ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ಹಾಗೂ ನಿರ್ದೇಶಕ ಎ. ಹರ್ಷ (Director A Harsha) ಕಾಂಬಿನೇಷನ್ನ ನಾಲ್ಕನೇ ಸಿನಿಮಾ ವೇದ (Vedha Movie) ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣ್ತಿದೆ. ನಿರ್ದೇಶಕ ಹರ್ಷ ಹಾಗೂ ಶಿವಣ್ಣ ಜೋಡಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದಾರೆ. ‘ಭಜರಂಗಿ’, ‘ವಜ್ರಕಾಯ’, ‘ಭಜರಂಗಿ 2’ ಬಳಿಕ ಇದೀಗ ‘ವೇದ’ ಸಿನಿಮಾ ಕೂಡ ಅವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿಬಂದಿದೆ. ಮೈಸೂರಿನಲ್ಲಿ ವೇದ ಸಿನಿಮಾ ನೋಡಲು ಹರ್ಷ ಹಾಗೂ ಶಿವಣ್ಣ ಥಿಯೇಟರ್ಗೆ ಬಂದಿದ್ರು. ಈ ವೇಳೆ ನಿರ್ದೇಶಕ ಹರ್ಷ ಜೊತೆಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡ್ತಿದ್ದೀರಾ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ, ಹರ್ಷನ ಜೊತೆ ಸಿನಿಮಾ ಮಾಡಿದ್ರೆ ನಿಮಗೆ ಹೊಟ್ಟೆ ಕಿಚ್ಚ ಎಂದು ನೇರವಾಗಿ ಪ್ರತಿಕ್ರಿಯಿಸಿದ್ದಾರೆ.
ಇನ್ನೂ 10 ಸಿನಿಮಾ ಒಟ್ಟಿಗೆ ಮಾಡ್ತೀವಿ
ವೇದ ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅನೇಕ ಥಿಯೇಟರ್ಗಳಿಗೆ ನಿರ್ದೇಶಕ ಎ. ಹರ್ಷ ಮತ್ತು ಶಿವಣ್ಣ (Shivarajkumar) ಜೊತೆಯಾಗಿ ಭೇಟಿ ನೀಡುತ್ತಿದ್ದಾರೆ. ಪದೇ ಪದೇ ಒಟ್ಟಿಗೆ ಇಬ್ಬರು ಸಿನಿಮಾ ಮಾಡುತ್ತಿರುವ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದವರು ಪ್ರಶ್ನೆ ಕೇಳಿದ್ರು. ಅದಕ್ಕೆ ಉತ್ತರಿಸಿದ ಶಿವಣ್ಣ, ಇನ್ನೂ 10 ಸಿನಿಮಾ ಒಟ್ಟಿಗೆ ಮಾಡ್ತೀವಿ. ನಿಮಗೇನಾದರೂ ಹೊಟ್ಟೆಕಿಚ್ಚಾ? ಅವರ ಜೊತೆ ಯಾವಾಗಲೂ ನನಗೆ ಕಂಫರ್ಟ್ ಆಗಿರುತ್ತದೆ’ ಎಂದಿದ್ದಾರೆ.
ಶಿವಣ್ಣ ಮಾಸ್ ಲುಕ್ಗೆ ಫ್ಯಾನ್ಸ್ ಫಿದಾ!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ಅಭಿನಯದ 125ನೇ ಸಿನಿಮಾ 'ವೇದ' ಸಿನಿಮಾ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಶಿವಣ್ಣ ಮಾಸ್ ಲುಕ್ಗೆ (Mass Look) ಫುಲ್ ಫಿದಾ ಆಗಿದ್ದಾರೆ.
ವೇದ ಚಿತ್ರ ನೋಡಿದ ಪ್ರತಿಯೊಬ್ಬರು 60ರ ವಯಸ್ಸಲ್ಲೂ ಶಿವಣ್ಣ ಅವರದ್ದು ಎಂಥಾ ಆ್ಯಕ್ಟಿಂಗ್ ಗುರೂ ಅಂತಿದ್ದಾರೆ. ಜುಂಜಪ್ಪ ಹಾಡಿನ ಜೊತೆ ಫೈಟಿಂಗ್ ಸೀನ್ ಮೂಲಕ ಶಿವರಾಜ್ ಕುಮಾರ್ ಎಂಟ್ರಿ ಕೊಡ್ತಾರೆ. ಶಿವಣ್ಣ ಮಾಸ್ ಲುಕ್ ನೋಡಿ ಅಭಿಮಾನಿಗಳ ಸಿಳ್ಳೆ, ಕೂಗು ಮುಗಿಲುಮುಟ್ಟಿತ್ತು. ಈ ಸಿನಿಮಾ, 1965, 1985 ಹಾಗೂ 2021ರ ಕಾಲಘಟ್ಟಗಳಲ್ಲಿ ನಡೆಯೋ ಕಥೆಯಾಗಿದ್ದು, ಸಾಮಾಜಿಕ ಸಂದೇಶವನ್ನು ತಿಳಿಸುವ ಒಂದು ಅದ್ಭುತ ಸಿನಿಮಾ ಆಗಿದೆ. ಇನ್ನು ಶಿವರಾಜ್ ಕುಮಾರ್ ಸಿನಿಮಾ ಅಂದ್ರೆ ಫೈಟ್ಗಳಿಗೆ ಕಡಿಮೆ ಇರುತ್ತಾ? ವೇದ ಸಿನಿಮಾದಲ್ಲೂ ಅತ್ಯದ್ಬುತ ಫೈಟಿಂಗ್ ಸೀನ್ಗಳಿವೆ. ತನ್ನ ಆ್ಯಕ್ಷನ್ ಮೂಲಕ ಶಿವಣ್ಣ ಎಲ್ಲರ ಗಮನ ಸೆಳೆಯುತ್ತಾರೆ. ಹ್ಯಾಟ್ರಿಕ್ ಹೀರೋ ಜೊತೆ ಫೈಟಿಂಗ್ ಸೀನ್ನಲ್ಲಿ ಅದಿತಿ ಸಾಗರ್ ಕೂಡ ಸಾಥ್ ನೀಡಿದ್ದಾರೆ.
ನಟಿ ಮಣಿಯರ ಅಭಿನಯ ಸಖತ್
ವೇದ ಸಿನಿಮಾ ಸೆಟ್ ಅದ್ಧೂರಿಯಾಗಿದ್ದು, ಶಿವಣ್ಣಗೆ ನಾಯಕಿಯಾಗಿ ನಟಿ ಗಾನವಿ ಲಕ್ಷ್ಮಣ್ ಸಖತ್ ಆ್ಯಕ್ಟಿಂಗ್ ಮಾಡಿದ್ದಾರೆ. ನಾಚಿಕೆಕೊಂಡ ಮುಗ್ದ ಹುಡುಗಿಯಾಗಿ ಕಾಣಿಸಿಕೊಳ್ತಾರೆ. ಬಳಿಕ ನಟಿ ಗಾನವಿ ರಗಡ್ ಲುಕ್ನಲ್ಲೂ ಮಿಂಚಿದ್ದಾರೆ. ಅವರ ಪಾತ್ರ ಸಿನಿಮಾದಲ್ಲಿ ಸರ್ಪ್ರೈಸ್ ಹೆಚ್ಚಿಸುತ್ತದೆ. ಅದಿತಿ ಸಾಗರ್ ಕೂಡ ಸಖತ್ ಆಗಿ ನಟಿಸಿದ್ದಾರೆ. ನಟಿ ಶ್ವೇತಾ ಚೆಂಗಪ್ಪ ಅವರು ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ವೇತಾ ಚೆಂಗಪ್ಪ ಪಾತ್ರ ಹಿಂದೆ ಕಥೆಗಳು ತೆರದುಕೊಳ್ಳುತ್ತದೆ. ಇನ್ನು ಹಿರಿಯ ನಟಿ ಉಮಾ ಅಭಿನಯ ಪ್ರೇಕ್ಷಕರ ಗಮನಸೆಳೆದಿದೆ.
ಇದನ್ನೂ ಓದಿ: Vedha Movie: ವೇದ ಸಿನಿಮಾ ರಿಲೀಸ್, ಶಿವಣ್ಣ ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳಿವು
‘ಗಿಲ್ಲಕ್ಕೋ ಶಿವ ಗಿಲ್ಲಕ್ಕೋ, ಜುಂಜಪ್ಪ ಹಾಡು ಸೂಪ್
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೋಡಿ ಮಾಡಿದ್ದಾರೆ. ಈಗಾಗಲೇ ವೇದ ಸಿನಿಮಾ ಹಾಡುಗಳು ಸೂಪರ್ ಹಿಟ್ ಆಗಿದೆ. ಥಿಯೇಟ್ಗಳಲ್ಲೂ ಅಭಿಮಾನಿಗಳಗು ‘ಗಿಲ್ಲಕ್ಕೋ ಶಿವ ಗಿಲ್ಲಕ್ಕೋ ಎಂದು ಕುಣಿದು ಕುಪ್ಪಳಿಸಿದ್ದಾರೆ. ‘ಪುಷ್ಪ ಪುಷ್ಪ' ಹಾಗೂ ಜುಂಜಪ್ಪ ಹಾಡು ಪ್ರೇಕ್ಷಕರಿಗೆ ಇಷ್ಟವಾಗಿದ್ದು, ಜನ್ಯ ಮೂಸಿಕ್ ಕಂಪೋಸ್ಗೆ ಅಭಿಮಾನಿಗಳು 100 ಮಾರ್ಕ್ಸ್ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ