ಬೆಂಗಳೂರು: ಶಿವರಾಜ್ ಕುಮಾರ್ ನಟನೆಯ 125ನೇ ಚಿತ್ರ 'ವೇದ' ಚಿತ್ರದ ಟೀಸರ್ ಹಾಗೂ ಗೀತಾ ಪಿಕ್ಚರ್ ಲಾಂಚ್ (Geetha Pictures Launch) ಅದ್ದೂರಿಯಾಗಿ ನಡೆದಿದೆ. ಗೀತಾ ಶಿವರಾಜ್ ಕುಮಾರ್ (Geetha Shiva Rajkumar) ನಿರ್ಮಾಣದ ಚೊಚ್ಚಲ ಚಿತ್ರ ವೇದ ಚಿತ್ರದ ಟೀಸರ್ (Vedha Film Teaser)ವೀಕ್ಷಿಸಲು ಅಭಿಮಾನಿಗಳಿಗೆ ಅವಕಾಶ ದೊರೆತಂತಾಗಿದೆ. ಪಾರ್ವತಮ್ಮ ರಾಜ್ ಕುಮಾರ್ ರೀತಿ ಚಿತ್ರ ನಿರ್ಮಾಣದತ್ತ ಗೀತಾ ಶಿವರಾಜ್ಕುಮಾರ್ ಮುನ್ನೆಡೆಯುತ್ತಿದ್ದಾರೆ. ಕ್ರಿಕೆಟಿಗ ಅನಿಲ್ ಕುಂಬ್ಳೆ ಶಿವಣ್ಣ ಅಭಿನಯದ 125ನೇ ಚಿತ್ರ ವೇದ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಗೀತಾ ಪಿಕ್ಚರ್ಸ್ ಲೋಗೊ ಲಾಂಚ್ ಅನಂತ್ ನಾಗ್ ಬಿಡುಗಡೆಗೊಳಿಸಿದ್ದಾರೆ.
ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ನ ವೈಟ್ ಪೆಟಲ್ಸ್ನಲ್ಲಿ ಶಿವರಾಜ್ ಕುಮಾರ್ (Shiva RajKumar) ನಟನೆಯ 125ನೇ ಚಿತ್ರ 'ವೇದ' ಚಿತ್ರದ ಟೀಸರ್ ಹಾಗೂ ಗೀತಾ ಪಿಕ್ಚರ್ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಶಿವರಾಜ್ ಕುಮಾರ್ ವೇದಿಕೆ ಮೇಲೆ ಕರೆದುಕೊಂಡು ಹೋಗಿದ್ದಾರೆ. ಇಡೀ ಕುಟುಂಬವನ್ನ ಸ್ಟೇಜ್ ಗೆ ಕರೆದ ಶಿವಣ್ಣ ಪುನೀತ್ ರಾಜ್ ಕುಮಾರ್ ಇಬ್ಬರು ಮಕ್ಕಳನ್ನ ಕರೆದು ಪಕ್ಕದಲ್ಲಿ ನಿಲ್ಲಿಸಿಕೊಂಡು ಇಡೀ ಕುಟುಂಬದ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಹೆಚ್ಚಿದೆ ನಿರೀಕ್ಷೆ
ಎ. ಹರ್ಷ ನಿರ್ದೇಶನದಲ್ಲಿ ವೇದ ಸಿನಿಮಾ ತಯಾರಾಗಿದ್ದು, ಭಜರಂಗಿ, ವಜ್ರಕಾಯ, ಭಜರಂಗಿ- 2 ಹಿಟ್ ಚಿತ್ರಗಳ ನಿರ್ದೇಶಕ ಹರ್ಷ ವೇದ ಸಿನಿಮಾದ ಮೂಲಕ ಭರವಸೆ ಮೂಡಿಸಿದ್ದಾರೆ.
ಹಲವು ಗಣ್ಯರು ಭಾಗಿ ಇಂದು ಗೀತಾ ಶಿವರಾಜ್ ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು ಇದೇ ದಿನ ಗೀತಾ ಪಿಕ್ಚರ್ಸ್ ಲಾಂಚ್ ಆಗುತ್ತಿರುವುದು ವಿಶೇಷ ಎನಿಸಿದೆ. ಶಿವರಾಜ್ ಕುಮಾರ್ ಅಭಿನಯದ 125 ಸಿನಿಮಾಗಳ ಕುರಿತ ಸ್ಪೆಷಲ್ ವಿಡಿಯೋ ಪ್ರದರ್ಶನ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಚಿತ್ರರಂಗದ ಹಲವು ಗಣ್ಯರು ಆಗಮಿಸಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾರಿಂದ ಕಾರ್ಯಕ್ರಮ ಶುಭಾರಂಭಗೊಂಡಿದೆ. ಭಜರಂಗಿ ಚಿತ್ರದ ಶ್ರೀ ಆಂಜನೇಯಂ ಹಾಡಿನ ಮೂಲಕ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕಾರ್ಯಕ್ರಮ ಶುರು ಮಾಡಿದ್ದಾರೆ.
ಹಿರಿಯ ನಟ ಅನಂತ್ ನಾಗ್ ಹಾರೈಕೆ ಶಿವರಾಜ್ ಕುಮಾರ್ ಸಿನಿಮಾನ ಅವರ ಪತ್ನಿ ಗೀತಾ ನಿರ್ಮಾಣ ಮಾಡುತ್ತಿದ್ದಾರೆ. ನಾನು ಬಂದ ಕೆಲವೇ ವರ್ಷಗಳಲ್ಲಿ ರಾಜ್ ಕುಮಾರ್ ಕುಟುಂಬ ಪರಿಚಯ ಆಯ್ತು. ರಾಜ್ ಕುಮಾರ್ ಯಾರಿಗೂ ಏನೂ ಹೆಚ್ಚಾಗಿ ಹೇಳುತ್ತಿರಲಿಲ್ಲ. ತಮ್ಮ ಅಭಿನಯದಿಂದ ನಡವಳಿಕೆಯಿಂದ ಎಲ್ಲವನ್ನೂ ಕಲಿಸಿದವರು. ಈಗ ಶಿವರಾಜ್ ಕುಮಾರ್ ಗೆ ಹೇಳೋದು ಇಷ್ಟೇ. ರಾಜ್ ಕುಮಾರ್ ಜೊತೆ ಸೃಜನಶೀಲ ತಂಡ ಇರುತ್ತಿತ್ತು. ಅವರು ಸಮಾಜಕ್ಕೆ ಧೈರ್ಯ, ಸ್ಥೈರ್ಯ ಇರೋ ಕಥೆಯ ಸಿನಿಮಾ ಮಾಡುತ್ತಿದ್ರು. ರಾಜ್ ಕುಮಾರ್ ಮಗನಾಗಿ ಇಂದು ನೀವು ಅಂತಹ ಸಿನಿಮಾಗಳನ್ನ ಮಾಡಬೇಕು. ಅದಕ್ಕೆ ಅವರ ತಂದೆ ತಾಯಿಗಳ ಇಬ್ಬರ ಆಶೀರ್ವಾದ ಇರಲಿದೆ. ಗೀತಾ ಪಿಕ್ಚರ್ಸ್ ಯಶಸ್ವಿ ಆಗಲಿ ಅಂತ ಹಾರೈಸುತ್ತೇನೆ ಎಂದು ಹಿರಿಯ ನಟ ಅನಂತ್ ನಾಗ್ ಶುಭ ಹಾರೈಸಿದ್ದಾರೆ.
ಇದು ಬಿಗಿನಿಂಗ್, ಇದು ಇನ್ನೂ ಮುಂದೆ ಹೋಗುತ್ತೆ!
ಜಗಳ ಆಡಬೇಕು ಅಂದ್ರೆ ನಾನು ಅವಳ ಜೊತೆಗೆ ಮಾಡಬೇಕು ಬೇರೆ ಯಾರು ಇಲ್ಲ ನನ್ನ ಸಕ್ಸಸ್ ಇಷ್ಟು ಮಟ್ಟಕ್ಕೆ ಬರಬೇಕು ಅಂದರೆ ಅದು ಅಭಿಮಾನಿಗಳು ನನ್ನ ಕುಟುಂಬ. ಸ್ನೇಹಿತರು, ಬಂಧು ಬಳಗ ನಿರ್ಮಾಪಕರು ಇಡೀ ಇಂಡಸ್ಟ್ರಿ ನನ್ನ ಜೊತೆ ಇದೆ. ನಿರ್ಮಾಪಕರಿಗೆ ನಾನು ದೊಡ್ಡ ಸಲಾಮ್ ಹೊಡೆಯುತ್ತೇನೆ. ನಿರ್ದೇಶಕರು, ನಿರ್ಮಾಪಕರು ಯಾವಾಗಲೂ ನನ್ನ ಜೊತೆ ಇದ್ದಾರೆ. ಇದು ಬಿಗಿನಿಂಗ್, ಇದು ಇನ್ನೂ ಮುಂದೆ ಹೋಗುತ್ತೆ. ಅನಿಲ್ ಕುಬ್ಳೆ ಹೇಳಿದ ಹಾಗೆ ಇದು ಟೆಸ್ಟ್ ಮ್ಯಾಚ್ ಎಂದು ಶಿವರಾಜ್ ಕುಮಾರ್ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ