Puneeth Rajkumar: ಅಪ್ಪು ಕನಸು ನನಸು ಮಾಡಲು ಶಿವಣ್ಣ ರೆಡಿ, ಚೆಲುವ ಚಾಮರಾಜನಗರ ಯೋಜನೆಗೆ ಕೈ ಜೋಡಿಸಲು ಸಿದ್ದ ಎಂದ ನಟ

Shiva rajkumar: ಎಲ್ಲರಿಗೂ ಗೊತ್ತಿರುವಂತೆ ಚಾಮರಾಜ ನಗರ ಡಾ ರಾಜ್​ಕುಮಾರ್ ಅವರ ತವರೂರು. ಹಾಗಾಗಿ ಅಪ್ಪು ಈ ಯೋಜನೆಗೆ ಬಹಳ ಖುಷಿಯಿಂದ ಒಪ್ಪಿಕೊಂಡಿದ್ದರು. ಆದರೆ ಅವರ ಆಸೆ ಈಡೇರಲಿಲ್ಲ.

ಶಿವಣ್ಣ- ಅಪ್ಪು

ಶಿವಣ್ಣ- ಅಪ್ಪು

  • Share this:
ಕನ್ನಡದ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Power Star Puneeth Rajkumar) ಅವರು ಅಭಿಮಾನಿಗಳನ್ನು (Fans) ಬಿಟ್ಟು ಹೋಗಿ ಸುಮಾರು 8 ತಿಂಗಳು ಕಳೆದಿದೆ. ಅವರ ನಿಧನ ಅಭಿಮಾನಿಗಳು ಮತ್ತು ಇಡೀ ಭಾರತೀಯ ಚಿತ್ರ ರಂಗದ ಮಂದಿಗೆ ದೊಡ್ಡ ಆಘಾತ ಹಾಗೂ ನೋವನ್ನು ಉಂಟು ಮಾಡಿದೆ ಎಂಬುದು ಸತ್ಯ. ಅಭಿಮಾನಿಗಳು ಈಗಲೂ ಅವರ ಸಮಾಧಿಗೆ ಭೇಟಿ ನೀಡುತ್ತಾರೆ. ಪ್ರತಿದಿನ ಸಾವಿರಾರು ಜನರು ಪುನೀತ್ ಸಮಾಧಿ ಬಳಿ ಇರುತ್ತಾರೆ. ಅಂಥಹ ಅದ್ಭುತ ವ್ಯಕ್ತಿತ್ವ ಅವರದ್ದು. ಇಷ್ಟೆಲ್ಲಾ ಅಭಿಮಾನಿಗಳನ್ನು ಪಡೆದಿರುವ ಈ ಮೇರು ನಟ ಕೇವಲ ನಟನೆಯಿಂದ ಮಾತ್ರ ಪ್ರಸಿದ್ದರಲ್ಲ ಅವರ ಸಾಮಾಜಿಕ ಕಾಳಜಿಯ ಕೆಲಸಗಳು ಅವರಿಗೆ ಹೆಸರು ನೀಡಿದೆ. ಇದೀಗ ಅವರ ಒಂದು ಅದ್ಭುತ ಕೆಲಸವನ್ನು ಪುನೀತ್ ಸಹೋದರ ಶಿವರಾಜ್​ಕುಮಾರ್ (Shiva Rajkumar) ಮುನ್ನಡೆಸಿಕೊಂಡಲು ಹೋಗಲು ಸಿದ್ದ ಎಂದಿದ್ದಾರೆ.

ಚೆಲುವ ಚಾಮರಾಜನಗರಕ್ಕೆ ಶಿವಣ್ಣ ಬ್ರಾಂಡ್​ ಅಂಬಾಸಿಡರ್?

ನಿಮಗೆ ಗೊತ್ತಿರುವಂತೆ ಪುನೀತ್ ಅನೇಕ ಸರ್ಕಾರಿ ಯೋಜನೆಗಳಿಗೆ ಬ್ರಾಂಡ್​ ಅಂಬಾಸಿಡರ್ ಆಗಿದ್ದರು. ಜಿಲ್ಲೆ, ಸಂಸ್ಕೃತಿ ಹಾಗೂ ಪ್ರಕೃತಿಯನ್ನು ಪ್ರವಾಸಿಗರಿಗೆ ಸವಿಯಲು ಅವಕಾಶ ಮಾಡಿಕೊಡುವ ಅದ್ಬುತ ಸಮಾಗಮವಾದ ಚೆಲುವ ಚಾಮರಾಜನಗರ ಯೋಜನೆಯ ಬಗ್ಗೆ ನೀವೆಲ್ಲಾ ಕೇಳುತ್ತೀರಿ. ಈ ಜಿಲ್ಲೆಯ ಸ್ಥಳೀಯ ಪ್ರಾಕೃತಿಕ ಸೌಂದರ್ಯದ ಮೂಲಕ ಪ್ರವಾಸಿಗರನ್ನು ಸೆಳೆಯುವ ಈ ಹೊಸ ಯೋಜನೆಗೆ ನಟಪುನೀತ್ ರಾಜ್‌ಕುಮಾರ್ ರಾಯಭಾರಿಯಾಗಿದ್ದರು. ಆದರೆ ಈಗ ಅವರಿಲ್ಲ, ಹಾಗಾಗಿ ಅಭಿಮಾನಿಗಳು ಅವರ ಬದಲು ರಾಜ್​ ಕುಟುಂಬದ ಯಾರನ್ನಾದರೂ ಬ್ರಾಂಡ್​ ಅಂಬಾಸಿಡರ್ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.

ಹೌದು, ಈಗಾಗಲೇ ಈ ಬಗ್ಗೆ ಜಿಲ್ಲಾಡಳಿತಕ್ಕೆ ಸಹ ಅಭಿಮಾನಿಗಳು ಮನವಿ ಸಲ್ಲಿಸಿದ್ದಾರೆ. ಅದರಲ್ಲೂ ನಟ ಶಿವರಾಜ್​ಕುಮಾರ್ ಅವರನ್ನು ಬ್ರಾಂಡ್​ ಅಂಬಾಸಿಡರ್ ಆಗಿ ಮಾಡುವಂತೆ ಆಗ್ರಹಿಸಿದ್ದಾರೆ. ಈಗಾಗಲೇ ಜಿಲ್ಲಾಡಳಿತ ಪುನೀತ್ ನಿಧನಕ್ಕೂ ಮೊದಲು ಚೆಲುವ ಚಾಮರಾಜ ನಗರ ಎನ್ನುವ ಕೈಪಿಡಿ ಹೊರ ತಂದು, ಪುನೀತ್ ರಾಜ್​ಕುಮಾರ್ ಅವರ ಸಂದೇಶವಿರುವ ಪ್ರಮೋಷನ್ ವಿಡಿಯೋವನ್ನು ಸಹ ರೆಡಿ ಮಾಡಿತ್ತು. ಆದರೆ ಅಪ್ಪು ಅಕಾಲಿಕ ನಿಧನದಿಂದ ಈ ಯೋಜನೆ ನೆನಗುದಿಗೆ ಬಿದ್ದಿತ್ತು. ಆದರೆ ಮತ್ತೆ ಇದನ್ನು ಆರಂಭಿಸುವಂತೆ ಆಗ್ರಹ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್​ನಲ್ಲಿ ಎರಡನೇ ಸ್ಥಾನ ಪಡೆದ ಆರ್​ಆರ್​ಆರ್​, ಸಿನಿಮಾ ಬಗ್ಗೆ ರೆಸುಲ್ ಪೂಕುಟ್ಟಿ ಹೀಗಂದ್ರಾ?

ಅಪ್ಪು ಕನಸಿನ ಯೋಜನೆ

ಎಲ್ಲರಿಗೂ ಗೊತ್ತಿರುವಂತೆ ಚಾಮರಾಜ ನಗರ ಡಾ ರಾಜ್​ಕುಮಾರ್ ಅವರ ತವರೂರು. ಹಾಗಾಗಿ ಅಪ್ಪು ಈ ಯೋಜನೆಗೆ ಬಹಳ ಖುಷಿಯಿಂದ ಒಪ್ಪಿಕೊಂಡಿದ್ದರು. ಆದರೆ ಅವರ ಆಸೆ ಈಡೇರಲಿಲ್ಲ. ಇದೀಗ ಆ ಕನಸನ್ನು ಶಿವರಾಜ್​ಕುಮಾರ್ ಪೂರ್ಣಗೊಳಿಸಲು ಒಪ್ಪಿಕೊಂಡಿದ್ದು, ಜಿಲ್ಲಾಡಳಿತ ಒಪ್ಪಿಗೆ ಕೊಟ್ರೆ ನಾನು ರಾಯಭಾರಿ ಆಗುವೆ ಎಂದಿದ್ದಾರಂತೆ ಶಿವಣ್ಣ.

ಗಡಿನಾಡು ಚಾಮರಾಜ ನಗರ ಅದ್ಭುತ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದೆ. ಬಿಳಿಗಿರಿ ರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯ, ಬಂಡೀಪುರ, ಮಲೆಮಹದೇಶ್ವರ ವನ್ಯಧಾಮ, ಭರಚುಕ್ಕಿ ಜಲಪಾತ, ಹೊಗೇನಕಲ್, ಮಲೆಮಹದೇಶ್ವರಬೆಟ್ಟ ಹೀಗೆ ಇಲ್ಲಿ ಪ್ರವಾಸಿ ತಾಣಗಳು ಬಹಳಷ್ಟಿವೆ. ನೋಡುಗರ ಕಣ್ಣಿಗೆ ಇದು ಮಹದಾನಂದ ನೀಡುತ್ತದೆ.

ಇದನ್ನೂ ಓದಿ: Banaras ಸಿನಿಮಾಗೆ ಸಂಜಯ್ ದತ್ ಸಾಥ್, ಫುಲ್​ ಸದ್ದು ಮಾಡ್ತಿದೆ ಮಾಯಾಗಂಗೆ ಸಾಂಗ್

ಇನ್ನು ಈ ಯೋಜನೆಯ ಪ್ರಮೋಷನ್ ವಿಡಿಯೋ ಜಿಲ್ಲೆಯ ಪರಿಸರ , ಧಾರ್ಮಿಕ, ಆಧ್ಯಾತ್ಮ ,ಪ್ರವಾಸೋದ್ಯಮ, ಸಾಹಸ ಹಾಗೂ ಪಾರಂಪರಿಕ  ಪ್ರವಾಸಿ ತಾಣಗಳ ಸೌಂದರ್ಯ ಅನಾವರಣಗೊಳಿಸುತ್ತದೆ. ಅಲ್ಲದೇ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಯಾವುದೇ ರೀತಿಯ ಸಂಭಾವನೆ ಪಡೆಯದೆ ಸಂದೇಶ ನೀಡುವ ಮೂಲಕ ತವರು ಜಿಲ್ಲೆಯ ಅಭಿವೃದ್ಧಿಗೆ ಸಾಥ್ ನೀಡಿದ್ದರು.
Published by:Sandhya M
First published: