Shivarajkumar: ರಜನಿಕಾಂತ್ ಜೈಲರ್ ಚಿತ್ರದಲ್ಲಿ ಶಿವಣ್ಣ ಪಾತ್ರ ರಿವೀಲ್! ಹೇಗಿರುತ್ತೆ ಟಗರು ಖದರ್!?

ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಒಟ್ಟಿಗೆ, ಜೈಲರ್ ಸಿನಿಮಾದಲ್ಲಿ ನಟಿಸ್ತಾರೆ ಎಂಬ ಸುದ್ದಿ ಕೇಳಿಯೇ ಕನ್ನಡ ಹಾಗೂ ತಮಿಳು ಸಿನಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ರಜನಿಕಾಂತ್ ಅವರ 169ನೇ ಸಿನಿಮಾ ಇದಾಗಿದ್ದು, ಈ ಸಿನಿಮಾದಲ್ಲಿ ಶಿವಣ್ಣನೇ ವಿಲನ್​ ಅನ್ನೋ ಮಾಹಿತಿ ಹೊರಬಂದಿದೆ.

ರಜನಿಕಾಂತ್​, ಶಿವರಾಜ್ ಕುಮಾರ್​

ರಜನಿಕಾಂತ್​, ಶಿವರಾಜ್ ಕುಮಾರ್​

  • Share this:
ಸೂಪರ್‌ ಸ್ಟಾರ್ (Super Star) ರಜನಿಕಾಂತ್ (Rajinikanth) ಹಾಗೂ ಹ್ಯಾಟ್ರಿಕ್​ ಹೀರೋ ಶಿವರಾಜ್‌ಕುಮಾರ್ (Shivarajkumar) ಮುಂದಿನ ಸಿನಿಮಾದಲ್ಲಿ (Cinema) ಒಟ್ಟಿಗೆ ನಟಿಸುತ್ತಿರುವ ಸುದ್ದಿ (News) ಎಲ್ಲರಿಗೂ ಗೊತ್ತೇ ಇದೆ. ರಜನಿಕಾಂತ್ ಹೊಸ ಸಿನಿಮಾ ಬರ್ತಿದೆ ಅಂತ ‘ತಲೈವಾ’ (Thalaiva) ಅಭಿಮಾನಿಗಳು (Fans) ಕುಣಿದು ಕುಪ್ಪಳಿಸುತ್ತಿದ್ದಾರೆ. ಇತ್ತ ಶಿವಣ್ಣನ (Shivanna) ಅಭಿಮಾನಿಗಳೂ ಕೂಡ ಈ ಸುದ್ದಿ ತಿಳಿದು ಸಂತಸಗೊಂಡಿದ್ದಾರೆ. ಸೂಪರ್‌ ಸ್ಟಾರ್ ಹಾಗೂ ಸೆಂಚುರಿ ಸ್ಟಾರ್ ಅಭಿಮಾನಿಗಳು ಈ ಸಿನಿಮಾ ಯಾವಾಗ ಬರುತ್ತೆ? ಶೂಟಿಂಗ್ (Shooting) ಯಾವಾಗ ಸ್ಟಾರ್ಟ್ ಆಗುತ್ತೆ ಅಂತ ಕಾಯ್ತಿದ್ದಾರೆ. ಈ ಸಿನಿಮಾದ ಅಪ್‌ಡೇಟ್ಸ್ (Updates) ಏನಿದೆ ಅಂತ ಹುಡುಕುತ್ತಿದ್ದಾರೆ. ಈ ಎಲ್ಲಾ ಕಾತರಕ್ಕೆ, ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ.

ರಜನಿಕಾಂತ್​ ಚಿತ್ರದಲ್ಲಿ ಶಿವಣ್ಣನೇ ವಿಲನ್​

ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಒಟ್ಟಿಗೆ, ಜೈಲರ್ ಸಿನಿಮಾದಲ್ಲಿ ನಟಿಸ್ತಾರೆ ಎಂಬ ಸುದ್ದಿ ಕೇಳಿಯೇ ಕನ್ನಡ ಹಾಗೂ ತಮಿಳು ಸಿನಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ರಜನಿಕಾಂತ್ ಅವರ 169ನೇ ಸಿನಿಮಾ ಇದಾಗಿದ್ದು, ಪಾನ್ ಇಂಡಿಯಾ ಮೂವಿ ಇದಾಗಲಿದೆ. ಈ ಸಿನಿಮಾದಲ್ಲಿ ಶಿವಣ್ಣನೇ ವಿಲನ್​ ಅನ್ನೋ ಮಾಹಿತಿ ಹೊರಬಂದಿದೆ.

ರಜನಿಕಾಂತ್ ಗೆ ಐಶ್ವರ್ಯಾ ರೈ ನಾಯಕಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೊದಲ ಬಾರಿಗೆ ತಮಿಳಿನ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ. ಅದು ಕೂಡ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೈಲರ್ ಸಿನಿಮಾದಲ್ಲಿ ಶಿವಣ್ಣ ಬಣ್ಣ ಹಚ್ಚುತ್ತಿದ್ದಾರೆ.. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಅಂದ್ಹಾಗೆ ಈ ಸಿನಿಮಾದಲ್ಲಿ ರಜನಿಕಾಂತ್ ಗೆ ಐಶ್ವರ್ಯ ನಾಯಕಿ ಎನ್ನಲಾಗಿತ್ತು. ಅವರ ಜಾಗಕ್ಕೆ ತಮನ್ನಾರನ್ನ ಕರೆತರಲಾಗಿದೆ ಎಂಬ ವದಂತಿ ಸಾಕಷ್ಟು ಸೌಂಡ್ ಮಾಡ್ತಿದೆ.

ದನ್ನೂ ಓದಿ: Shivarajkumar: ಪ್ಯಾನ್ ಇಂಡಿಯಾ ಚಿತ್ರದಲ್ಲಿ ಶಿವಣ್ಣ, ತಮಿಳು ಸೂಪರ್ ಸ್ಟಾರ್​ ಸಿನಿಮಾದಲ್ಲಿ ಸೆಂಚುರಿ ಸ್ಟಾರ್​!

ಜೈಲರ್ ಸಿನಿಮಾಗೆ 4 ಮಂದಿ ನಾಯಕಿಯರು 

ಇದೆಲ್ಲದರ ನಡುವೆ ಈ ಸಿನಿಮಾದಲ್ಲಿ ನಾಲ್ಕು ಮಂದಿ ನಾಯಕಿಯರು ಇರಲಿದ್ದಾರೆ ಎಂಬ ಸುದ್ದಿ ಸಾಕಷ್ಟು ಸೌಂಡ್ ಮಾಡ್ತಿದೆ. ಅಂದ್ಹಾಗೆ ರಜನಿಕಾಂತ್ ಅವರ ಅಣ್ಣಾತೆ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ ಇದೀಗ ಅವರ ಅಭಿಮಾನಿಗಳಿಗೆ ಯುವ ನಿರ್ದೇಶಕ ನೆಲ್ಸನ್ ನಿರ್ದೇಶನದ ಜೈಲರ್ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಯಿದೆ.

ಸನ್ ಪಿಕ್ಚರ್ಸ್​ ನಿರ್ಮಾಣದ ಜೈಲರ್​

ಜೈಲರ್ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದೆ. ಮಾಸ್ಟರ್ ಅನಿರುದ್ಧ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಮೂಲಗಳ ಪ್ರಕಾರ ಜೈಲರ್ ಚಿತ್ರದಲ್ಲಿ ರಜಿನಿಕಾಂತ್ ಜೊತೆಗೆ ನಟಿ ರಮ್ಯಾ ಕೃಷ್ಣನ್ ನಟಿಸಲಿದ್ದಾರೆ ಎನ್ನಲಾಗ್ತಿದೆ. ಆದ್ರೆ ಇಲ್ಲಿ ಸ್ವಾರಸ್ಯಕರ ಸಂಗತಿಯೆಂದ್ರೆ ಈ ಸಿನಿಮಾದಲ್ಲಿ ಶಿವಣ್ಣ ವಿಲನ್ ಎನ್ನಲಾಗ್ತಿದೆ. ಕನ್ನಡದಲ್ಲಿ ಸದಾ ಹೀರೋ ಆಗಿ , ಅನೇಕರ ರೋಲ್ ಮಾಡಲ್ ಆಗಿರೋ ಶಿವಣ್ಣ ವಿಲನ್ ಪಾತ್ರ ಹೇಗಿರಲಿದೆ ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳನ್ನ ಕಾಡ್ತಿದೆ.

ಮಿಲ್ಕಿ ಬ್ಯುಟಿ ತಮನ್ನಾ 

ಇನ್ನೂ ಪ್ರಿಯಾಂಕಾ ಮೋಹನ್ ಮತ್ತು ಐಶ್ವರ್ಯಾ ರೈ ಸಹ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಇದಲ್ಲದೇ ತಮನ್ನಾ ಸಹ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗ್ತಿದೆ. ಹಾಗಾದ್ರೆ ತಮನ್ನಾ ಐಶ್ವರ್ಯಾಗೆ ಪರ್ಯಾಯವಾಗಿ ಬಂದಿಲ್ಲ ಬದಲಾಗಿ ಐಶ್ವರ್ಯಾ ಜೊತೆಗೆ ಇವರೂ ನಟಿಸುವ ಸಾಧ್ಯತೆ ಇದೆ. ಆದ್ರೆ ಯಾವುದೂ ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ.

ಇದನ್ನೂ ಓದಿ: Puneeth Rajkumar: ಇದಪ್ಪಾ ಪವರ್ ಸ್ಟಾರ್ ಪವರ್; ಇವ್ರಿಂದ ‘ಲಕ್ಕಿಮ್ಯಾನ್’ಗೆ ಸಿಕ್ಕಾಪಟ್ಟೆ ಲಕ್​

ರಜನಿ ಜೊತೆ ನಟಿಸಲು ಕಾತರನಾಗಿದ್ದೇನೆ

ಇನ್ನು ರಜನಿಕಾಂತ್ ಜೊತೆ ನಟಿಸುವ ಬಗ್ಗೆ ಶಿವರಾಜ್‌ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಚಿಕ್ಕಂದಿನಿಂದಲೂ ರಜನಿಕಾಂತ್ ಅವರನ್ನು ಬಲ್ಲೆ. ಅಪ್ಪಾಜಿ ಜೊತೆ ಅನೇಕ ಬಾರಿ ಅವರನ್ನು ನೋಡಿದ್ದೇನೆ. ವಿಶೇಷವಾಗಿ ಗೌರವಿಸುವ ವ್ಯಕ್ತಿಗಳಲ್ಲಿ ಅವರು ಕೂಡ ಒಬ್ಬರು. ನನ್ನ ಮತ್ತು ರಜನಿಕಾಂತ್ ಅವರ ಕಾಂಬಿನೇಷನ್ ಅನ್ನು ಅಭಿಮಾನಿಗಳು ಇಷ್ಟ ಪಡುತ್ತಾರೆ. ಆಗಸ್ಟ್ ನಿಂದ ಈ ಸಿನಿಮಾದ ಶೂಟಿಂಗ್ ನಡೆಯಲಿದೆ ಎಂದು ಸಿನಿಮಾ ಟೀಮ್ ತಿಳಿಸಿದೆ ಅಂತ ಹಿಂದೆಯೇ  ಶಿವರಾಜ್‌ ಕುಮಾರ್ ಹೇಳಿದ್ದರು.
Published by:Pavana HS
First published: