'ಅಭಿಮಾನೋತ್ಸವ': ಶಿವಣ್ಣನ ಹುಟ್ಟುಹಬ್ಬಕ್ಕೆ ಬಿರುಸಿನ ಸಿದ್ಧತೆ

Anitha E | news18
Updated:June 28, 2018, 4:27 PM IST
'ಅಭಿಮಾನೋತ್ಸವ': ಶಿವಣ್ಣನ ಹುಟ್ಟುಹಬ್ಬಕ್ಕೆ ಬಿರುಸಿನ ಸಿದ್ಧತೆ
Anitha E | news18
Updated: June 28, 2018, 4:27 PM IST
ನ್ಯೂಸ್ 18 ಕನ್ನಡ

ಸ್ಯಾಂಡಲ್‍ವುಡ್‍ನಲ್ಲಿ ಸ್ಟಾರ್ ವಾರ್ ಅಷ್ಟೇನು ನಡೀತಿಲ್ಲ.  ಆದರೆ ಅಭಿಮಾನಿಗಳ ನಡುವಿನ ಜಗಳ ಮಾತ್ರ ಇತ್ತಿಚೆಗೆ ಜೋರಾಗಿದೆ. ಅದರಲ್ಲೂ ತಮ್ಮ ನೆಚ್ಚಿನ ತಾರೆಗಳ ಹುಟ್ಟುಹಬ್ಬದ ವಿಚಾರದಲ್ಲಿ ಅಭಿಮಾನಿಗಳು ಜಿದ್ದಿಗೆ ಬಿದ್ದಂತಿದೆ. ಬೇರೆ ತಾರೆಯರಿಗಿಂತ, ನಮ್ಮ ನೆಚ್ಚಿನ ಸ್ಟಾರ್ ಹುಟ್ಟುಹಬ್ಬ ಅದ್ಧೂರಿಯಾಗಿರಬೇಕು ಎಂಬ ಜಿದ್ದಿಗೆ ಬಿದ್ದಿದ್ದಾರೆ ಅಭಿಮಾನಿಗಳು.

ತಮಿಳು-ತೆಲುಗು ಚಿತ್ರರಂಗದಂತೆ ನಮ್ಮ ಚಂದನವನದಲ್ಲಿ ಅಷ್ಟೇನು ಸ್ಟಾರ್ ವಾರ್ ಇರುವುದಿಲ್ಲ. ಇಲ್ಲಿ ಎಲ್ಲ ನಟರು ಒಂದು ಕುಟುಂಬದಂತೆ ಬದುಕುತ್ತಿದ್ದಾರೆ. ಆದರೆ ಅಭಿಮಾನಿಗಳ ನಡುವಿನ ವಾರ್ ಅಂತೂ, ಇತ್ತೀಚಿನ ವರ್ಷಗಳಲ್ಲಿ ಯಾವ ತಮಿಳು-ತೆಲುಗಿನಲ್ಲೂ ಇಲ್ಲದಷ್ಟು ಬಿರುಸು ಪಡೆದುಕೊಂಡಿದೆ. ಅದರಲ್ಲೂ ನಟರ ಹುಟ್ಟುಹಬ್ಬದ ವಿಷಯದಲ್ಲಮತೂ ಅಭಿಮಾನಿಗಳಿಗೆ ಪ್ರತಿಷ್ಠೆಯ ವಿಷಯವಾಗಿ ಹೋಗಿದೆ.

ಈ ವರ್ಷ ಫೆಬ್ರುವರಿ 16ಕ್ಕೆ ದರ್ಶನ್ ಹುಟ್ಟುಹಬ್ಬ ಇತ್ತು. ಅಭಿಮಾನಿಗಳು ತಮ್ಮ ಪ್ರೀತಿಯ ಡಿ-ಬಾಸ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಒಂದು ತಿಂಗಳು ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಂಡಿದ್ದರು. 'ಡಿ ಬಾಸ್ ಉತ್ಸವ' ಎಂಬ ಹೆಸರಿನಲ್ಲಿ ದರ್ಶನ್ ಹುಟ್ಟುಹಬ್ಬವನ್ನು ಫೆಬ್ರುವರಿ 16ರಂದು ಅದ್ಧೂರಿಯಾಗಿ ಆಚರಿಸಿದರು.

ಹಾಗೆಯೇ ಪುನೀತ್ ಹುಟ್ಟುಹಬ್ಬಕ್ಕೂ ಅವರ ಅಭಿಮಾನಿಗಳು ಇದೇ ರೀತಿಯ ತಯಾರಿಯನ್ನ ಮಾಡಿಕೊಂಡಿದ್ದರು.  'ರಾಜರತ್ನೋತ್ಸವ' ಎಂಬ ಹೆಸರಿನಲ್ಲಿ ಸದ್ಯದ ಸ್ಯಾಂಡಲ್‍ವುಡ್ ರಾಜಕುಮಾರನ ಜನುಮದಿನವನ್ನ ಕಂಡು ಕೇಳರಿಯದಷ್ಟು ಗ್ರ್ಯಾಂಡ್ ಆಗಿ ಮಾರ್ಚ್17ರಂದು ಆಚರಿಸಿದರು.

ಸದ್ಯ ಶಿವಣ್ಣನ ಅಭಿಮಾನಿಗಳು ಸಹ, ತಮ್ಮ ಪ್ರೀತಿಯ ಮುತ್ತಣ್ಣನ ಹುಟ್ಟುಹಬ್ಬವನ್ನ ಜೋರು ಜೋರಾಗಿ ಆಚರಿಸೋಕೆ ಸಿದ್ಧತೆ ನಡಿಸಿದ್ದಾರೆ. ಸ್ಯಾಂಡಲ್‍ವುಡ್ ಕಿಂಗ್ ಹುಟ್ಟುಹಬ್ಬ ಜುಲೈ 12ಕ್ಕೆ ಇದ್ದು, ಈಗಿನಿಂದಲೇ ಶಿವಣ್ಣ 'ಅಭಿಮಾನೋತ್ಸವ' ಎಂಬ ಹೆಸರಿನಲ್ಲಿ ಹುಟ್ಟುಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.


Loading...

ಇನ್ನು ಕಳೆದ ವರ್ಷ ಅಮ್ಮನ ಅಗಲಿಕೆಯ ನೋವಲಿದ್ದ ಶಿವಣ್ಣ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದರು. ಕೇಕ್ ಕಟ್ ಮಾಡಿ ಸಂಭ್ರಮಿಸದೆ, ಮನೆಯ ಬಳಿ ಬಂದ ಅಭಿಮಾನಿಗಳ ಅಕ್ಕರೆಯ ಹಾರೈಕೆಯನ್ನು ಸ್ವೀಕರಿಸಿದ್ದರು.

ಆದರೆ ಈ ಬಾರಿ ಶಿವಣ್ಣನ ಅಭಿಮಾನಿಗಳ ಸಿದ್ಧತೆ ನೋಡುತ್ತಿದ್ದರೆ, 56ನೇ ಹುಟ್ಟುಹಬ್ಬದ ಸಂಭ್ರಮಕ್ಕೆ ಅದ್ಧೂರಿತನದ ಕಿಚ್ಚು ಹಚ್ಚೋದದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು. ಹಾಗೆ ಶಿವಣ್ಣನ ಹುಟ್ಟುಹಬ್ಬಕ್ಕೆ ಇನ್ನೊಂದು ಕೊಡುಗೆ ಅಂದರೆ ಜನಾರ್ಧನ್ ಸಾಳ್ವಂಕೆ ಎಂಬುವವರು ಬರೆದಿರೋ ಪುಸ್ತಕ ಬಿಡುಗಡೆಯಾಗಲಿದೆ.

ಒಟ್ಟಾರೆ ಅಭಿಮಾನಿಗಳೇ ನಮ್ಮನೆ ದೇವರು ಅಂತ ಪೂಜಿಸೋ ದೊಡ್ಮನೆ ದೊಡ್ಮಗನ ಹುಟ್ಟುಹಬ್ಬ ಅಂದರೆ, ಅದು ಸ್ಯಾಂಡಲ್‍ವುಡ್ ಪಾಲಿಗೆ ಹಬ್ಬವೇ ಹೌದು. ಆ ಹಬ್ಬಕ್ಕಾಗಿ ಅಭಿಮಾನಿಗಳಷ್ಟೇ ಅಲ್ಲದೆ, ಚಿತ್ರರಂಗ ಕೂಡ ಕಾದು ಕುಳಿತಿದೆ.

 

 

 
First published:June 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ