ಕನ್ನಡದಲ್ಲಿ ನಿರೂಪಣೆ (Anchoring) ಅಂದರೆ ಮೊದಲ ಹೆಸರು ಬರುವುದು ಅನುಶ್ರೀ (Anushree) , ಮಾತಿನ ಮಲ್ಲಿ ಎಂದೇ ಫೇಮಸ್ ಆಗಿರುವ ಅನುಶ್ರೀ, ತಮ್ಮ ನಿರೂಪಣೆ ಮೂಲಕ ಜನರ ಮನ ಗೆದ್ದವರು. ಯಾವುದೇ ಕಾರ್ಯಕ್ರಮವಿರಲಿ ಅದನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟು ಸೈ ಎನಿಸಿಕೊಂಡವರು. ಆ್ಯಂಕರಿಂಗ್ ಮೂಲಕವೇ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿರುವ ಪ್ರತಿಭಾವಂತೆ. ಕೇವಲ ಜನರಿಗೆ ಮಾತ್ರವಲ್ಲ ಸೆಲೆಬ್ರಿಟಿಗಳಿಗೆ ಸಹ ಅನುಶ್ರೀ ಎಂದರೆ ಬಹಳ ಇಷ್ಟ. ಸದ್ಯ ಅನುಶ್ರೀ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಅದಕ್ಕೆ ಕಾರಣ ಅವರಿಗೆ ಸಿಕ್ಕಿರುವ ಗಿಫ್ಟ್. ಅದು ಅಂತಿಂಥಾ ಗಿಫ್ಟ್ ಅಲ್ಲ, ಸೂಪರ್ ಗಿಫ್ಟ್.
ಜಾಕೆಟ್ ಗಿಫ್ಟ್ ಕೊಟ್ಟ ಶಿವಣ್ಣ
ಅನುಶ್ರೀ ಝಿ ವಾಹಿನಿಯಲ್ಲಿ ಅನೇಕ ಕಾರ್ಯಕ್ರಮಗಳ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸದ್ಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನಿರೂಪಣೆ ಮಾಡ್ತಿದ್ದಾರೆ. ಈ ಶೋನ ಮತ್ತೊಂದು ವಿಶೇಷತೆ ಎಂದರೆ ಇದರ ಜಡ್ಜ್ ಆಗಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಇದ್ದಾರೆ. ಸದ್ಯ ಅನುಶ್ರೀಗೆ ಶಿವಣ್ಣನಿಂದ ಗಿಫ್ಟ್ ಸಿಕ್ಕಿದೆ. ಇದು ಸುಂದರಿಯ ಸಂತಸಕ್ಕೆ ಕಾರಣವಾಗಿದೆ. ಹೌದು, ಅನುಶ್ರೀಗೆ ಶಿವಣ್ಣ ಅವರ ಜಾಕೆಟ್ ಗಿಫ್ಟ್ ಕೊಟ್ಟಿದ್ದಾರೆ. ಈ ಬಗ್ಗೆ ಅನುಶ್ರೀ ಸ್ವತಃ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಆ ಖುಷಿಯ ಕ್ಷಣವನ್ನು ವರ್ಣಿಸಿದ್ದಾರೆ.
View this post on Instagram
ಫುಲ್ ವೈರಲ್ ಆಯ್ತ ವಿಡಿಯೋ
ಈ ವಿಡಿಯೋ ಹಾಕಿದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು, ಸುಮಾರು 3 ಲಕ್ಷಕ್ಕೂ ಹೆಚ್ಚು ಜನರು ವಿಡಿಯೋ ನೋಡಿದ್ದಾರೆ. ಒಟ್ಟಾರೆಯಾಗಿ ಶಿವಣ್ಣ ಮತ್ತೆ ತಾವೇನು ಎಂಬುದನ್ನ ತೋರಿಸಿದ್ದಾರೆ. ರಿಯಾಲಿಟಿ ಶೋನಲ್ಲಿ ಕ್ರೇಜಿ ಕ್ವೀನ್ ರಕ್ಷಿತಾ, ಚಿನ್ನಿ ಮಾಸ್ಟರ್, ಅರ್ಜುನ್ ಜನ್ಯ ಅವರು ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ಪವರ್ ಹೆಚ್ಚಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಸ್ಪೆಷಲ್ ಜಡ್ಜ್ ಆಗಿ ಭಾಗಿಯಾಗುತ್ತಿದ್ದಾರೆ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರು ಡ್ಯಾನ್ಸ್ ಮಾಡಿ ಎಂದು ವೇದಿಕೆ ಮೇಲೆ ಕರೆದರೆ ಶಿವಣ್ಣ ಮೊದಲು ಹೋಗುತ್ತಾರೆ. ಅಭಿಮಾನಿಗಳು ಎಂದಿಗೂ ಮುಖ್ಯ ಎಂದು ಶಿವಣ್ಣ ಪದೇ ಪದೇ ಸಾಬೀತು ಮಾಡುತ್ತಾರೆ.
ಇದನ್ನೂ ಓದಿ: ರಾ ರಾ ರಕ್ಕಮ್ಮ ಹಾಡಿಗೆ ವಿಷ್ಣುದಾದಾ ಸ್ಟೆಪ್, ಫ್ಯಾನ್ಸ್ ಮಾಡಿರುವ ಈ ವಿಡಿಯೋ ಫುಲ್ ವೈರಲ್
ಇನ್ನು ಸಿನಿಮಾಗಳಲ್ಲಿ ಸಹ ಶಿವಣ್ಣ ಬ್ಯುಸಿ ಇದ್ದು ವೇದ, ಭೈರಾಗಿ ಸೇರಿದಂತೆ ವಿವಿಧ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಈ ನಡುವೆ ಯೋಗರಾಜ್ ಭಟ್ಟರ ನಿರ್ದೇಶನದಲ್ಲಿ ಮೊದಲ ಸಿನಿಮಾವನ್ನು ಸಹ ಅವರು ಮಾಡುತ್ತಿದ್ದು ಭರ್ಜರಿ ತಯಾರಿ ಮಾಡಲಾಗುತ್ತಿದೆ. ಶಿವರಾಜ್‌ಕುಮಾರ್ ಅವರಿಗೆ ಇದೇ ಮೊದಲಬಾರಿಗೆ ನಿರ್ದೇಶಕ ಯೋಗರಾಜ್ ಭಟ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಇಂಡಿಯನ್ ಡ್ಯಾನ್ಸ್ ಕಿಂಗ್ ಪ್ರಭುದೇವ ಅವರು ಶಿವಣ್ಣನಿಗೆ ಸಾಥ್ ನೀಡಲಿದ್ದಾರೆ. ಈ ಮೂಲಕ ಅನೇಕ ವರ್ಷಗಳ ನಂತರ ಪ್ರಭುದೇವ ಕನ್ನಡಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಚಿತ್ರದ ಮುಹೂರ್ತ ಇತ್ತೀಚೆಗೆ ನೇರವಿರಿದ್ದು, ಚಿತ್ರಕ್ಕೆ ಇನ್ನೂ ಹೆಸರಿಟ್ಟಾಗಿಲ್ಲ. ಸರಳವಾಗಿ ರಾಕ್ ಲೈನ್ ವೆಂಕಟೇಶ್ ಸ್ಟೂಡಿಯೋ ದಲ್ಲಿ ಚಿತ್ರ ಸೆಟ್ಟೇರಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ