Shiva Rajkumar: ಸಿನಿಮಾ ರಿಲೀಸ್​ಗಾಗಿ ಕಾತರದಿಂದ ಕಾಯುವಂತೆ ಮಾಡಿದೆ Bhajarangi 2 Trailer

ಅತೀಂದ್ರಿಯ ಶಕ್ತಿಯಅದ್ದೂರಿ ಸೆಟ್‌ಗಳು, ಬಹು ತಾರಾಗಣ, ಭರ್ಜರಿ ಆ್ಯಕ್ಷನ್ ದೃಶ್ಯಗಳು, ಸಿನಿಮಾದ ವಿಭಿನ್ನವಾದ ಕಥಾವಸ್ತು, ಎಲ್ಲದಕ್ಕಿಂತ ಹೆಚ್ಚಾಗಿ ಶಿವರಾಜ್‌ಕುಮಾರ್‌ ಮತ್ತು ಹರ್ಷ ಕಾಂಬಿನೇಷನ್​ ಈ ಚಿತ್ರದ ಪ್ಲಸ್​ ಪಾಯಿಂಟ್​.

ರಿಲೀಸ್​ ಆಗಿದೆ ಭಜರಂಗಿ 2 ಸಿನಿಮಾದ ಟ್ರೇಲರ್​

ರಿಲೀಸ್​ ಆಗಿದೆ ಭಜರಂಗಿ 2 ಸಿನಿಮಾದ ಟ್ರೇಲರ್​

  • Share this:
ನಿರ್ದೇಶಕ ಎ. ಹರ್ಷ  (A Harsha) ಮತ್ತು ನಟ ಶಿವರಾಜ್​ಕುಮಾರ್  (Shiva Rajkumar)​ ಕಾಂಬಿನೇಷನ್​ನಲ್ಲಿ ಮೂಡಿ ಬಂದಿರುವ ‘ಭಜರಂಗಿ 2’ (Bhajarangi 2) ಚಿತ್ರದ ಬಗ್ಗೆ ಸಿನಿಪ್ರಿಯರಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.  ಈಗಾಗಲೇ ಈ ಸಿನಿಮಾದ ಟೀಸರ್​ ಮತ್ತು ಪೋಸ್ಟರ್​ಗಳು ರಿಲೀಸ್​ ಆಗಿದ್ದು, ಸಿನಿಮಾ ಬಗೆಗಿನ ನಿರೀಕ್ಷೆಯನ್ನು ಹೆಚ್ಚಿಸಿವೆ. 2013ರಲ್ಲಿ ತೆರೆಕಂಡ ಭಜರಂಗಿ ಸಿನಿಮಾದ ಮುಂಧೆವರೆದ ಭಾಗವೇ ಈ ಭಜರಂಗಿ 2 ಚಿತ್ರ ಎನ್ನಲಾಗುತ್ತಿದೆ. ಜಯಣ್ಣ-ಭೋಗೇಂದ್ರ ಅವರ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಅಕ್ಟೋಬರ್ 29ರಂದು ತೆರೆಗಪ್ಪಳಿಸಲಿದೆ. ಮ್ಯೂಸಿಕ್ ಮಾಂತ್ರಿಕ ಅರ್ಜುನ್​ ಜನ್ಯ (Music Director Arjun Janya) ಸಂಗೀತ ಸಂಯೋಜನೆ ಈ ಚಿತ್ರಕ್ಕೆ ಇದೆ. 

ಅತೀಂದ್ರಿಯ ಶಕ್ತಿಯ​ ಅಂಶಗಳನ್ನು ಹೊಂದಿರುವ ಈ ಸಿನಿಮಾ ಹೇಗೆ ಮೂಡಿಬಂದಿದೆ ಎಂಬುದರ ಝಲಕ್ ಅನ್ನು  ‘ಭಜರಂಗಿ 2’   ಟ್ರೇಲರ್​ನಲ್ಲಿ ತೋರಿಸಲಾಗಿದೆ. ನಾಯಕ ನಟ ಶಿವರಾಜ್​ಕುಮಾರ್​, ನಾಯಕಿ ಭಾವನಾ ಮೆನನ್​ ಮಾತ್ರವಲ್ಲದೇ ಎಲ್ಲ ಪಾತ್ರಗಳನ್ನು ಟ್ರೇಲರ್​ನಲ್ಲಿ ತುಂಬಾ ಚೆನ್ನಾಗಿ ಹಾಗೂ ಪವರ್​ಫುಲ್​ ಆಗಿ ತೋರಿಸಲಾಗಿದೆ. ಈ ಟ್ರೇಲರ್ ನೋಡಿದ ಮೇಲಂತೂ ಯಾವಾಗ ಸಿನಿಮಾ ನೋಡಲು ಸಿಗುತ್ತೋ ಅಂತ ಕಾಯಲಾರಂಭಿಸಿದ್ದಾರೆ ಅಭಿಮಾನಿಗಳು.ಅತೀಂದ್ರಿಯ ಶಕ್ತಿಯಅದ್ದೂರಿ ಸೆಟ್‌ಗಳು, ಬಹು ತಾರಾಗಣ, ಭರ್ಜರಿ ಆ್ಯಕ್ಷನ್ ದೃಶ್ಯಗಳು, ಸಿನಿಮಾದ ವಿಭಿನ್ನವಾದ ಕಥಾವಸ್ತು, ಎಲ್ಲದಕ್ಕಿಂತ ಹೆಚ್ಚಾಗಿ ಶಿವರಾಜ್‌ಕುಮಾರ್‌ ಮತ್ತು ಹರ್ಷ ಕಾಂಬಿನೇಷನ್​ ಈ ಚಿತ್ರದ ಪ್ಲಸ್​ ಪಾಯಿಂಟ್​. ಈ ಪವರ್​ಫುಲ್​ ಕಾಂಬಿನೇಷನ್​ ಸಿನಿಮಾ ಮಾಡಿದರೆ ಅದು ಪಕ್ಕಾ ಸಕ್ಸಸ್‌ ಎಂಬುದು ಗಾಂಧಿನಗರದ ಲೆಕ್ಕಾಚಾರ. ಕೆಲವೇ ದಿನಗಳ ಹಿಂದೆ ನಟಿ ಭಾವಾನಾ, ಹಿರಿಯ ನಟಿ ಶ್ರುತಿ, ಖಳನಟ ಲೋಕಿ, ಖಳನಟ ಚೆಲುವರಾಜು ಅವರ ಪೋಸ್ಟರ್​ಗಳನ್ನು ಬಿಡುಗಡೆ ಮಾಡಲಾಗಿತ್ತು.

ಇದನ್ನೂ ಓದಿ: Shivarajkumar: 125ನೇ ಸಿನಿಮಾದ ಟೈಟಲ್​ ಪೋಸ್ಟರ್​ ರಿಲೀಸ್ ಮಾಡಿದ ಶಿವರಾಜ್​ಕುಮಾರ್..!

ಜಯಣ್ಣ ಕಂಬೈನ್ಸ್​ ಬ್ಯಾನರ್​ನಲ್ಲಿ ‘ಭಜರಂಗಿ 2’ ನಿರ್ಮಾಣ ಆಗಿದೆ. ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಸ್ವಾಮಿ ಜೆ. ಗೌಡ ಛಾಯಾಗ್ರಹಣ, ದೀಪು ಎಸ್​. ಕುಮಾರ್​ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.

ಭಜರಂಗಿ 2' ಚಿತ್ರ ಆಗಸ್ಟ್‌ನಲ್ಲಿ ಬಿಡುಗಡೆಯಾಗಬೇಕಿತ್ತು. ಆದ್ರೆ ಕೋವಿಡ್ ಎರಡನೇ ಅಲೆ ಹಾಗೂ ಲಾಕ್‌ಡೌನ್‌ನಿಂದಾಗಿ 'ಭಜರಂಗಿ 2' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೊಂಚ ತಡವಾಗಿದ್ದವು. ಅ.29ರಂದು 'ಭಜರಂಗಿ 2' ಚಿತ್ರ ನಿಮ್ಮೆಲ್ಲರ ಮುಂದೆ ಬರಲಿದೆ.  'ಭಜರಂಗಿ 2' ಚಿತ್ರದಲ್ಲಿ ಭಾವನಾ ಮೆನನ್, ಶ್ರುತಿ, ಸೌರವ್ ಲೋಕೇಶ್, ಮಂಜು ಪಾವಗಡ, ಶಿವರಾಜ್.ಕೆ.ಆರ್.ಪೇಟೆ ಸೇರಿದಂತೆ ದೊಡ್ಡ ತಾರಾಬಳಗವಿದೆ.

ಒಂದೇ ದಿನದಲ್ಲಿ ಧೂಳೆಬ್ಬಿಸಿದ್ದ ಟೀಸರ್

ನಟ ಶಿವ ರಾಜ್​ಕುಮಾರ್​ ಜು.12 ರಂದು 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದ ವಿಶೇಷವಾಗಿ ಭಜರಂಗಿ-2 ಚಿತ್ರತಂಡ ಟೀಸರ್​ ಅನ್ನು ಬಿಡುಗಡೆ ಮಾಡಿತ್ತು. ಆ ಮೂಲಕ ಶಿವಣ್ಣನ ಕಡೆಯಿಂದ ಅಭಿಮಾನಿಗಳಿಗೆ ಸರ್​ಪ್ರೈಸ್​ ನೀಡಿತ್ತು. ಬಿಡುಗಡೆಗೊಂಡ ಟೀಸರ್​ ಯ್ಯೂಟೂಬ್​ನಲ್ಲಿ ಒಂದೇ ದಿನದಲ್ಲಿ ಸಾಕಷ್ಟು ಹವಾ ಸೃಷ್ಟಿಸಿತ್ತು.

ಇದನ್ನೂ ಓದಿ:  Bhajarangi 2 Teaser: ಭಜರಂಗಿ ಶಿವಣ್ಣನಿಗೆ ವಿಶೇಷ ಉಡುಗೊರೆ ನೀಡಿದ ನಿರ್ದೇಶಕ ಎ ಹರ್ಷ

ಶಿವಣ್ಣ ಭಜರಂಗಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಮಲಯಾಳಂ ನಟಿ ಭಾವನಾ ನಟಿಸಿದ್ದಾರೆ. ಬಿಡುಗಡೆಗೊಂಡ ಟೀಸರ್​ ವಿಭಿನ್ನವಾಗಿದ್ದು, ಎ2 ಮ್ಯೂಸಿಕ್​ ಯ್ಯೂಟೂಬ್​ ಖಾತೆಯಲ್ಲಿ ಬಿಡುಗಡೆಗೊಂಡಿದೆ. ಟೀಸರ್ ಬಿಡುಗಡೆಗೊಂಡ 24 ಗಂಟೆಗಳ ಒಳಗೆ ಅತಿ ಹೆಚ್ಚು ವೀಕ್ಷಣೆಕಂಡ ಕೆಲವೇ ಕೆಲವು ಕನ್ನಡ ಸಿನಿಮಾ ಟೀಸರ್​ಗಳ ಪೈಕಿ ಭಜರಂಗಿ-2 ಕೂಡ ಒಂದಾಗಿದೆ.
Published by:Anitha E
First published: