Shiva Rajkumar: ಬೈರಾಗಿ 2 ಬಗ್ಗೆ ಸುಳಿವು ಕೊಟ್ಟ ಶಿವಣ್ಣ, ಶಕ್ತಿಧಾಮದ ಮಕ್ಕಳ ಜೊತೆ ಸಿನಿಮಾ ವೀಕ್ಷಿಸಿದ ಹ್ಯಾಟ್ರಿಕ್ ಹೀರೋ

Bairagi Film: ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ 123ನೇ ಸಿನಿಮಾ ಇದಾಗಿದ್ದು, ಅಭಿಮಾನಿಗಳಲ್ಲಿ ಈ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿತ್ತು. ಹಾಗೆಯೇ ಈ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಲಭಿಸಿದೆ.

ಭೈರಾಗಿ ಚಿತ್ರ

ಭೈರಾಗಿ ಚಿತ್ರ

  • Share this:
ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ (Shivarajkumar) ಸದ್ಯ ಬೈರಾಗಿ (Bhairagi) ಸಿನಿಮಾ (film) ಬಿಡುಗಡೆಯ ಸಂಭ್ರಮದಲ್ಲಿದ್ದಾರೆ. ಈಗಾಗಲೇ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, ಶಿವಣ್ಣ ಖುಷಿಯಲ್ಲಿದ್ದಾರೆ. ಇದೀಗ ಶಿವಣ್ಣ ಮೈಸೂರಿನಲ್ಲಿ ಶಕ್ತಿಧಾಮದ ಮಕ್ಕಳ ಜೊತೆ ಸಿನಿಮಾ ನೋಡಿದ್ದಾರೆ. ಮಕ್ಕಳನ್ನು ಸಿನಿಮಾ ನೋಡಲು ಕರೆದುಕೊಂಡು ಹೋಗಿರುವ ಶಿವಣ್ಣ, ಮಕ್ಕಳ ಜೊತೆಯೇ ಕುಳಿತು ಸಿನಿಮಾ ನೋಡಿದ್ದಾರೆ.

ಬೈರಾಗಿ ಸಿನಿಮಾದ ಸುಳಿವು ಕೊಟ್ಟ ಶಿವಣ್ಣ

ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ 123ನೇ ಸಿನಿಮಾ ಇದಾಗಿದ್ದು, ಅಭಿಮಾನಿಗಳಲ್ಲಿ ಈ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿತ್ತು. ಹಾಗೆಯೇ ಈ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಲಭಿಸಿದ್ದು, ಇದೀಗ ಶಿವಣ್ಣ ಹಾಗೂ ಅವರ ಪತ್ನಿ ಗೀತಾ ಮೈಸೂರಿನಲ್ಲಿ ಮಕ್ಕಳ ಜೊತೆ ಬೈರಾಗಿ ಸಿನಿಮಾ ನೋಡಿದ್ದಾರೆ. ಸಿನಿಮಾ ನೋಡಿ ಬಂದ ಮೇಲೆ ಮಾಧ್ಯಮಗಳ ಜೊತೆ ಮಾತನಾಡಿದ ಶಿವರಾಜ್​ಕುಮಾರ್, ಮಕ್ಕಳೊಂದಿಗೆ ಸಿನಿಮಾ ನೋಡಬೇಕು ಎಂದು ಬಹಳ ದಿನಗಳ ಆಸೆಯಿತ್ತು. ವೇದ ಸಿನಿಮಾದ ಶೂಟಿಂಗ್ ಆಗುತ್ತಿತ್ತು. ಇದೀಗ ಬೈರಾಗಿ ರಿಲೀಸ್​ ಆಗಿದ್ದು, ಮಕ್ಕಳ ಜೊತೆ ಸಿನಿಮಾ ನೋಡೋಣ ಎಂದು ಬಂದಿದ್ದೇವೆ. ಮಕ್ಕಳಿಗೆ ಸಹ ಸಿನಿಮಾ ಇಷ್ಟವಾಗಿದೆ. ಅವರ ರೆಸ್ಪಾನ್ಸ್ ನೋಡಿ ನನಗೂ ಸಂತೋಷವಾಗಿದೆ. ಈ ಸಿನಿಮಾ ಫ್ಯಾಮಿಲಿ ಸಮೇತ ಬಂದು ನೋಡಬೇಕಾದ ಚಿತ್ರ ಎಂದು ಹೇಳಿದ್ದಾರೆ.



ಈ ನಡುವೆ ಶಿವಣ್ಣ ಬೈರಾಗಿ 2 ಬಗ್ಗೆ ಸಹ ಸುಳಿವು ನೀಡಿದ್ದಾರೆ. ಈ ಸಿನಿಮಾಗೆ ಸಿಕ್ಕ ರೆಸ್ಪಾನ್ಸ್​ ನೋಡಿ ಬಹಳ ಖುಷಿಯಾಗಿದ್ದು, ಬೈರಾಗಿ 2 ಬರಬಹುದು ಎಂದು ಹೇಳಿ ನಗುತ್ತಾ ಹೋಗಿದ್ದಾರೆ. ಒಟ್ಟಾರೆಯಾಗಿ ಶಿವಣ್ಣನ ಈ ಹೇಳಿಕೆ ಖುಷಿ ಕೊಟ್ಟಿದ್ದು, ಹೆಚ್ಚಿನ ಅಪ್​ಡೇಟ್​ಗೆ ಕಾಯುತ್ತಿದ್ದಾರೆ.

ಇನ್ನು ಮೊನ್ನೆಯಷ್ಟೇ ಶಿವಣ್ಣ ಇದೇ ಶಕ್ತಿಧಾಮದ ಮಕ್ಕಳ ಜೊತೆ ಡ್ಯಾನ್ಸ್​ ಮಾಡಿ ಸುದ್ದಿಯಾಗಿದ್ದರು. ಶಕ್ತಿಧಾಮದಲ್ಲಿ ಮಕ್ಕಳ ಜೊತೆ ಡ್ಯಾನ್ಸ್ ಮಾಡಿದ್ದು, ಬೈರಾಗಿ ಚಿತ್ರದ ಹಾಡಿಗೆ ಸಖತ್ ಸ್ಟೆಪ್​ ಹಾಕಿದ್ದರು. ಈ ಹಾಡಿಗೆ ಮಕ್ಕಳಿಗೆ ಶಿವಣ್ಣ ಡ್ಯಾನ್ಸ್ ಹೇಳಿಕೊಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಫುಲ್ ವೈರಲ್ ಆಗಿತ್ತು.

ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಯಲ್ಲಿ ಅಪ್ಪು ಸ್ಮಾರಕ ನಿರ್ಮಾಣ, ನೆಚ್ಚಿನ ನಟನಿಗೆ ಅಭಿಮಾನಿಗಳಿಂದ ವಿಶೇಷ ಗೌರವ

ಪುನೀತ್ ನಿಧನದ ನಂತರ ಶಿವಣ್ಣ ಮೊದಲ ಸಿನಿಮಾ

ಬೈರಾಗಿ ಸಿನಿಮಾ ಬಿಡುಗಡೆಯಾಗುವ ಮೊದಲೇ ಬಹಳ ಸದ್ದು ಮಾಡಿತ್ತು. ಈ ಚಿತ್ರದ ಹಾಡು ಮತ್ತು ಲುಕ್ ಭಾರೀ ಸದ್ದು ಮಾಡುತ್ತಿದ್ದು, ಟಗರು ಚಿತ್ರದ ನಂತರ ಧನಂಜಯ್ ಮತ್ತು ಶಿವಣ್ಣ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಚಿತ್ರ ಇದಾಗಿದೆ. ಟಗರು ಇಬ್ಬರು ಎದುರು ಬದುರಾಗಿ ಜನರಿಗೆ ಮೋಡಿ ಮಾಡಿದ್ದರು, ಈ ಚಿತ್ರದಲ್ಲಿ ಸಹ ಈ ಜೋಡಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಪುನೀತ್ ನಿಧನದ ವೇಳೆ ಶಿವರಾಜ್​ ಕುಮಾರ್ ಅವರ ಭಜರಂಗಿ 2 ಚಿತ್ರ ಬಿಡುಗಡೆಗೊಂಡಿತ್ತು. ಆದರೆ ಅಪ್ಪು ನಿಧನದ ಹಿನ್ನಲೆ ಅದನ್ನು ಕೆಲ ದಿನಗಳ ತನಕ ಚಿತ್ರವನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ರಿಲೀಸ್ ಮಾಡಲಾಗಿತ್ತು. ಆದರೆ ಇದೀಗ ಪುನೀತ್ ರಾಜ್​ ಕುಮಾರ್, ಶಿವಣ್ಣನ ಮುದ್ದಿನ ತಮ್ಮನ್ನಿಲ್ಲದೇ ಅವರ ಮೊದಲ ಸಿನಿಮಾ ‘ಬೈರಾಗಿ‘ ಬಿಡುಗಡೆ ಆಗಿದೆ.

ಇದನ್ನೂ ಓದಿ: ಹೊಸ ದುಬಾರಿ ಕಾರು ಖರೀದಿಸಿದ ರಿಷಭ್ ಶೆಟ್ಟಿ, ಇಲ್ಲಿದೆ ನೋಡಿ ಫೋಟೋಗಳು

ಆ್ಯಕ್ಷನ್‌ ಡ್ರಾಮಾ ಜಾನರ್‌ನ ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಮತ್ತು ಧನಂಜಯ ಅವರ ಲುಕ್‌ಗಳು ವಿಭಿನ್ನವಾಗಿವೆ. ಶಿವರಾಜ್‌ಕುಮಾರ್‌ಗೆ ತಮಿಳಿನ ಅಂಜಲಿ ನಾಯಕಿಯಾದರೆ, ಧನಂಜಯ ಅವರಿಗೆ ಯಶಾ ಶಿವಕುಮಾರ್‌ ಜೋಡಿಯಾಗಿದ್ದಾರೆ.
Published by:Sandhya M
First published: