• Home
  • »
  • News
  • »
  • entertainment
  • »
  • Shiva Rajkumar: ಶಿವಣ್ಣ-ಕಿಶೋರ್​ ಕಾಂಬಿನೇಷನ್​ ಚಿತ್ರಕ್ಕೆ ಸಿಕ್ತು ಗ್ರೀನ್ ಸಿಗ್ನಲ್​! ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ಸೆಂಚುರಿ ಸ್ಟಾರ್​!

Shiva Rajkumar: ಶಿವಣ್ಣ-ಕಿಶೋರ್​ ಕಾಂಬಿನೇಷನ್​ ಚಿತ್ರಕ್ಕೆ ಸಿಕ್ತು ಗ್ರೀನ್ ಸಿಗ್ನಲ್​! ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ಸೆಂಚುರಿ ಸ್ಟಾರ್​!

ಶಿವಣ್ಣ ಚಿತ್ರದಲ್ಲಿ ನಟ ಕಿಶೋರ್​

ಶಿವಣ್ಣ ಚಿತ್ರದಲ್ಲಿ ನಟ ಕಿಶೋರ್​

ವೇದ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ಶಿವರಾಜ್​ ಕುಮಾರ್​ ಇದೀಗ ಮತ್ತೊಂದು ಚಿತ್ರಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವಣ್ಣ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

  • Share this:

ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ (Shiva Rajkumar) ಅಭಿನಯದ 125ನೇ ಸಿನಿಮಾ 'ವೇದ' ಬಿಡುಗಡೆಯಾಗಿದೆ (Vedha Movie) ಸೂಪರ್ ಹಿಟ್​ ಆಗಿದೆ.  ಸಿನಿಮಾ ನೋಡಿದ ಪ್ರೇಕ್ಷಕರು  ಶಿವಣ್ಣ ಮಾಸ್​ ಲುಕ್​ಗೆ (Mass Look) ಫುಲ್​ ಫಿದಾ ಆಗಿದ್ದಾರೆ.  ಶಿವಣ್ಣ ಅಂದ್ರೆ ಮಾಸ್​, ಮಾಸ್ ಮೂವಿ ಅಂದ್ರೆ ಶಿವಣ್ಣ ಅಂತಾರೆ ಫ್ಯಾನ್ಸ್​, (Fans) ವೇದ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ಶಿವರಾಜ್​ ಕುಮಾರ್​ ಇದೀಗ ಮತ್ತೊಂದು ಚಿತ್ರಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ಹ್ಯಾಟ್ರಿಕ್​ ಹೀರೋಗೆ ಕಾಂತಾರ ನಟ ಕಿಶೋರ್ (Kishore) ಕೂಡ ಸಾಥ್ ನೀಡಲಿದ್ದಾರೆ. 


ಹೆಸರಿಡದ ಚಿತ್ರಕ್ಕೆ ಶಿವಣ್ಣ ಕೊಟ್ರು ಗ್ರೀನ್​ ಸಿಗ್ನಲ್​


ವೇದಾ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ನಟ ಶಿವರಾಜಕುಮಾರ್ ಅವರು ಶ್ರೀನಿ ಅವರ ಘೋಸ್ಟ್ ಮತ್ತು ನಿರ್ದೇಶಕ ಯೋಗರಾಜ್ ಭಟ್-ರಾಕ್‌ಲೈನ್ ವೆಂಕಟೇಶ್ ಅವರ ಕರಟಕ-ದಮನಕ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆ ಪರ ಭಾಷೆ ಚಿತ್ರಗಳು ಶಿವಣ್ಣ ಮಿಂಚಲು ರೆಡಿಯಾಗಿದ್ದಾರೆ. ಸದ್ಯದಲ್ಲೇ ಅರ್ಜುನ್ ಜನ್ಯ-ರಮೇಶ್ ರೆಡ್ಡಿ ಅವರ '45' ಸಿನಿಮಾ ಆರಂಭಿಸಲಿರುವ ಸೆಂಚುರಿ ಸ್ಟಾರ್ ಇದೀಗ ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರೆ.


Shivraj Kumar has signed another movie Actor Kishore will act with Century Star
ಶಿವಣ್ಣ ಚಿತ್ರದಲ್ಲಿ ನಟ ಕಿಶೋರ್​


ತೇಜಸ್ವಿ ಕೆ ನಾಗ್ ನಿರ್ದೇಶಕನ ಸಿನಿಮಾ


ಸೃಜನ್ ಲೋಕೇಶ್ ಅಭಿನಯದ 'ಎಲ್ಲಿದ್ದೇ ಇಲ್ಲಿ ತನಕ' ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ ತೇಜಸ್ವಿ ಕೆ ನಾಗ್ ಈ ಸಿನಿಮಾದಲ್ಲಿ ಶಿವಣ್ಣಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಶಿವಣ್ಣ ಸಹ ಚಿತ್ರದಲ್ಲಿ ಅಭಿನಯಿಸಲು ಕಾತುರದಿಂದ ಕಾಯ್ತಿದ್ದಾರೆ.


ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ


ಸಸ್ಪೆನ್ಸ್ ಥ್ರಿಲ್ಲರ್ ಎಂದು ಬಿಂಬಿಸಲಾದ ಈ ಚಿತ್ರದಲ್ಲಿ ಶಿವಣ್ಣ ಹಿಂದೆಂದೂ ಕಾಣದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ತೇಜಸ್ವಿ ಹೇಳಿದ್ದು, ಈ ನಟನ ಪಾತ್ರದ ರೇಖಾಚಿತ್ರವು ಎಲ್ಲರ ಗಮನ ಸೆಳೆದಿದೆ.


ಶಿವಣ್ಣ, ಕಿಶೋರ್​ ಕಾಂಬಿನೇಷನ್  


ಈ ಹಿಂದೆ ಚಿರಂಜೀವಿ ಸರ್ಜಾ ಅವರ 'ಶಿವಾರ್ಜುನ' ಸಿನಿಮಾವನ್ನು ನಿರ್ಮಿಸಿದ್ದ ನಿಶ್ಚಿತ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಮಂಜುಳಾ ಶಿವಾರ್ಜುನ ಅವರ ಬೆಂಬಲದೊಂದಿಗೆ ಸಿನಿಮಾ ನಿರ್ಮಿಸಲಾಗ್ತಿದೆ. ಈ ಚಿತ್ರದಲ್ಲಿ ಕಿಶೋರ್ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ.  ಈ ಸಿನಿಮಾ ಶಿವಣ್ಣ ಮತ್ತು ಕಿಶೋರ್ ನಡುವಿನ ಮೊದಲ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿದೆ.


ಇವರನ್ನು ಹೊರತುಪಡಿಸಿ, ಚಿತ್ರತಂಡ ಉಳಿದ ತಾರಾಗಣ ಮತ್ತು ತಂತ್ರಜ್ಞರನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದಾರೆ. ಚಿತ್ರದ ಶೀರ್ಷಿಕೆ ಮತ್ತು ಅದರ ಶೂಟಿಂಗ್ ಯೋಜನೆಗಳ ವಿವರವನ್ನು ಶೀಘ್ರದಲ್ಲೇ ಹೊರಬೀಳಲಿದೆ.


ಟಾಲಿವುಡ್​ಗೆ ಎಂಟ್ರಿ ಕೊಡ್ತಿದ್ದಾರೆ ಶಿವಣ್ಣ


ಕಾಲಿವುಡ್​ಗೆ ಎಂಟ್ರಿ ಕೊಟ್ಟಿರುವ ಶಿವಣ್ಣ ಈಗ ಟಾಲಿವುಡ್ ನಲ್ಲೂ ಸಿನಿಮಾ ಮಾಡಲು ಮುಂದಾಗಿದ್ದಾರಂತೆ. ವೇದ ಸಿನಿ ಪ್ರಮೋಷನ್ ವೇಳೆ ತಾವು ತೆಲುಗು ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಶಿವಣ್ಣ ಹೇಳಿದ್ದಾರೆ. ಸಂದರ್ಶದಲ್ಲಿ ಟಾಲಿವುಡ್ ಪ್ರವೇಶದ ಬಗ್ಗೆ ಮಾತಾಡಿದ ಅವರು, ನನಗೆ ಒದಗಿ ಬರುತ್ತಿರುವ ಅವಕಾಶಗಳ ಸದುಪಯೋಗ ಪಡೆದು ಕೊಳ್ಳುತ್ತಿದ್ದೇನೆ ಎಂದು ಹೇಳಿದ್ರು. ರಜಿನಿಕಾಂತ್ ಅವರ ಜೈಲರ್ ಸಿನಿಮಾದಲ್ಲಿ ವಿಶೇಷ ಪಾತ್ರವನ್ನು ನಿಭಾಯಿಸುವ ಮೂಲಕ ತಮಿಳು ಚಿತ್ರರಂಗದಲ್ಲೂ ಕೆಲಸ ಮಾಡುತ್ತಿದ್ದೇನೆ.


ಇದನ್ನೂ ಓದಿ: Yash-Radhika: ಮಾರ್ಗಿ ಮನಸ್ಸು ಕದ್ದ ರಾಮಾಚಾರಿ! ರಾಜಾಹುಲಿಗೆ 6 ತಿಂಗಳು ಸತಾಯಿಸಿದ್ದ ರಾಧಿಕಾ!?


ಅಷ್ಟೇ ಅಲ್ಲ, ಧನುಷ್ ನಟನೆಯ ʼಕ್ಯಾಪ್ಟನ್ ಮಿಲ್ಲರ್ʼ ಚಿತ್ರದಲ್ಲಿ ನಾಯಕನ ಅಣ್ಣನ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿದ್ದೇನೆ. ಧನುಷ್ ಅವರನ್ನು ಆರಂಭದಿಂದಲೂ ಬಲ್ಲೆ. ಧನುಷ್ ನನ್ನ ಇಷ್ಟದ ನಟ ಎಂದ್ರು. ಧನುಷ್ ಆ ರೀತಿ ಯಾವತ್ತಿಗೂ ನನ್ನನ್ನು ಕೇಳಿಲ್ಲ. ಸಿನಿಮಾದಲ್ಲಿನ ನಾಯಕನ ಅಣ್ಣನ ಪಾತ್ರವನ್ನು ನಾನೇ ಮಾಡಿದರೆ ಚೆನ್ನಾಗಿರುತ್ತದೆ ಎಂದ್ರು ಹೀಗಾಗಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ ಎಂದು ಶಿವಣ್ಣ ಹೇಳಿದ್ದಾರೆ.

Published by:ಪಾವನ ಎಚ್ ಎಸ್
First published: