ತಮಿಳಿನ ‘ಕೈದಿ’ ಕನ್ನಡಕ್ಕೆ ರಿಮೇಕ್​; ಲೀಡ್​ ರೋಲ್​ನಲ್ಲಿ ರಾಜ್ ಕುಟುಂಬದ ಸ್ಟಾರ್ ನಟ

10 ವರ್ಷಗಳ ಕಾಲ ಜೈಲಿನಲ್ಲಿದ್ದು ಬಂದ ಕೈದಿಯೊಬ್ಬ ಮಗಳನ್ನು ನೋಡಲು ಹೊರಡುತ್ತಾನೆ. ಈ ವೇಳೆ ಆತ ಅನಿವಾರ್ಯವಾಗಿ ಬೇರೆ ಸಂಕಟಕ್ಕೆ ಸಿಲುಕುತ್ತಾನೆ. ನಂತರ ಏನೆಲ್ಲ ಆಗುತ್ತದೆ ಎನ್ನುವುದು ಕೈದಿ ಹೈಲೈಟ್​.

Rajesh Duggumane | news18-kannada
Updated:November 12, 2019, 1:24 PM IST
ತಮಿಳಿನ ‘ಕೈದಿ’ ಕನ್ನಡಕ್ಕೆ ರಿಮೇಕ್​; ಲೀಡ್​ ರೋಲ್​ನಲ್ಲಿ ರಾಜ್ ಕುಟುಂಬದ ಸ್ಟಾರ್ ನಟ
ಇನ್ನು ಈ ಪೋಸ್ಟರ್​ನಲ್ಲಿ ಬಳ್ಳಿಯಿಂದ ಬಂಧಿಸಲ್ಪಟ್ಟ ಜನಿವಾರ ವೇಷಧಾರಿ ಕೂಡ ಇದ್ದು, ಸಂಕಷ್ಟದಿಂದ ಬೆಳಕಿನಡೆ ನೋಡುತ್ತಿರುವ ಸಂದರ್ಭದಲ್ಲಿ ಭಜರಂಗಿ ಕಾಣಿಸುತ್ತಿರುವಂತೆ ಪೋಸ್ಟರ್ ಡಿಸೈನ್ ಮಾಡಲಾಗಿದೆ.
  • Share this:
ತಮಿಳಿನಲ್ಲಿ ತೆರೆಕಂಡಿದ್ದ ಕಾರ್ತಿ ಅಭಿನಯದ ‘ಕೈದಿ’ ಸಿನಿಮಾ ಸೂಪರ್​ ಹಿಟ್​ಆಗಿತ್ತು. ದೀಪಾವಳಿ ಪ್ರಯುಕ್ತ ತೆರೆಗೆ ಬಂದಿದ್ದ ಈ ಸಿನಿಮಾ ಇನ್ನೂ ಮಾರುಕಟ್ಟೆ ಉಳಿಸಿಕೊಂಡಿದೆ. ಈ ಚಿತ್ರ ಈಗ ಕನ್ನಡಕ್ಕೆ ರಿಮೇಕ್​ ಆಗಲು ಸಿದ್ಧವಾಗಿದೆ.

10 ವರ್ಷಗಳ ಕಾಲ ಜೈಲಿನಲ್ಲಿದ್ದು ಬಂದ ಕೈದಿಯೊಬ್ಬ ತನ್ನ ಮಗಳನ್ನು ನೋಡಲು ಹೊರಡುತ್ತಾನೆ. ಈ ವೇಳೆ ಆತ ಅನಿವಾರ್ಯವಾಗಿ ಬೇರೆ ಸಂಕಟಕ್ಕೆ ಸಿಲುಕುತ್ತಾನೆ. ನಂತರ ಏನೆಲ್ಲ ಆಗುತ್ತದೆ ಎನ್ನುವುದು 'ಕೈದಿ' ಕತೆ​. ಈಗ ಈ ಚಿತ್ರ ಈಗ ಕನ್ನಡಕ್ಕೆ ರಿಮೇಕ್​ ಆಗುತ್ತಿದೆ. ಲೀಡ್​ರೋಲ್​ನಲ್ಲಿ ರಾಜ್​ಕುಮಾರ್ ಕುಟುಂಬದ ಕುಡಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಷ್ಟಕ್ಕೂ ಯಾರವರು? ಶಿವರಾಜ್​ಕುಮಾರ್​! ಹೌದು, ಶಿವರಾಜ್​ಕುಮಾರ್​ ‘ಕೈದಿ’ ಸಿನಿಮಾ ವೀಕ್ಷಿಸಿದ್ದು, ತುಂಬಾನೇ ಇಷ್ಟಪಟ್ಟಿದ್ದಾರಂತೆ. ಈ ಸಿನಿಮಾ ಕನ್ನಡದಲ್ಲಿ ರಿಮೇಕ್​ ಮಾಡಿ, ಅದರಲ್ಲಿ ನಟಿಸಬೇಕು ಎನ್ನುವ ಆಲೋಚನೆ ಅವರದ್ದು. ‘ಮಫ್ತಿ’ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಗಡ್ಡ ಬಿಟ್ಟು ಭಿನ್ನವಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಹಿಟ್​ ಆಗಿತ್ತು. ‘ಕೈದಿ’ ಸಿನಿಮಾದ ಪಾತ್ರ ಕೂಡ ತುಂಬಾ ಭಿನ್ನವಾಗಿದ್ದು, ಸೆಂಚುರಿ ಸ್ಟಾರ್​ಗೆ ಹೊಂದಲಿದೆ.

ಇದನ್ನೂ ಓದಿ: ಶಸ್ತ್ರಚಿಕಿತ್ಸೆಗಾಗಿ ಲಂಡನ್​ಗೆ ತೆರಳಿದ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​ಒಂದೊಮ್ಮೆ ‘ಕೈದಿ’ ಸಿನಿಮಾ ಕನ್ನಡಕ್ಕೆ ಬಂದರೆ ಭಿನ್ನ ಚಿತ್ರ ಎನಿಸಿಕೊಳ್ಳಲಿದೆ. ಸಂಜೆಯಿಂದ ಬೆಳಗಿನವರೆಗೆ ಈ ಚಿತ್ರದ ಕಥೆ ಸಾಗುವುದು ಒಂದು ವಿಶೇಷವಾದರೆ, ಈ ಚಿತ್ರದಲ್ಲಿ ಹೀರೋಯಿನ್​ ಇಲ್ಲ ಎನ್ನುವುದು ಮತ್ತೊಂದು ವಿಶೇಷ. ಸ್ಕ್ರಿಪ್ಟ್​​ನಲ್ಲಿ ಕೊಂಚ ಬದಲಾವಣೆ ಮಾಡಿ ಅದನ್ನು ಕನ್ನಡಕ್ಕೆ ತರಲು ಆಲೋಚಿಸಲಾಗಿದೆ ಎನ್ನಲಾಗಿದೆ.

ಈ ಯೋಜನೆ ಇನ್ನೂ ಪ್ರಾಥಮಿಕ ಹಂತದಲ್ಲಿದೆಯಂತೆ. ಹೀಗಾಗಿ, ಈ ಸಿನಿಮಾ ಯಾರು ನಿರ್ದೇಶನ ಮಾಡಲಿದ್ದಾರೆ, ಯಾರು ಬಂಡವಾಳ ಹೂಡಲಿದ್ದಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ.
First published: November 12, 2019, 1:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading