VIDEO: ‘ಆಯುಷ್ಮಾನ್ ಭವ‘ ಚಿತ್ರದ ಟಪ್ಪಾಂಗುಚ್ಚಿ ಹಾಡಿಗೆ ಸೊಂಟ ಬಳುಕಿಸಿದ ನಿಧಿ ಸುಬ್ಬಯ್ಯ!

Aayushmanbhava: ‘ಅಲಿ ಬಾಬಾ, ಅಲಿ ಬಾಬು ಕುಡಿಯೋ ಕಳ್ಳು ಶೇರಬಾ‘ ಅನ್ನೋ ಕ್ಯಾಚಿ ಲಿರಿಕ್ಸ್​​ಗೆ ನಿಧಿ ಸುಬ್ಬಯ್ಯ ಸೊಂಟ ಬಳುಕಿಸಿದ್ದಾರೆ.

news18-kannada
Updated:November 11, 2019, 7:52 PM IST
VIDEO: ‘ಆಯುಷ್ಮಾನ್ ಭವ‘ ಚಿತ್ರದ ಟಪ್ಪಾಂಗುಚ್ಚಿ ಹಾಡಿಗೆ ಸೊಂಟ ಬಳುಕಿಸಿದ ನಿಧಿ ಸುಬ್ಬಯ್ಯ!
ನಿಧಿ ಸುಬ್ಬಯ್ಯ
  • Share this:
ಶಿವರಾಜ್​ ಕುಮಾರ್​ ಮತ್ತು ರಚಿತಾ ರಾಮ್​ ನಟಿಸಿರುವ ಆಯುಷ್ಮಾನ್​ ಭವ ಸಿನಿಮಾದ ‘ತೆಂಬರೆ ಬೊಟ್ಟುವನ‘ ಲಿರಿಕಲ್ ಹಾಡು ರಿಲೀಸ್​ ಆಗಿದೆ. ಈ ಹಾಡಿಗೆ ಕೊಡಗಿನ ಕುವರಿ ನಿಧಿ ಸುಬ್ಬಯ್ಯ ಭರ್ಜರಿ ಸ್ಟೆಪ್​ ಹಾಕಿದ್ದಾರೆ.

‘ಅಲಿ ಬಾಬಾ, ಅಲಿ ಬಾಬು ಕುಡಿಯೋ ಕಳ್ಳು ಶೇರಬಾ‘ ಅನ್ನೋ ಕ್ಯಾಚಿ ಲಿರಿಕ್ಸ್​​ಗೆ ನಿಧಿ ಸುಬ್ಬಯ್ಯ ಸೊಂಟ ಬಳುಕಿಸಿದ್ದಾರೆ. ಯೋಗರಾಜ್​ ಭಟ್ಟರ ‘ಪಂಚತಂತ್ರ‘ ಸಿನಿಮಾದ ನಂತರ ನಟನೆಯಿಂದ ಕೊಂಚ ದೂರ ಉಳಿದ ನಿಧಿ ಸುಬ್ಬಯ್ಯ, ಇದೀಗ ಮತ್ತೆ ಸ್ಯಾಂಡಲ್​ವುಡ್​ನಲ್ಲಿ ಬಣ್ಣ ಹಚ್ಚಿರುವುದೇ ವಿಶೇಷ.

ಪಾರ್ಟಿಯಲ್ಲಿ ನಡೆಯುವ ಎಣ್ಣೆ ಸಾಂಗ್​ ಇದಾಗಿದ್ದು, ತುಳು ಭಾಷೆಯ ಸಾಹಿತ್ಯವನ್ನು ಒಳಗೊಂಡಿದೆ. ಈ ಹಾಡಿಗೆ ಡಾ. ನಾಗೇಂದ್ರ ಪ್ರಸಾದ್​ ಸಾಹಿತ್ಯವನ್ನು ಬರೆದಿದ್ದು ಸೋನು ಕಕ್ಕರ್​ ಕಂಠದಲ್ಲಿ ‘ತೆಂಬರೆ ಬೊಟ್ಟುವನ‘ ಹಾಡು ಮೂಡಿ ಬಂದಿದೆ.ಆಯುಷ್ಮಾನ್​ ಭವ ಸಿನಿಮಾ ದ್ವಾರಕೀಶ್​ ಹೋಂ ಬ್ಯಾನರ್​ನಲ್ಲಿ ನಿರ್ಮಾಣವಾಗುತ್ತಿದೆ. ಪಿ. ವಾಸು ನಿರ್ದೇಶನ ಮಾಡಿದ್ದಾರೆ. ಗುರು ಕಿರಣ್​ ಸಂಗೀತ ಸಂಯೋಜನೆಯ ನೂರನೇ ಸಿನಿಮಾ ಇದಾಗಿದ್ದು, ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

ಇದನ್ನೂ ಓದಿ: ಮಿತಿಗಿಂತ ಹೆಚ್ಚು ಈ ಕೆಲಸ ಮಾಡಿದರೆ ಅಪಾಯ ಗ್ಯಾರಂಟಿ!

ಇದನ್ನೂ ಓದಿ: ಸೆರಗು ಹರಿಬಿಟ್ಟು ಬೋಲ್ಡ್ ಲುಕ್​ನಲ್ಲಿ ಕಾಣಿಸಿಕೊಂಡ ಸ್ಯಾಂಡಲ್​​ವುಡ್​​ ನಟಿ; ಫೋಟೋ ವೈರಲ್
First published:November 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ