Shiva Rajkumar: ಮತ್ತೆ ತೆರೆ ಮೇಲೆ ಓಂ ಸಿನಿಮಾ? ಶಿವಣ್ಣ ಬಿಚ್ಚಿಟ್ರು ಸೀಕ್ರೆಟ್​!

Om Returns: ಎಲ್ಲರಿಗೂ ಗೊತ್ತಿರುವಂತೆ ಶಿವರಾಜ್​ಕುಮಾರ್ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಎನ್ನುವ ರಿಯಾಲಿಟಿ ಶೋನಲ್ಲಿ ಜಡ್ಜ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಓಂ 2 ಸಿನಿಮಾ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ.  

ನಟ ಶಿವರಾಜ್​ಕುಮಾರ್​

ನಟ ಶಿವರಾಜ್​ಕುಮಾರ್​

  • Share this:
1995ರಲ್ಲಿ ಡಾ. ಶಿವಾರಾಜ್​ ಕುಮಾರ್​ (Shiva Rajkumar) ನಟನೆಯ ‘ಓಂ‘ (Om) ಸಿನಿಮಾ ಭರ್ಜರಿ ಹಿಟ್​​ ಆಗಿ ಸ್ಯಾಂಡಲ್​ವುಡ್​ನಲ್ಲಿ (Sandalwood) ಹೊಸ ದಾಖಲೆ ಬರೆದಿತ್ತು. ಮಾತ್ರವಲ್ಲದೆ, ಸಾಕಷ್ಟು ದಿನಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿತ್ತು. ಉಪೇಂದ್ರ (Upendra) ನಿರ್ದೇಶನದಲ್ಲಿ ಮೂಡಿಸಬಂದ ‘ಓಂ‘ ಸಿನಿಮಾದಲ್ಲಿ ನಟ ಶಿವರಾಜ್​ ಕುಮಾರ್​ ಅವರನ್ನು ವಿಭಿನ್ನವಾಗಿ ತೋರಿಸಿಕೊಟ್ಟಿದ್ದರು. ಮತ್ತೊಂದು ವಿಶೇಷವೆಂದರೆ ಕನ್ನಡದಲ್ಲಿ ‘ಓಂ‘ ಸಿನಿಮಾದ ಮೂಲಕ ಗ್ಯಾಂಗ್​ ಸ್ಟಾರ್​ ಸಿನಿಮಾಗಳ ಎರಾ ಪ್ರಾರಂಭವಾಯಿತು. ಹಾಗಾಗಿ ಪ್ರೇಕ್ಷಕರು ಹೊಸ ರೀತಿಯಲ್ಲಿ ಚಿತ್ರಿತವಾದ ‘ಓಂ‘ ಸಿನಿಮಾವನ್ನು ಇಷ್ಟಪಟ್ಟಿದ್ದರು. ಈ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್​ ಒಂದು ಬಂದಿದೆ. ಅದರಲ್ಲೂ ಈ ಬಗ್ಗೆ ಶಿವರಾಜ್​ಕುಮಾರ್​ ಅವರೇ ಮಾತನಾಡಿದ್ದಾರೆ.

ದಾಖಲೆ ಬರೆದಿದ್ದ ಸಿನಿಮಾ

ಈ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಮಾತ್ರವಲ್ಲದೇ, ಶಿವರಾಜ್ ಕುಮಾರ್ ವೃತ್ತಿ ಜೀವನದಲ್ಲಿ  ಸಹ ದಾಖಲೆ ಬರೆದ ಸಿನಿಮಾ ಎಂದರೆ ತಪ್ಪಲ್ಲ. ಈ ಸಿನಿಮಾಗೆ ಕನ್ನಡ ಸಿನಿಮಾರಂಗದಲ್ಲಿ ಒಂದು ಮಹತ್ವದ ಸ್ಥಾನವಿದೆ. ಈ ಸಿನಿಮಾ ಬಹಳಷ್ಟು ಬಾರಿ ರೀ ರಿಲೀಸ್​ ಆದ ಸಿನಿಮಾ ಹಾಗೂ ಬಿಡುಗಡೆಯಾದ ಪ್ರತಿ ಬಾರಿಯೂ ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಪಡೆಯುವಲ್ಲಿ ಯಶಸ್ವಿಯಾದ ಚಿತ್ರ ಎನ್ನಬಹುದು. ಹಾಗಾಗಿ ಅಭಿಮಾನಿಗಳು ಬಹಳಷ್ಟು ಬಾರಿ ಓಂ 2 ಸಿನಿಮಾ ಮಾಡುವಂತೆ ಮನವಿ ಮಾಡಿದ್ದರು. ಆದರೆ ಈ ಬಗ್ಗೆ ನಿರ್ದೇಶಕ ಉಪೇಂದ್ರ ಹಾಗೂ ನಟ ಶಿವರಾಜ್​ಕುಮಾರ್ ಸಹ ಈ ಬಗ್ಗೆ ಮಾತನಾಡಿರಲಿಲ್ಲ, ಆದರೆ ಈಗ ಶಿವಣ್ಣ ಓಂ 2 ಸಿನಿಮಾ ಬಗ್ಗೆ ಮಾತನಾಡಿದ್ದಾರೆ.ಎಲ್ಲರಿಗೂ ಗೊತ್ತಿರುವಂತೆ ಶಿವರಾಜ್​ಕುಮಾರ್ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಎನ್ನುವ ರಿಯಾಲಿಟಿ ಶೋನಲ್ಲಿ ಜಡ್ಜ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಓಂ 2 ಸಿನಿಮಾ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ.  ಡಿಕೆಡಿ ಕಾರ್ಯಕ್ರಮದ ಮತ್ತೊಬ್ಬ ಜಡ್ಜ್ ಆಗಿರುವ ಚಿನ್ನಿ ಮಾಸ್ಟರ್ ಸಹ ಒಂದು ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಆ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಶಿವಣ್ಣ ಮಾಹಿತ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಅಬುಧಾಬಿಗೆ ಹಾರಿದ ರಶ್ಮಿಕಾ ಮಂದಣ್ಣ, ಹೊಸ ಸಿನಿಮಾ ಒಪ್ಪಿಕೊಂಡ್ರಾ ಕಿರಿಕ್ ಸುಂದರಿ?

ಓಂ ರಿಟರ್ನ್ಸ್ ಬಗ್ಗೆ ಮಾತನಾಡಿದ ಶಿವಣ್ಣ

ಈ ಬಗ್ಗೆ ಮಾತನಾಡಿದ ಅವರು, ಇನ್ನೂ ಈ ಸಿನಿಮಾಗೆ ಹೆಸರಿಟ್ಟಿಲ್ಲ, ಆದರೆ ಓಂ ರಿಟರ್ನ್ ಎಂದು ಟೈಟಲ್​ ಇಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು. ಆದರೆ ಓಂ ಸಿನಿಮಾಗೆ ಬಹಳ ದೊಡ್ಡ ಅಭಿಮಾನಿ ಬಳಗವಿದೆ. ಹಾಗಾಗಿ ಈ ಸಿನಿಮಾದ ಹೆಸರಿನಲ್ಲಿ ಮತ್ತೊಂದು ಸಿನಿಮಾ ಮಾಡಿದರೆ, ಅದಕ್ಕೆ ಚಿನ್ನಿ ಮಾಸ್ಟರ್ ನ್ಯಾಯ ಒದಗಿಸಲು ಸಾಧ್ಯವಿದಿಯಾ? ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಸದ್ಯ ಇನ್ನೂ ಟೈಟಲ್​ ಫಿಕ್ಸ್ ಆಗಿರದ ಕಾರಣ, ಈ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ.

real star upendra film shooting starts from this month 3 audience are waiting

ಇದನ್ನೂ ಓದಿ: ಮಾರ್ಡನ್ ರೈತ ಶಶಿಕುಮಾರ್‌ಗೆ ಕಂಕಣ ಭಾಗ್ಯ, ಬಿಗ್ ಬಾಸ್‌ ವಿನ್ನರ್‌ ಕೈ ಹಿಡಿಯುವ ಹುಡುಗಿ ಯಾರು?

ಸದ್ಯ ಶಿವಣ್ಣ ಹಲವಾರು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಅಲ್ಲದೇ, ಶಿವಣ್ಣ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಮೊದಲ ಬಾರಿ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ. ಸದ್ಯ ಸಿನಿಮಾಗೆ 45 ಎಂದು ಹೆಸರಿಟ್ಟಿದ್ದು, ಕಾರ್ಯಕ್ರಮದಲ್ಲಿ ಈ ಸಿನಿಮಾದ ಪೋಸ್ಟರ್​ ಅನ್ನು ತೋರಿಸಲಾಗಿದೆ. ಅಲ್ಲದೇ, ಶಿವಣ್ಣ ಪ್ರಕಾರ ಈ ಸಿನಿಮಾದ ಕಥೆ ಬಹಳ ವಿಭಿನ್ನವಾಗಿದ್ದು, ಅದ್ಬುತವಾಗಿರಲಿದೆ ಎಂದಿದ್ದಾರೆ. ಇದು ಅರ್ಜುನ್ ಜನ್ಯ ಅವರು ನಿರ್ದೇಶನ ಮಾಡುತ್ತಿರುವ ಮೊದಲ ಸಿನಿಮಾವಾಗಿದ್ದು, ಶಿವಣ್ಣ ಹಾಗೂ ಅರ್ಜುನ್ ಜನ್ಯ ಕಾಂಬಿನೇಷನ್​ ಬಗ್ಗೆ ಜನರಲ್ಲಿ ಬಹಳ ಕುತೂಹಲ ಮೂಡಿದೆ.
Published by:Sandhya M
First published: