VOOTನಲ್ಲಿ ಶುರು ಬೈರಾಗಿಯ ಭರ್ಜರಿ ಹುಲಿ ಡ್ಯಾನ್ಸ್; ಮನೆಯಲ್ಲೇ ಕುಳಿತು ನೋಡಿ ಶಿವಣ್ಣ, ಡಾಲಿ ಖಡಕ್ ಫೈಟ್!

ಮಾಸ್ ಎಂಟರ್‌ಟೈನರ್ 'ಬೈರಾಗಿ' ಚಿತ್ರದಲ್ಲಿ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್, ಪೃಥ್ವಿ ಅಂಬರ್ಮತ್ತು ಅಂಜಲಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಆಗಸ್ಟ್ 19ರಂದು ವೂಟ್ ಸೆಲೆಕ್ಟ್ ನಲ್ಲಿ ಬೈರಾಗಿಯ ಪ್ರಥಮ ಪ್ರದರ್ಶನ ಕಂಡಿದೆ.

ವೂಟ್​ ಸೆಲೆಕ್ಟನ್​ನಲ್ಲಿ ಬೈರಾಗಿ

ವೂಟ್​ ಸೆಲೆಕ್ಟನ್​ನಲ್ಲಿ ಬೈರಾಗಿ

  • Share this:
ಇತ್ತೀಚಿಗಷ್ಟೆ ಬಿಡುಗಡೆಯಾಗಿ ಸೂಪರ್​ ಹಿಟ್​ ಆದ ಬೈರಾಗಿ ಸಿನಿಮಾ ಓಟಿಟಿಯಲ್ಲಿ ರಿಲೀಸ್​​ ಆಗಲಿದೆ. ಟಗರು ಚಿತ್ರದ ಬಳಿಕ‌ ಶಿವರಾಜ್ ಕುಮಾರ್ (Shivaraj kumar) ಜೊತೆ ಡಾಲಿ ಧನಂಜಯ್ (Dolly Dhananjay) ಒಟ್ಟಿಗೆ ಕಾಣಿಸಿಕೊಂಡ ಬೈರಾಗಿ ಚಿತ್ರ ವೂಟ್ ಸೆಲೆಕ್ಟ್​ನಲ್ಲಿ (VOOT Select) ಪ್ರಸಾರ ಆಗುತ್ತಿದೆ. ವಿಮರ್ಶಕರ ಹಾಗೂ ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾದ ಬೈರಾಗಿ ಚಿತ್ರವನ್ನು ವೂಟ್ ಸೆಲೆಕ್ಟ್​ನಲ್ಲಿ ನೋಡಬಹುದಾಗಿದೆ. ಬೈರಾಗಿ ಚಿತ್ರಕ್ಕೆ ವಿಮರ್ಶಕರು ಸಹ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮಾಸ್ ಎಂಟರ್‌ಟೈನರ್ 'ಬೈರಾಗಿ' (Bairagee) ಚಿತ್ರದಲ್ಲಿ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್, ಪೃಥ್ವಿ ಅಂಬರ್ (Pruthvi Ambaar) ಮತ್ತು ಅಂಜಲಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಆಗಸ್ಟ್ 19ರಂದು ವೂಟ್ ಸೆಲೆಕ್ಟ್ ನಲ್ಲಿ ಬೈರಾಗಿಯ ಪ್ರಥಮ ಪ್ರದರ್ಶನ ಕಂಡಿದೆ.

ಮಾಸ್​ ಸಿನಿಮಾ ಇಷ್ಟ ಪಡುವವರಿಗೆ ಮಸ್ತ್​​ ಮನರಂಜನೆ

ಸಮಾಜದ ಕೆಲವು ಅನಿಷ್ಟಗಳ ವಿರುದ್ಧ ಹೋರಾಡುವ ಸಿನಿಮಾವೇ 'ಬೈರಾಗಿ'. ಸಮಾಜದ ಮೌಲ್ಯಗಳನ್ನು ಗೌರವಿಸುವ ಕಲಾವಿದ ಹುಲಿ ಶಿವನ ಕಥೆಯನ್ನು ಆಕ್ಷನ್ ಹಾಗೂ ಭಾವನಾತ್ಮಕ ಸನ್ನಿವೇಶಗಳ ಮೂಲಕ ತೆರೆಮೇಲೆ ತರಲಾಗಿದೆ. ಹೀಗಾಗಿ ಮಾಸ್ ಸಿನಿಮಾ ಇಷ್ಟ ಪಡುವವರಿಗೆ 'ಬೈರಾಗಿ' ಇಷ್ಟ ಆಗೋದು ಗ್ಯಾರೆಂಟಿ

ಹುಲಿವೇಷ ಹಾಕೋದು ನನಗೆ ಸವಾಲಾಗಿತ್ತು

ಇನ್ನು ಓಟಿಟಿಯಲ್ಲಿ ಚಿತ್ರ ಪ್ರಸಾರದ ಬಗ್ಗೆ ಮಾತನಾಡಿರುವ ಬೈರಾಗಿ ಸಿನಿಮಾ ನಾಯಕ ನಟ ಶಿವರಾಜ್‌ ಕುಮಾರ್, ಬೈರಾಗಿಯಂತಹ ಸಂಪೂರ್ಣ ಪ್ಯಾಕೇಜ್‌ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದರಿಂದ ಖುಷಿಯಾಗಿದೆ. ಹುಲಿ ಶಿವನ ಪಾತ್ರ ಮಾಡುವುದು ಮತ್ತು ಹುಲಿವೇಷ ಹಾಕುವುದು ನನಗೆ ಸವಾಲಾಗಿತ್ತು. ನಿರ್ದೇಶಕ ವಿಜಯ್ ಈ ಪಾತ್ರವನ್ನು ಜೀವಂತಿಕೆಯಿಂದ ನಿರ್ವಹಿಸಲು ಸಹಾಯ ಮಾಡಿದರು. ವೂಟ್ ಸೆಲೆಕ್ಟ್​​ನಲ್ಲಿ ಚಲನಚಿತ್ರ ಒಟಿಟಿ ಮೂಲಕ ಬಿಡುಗಡೆ ಆಗುತ್ತಿದ್ದು, ನಾನು ಬಹಳ ಉತ್ಸುಕನಾಗಿದ್ದೇನೆ‌ ಎಂದು ತಿಳಿಸಿದರು.

Shivarajkumar Hulivesha dance in Bairagee Film pre launch event
ಬೈರಾಗಿ ಝಲಕ್


ಇದನ್ನೂ ಓದಿ: Puneeth Rajkumar: ಇದಪ್ಪಾ ಪವರ್ ಸ್ಟಾರ್ ಪವರ್; ಇವ್ರಿಂದ ‘ಲಕ್ಕಿಮ್ಯಾನ್’ಗೆ ಸಿಕ್ಕಾಪಟ್ಟೆ ಲಕ್​

ಪ್ರೇಕ್ಷಕರ ಪ್ರತಿಕ್ರಿಯೆ ನೋಡಲು ಉತ್ಸುಕನಾಗಿದ್ದೇನೆ

ಬೈರಾಗಿಯಲ್ಲಿ ಅಭಿನಯಿಸಿರೋ ನಟ ಡಾಲಿ ಧನಂಜಯ್ ಮಾತನಾಡಿ, ಈ ಸಿನಿಮಾ ಮತ್ತು ನನ್ನ ಪಾತ್ರ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿವೆ. ನಾನು ಶಿವರಾಜ್‌ಕುಮಾರ್ ಅವರ ದೊಡ್ಡ ಅಭಿಮಾನಿ. ಅವರೊಂದಿಗೆ ನಟಿಸಲು ಮತ್ತೆ ಅವಕಾಶ ಸಿಕ್ಕಿದ್ದು ನನಗೆ ಸಿಕ್ಕ ಅತಿ ದೊಡ್ಡ ಗೌರವವಾಗಿದೆ. ಶಿವಣ್ಣ ಮತ್ತು ವಿಜಯ್ ಅವರಂತಹ ದಿಗ್ಗಜರೊಂದಿಗೆ ಕೆಲಸ ಮಾಡುವ ಕನಸು ನನಸಾಗಿದೆ. ಪ್ರತಿ ದೃಶ್ಯವೂ ಅದ್ಭುತವಾಗಿದೆ. ವೂಟ್​ ಸೆಲೆಕ್ಟ್​ನಲ್ಲಿ ಚಿತ್ರದ ಬಗ್ಗೆ ಪ್ರೇಕ್ಷಕರ ಪ್ರತಿಕ್ರಿಯೆ ನೋಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.

ಬೈರಾಗಿ ನನ್ನ ಕನ್ನಡದ ಚೊಚ್ಚಲ ಚಿತ್ರ

ಬೈರಾಗಿ ಚಿತ್ರದ ನಿರ್ದೇಶಕ ವಿಜಯ್ ಮಿಲ್ಟನ್ ಮಾತನಾಡಿ, ಹುಲಿ ಶಿವನ ಪಾತ್ರವನ್ನು ಇಷ್ಟು ಚೆನ್ನಾಗಿ ಕಟ್ಟಿಕೊಡಲು ಶಿವಣ್ಣ ಅವರಲ್ಲದೇ ಬೇರೆ ಯಾರಿಗೂ ಸಾಧ್ಯವಿಲ್ಲ ಎಂದ್ರು. ಅವರೊಬ್ಬ ಶ್ರೇಷ್ಠ ನಟ. ಅತ್ಯಂತ ವಿನಮ್ರ ಮತ್ತು ಉದಾರ ವ್ಯಕ್ತಿ. ಪಾತ್ರ ಮತ್ತು ಚಿತ್ರಕಥೆಗೆ ಪ್ರಾಮಾಣಿಕವಾಗಿರುವುದು ಮಾತ್ರ ಅವರ ಗಮನವಾಗಿತ್ತು.

ಇದನ್ನೂ ಓದಿ: ಬಿಗ್​ ಬಾಸ್ ಮನೆಗೆ ಹೋಗೋಕೆ ಕಾಫಿ ನಾಡು ಚಂದು ನಾನಾ ಕಸರತ್ತು! ಶುರುವಾಯ್ತು ಹೊಸ ಅಭಿಯಾನ

ಬೈರಾಗಿ ನನ್ನ ಕನ್ನಡದ ಚೊಚ್ಚಲ ಚಿತ್ರವಾಗಿದ್ದು, ವಿಶೇಷವಾಗಿದೆ. ನನ್ನ ಕಥೆ ಮತ್ತು ನಿರೂಪಣೆಯಲ್ಲಿ ನಂಬಿಕೆ ಇಟ್ಟು ಶ್ರದ್ಧೆಯಿಂದ ಅಭಿನಯಿಸಿ, ಶ್ರೇಷ್ಠ ಸಿನಿಮಾ ಮೂಡಿಬರಲು ಕಾರಣರಾದ ಪಾತ್ರವರ್ಗ ಮತ್ತು ಸಿಬ್ಬಂದಿಗೆ ನಾನು ಕೃತಜ್ಞನಾಗಿದ್ದೇನೆ. ಪ್ರೇಕ್ಷಕರು ಚಿತ್ರವನ್ನು ಆನಂದಿಸುತ್ತಾರೆ. ಸಾಮಾಜಿಕ ಸಂದೇಶ ಅವರ ಮನದಲ್ಲಿ ಅಚ್ಚಳಿಯದೇ ಉಳಿಯುತ್ತದೆ ಎಂದು ಆಶಾವಾದ ವ್ಯಕ್ತಪಡಿಸಿದರು.
Published by:Pavana HS
First published: