Shivaji Case No.131: ಎಸಿಪಿ ಶಿವಾಜಿ ಸುರತ್ಕಲ್ ಬೆನ್ನಟ್ಟಿ ಹೊರಟ 131 ಕೇಸ್, ಈ ಬಾರಿ ಏನ್ ಇರುತ್ತದೆ ರೋಚಕತೆ!

ಶಿವಾಜಿ ಸುರತ್ಕಲ್-2 ಸಿನಿಮಾದ ಹೊಸ ಅಪ್​ ಡೇಪ್ ಬಂದಿದೆ. ಚಿತ್ರದ ಪಾರ್ಟ್-2ನಲ್ಲಿ ಏನೆಲ್ಲ ವಿಶೇಷ ಇರುತ್ತದೆ. ಯಾರೆಲ್ಲ ಹೊಸ ಕಲಾವಿದರು ಈ ಕಥೆಯಲ್ಲಿ ಈ ಸಲ ಜಾಯಿನ್ ಆಗಿದ್ದಾರೆ.

ಶಿವಾಜಿ ಸುರತ್ಕಲ್-2 ಬಗ್ಗೆ ಹೆಚ್ಚಿದ ಕುತೂಹಲ

ಶಿವಾಜಿ ಸುರತ್ಕಲ್-2 ಬಗ್ಗೆ ಹೆಚ್ಚಿದ ಕುತೂಹಲ

  • Share this:
    !ಶಿವಾಜಿ ಸುರತ್ಕಲ್-2 (SHIVAJI SURATHKAL) ಸಿನಿಮಾದ ಹೊಸ ಅಪ್​ ಡೇಪ್ ಬಂದಿದೆ. (CINEMA UPDATES) ಚಿತ್ರದ ಪಾರ್ಟ್-2ನಲ್ಲಿ ಏನೆಲ್ಲ ವಿಶೇಷ ಇರುತ್ತದೆ. ಯಾರೆಲ್ಲ ಹೊಸ ಕಲಾವಿದರು ಈ ಕಥೆಯಲ್ಲಿ ಈ ಸಲ ಜಾಯಿನ್ ಆಗಿದ್ದಾರೆ. ಎಸಿಪಿ (ACP) ಶಿವಾಜಿ ಈ ಬಾರಿ ಬೆನ್ನಟ್ಟಿ ಹೊರಟ ಆ ಕೇಸ್ ಯಾವುದು.? ಎರಡನೇ ಭಾಗದ ಚಿತ್ರ ಅರ್ಥ ಆಗಬೇಕು ಅಂದ್ರೆ ಭಾಗ ಒಂದು ನೋಡಲೇಬೇಕೆ ? ಈ ಬಗ್ಗೆ ಡೈರೆಕ್ಟರ್ ಆಕಾಶ್ ಶ್ರೀವತ್ಸ ನಮ್ಮ ಜೊತೆಗೆ ಸಾಕಷ್ಟು ವಿಷಯಗಳನ್ನ ಹಂಚಿಕೊಂಡಿದ್ದಾರೆ.

    ಶಿವಾಜಿ ಸುರತ್ಕಲ್ ಸಿನಿಮಾ ರಮೇಶ್ ಅರವಿಂದ್ ಅವರ ಚಿತ್ರ ಬದುಕಿನ ವಿಶೇಷ ಸಿನಿಮಾ. ಶಿವಾಜಿ ಸುರತ್ಕಲ್ ಚಿತ್ರಕ್ಕಾಗಿ ದಾಡಿ ಬಿಟ್ಟು ಬೇರೆ ರೀತಿಯೇ ಕಾಣಿಸಿಕೊಂಡ್ರು. ಅಷ್ಟೇ ಅಲ್ಲ, ರಮೇಶ್ ಅರವಿಂದ್ ಅವ್ರು ಒಪ್ಪಿ ಕೊಂಡು ನಿರ್ವಹಿಸಿದ್ದ ಈ ಪಾತ್ರವನ್ನ ಈಗ ಎಲ್ಲರೂ ಮೆಚ್ಚಿಕೊಂಡು ಪಾರ್ಟ್-2 ಚಿತ್ರಕ್ಕಾಗಿಯೇ ಕಾಯುತ್ತಿದ್ದಾರೆ.

    ಎಸಿಪಿ ಶಿವಾಜಿ ಸುರತ್ಕಲ್ ಬೆನ್ನಟ್ಟಿದ ಆ ಕೇಸ್ ಯಾವುದು ?

    ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ಈ ಸಲ ಬರೋ ಕೇಸ್ ಬೇರೆ ಇದೆ. ಕಳೆದ ಬಾರಿಯ ಕೇಸ್ ನಂಬರ್-102 ಆಗಿತ್ತು. ಆದರೆ, ಈ ಬಾರಿ ಎಸಿಪಿ ಶಿವಾಜಿ ಸುರತ್ಕಲ್ ಬೆನ್ನಟ್ಟಿ ಹೊರಟ ಕೇಸ್ ನಂಬರ್-131 ಆಗಿದೆ. ಇಲ್ಲೂ ಮಿಸ್ಟರಿಗಳಿವೆ. ಒಂದಷ್ಟು ಹಿಸ್ಟರಿನೂ ಇದೆ. ಎರಡೂ ಇರೋ ಶಿವಾಜಿ ಸುರತ್ಕಲ್-2 ನಲ್ಲಿ ಪ್ರೇಕ್ಷಕರು ಮತ್ತೊಂದು ರೋಚಕ ಕಥೆಯನ್ನ ಅಷ್ಟೇ ಕುತೂಹಲದಿಂದಲೇ ಕಾಣಬಹುದಾಗಿದೆ.

    Shivaji Surathkal-2 Najar Acting
    ರಮೇಶ್ ಅರವಿಂದ್ ಅಪ್ಪನ ಪಾತ್ರದಲ್ಲಿ ನಾಜರ್ ಅಭಿನಯ


    ಶಿವಾಜಿ ಸುರತ್ಕಲ್ ಅಸಲಿ ಕಥೆ ಹೇಳ್ತಿವೆ ಈ ಪಾತ್ರಗಳು

    ಶಿವಾಜಿ ಸುರತ್ಕಲ್ ಮೊದಲ ಭಾಗದಲ್ಲಿ ಶಿವಾಜಿ ಅಪ್ಪನ ಪಾತ್ರ ಇರಲೇ ಇಲ್ಲ. ಆದರೆ, ಪಾರ್ಟ್-2 ದಲ್ಲಿ ಅದು ರಿವೀಲ್ ಆಗುತ್ತಿದೆ. ಆ ಪಾತ್ರವನ್ನ ಬಹು ಭಾಷಾ ನಟ ನಾಜರ್ ನಿರ್ವಹಿಸುತ್ತಿದ್ದಾರೆ. ಇನ್ನೂ ಶಿವಾಜಿಗೆ ಒಬ್ಬ ಮಗಳು ಇದ್ದಾಳೆ. ಆ ಪಾತ್ರವನ್ನ ಆರಾಧ್ಯ ಅನ್ನೋ 7 ವರ್ಷದ ಹುಡುಗಿ ನಿರ್ವಹಿಸುತ್ತಿದ್ದಾಳೆ. ಶಿವಾಜಿ ಸುರತ್ಕಲ್ ನಲ್ಲಿ ವಿನಾಯಕ ಜೋಶಿ, ಪೂರ್ಣಚಂದ್ರ ಮೈಸೂರು, ನಟಿ ನಿಧಿ ಹೆಗಡೆ, ಸುಮಂತ್ ಭಟ್ ನಟಿಸಿದ್ದಾರೆ. ರಾಧಿಕಾ ಪಾತ್ರವೂ ಇಲ್ಲಿ ಮತ್ತೆ ಬರುತ್ತದೆ. ಒಂದು ರೀತಿ ಪಾರ್ಟ್ ಒನ್ ಚಿತ್ರದಲ್ಲಿದ್ದ  ಪಾತ್ರಗಳು ಇಲ್ಲಿ ರೀ ಕನೆಕ್ಟ್ ಮಾಡೋಕೆ ಹೆಲ್ಪ್ ಮಾಡುತ್ತವೆ.

    ಶಿವಾಜಿ ಸುರತ್ಕಲ್ ಸಿನಿಮಾ ನೋಡದೇ ಇದ್ದರೇ ಪಾರ್ಟ್-2 ಅರ್ಥ ಆಗೋದಿಲ್ವೇ ?

    ಶಿವಾಜಿ ಸುರತ್ಕಲ್ ಚಿತ್ರವನ್ನ ನೋಡೇದೇ ಇರೋ ಪ್ರೇಕ್ಷಕರಿಗೆ ಶಿವಾಜಿ ಸುರತ್ಕಲ್-2 ಸಿನಿಮಾ ಒಂದು ಹೊಚ್ಚ ಹೊಸ ಕಥೆಯಾಗಿಯೇ ಕಾಣಿಸುತ್ತದೆ. ಪಾರ್ಟ್ ಒನ್ ನೋಡಿದ ಪ್ರೇಕ್ಷಕರಿಗೂ ಶಿವಾಜಿಯ 131ನೇ ಕೇಸ್ ಇನ್ನಷ್ಟು ಕುತೂಹಲ ಕೆರಳಿಸುತ್ತದೆ.

    Vinayak Joshi Acted As Police Officer
    ಪೊಲೀಸ್ ಪಾತ್ರದಲ್ಲಿ ವಿನಾಯಕ ಜೋಶಿ ಅಭಿನಯ


    ರಮೇಶ್ ಅರವಿಂದ್ ಜನ್ಮ ದಿನದಂದು ಟೀಸರ್ ರಿಲೀಸ್

    ಶಿವಾಜಿ ಸುರತ್ಕಲ್-2 ಚಿತ್ರದ ಟೀಸರ್ ರಿಲೀಸ್ ಪ್ಲಾನ್ ಆಗಿದೆ. ಇದೇ ತಿಂಗಳ 10 ರಂದು ಸಿನಿಮಾದ ಟೀಸರ್ ಬೆಳಗ್ಗೆ 10.1 ನಿಮಿಷಕ್ಕೆ ರಿಲೀಸ್ ಆಗುತ್ತಿದೆ. ಈ ಟೀಸರ್​ ನಲ್ಲಿ ಕಥೆಯ ಒಂದಷ್ಟು ಝಲಕ್ ಗಳನ್ನ ಕೂಡ ಡೈರೆಕ್ಟರ್ ಆಕಾಶ್ ಶ್ರೀವತ್ಸ ರಿವೀಲ್ ಮಾಡುತ್ತಿದ್ದಾರೆ.

    ಶಿವಾಜಿ ಸುರತ್ಕಲ್-2 ರಿಲೀಸ್ ಆಗೋದು ಯಾವಾಗ ?

    ಶಿವಾಜಿ ಸುರತ್ಕಲ್-2 ಸಿನಿಮಾ ರಿಲೀಸ್ ಪ್ಲಾನ್ ಆಗಿದೆ. ಮುಂದಿನ ವರ್ಷ ಜನವರಿ ತಿಂಗಳಲ್ಲಿಯೇ ಸಿನಿಮಾ ತೆರೆಗೆ ಬರುತ್ತಿದೆ.  ಸದ್ಯ ಶೇಕಡ 85 ರಷ್ಟು ಚಿತ್ರೀಕರಣವನ್ನ ಆಕಾಶ್ ಈಗಾಗಲೇ ಪೂರ್ಣಗೊಳಿಸಿದ್ದಾರೆ.
    First published: