ಪುನೀತ್ ರಾಜ್ಕುಮಾರ್(Puneeth Rajkumar) ನಮ್ಮನೆಲ್ಲ ಬಿಟ್ಟು ಹೋಗಿರುವುದನ್ನು ಇಂದಿಗೂ ಯಾರಿಂದಲೂ ಮರೆಯಲು ಸಾಧ್ಯವಾಗುತ್ತಿಲ್ಲ. ಎಲ್ಲೆ ಇದ್ದರೂ, ಏನೇ ಮಾಡುತ್ತಿದ್ದರೂ ದಿನಕ್ಕೆ ಹಲವಾರು ಬಾರಿ ಅಪ್ಪು ನೆನೆಪು ನಮ್ಮನ್ನು ಕಾಡುತ್ತಿದೆ. ಅಪ್ಪು ನಿಧನದ ಬಳಿಕ ಇಡೀ ಕರುನಾಡು ಶೋಕಸಾಗರದಲ್ಲಿ ಮುಳುಗಿತ್ತು. 25 ಲಕ್ಷಕ್ಕೂ ಹೆಚ್ಚು ಮಂದಿ ಅಪ್ಪು(Appu) ಪಾರ್ಥಿವ ಶರೀರಿದ ದರ್ಶನ ಪಡೆದು ಕಣ್ಣೀರಿಟ್ಟಿದ್ದರು. ಅಭಿಮಾನಿಗಳಿಗೆ ಈ ವಿಚಾರ ಇಷ್ಟು ನೋವುಂಟು ಮಾಡಿದರೆ, ಸ್ವಂತ ಅಣ್ಣ ಶಿವಣ್ಣ(Shivanna) ಮತ್ತು ರಾಘಣ್ಣ(Raghanna) ಅವರ ನೋವು ಯಾರಿಗೂ ಅನುಭವಿಸಲು ಸಾಧ್ಯವಿಲ್ಲ. ಅಕ್ಟೋಬರ್ 29ರಂದು ಬೆಳಗ್ಗೆ ಶಿವಣ್ಣ ಅಭಿಮಾನಿ(Fan)ಗಳೊಂದಿಗೆ ಸಖತ್ ಖುಷಿಯಾಗಿದ್ದರು. ಕಾರಣ ಶಿವಣ್ಣ ಅಭಿನಯದ ಭಜರಂಗಿ-2 (Bhajarangi 2)ಸಿನಿಮಾ ಬಿಡುಗಡೆಯಾಗಿತ್ತು. ಫ್ಯಾನ್ಸ್ ಶೋ(Fans Show) ಮುಗಿಯುಷ್ಟರಲ್ಲಿ ಶಿವಣ್ಣ ಅವರಿಗೆ ಅಪ್ಪು ವಿಚಾರ ತಿಳಿದು ಬರಸಿಡಿಲು ಬಡಿದಂತಾಗಿತ್ತು. ಭಜರಂಗಿ 2 ಸಿನಿಮಾ ಪ್ರದರ್ಶನವನ್ನು ಎರಡು ದಿನಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಬಳಿಕ ಅಪ್ಪು ಅಂತ್ಯಕ್ರಿಯೆ ಬಳಿಕ ಸಿನಿಮಾ ಪ್ರದರ್ಶನ ನೀಡಲು ಶುರುವಾಯ್ತು. ಇದೀಗ ಶಿವರಾಜ್ಕುಮಾರ್ ಮತ್ತೆ ತಮ್ಮ ಅಭಿಮಾನಿಗಳ ಜೊತೆ ಭಜರಂಗಿ - 2 ಸಿನಿಮಾ ನೋಡಲು ನಿರ್ಧರಿಸಿದ್ದಾರೆ.
ಶಿವಣ್ಣನ ಅಭಿಮಾನಿಗಳಿಗೆ ಖುಷಿ
ಸ್ಯಾಂಡಲ್ವುಡ್ನಲ್ಲಿ ಕೊರೋನಾ ಎರಡನೇ ಅಲೆಯ ನಂತರ ‘ಕೋಟಿಗೊಬ್ಬ 3’, ‘ಸಲಗ’, ‘ಭಜರಂಗಿ 2’ ಚಿತ್ರಗಳು ಬಿಡುಗಡೆಯಾಗಿ ಚಿತ್ರರಂಗಕ್ಕೆ ಚೇತರಿಕೆ ನೀಡಿದ್ದವು. ಭಜರಂಗಿ -2 ಸಿನಿಮಾ ಫ್ಯಾನ್ಸ್ ಶೋ ಮುಗಿಯುವಷ್ಟರಲ್ಲಿ ಪುನೀತ್ ರಾಜ್ಕುಮಾರ್ ನಿಧನದ ಸುದ್ದಿ ಬರಸಿಡಿಲಿನಂತೆ ಬಡಿಯಿತು. ಅಲ್ಲಿಂದ ಚಿತ್ರರಂಗದ ಚಟುವಟಿಕೆಗಳು ಸಂಪೂರ್ಣವಾಗಿ ಕಳೆಗುಂದಿದ್ದವು. ‘ಭಜರಂಗಿ 2’ ಚಿತ್ರವನ್ನು ನಿರ್ಮಾಣ ಮಾಡಿರುವ ಜಯಣ್ಣ ಫಿಲ್ಮ್ಸ್ ಟ್ವಿಟರ್ನಲ್ಲಿ ಹೊಸ ಮಾಹಿತಿ ಹಂಚಿಕೊಂಡಿದ್ದು, ಇದೇ ನವೆಂಬರ್ 14 ಭಾನುವಾರದಂದು ಶಿವರಾಜ್ಕುಮಾರ್ ಅಭಿಮಾನಿಗಳೊಂದಿಗೆ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಲಿದ್ದಾರೆ. ಇದು ಶಿವಣ್ಣನ ಅಭಿಮಾನಿಗಳಿಗೆ ಖುಷಿ ನೀಡಿದೆ.
ಇದನ್ನು ಓದಿ : ಒಂದು ಕಡೆ ಪುನೀತ್ ರಾಜ್ಕುಮಾರ್ ಅಗಲಿಕೆ, ಮತ್ತೊಂದು ಕಡೆ ಸಿನಿಮಾ ರಿಲೀಸ್: Ramesh Aravind ಹೇಳಿದ್ದು ಹೀಗೆ..!
ಟ್ವೀಟ್ ಮಾಡಿದ ಜಯಣ್ಣ ಫಿಲ್ಮ್ಸ್
ಶಿವಣ್ಣ ಮತ್ತೆ ಅಭಿಮಾನಿಗಳೊಂದಿಗೆ ಸಿನಿಮಾ ನೋಡುವ ವಿಚಾರವನ್ನು ಟ್ವೀಟ್ ಮಾಡಿದ್ದಾರೆ. ಜಯಣ್ಣ ಫಿಲ್ಮ್ಸ್ ಈ ಕುರಿತು ಟ್ವೀಟ್ ಮಾಡಿ, ‘ಅಭಿಮಾನಿಗಳಿಗೆ ಭಜರಂಗಿಯ ಕೊಡುಗೆ. ಶಿವರಾಜ್ ಕುಮಾರ್ ಈ ಭಾನುವಾರದಂದು (ನವೆಂಬರ್ 14) ಗಾಂಧಿನಗರದ ಅನುಪಮಾ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಿಸಲಿದ್ದಾರೆ’ ಎಂದು ತಿಳಿಸಿದೆ. ಈ ವಿಚಾರ ಕೇಳಿದ ಬಳಿಕ ಶಿವರಾಜ್ ಕುಮಾರ್ ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ತಮ್ಮನ ಅಗಲಿಕೆಯ ನೋವಿನಿಂದ ಹೊರಬರುವ ಪ್ರಯತ್ನ ಮಾಡುತ್ತಿದ್ದಾರೆ. ಅಭಿಮಾನಿಗಳ ಜೊತೆಯಿದ್ದು ಆ ನೋವನ್ನು ಮರೆಯಲು ಮುಂದಾಗಿದ್ದಾರೆ. ಆದರೆ ಅಪ್ಪು ಇರದ ನೋವು ನಾನು ಸತ್ತಮೇಲೂ ನನ್ನನ್ನು ಕಾಡುತ್ತೆ ಅಂತ ಶಿವಣ್ಣ ಹೇಳಿದ್ದರು.
ಭಜರಂಗಿ - 2 ಸಿನಿಮಾಗೆ ಉತ್ತಮ ಪ್ರತಿಕ್ರಿಯೆ
ಫ್ಯಾಂಟಸಿ ವರ್ಲ್ಡ್ ಭಜರಂಗಿ - 2 ಸಿನಿಮಾಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಅಪ್ಪು ಅಂತ್ಯಕ್ರಿಯೆ ಬಳಿಕ, ಪ್ರದರ್ಶನಗೊಂಡಿದ್ದ ಭಜರಂಗಿ - 2 ಸಿನಿಮಾಗೆ ಪ್ರೇಕ್ಷಕರು ಬರುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು. ಅಪ್ಪು ಅಗಲಿಕೆ ನೋವಿನಲ್ಲೂ ಪ್ರೇಕ್ಷಕರು ಭಜರಂಗಿ - 2 ಸಿನಿಮಾ ನೋಡುತ್ತಿದ್ದಾರೆ. ಇಂದಿನವರೆಗೂ ಹಲವು ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಇದೀಗ ಮತ್ತೆ ಶಿವಣ್ಣ ಅಭಿಮಾನಿಗಳ ಜೊತೆ ಸಿನಿಮಾ ನೋಡಲು ನಿರ್ಧರಿಸಿರುವುದು, ಸಿನಿಮಾ ಮೇಲಿರುವ ಕೂತುಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನು ಓದಿ : ಬೆಳ್ಳಂಬೆಳಗ್ಗೆ ಬೆಳ್ಳಿ ಪರದೆ ಮೇಲೆ ಭಜರಂಗಿ -2 ದರ್ಶನ: ಫಸ್ಟ್ ಶೋ Exclusive Review
ಭಜರಂಗಿ 2 ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಭಾವನಾ ಮೆನನ್ ಕಾಣಿಸಿಕೊಂಡಿದ್ದಾರೆ. ಇನ್ನು ಸಿನಿಮಾದಲ್ಲಿ ಶ್ರುತಿ, ಭಜರಂಗಿ ಲೋಕಿ, ಶಿವರಾಜ್ ಕೆ.ಆರ್. ಪೇಟೆ, ಚೆಲುವ ರಾಜು ಮೊದಲಾದವರು ನಟಿಸಿದ್ದು, ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಎ.ಹರ್ಷ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಮೂರನೇ ಚಿತ್ರ ಇದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ