ ನಿರ್ದೇಶಕರು ತಿಳಿಸಿದರು.


ಇದನ್ನೂ ಓದಿ: Pranitha Subhash: ಕರಸೇವಕರ ಮೇಲೆ ಗುಂಡು ಹಾರಿಸಿದಾಗ ನ್ಯಾಯ ಎಲ್ಲಿತ್ತು ಎಂದ ನಟಿ ಪ್ರಣೀತಾ


ಒಟ್ಟಾರೆ ಶಿವಣ್ಣನ ಪ್ರಾಣಿ ಪ್ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಂದು ಕುಟುಂಬ ಸಮೇತ ಮೃಗಾಲಯದಲ್ಲಿ ಕಳೆದ ಕ್ಷಣಗಳನ್ನ ಶಿವರಾಜ್‌ಕುಮಾರ್ ಕೂಡ ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಇಡಿ ದಿನ ಇಡೀ ಮೃಗಾಲಯ ಸುತ್ತಾಡಿದ ಶಿವರಾಜ್‌ಕುಮಾರ್ ಇಂದು ಮೃಗಾಲಯದ ಪ್ರಾಣಿಗಳಿಗೆ ಹೊಸ ಅತಿಥಿಯಾಗಿದ್ದರು.

Published by:Anitha E
First published: